ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮುಸ್ಲಿಂ ಧರ್ಮಗುರುವಿನ ಸಮಯಪ್ರಜ್ಞೆಯಿಂದ ಉಳಿಯಿತು 7 ಮಂದಿಯ ಪ್ರಾಣ; ಮೈಕ್‌ ಮೂಲಕ ಗ್ರಾಮಸ್ಥರನ್ನು ಎಬ್ಬಿಸಿದ ಮೌಲ್ವಿ

Muslim Cleric: ಮುಸ್ಲಿಂ ಧರ್ಮಗುರು ಮೌಲ್ವಿ ತಮ್ಮ ಸಮಯಪ್ರಜ್ಞೆಯಿಂದ 7 ಮಂದಿಯನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ತುರ್ತು ಪರಿಸ್ಥಿತಿಯಲ್ಲಿ ಮೈಕ್ ಮೂಲಕ ಜನರನ್ನು ಎಚ್ಚರಿಸಿ, ಅಪಘಾತದ ಬಗ್ಗೆ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಜನರು ನೀರಿನಲ್ಲಿ ಮುಳುಗುತ್ತಿದ್ದ ವಾಹನದಿಂದ ಪ್ರಯಾಣಿಕರನ್ನು ರಕ್ಷಿಸಿದ್ದಾರೆ.

7 ಮಂದಿಯ ಪ್ರಾಣ ಕಾಪಾಡಿದ ಮೌಲ್ವಿ (ಸಂಗ್ರಹ ಚಿತ್ರ)

ದಿಸ್ಪುರ, ಡಿ. 2: ಮುಸ್ಲಿಂ ಧರ್ಮಗುರುವೊಬ್ಬರು (Muslim Cleric) ಮಸೀದಿಯ ಮೈಕ್‌ ಮೂಲಕ ಇಡೀ ಗ್ರಾಮಕ್ಕೆ ಬೆಳಗಿನ ಜಾವ ಎಚ್ಚರಿಕೆ ನೀಡಿದ ಪರಿಣಾಮವಾಗಿ 7 ಮಂದಿ ಪ್ರಾಣಾಪಾಯದಿಂದ ಪಾರಾದ ಘಟನೆ ಅಸ್ಸಾಂನಲ್ಲಿ ನಡೆದಿದೆ. ಧರ್ಮಗುರುವಿನ ಸಮಯಪ್ರಜ್ಞೆ ನೀರಿನಲ್ಲಿ ಮುಳುಗುತ್ತಿದ್ದ ವಾಹನದೊಳಗೆ ಸಿಲುಕಿದ್ದ7 ಜನರನ್ನು ಉಳಿಸಲು ಸಹಾಯ ಮಾಡಿತು.

ಮಂಗಳವಾರ (ಡಿಸೆಂಬರ್‌ 2) ಮುಂಜಾನೆ, ಅಸ್ಸಾಂನ ಶ್ರೀಭೂಮಿ ಜಿಲ್ಲೆಯಲ್ಲಿ ವಾಹನವು ನಿಯಂತ್ರಣ ಕಳೆದುಕೊಂಡು ರಾಷ್ಟ್ರೀಯ ಹೆದ್ದಾರಿಯಿಂದ ಜಾರಿ ಬದಿಯಲ್ಲಿದ್ದ ಕೆರೆಗೆ ಉರುಳಿ ಬಿದ್ದಿದೆ. ಬಳಿಕ ವಾಹನವು ನೀರಿನಲ್ಲಿ ಮುಳುಗಲು ಪ್ರಾರಂಭಿಸಿದೆ. ಹೊರಗಿನಿಂದ ದೊಡ್ಡ ಶಬ್ಧ ಕೇಳಿಬಂದಾಗ, ಜಾಮಾ ಮಸೀದಿಯ ಇಮಾಮ್ ಮತ್ತು ಮಿರಾಬಾರಿ ಮದ್ರಸಾ ಶಿಕ್ಷಕ ಮೌಲಾನಾ ಅಬ್ದುಲ್ ಬಾಸಿತ್ ತಕ್ಷಣವೇ ಮೈಕ್‌ ಬಳಸಿ ಗ್ರಾಮಸ್ಥರಿಗೆ ತುರ್ತು ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದರು. ತಕ್ಷಣದ ಸಹಾಯಕ್ಕಾಗಿ ಮನವಿ ಮಾಡಿದರು ಎಂದು ಸ್ಥಳೀಯ ನಿವಾಸಿಯೊಬ್ಬರು ಹೇಳಿದರು.

