ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದುಷ್ಕರ್ಮಿಗಳ ಗುರಿ ಟೈಗರ್‌ ಶ್ರಾಫ್‌ ಆಗಿರಲಿಲ್ಲ; ಬೇರೊಬ್ಬ ಪ್ರಭಾವಿ ಹತ್ಯೆಗೆ ಬಂದಿದ್ದ ಶೂಟರ್ಸ್‌: ಪ್ರಕರಣಕ್ಕೆ ಮೇಜರ್‌ ಟಿಸ್ಟ್‌

Tiger Shroff Firing: ಬಾಲಿವುಡ್‌ ನಟ ಟೈಗರ್‌ ಶ್ರಾಫ್‌ ಮೇಲಿನ ಗುಂಡಿನ ದಾಳಿ ಪ್ರಕರಣಕ್ಕೆ ಮೇಜರ್‌ ಟ್ವಿಸ್ಟ್‌ ಸಿಕ್ಕಿದೆ. ದಾಳಿಕೊಋರ ಟಾರ್ಗೆಟ್‌ ಟೈಗರ್‌ ಶ್ರಾಫ್‌ ಆಗಿರಲಿಲ್ಲ. ಬೇರೊಬ್ಬ ಸೆಲೆಬ್ರಿಟಿ ಆಗಿದ್ದ ಎನ್ನುವುದು ತನಿಖೆ ವೇಳೆ ತಿಳಿದು ಬಂದಿದೆ. ದಾಳಿ ನಡೆಸಿದ ಮೂವರನ್ನೂ ಸದ್ಯ ಬಂಧಿಸಲಾಗಿದೆ.

ಟೈಗರ್‌ ಶ್ರಾಫ್‌ (ಸಂಗ್ರಹ ಚಿತ್ರ)

ಮುಂಬೈ, ಅ. 20: ಬಾಲಿವುಡ್‌ ನಟ ಟೈಗರ್‌ ಶ್ರಾಫ್‌ ಹತ್ಯೆಗೆ (Tiger Shroff Firing) ಯತ್ನಿಸಿದ ಪ್ರಕರಣಕ್ಕೆ ಮೇಜರ್‌ ಟ್ವಿಸ್ಟ್‌ ಸಿಕ್ಕಿದ್ದು, ಶೂಟರ್‌ಗಳ ಗುರಿ ಬೇರೊಬ್ಬ ಪ್ರಭಾವಿಯಾಗಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಮಹಾರಾಷ್ಟ್ರದ ಮುಂಬೈಯ ಜುಹು ಪ್ರದೇಶದಲ್ಲಿ ಅಕ್ಟೋಬರ್‌ 18ರಂದು ಟೈಗರ್‌ ಶ್ರಾಫ್‌ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದರು. ಪ್ರಾಣಾಪಾಯದಿಂದ ಟೈಗರ್‌ ಶ್ರಾಫ್‌ ಸ್ವಲ್ಪದರಲ್ಲೇ ಪಾರಾಗಿದ್ದು, ಅವರ ಚಾಲಕ ಮತ್ತು ಸಿಬ್ಬಂದಿ ಗಾಯಗೊಂಡಿದ್ದಾರೆ. ಪರಾರಿಯಾಗಿದ್ದ ಮೂವರು ಶೂಟರ್ಸ್‌ ರಾಜಸ್ಥಾನದ ಕೋಟಾದಲ್ಲಿ ಸೆರೆ ಸಿಕ್ಕಿದ್ದು, ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದೀಗ ಪ್ರಕರಣದ ಬಗ್ಗೆ ಸ್ಫೋಟಕ ಮಾಹಿತಿ ಲಭ್ಯವಾಗಿದೆ.

ಎನ್‌ಡಿಟಿವಿ ವರದಿ ಪ್ರಕಾರ, ಆರಂಭದಲ್ಲಿ ದುಷ್ಕರ್ಮಿಗಳ ಟಾರ್ಗೆಟ್‌ ಟೈಗರ್‌ ಶ್ರಾಫ್‌ ಆಗಿರಲೇ ಇಲ್ಲ. ಬೇರೆ ಪ್ರಭಾವಿಯೊಬ್ಬರ ಹತ್ಯೆಗೆ ಅವರು ಆಗಮಿಸಿದ್ದರು ಎನ್ನಲಾಗಿದೆ. ಸೆರೆಸಿಕ್ಕ ದಾಳಿಕೋರರಾದ ರೆಹಾನ್‌ ಆಲಿಯಾಸ್‌ ಸುಕ್ಕಾ, ಹೃತಿಕ್‌ ಕುರ್ಮಿ ಆಲಿಯಾಸ್‌ ರೋಷನ್‌ ಮತ್ತು ಅಪ್ರಾಪ್ತ ವಯಸ್ಕ ವಿಚಾರಣೆ ವೇಳೆ ಈ ವಿಚಾರವನ್ನು ಬಾಯ್ಬಿಟ್ಟಿದ್ದಾರೆ. ತಮ್ಮ ಟಾರ್ಗೆಟ್‌ ಟೈಗರ್‌ ಶ್ರಾಫ್‌ ಆಗಿರಲಿಲ್ಲ. ತಾವು ವಿಐಪಿ ಒಬ್ಬರ ಹತ್ಯೆಗೆ ಬಂದಿದ್ದಾಗಿ ತಿಳಿಸಿದ್ದಾರೆ ಎಂದು ಮೂಲಗಳು ವರದಿ ಮಾಡಿದೆ.

