ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬಾಲಿವುಡ್‌ ಮೇಲೆ ಬಿಷ್ಣೋಯ್ ಗ್ಯಾಂಗ್ ಕೆಂಗಣ್ಣು; ಯಾರೆಲ್ಲ ಇದ್ದಾರೆ ಇವರ ಹಿಟ್‌ ಲಿಸ್ಟ್‌ನಲ್ಲಿ?

ಬಾಲಿವುಡ್ ಚಿತ್ರರಂಗದ ಮೇಲೆ ಕಣ್ಣಿಟ್ಟಿರುವ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಟರಾದ ರೋಹಿತ್ ಶೆಟ್ಟಿ ಮತ್ತು ರಣವೀರ್ ಸಿಂಗ್ ಅವರಿಗೆ ಬೆದರಿಕೆ ಹಾಕಿದ್ದ ಬೆನ್ನಲ್ಲೇ, ಇದೀಗ ಬಾಲಿವುಡ್‌ನ ಯುವ ಆಕ್ಷನ್ ಸ್ಟಾರ್ ಟೈಗರ್ ಶ್ರಾಫ್ ಬಿಷ್ಣೋಯ್ ಗ್ಯಾಂಗ್‌ನ ಹೊಸ ಟಾರ್ಗೆಟ್ ಆಗಿದ್ದಾರೆ.

ಸಂಗ್ರಹ ಚಿತ್ರ

ಮುಂಬೈ: ಬಾಲಿವುಡ್ ಚಿತ್ರರಂಗದ (Bollywood) ಮೇಲೆ ಕಣ್ಣಿಟ್ಟಿರುವ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಟರಾದ ರೋಹಿತ್ ಶೆಟ್ಟಿ ಮತ್ತು ರಣವೀರ್ ಸಿಂಗ್ (Ranveer Singh) ಅವರಿಗೆ ಬೆದರಿಕೆ ಹಾಕಿದ್ದ ಬೆನ್ನಲ್ಲೇ, ಇದೀಗ ಬಾಲಿವುಡ್‌ನ ಯುವ ಆಕ್ಷನ್ ಸ್ಟಾರ್ ಟೈಗರ್ ಶ್ರಾಫ್ (Tiger Shroff) ಬಿಷ್ಣೋಯ್ ಗ್ಯಾಂಗ್‌ನ ಹೊಸ ಟಾರ್ಗೆಟ್ ಆಗಿದ್ದಾರೆ. ಭಾನುವಾರ ಸಂಜೆ ಮುಂಬೈನ ಜುಹು ಪ್ರದೇಶದಲ್ಲಿ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಭೀಕರ ಗುಂಡಿನ ದಾಳಿ ನಡೆಸಿದ್ದಾರೆ. ಅದೃಷ್ಟವಶಾತ್ ನಟ ಟೈಗರ್ ಶ್ರಾಫ್ ಅವರು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸಲ್ಮಾನ್‌ ಖಾನ್‌ ಜೊತೆ ನಂಟು ಹೊಂದಿರುವವರನ್ನು ಈ ಗ್ಯಾಂಗ್‌ ಟಾರ್ಗೆಟ್‌ ಮಾಡ್ತಿದೆ ಎಂದು ಹೇಳಾಗುತ್ತಿದೆ. ಅಕ್ಟೋಬರ್ 12, 2024 ರಂದು, ಸಲ್ಮಾನ್ ಖಾನ್ ಅವರ ಆಪ್ತ ಸ್ನೇಹಿತ, ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಅವರನ್ನು ಮುಂಬೈನಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು. ಬಿಷ್ಣೋಯ್ ಗ್ಯಾಂಗ್ ಈ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿತ್ತು.

ಮುನಾವರ್ ಫಾರೂಕಿ : ಹಾಸ್ಯನಟ ಮುನಾವರ್ ಫಾರೂಕಿ ಅವರಿಗೆ 2024 ರ ಅಕ್ಟೋಬರ್‌ನಲ್ಲಿ ಬೆದರಿಕೆಗಳು ಬಂದವು, ಇದರಿಂದಾಗಿ ಮುಂಬೈ ಪೊಲೀಸರು ಅವರಿಗೆ ಭದ್ರತೆ ಒದಗಿಸಿದರು.