ತಮಿಳುನಾಡಿನಲ್ಲಿ ಭೀಕರ ರಸ್ತೆ ಅಪಘಾತ; 2 ಬಸ್‌ಗಳು ಮುಖಾಮುಖಿ ಡಿಕ್ಕಿಯಾಗಿ 10 ಮಂದಿ ಸಾವು

ಕೆಲವೇ ನಿಮಿಷಗಳಲ್ಲಿ, ನೆರೆಹೊರೆಯ ನಿವಾಸಿಗಳು ಸ್ಥಳಕ್ಕೆ ಧಾವಿಸಿ, ರಕ್ಷಣಾ ಕಾರ್ಯಾಚರಣೆ ನಡೆಸಿ ವಾಹನದಲ್ಲಿದ್ದ 7 ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರತೆಗೆದರು. ಧರ್ಮಗುರುವಿನ ಸಮಯಪ್ರಜ್ಞೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಿಯಕರನಿಗಾಗಿ ಪತಿ ಕೊಂದ ಪತ್ನಿ

ಪ್ರಿಯಕರನ ಜತೆ ಸೇರಿ ಪತ್ನಿಯೊಬ್ಬಳು ತನ್ನ ಗಂಡನನ್ನೇ ಕೊಂದ ಘಟನೆ ಜಾರ್ಖಂಡ್‌ನ ಛತ್ರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಜಿಲ್ಲೆಯ ಹಂಟರ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಹೈರಿಂಗ್ ಗ್ರಾಮದ ನಿವಾಸಿ ಸಂಜು ಭಾರ್ತಿ (35) ನವೆಂಬರ್ 22ರಿಂದ ಕಾಣೆಯಾಗಿದ್ದರು. ಅವರ ಸಹೋದರ ಸಂಜಯ್ ಭಾರ್ತಿ, ಸಂಜು ಅವರ ಪತ್ನಿ ರೀಟಾ ಕುಮಾರಿ ಮತ್ತು ಆಕೆಯ ಪ್ರಿಯಕರ ಅರವಿಂದ್ ಸೇರಿ ಅಪಹರಿಸಿದ್ದಾರೆ ಎಂದು ಶಂಕಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅವರ ಅಕ್ರಮ ಸಂಬಂಧಕ್ಕೆ ಸಂಜು ಪ್ರಮುಖ ಅಡ್ಡಿಯಾಗಿದ್ದರು. ಆದ್ದರಿಂದ ಅವರನ್ನು ಕೊಲ್ಲಲು ಸಂಚು ರೂಪಿಸಲಾಗಿದೆ ಎಂದು ಸಂಜಯ್ ಆರೋಪಿಸಿದ್ದಾರೆ.

ದೂರಿನ ನಂತರ, ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದರು. ಇದೇ ವೇಳೆ ಕಾಡಿನಲ್ಲಿ ಒಂದು ಶವ ಪತ್ತೆಯಾಗಿದ್ದು, ಅದು ಸಂಜು ಅವರದ್ದೇ ಎಂದು ದೃಢಪಟ್ಟಿತು. ನಂತರ ಪೊಲೀಸರು ರೀಟಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆಕೆ ಸಂಪೂರ್ಣ ಸತ್ಯವನ್ನು ಬಹಿರಂಗಪಡಿಸಿದಳು. ತನ್ನ ಪ್ರಿಯಕರ ಅರವಿಂದ್ ಮತ್ತು ಆತನ ಸಹಚರ ರಿಶು ಕುಮಾರ್ (28) ಸಂಜುನನ್ನು ಅಪಹರಿಸಿ, ಕಾಡಿಗೆ ಕರೆದೊಯ್ದು, ಕ್ರೂರವಾಗಿ ಕೊಲೆ ಮಾಡಿದ್ದಾರೆ ಎಂದು ಆಕೆ ಬಹಿರಂಗಪಡಿಸಿದ್ದಳು.

ರೀಟಾಳ ತಪ್ಪೊಪ್ಪಿಗೆಯ ಆಧಾರದ ಮೇಲೆ, ಪೊಲೀಸರು ರಿಶು ಕುಮಾರ್‌ನನ್ನು ಬಂಧಿಸಿದರು. ಅವನು ಅಪರಾಧದಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡನು. ಈ ಮಧ್ಯೆ, ಪ್ರಮುಖ ಆರೋಪಿ ಅರವಿಂದ್ ತಲೆಮರೆಸಿಕೊಂಡಿದ್ದಾನೆ. ಆತನಿಗಾಗಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪ್ರಸ್ತುತ ತನಿಖೆ ಮುಂದುವರಿದಿದೆ.