ಬಾಲಿವುಡ್‌ ನಟ ಟೈಗರ್‌ ಶ್ರಾಫ್‌ ಮೇಲೆ ಗುಂಡಿನ ದಾಳಿ: ಸಲ್ಮಾನ್‌ ಖಾನ್‌ ಹೆಸರು ಉಲ್ಲೇಖಿಸಿದ ಬಿಷ್ಣೋಯ್‌ ಗ್ಯಾಂಗ್‌

ʼʼಅಸಲಿ ಗುರಿಯಾಗಿದ್ದ ಪ್ರಭಾವಿ ವ್ಯಕ್ತಿಯ ಚಲನವಲನ ನಿರೀಕ್ಷಿಸಿದ ಶೂಟರ್‌ಗಳಿಗೆ ಅವರನ್ನು ಹತ್ಯೆ ಮಾಡಲು ಸಾಧ್ಯವಿಲ್ಲ ಎನ್ನುವ ವಾಸ್ತವ ಅರಿವಿಗೆ ಬಂತು. ಹೀಗಾಗಿ ಅವರು ಟೈಗರ್‌ ಶ್ರಾಫ್‌ ಮೇಲೆ ದಾಳಿ ನಡೆಸಲು ಮುಂದಾದರು. ಅಭಿಮಾನಿಯೊಬ್ಬರು ಹಂಚಿಕೊಂಡ ರೀಲ್ಸ್‌ನಲ್ಲಿ ಟೈಗರ್‌ ಶ್ರಾಫ್‌ ಅವರಿಗೆ ಬೆಂಗಾವಲು ಪಡೆ ಇಲ್ಲ ಎನ್ನುವುದನ್ನು ಅವರು ಅವರಿತಿದ್ದರುʼʼ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಾಹಿತಿ ಕಲೆ ಹಾಕುತ್ತಿದ್ದ ಶೂಟರ್ಸ್‌

ಟೈಗರ್‌ ಶ್ರಾಫ್‌ ಮೇಲೆ ದಾಳಿ ನಡೆಸಿರುವುದಾಗಿ ನಿರ್ಧರಿಸಿದ ಬಳಿಕ ಶೂಟರ್ಸ್‌ ನಿರಂತರವಾಗಿ ಅವರ ಮೇಲೆ ನಿಗಾ ಇರಿಸಿದರು. ಟೈಗರ್‌ ಶ್ರಾಫ್‌ ಮತ್ತು ಅಭಿಮಾನಿಗಳ ಇನ್‌ಸ್ಟಾಗ್ರಾಂ ಪೇಜ್‌ ಗಮನಿಸುತ್ತಿದ್ದರು. ʼʼಟೈಗರ್‌ ಶ್ರಾಫ್‌ ಅವರನ್ನು ಹತ್ಯೆಗೈದು ಬಾಲಿವುಡ್‌ ಅನ್ನು ಬೆದರಿಸುವ ಉದ್ದೇಶ ಅವರಿಗಿತ್ತುʼʼ ಎಂದು ಅಧಿಕಾರಿಗಳು ಹೇಳಿದ್ದಾರೆ.‌ ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

ಟೈಗರ್‌ ಶ್ರಾಫ್‌ ತಂಡದಿಂದ ಸ್ಪಷ್ಟನೆ

ದಾಳಿ ಬಳಿಕ ಟೈಗರ್‌ ಶ್ರಾಫ್‌ ಪ್ರತಿಕ್ರಿಯಿಸಿದ್ದಾರೆ ಎನ್ನಲಾದ ವಿಡಿಯೊವೊಂದು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಇದು ಅಸಲಿಯಲ್ಲ, ಎಐ ಸೃಷ್ಟಿ ಎಂದು ಅವರ ತಂಡ ಸ್ಪಷ್ಟಪಡಿಸಿದೆ. ದಾಳಿ ಬಗ್ಗೆ ಇದುವರೆಗೆ ಟೈಗರ್‌ ಶ್ರಾಫ್‌ ಯಾವುದೇ ಹೇಳಿಕೆ ನೀಡಿಲ್ಲ.

ಬಾಲಿವುಡ್​​ ನಟ ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ

ಬಿಷ್ಣೋಯ್‌ ಗ್ಯಾಂಗ್‌ನಿಂದ ಕೃತ್ಯ

ಸದ್ಯ ಟೈಗರ್‌ ಶ್ರಾಫ್‌ ಮೇಲಿನ ದಾಳಿಯನ್ನು ಲಾರೆನ್ಸ್‌ ಬಿಷ್ಣೋಯ್‌ ಗ್ಯಾಂಗ್‌ ಹೊತ್ತುಕೊಂಡಿದೆ. ಅಲ್ಲದೇ, ನಟ ಸಲ್ಮಾನ್‌ ಖಾನ್‌ ಸಹವಾಸದಲ್ಲಿರುವ ಎಲ್ಲರಿಗೂ ಇದೇ ಗತಿಯಾಗಲಿದೆ ಎಂದು ಎಚ್ಚರಿಸಿದೆ. ಮೂವರೂ ಶೂಟರ್‌ಗಳು ಮೊದಲೇ ತರಬೇತಿ ಪಡೆದಿದ್ದರು. ದಾಳಿ ಬಳಿಕ ನೇಪಾಳಕ್ಕೆ ಪರಾರಿಯಾಗಲು ಯೋಜನೆ ರೂಪಿಸಿದ್ದರು.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author