ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಋಷಿಕೇಶದಲ್ಲಿ ಉಜ್ಜೈನಿ ಎಕ್ಸ್​​​​ಪ್ರೆಸ್​​​ ವಿದ್ಯುತ್​ ಕಂಬಕ್ಕೆ ಡಿಕ್ಕಿ; ತಪ್ಪಿದ ಭಾರೀ ರೈಲು ದುರಂತ

ಋಷಿಕೇಶದ ಯೋಗನಗರಿ ರೈಲು ನಿಲ್ದಾಣದ (Railway Accident) ಬಳಿ ಉಜ್ಜೈನಿ ಎಕ್ಸ್‌ಪ್ರೆಸ್ ರೈಲು ಹಳಿತಪ್ಪಿದೆ. ಉತ್ತರಾಖಂಡದ ರಿಷಿಕೇಶ ಸಮೀಪದ ಯೋಗನಗರಿ ರೈಲು ನಿಲ್ದಾಣದ ಬಳಿ ಸೋಮವಾರ ತಡರಾತ್ರಿ ಸಂಭವಿಸಿದೆ. ಅಪಘಾತದ ಸಮಯದಲ್ಲಿ ರೈಲಿನಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ.

ಸಂಗ್ರಹ ಚಿತ್ರ

ಋಷಿಕೇಶದ ಯೋಗನಗರಿ ರೈಲು ನಿಲ್ದಾಣದ (Railway Accident) ಬಳಿ ಉಜ್ಜೈನಿ ಎಕ್ಸ್‌ಪ್ರೆಸ್ (Ujjaini Express) ರೈಲು ಹಳಿತಪ್ಪಿದೆ. ಉತ್ತರಾಖಂಡದ ರಿಷಿಕೇಶ ಸಮೀಪದ ಯೋಗನಗರಿ ರೈಲು ನಿಲ್ದಾಣದ ಬಳಿ ಸೋಮವಾರ ತಡರಾತ್ರಿ ಸಂಭವಿಸಿದೆ. ಅಪಘಾತದ ಸಮಯದಲ್ಲಿ ರೈಲಿನಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ ಮತ್ತು ಯಾವುದೇ ಗಾಯಗಳಾಗಿರುವ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉಜ್ಜೈನಿ ಎಕ್ಸ್‌ಪ್ರೆಸ್ ರೈಲಿನ ಎಂಜಿನ್ ಮತ್ತು ಕೆಲವು ಬೋಗಿಗಳನ್ನು ನಿರ್ವಹಣಾ ಯಾರ್ಡ್ ಕಡೆಗೆ ಕೊಂಡೊಯ್ಯುವ ಕೆಲಸ ನಡೆಯುತ್ತಿತ್ತು. ಈ ವೇಳೆ ರೈಲಿನ ಒಂದು ಬೋಗಿ ಇದ್ದಕ್ಕಿದ್ದಂತೆ ನಿಯಂತ್ರಣ ತಪ್ಪಿ ಹಳಿ ಬಿಟ್ಟು ಹೊರಗೆ ಹೋಗಿ ಕಂಬಕ್ಕೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ತಾಂತ್ರಿಕ ದೋಷ ಅಥವಾ ನಿರ್ಲಕ್ಷ್ಯದಿಂದಾಗಿ, ರೈಲಿನ ಒಂದು ಕೋಚ್ ಕಂಬಕ್ಕೆ ಡಿಕ್ಕಿ ಹೊಡೆದು ಹಾನಿಗೊಳಗಾಯಿತು ಎಂದು ತಿಳಿದುಬಂದಿದೆ.

ದೊಡ್ಡ ಶಬ್ದ ಕೇಳಿದ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿಗೆ ಧಾವಿಸಿ ಜಮಾಯಿಸಿದ್ದಾರೆ. ಅದೃಷ್ಟವಶಾತ್, ಘಟನೆಯ ಸಮಯದಲ್ಲಿ ರೈಲು ಸಂಪೂರ್ಣ ಖಾಲಿ ಇತ್ತು. ಯಾವ ಪ್ರಯಾಣಿಕರೂ ರೈಲಿನಲ್ಲಿ ಇರಲಿಲ್ಲ. ಇದರಿಂದ ಯಾರಿಗೂ ಗಾಯವಾಗಿಲ್ಲ, ಯಾರೂ ಸಾವನಪ್ಪಿಲ್ಲ. ಸ್ಥಳೀಯ ಪೊಲೀಸರು, ಸರ್ಕಾರಿ ರೈಲ್ವೆ ಪೊಲೀಸರು (GRP) ಮತ್ತು ರೈಲ್ವೆ ರಕ್ಷಣಾ ಪಡೆ (RPF) ತಕ್ಷಣ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಕಾರ್ಯ ಆರಂಭಿಸಿದರು.

ಹೊತ್ತಿ ಉರಿದ ಪ್ಯಾಸೆಂಜರ್ ರೈಲು ಬೋಗಿ: ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಸಾಧ್ಯತೆ

ಜಿಆರ್‌ಪಿ ಪೊಲೀಸ್ ವರಿಷ್ಠಾಧಿಕಾರಿ ಅರುಣಾ ಭಾರ್ತಿ ಈ ಕುರಿತು ಮಾತನಾಡಿ, ಸೋಮವಾರ ತಡರಾತ್ರಿ ಉಜ್ಜೈನಿ ಎಕ್ಸ್‌ಪ್ರೆಸ್‌ನ ಲೋಕೋ ಪೈಲಟ್ ಮಂಗಳವಾರದ ಪ್ರಯಾಣಕ್ಕಾಗಿ ರೈಲನ್ನು ಶಂಟಿಂಗ್ ಮೂಲಕ ಬೇರೆ ಹಳಿಗೆ ಕರೆದೊಯ್ಯುತ್ತಿದ್ದರು. ಈ ವೇಳೆ ಹಳಿಗಳನ್ನು ಬದಲಾಯಿಸುವ ಸಮಯದಲ್ಲೇ ರೈಲು ಹಳಿತಪ್ಪುವ ಘಟನೆ ನಡೆದಿದೆ. ಪ್ರಾಥಮಿಕ ತನಿಖೆಯಲ್ಲಿ ರೈಲಿನ ಬ್ರೇಕ್ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಉಂಟಾಗಿ ಅಪಘಾತ ಸಂಭವಿಸಿದೆ ಎಂಬ ಶಂಕೆ ವ್ಯಕ್ತವಾಗಿದೆ. ಜೊತೆಗೆ ಲೋಕೋ ಪೈಲಟ್‌ನಿಂದಲೂ ಕೆಲ ಮಟ್ಟಿನ ನಿರ್ಲಕ್ಷ್ಯವಾಗಿರಬಹುದು ಎಂದು ಕೆಲವು ಮೂಲಗಳು ಹೇಳುತ್ತಿವೆ. ಸದ್ಯ ಈ ಕುರಿತು ತನಿಖೆ ನಡೆಸಲಾಗುತ್ತದೆ ಎಂದು ಹೇಳಿದರು

Vishakha Bhat Heggar

View all posts by this author