ಕಪಿಲ್‌ ಶರ್ಮಾ: ಕಳೆದ ವರ್ಷ (ಅಕ್ಟೋಬರ್ 2025) ಕೆನಡಾದಲ್ಲಿರುವ ಕಪಿಲ್ ಶರ್ಮ ಅವರ ಒಡೆತನದ 'ಕ್ಯಾಪ್ಸ್ ಕೆಫೆ' (Caps Cafe) ಹೊರಗೆ ಬಿಷ್ಣೋಯ್ ಗ್ಯಾಂಗ್‌ನ ಶೂಟರ್‌ಗಳು ಗುಂಡಿನ ದಾಳಿ ನಡೆಸಿ ಎಚ್ಚರಿಕೆ ನೀಡಿದ್ದರು. ಸಲ್ಮಾನ್ ಖಾನ್ ಅವರ ಪ್ರೊಡಕ್ಷನ್ ಹೌಸ್ ಜೊತೆಗಿನ ನಿಕಟ ಸಂಬಂಧ ಮತ್ತು ಅವರ ಕಾರ್ಯಕ್ರಮಗಳಿಗೆ ಸಲ್ಮಾನ್ ಖಾನ್ ಬೆಂಬಲ ನೀಡುತ್ತಿರುವುದು ಈ ಗ್ಯಾಂಗ್‌ ಕಣ್ಣು ಕೆಂಪಾಗಿಸಿತ್ತು.

ಅಮೀರ್ ಖಾನ್ : ಜುಲೈ 2026 ರಲ್ಲಿ, ನಟನಿಗೆ ಬಿಷ್ಣೋಯ್ ಗ್ಯಾಂಗ್ ಜೊತೆ ಸಂಪರ್ಕ ಇದೆ ಎಂದು ಹೇಳಿಕೊಳ್ಳುವ ವ್ಯಕ್ತಿಗಳಿಂದ ಸಾಮಾಜಿಕ ಮಾಧ್ಯಮ ಮತ್ತು ಆಡಿಯೋ ಸಂದೇಶಗಳ ಮೂಲಕ ಬೆದರಿಕೆಗಳು ಬಂದಿದ್ದವು.

ಆಯುಷ್ ಶರ್ಮಾ : ಸಲ್ಮಾನ್ ಖಾನ್ ಅವರ ತಂಗಿ ಗಂಡನಿಗೆ ಫೆಬ್ರವರಿ 2026 ರಲ್ಲಿ ಬೆದರಿಕೆ ಇಮೇಲ್ ಬಂದಿತ್ತು, ಅದರಲ್ಲಿ ಕಳುಹಿಸುವ ವ್ಯಕ್ತಿ ಕ್ರಿಪ್ಟೋಕರೆನ್ಸಿಯಲ್ಲಿ ಸುಲಿಗೆ ಬೇಡಿಕೆ ಇಟ್ಟಿದ್ದ ಮತ್ತು ಬಿಷ್ಣೋಯ್ ಗ್ಯಾಂಗ್ ಜೊತೆ ಸಂಪರ್ಕ ಹೊಂದಿರುವುದಾಗಿ ಹೇಳಿಕೊಂಡಿದ್ದ.

ಟೈಗರ್‌ ಶ್ರಾಫ್‌ ಮೇಲೆ ಗುಂಡಿನ ದಾಳಿ; ರಾಜಸ್ಥಾನದಲ್ಲಿ ಅಪ್ರಾಪ್ತ ಸೇರಿ ಮೂವರು ಆರೋಪಿಗಳ ಬಂಧನ

ಎಪಿ ಧಿಲ್ಲೋನ್ & ಗಿಪ್ಪಿ ಗ್ರೆವಾಲ್: ಕೆನಡಾದಲ್ಲಿರುವ ಇವರಿಬ್ಬರ ನಿವಾಸಗಳ ಹೊರಗೂ ಬಿಷ್ಣೋಯ್ ಗ್ಯಾಂಗ್ ಶೂಟರ್‌ಗಳು ಗುಂಡಿನ ದಾಳಿ ನಡೆಸಿದ್ದಾರೆ. ಸಲ್ಮಾನ್ ಖಾನ್ ಅವರೊಂದಿಗೆ ಮ್ಯೂಸಿಕ್ ವಿಡಿಯೋ ಮಾಡಿದ್ದೇ ಇದಕ್ಕೆ ಮುಖ್ಯ ಕಾರಣವಾಗಿತ್ತು.

Vishakha Bhat Heggar

View all posts by this author