ಕೋಲ್ಕತ್ತಾ, ಜು.9: ವಿವಾಹೇತರ ಸಂಬಂಧದ ಆರೋಪದ ಮೇಲೆ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಘಟನೆ ಪಶ್ಚಿಮ ಬಂಗಾಳದ (West Bengal) ಪಶ್ಚಿಮ ಬುರ್ದ್ವಾನ್ ಜಿಲ್ಲೆಯಲ್ಲಿ ನಡೆದಿದೆ. ರಾಣಿಗಂಜ್ ಗ್ರಾಮೀಣ ಪ್ರದೇಶದಲ್ಲಿರುವ ತೃಣಮೂಲ ಕಾಂಗ್ರೆಸ್ (TMC) ಜಿಲ್ಲಾ ಪರಿಷತ್ ಬಿಶ್ವನಾಥ್ ಬೌರಿ ಅವರ ನಿವಾಸವನ್ನು ಗುಂಪೊಂದು ಧ್ವಂಸಗೊಳಿಸಿದೆ.
ಸ್ಥಳೀಯ ನಿವಾಸಿಗಳು ಮತ್ತು ಪ್ರತ್ಯಕ್ಷದರ್ಶಿಗಳ ಪ್ರಕಾರ, ಬಿಶ್ವನಾಥ್ ಬೌರಿಯ ಪುತ್ರ ಪವಿತ್ರಾ ಬೌರಿ ನೆರೆಹೊರೆಯ ವಿವಾಹಿತ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂಬ ಆರೋಪವು ಉದ್ರಿಕ್ತ ಪರಿಸ್ಥಿತಿ ಉಂಟಾಗಲು ಕಾರಣವಾಯಿತು. ಆರೋಪಗಳು ಹರಡುತ್ತಿದ್ದಂತೆ, ರಾತಿಬಾಟಿಯಲ್ಲಿರುವ ಕುಟುಂಬದ ನಿವಾಸದ ಹೊರಗೆ ಹೆಚ್ಚಿನ ಸಂಖ್ಯೆಯ ಗ್ರಾಮಸ್ಥರು ಜಮಾಯಿಸಿ ಪ್ರತಿಭಟನೆ ನಡೆಸಿದರು.
ಗುಂಪೊಂದು ಮನೆಯ ಮೇಲೆ ಕಲ್ಲು ಎಸೆದಿದ್ದು, ಮುಖ್ಯ ದ್ವಾರ, ಉಕ್ಕಿನ ಗ್ರಿಲ್‌ಗಳು ಮತ್ತು ಕಿಟಕಿ ಗಾಜುಗಳಿಗೆ ಹಾನಿಯಾಗಿದೆ ಎಂದು ಆರೋಪಿಸಲಾಗಿದೆ. ಪ್ರತಿಭಟನೆಯ ಸಮಯದಲ್ಲಿ ಆಸ್ತಿಯ ಕೆಲವು ಭಾಗಗಳನ್ನು ಸಹ ಧ್ವಂಸಗೊಳಿಸಲಾಗಿದೆ. ಪವಿತ್ರಾ ಬೌರಿ ಮತ್ತು ಆ ಮಹಿಳೆ ನಿಜವಾಗಿಯೂ ಸಂಬಂಧದಲ್ಲಿದ್ದರೆ, ಅವರು ಸಾರ್ವಜನಿಕವಾಗಿ ಅವಳನ್ನು ಒಪ್ಪಿಕೊಂಡು ಮದುವೆಯಾಗಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪಶ್ಚಿಮ ಬಂಗಾಳ ಶಿಕ್ಷಕರ ನೇಮಕಾತಿ ಹಗರಣ: ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ವಿಚಾರಣೆ
ಬಸಂತಿ ಎಂದು ಗುರುತಿಸಲಾದ ಮಹಿಳೆಯ ಸಂಬಂಧಿ ಮಾಧ್ಯಮಗಳಿಗೆ ತಿಳಿಸಿದ್ದು, ಕುಟುಂಬಕ್ಕೆ ಈ ಸಂಬಂಧದ ಬಗ್ಗೆ ಬಹಳ ಸಮಯದಿಂದ ತಿಳಿದಿತ್ತು. ಆದರೆ ವಿಷಯ ಬಹಿರಂಗವಾದ ನಂತರ ಸಾಮಾಜಿಕ ನ್ಯಾಯವನ್ನು ಬಯಸುತ್ತಿದೆ. ಕುಟುಂಬವು ಯಾವುದೇ ಘರ್ಷಣೆಯನ್ನು ಬಯಸುವುದಿಲ್ಲ. ಸಮಸ್ಯೆಯನ್ನು ಪರಿಹರಿಸಲು ಪವಿತ್ರಾ ಬೌರಿ ಅವರ ಮುಂದೆ ಹಾಜರಾಗಬೇಕೆಂದು ಮಾತ್ರ ಬಯಸಿದೆ ಎಂದು ಅವರು ಹೇಳಿದರು.
ಬಸಂತಿ ಅವರು ಯಾವಾಗಲೂ ಬಿಶ್ವನಾಥ್ ಬೌರಿಯನ್ನು ಗೌರವಿಸುತ್ತಿದ್ದರು. ಅವರಿಂದ ಎಂದಿಗೂ ಬೆದರಿಕೆಗೆ ಒಳಗಾಗಿರಲಿಲ್ಲ ಎಂದು ಮಹಿಳೆಯ ಕುಟುಂಬಸ್ಥರು ಹೇಳಿದರು. ಪರಿಸ್ಥಿತಿ ಉಲ್ಬಣಗೊಳ್ಳುತ್ತಿದ್ದಂತೆ, ಬಿಶ್ವನಾಥ್ ಬೌರಿ ಮತ್ತು ಅವರ ಕುಟುಂಬ ಮನೆಯಿಂದ ಹೊರಬಂದರು ಎನ್ನಲಾಗಿದೆ.
ಆರಂಭದಲ್ಲಿ ಪೊಲೀಸರು ಸ್ಥಳಕ್ಕೆ ತಲುಪಿದರು. ಉದ್ರಿಕ್ತ ಗುಂಪನ್ನು ನಿಯಂತ್ರಿಸಲು ಹೆಣಗಾಡಿದರು ಎಂದು ವರದಿಯಾಗಿದೆ. ನಂತರ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಯಿತು. ಪ್ರದೇಶದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಮುಂದುವರಿದಿದ್ದು, ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಈ ಘಟನೆಯ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ರೌಡಿಗಳ ಹೆಡೆಮುರಿ ಕಟ್ಟಿ ಅರೆಬೆತ್ತಲೆ ಮೆರವಣಿಗೆ ನಡೆಸಿದ ಪೊಲೀಸರು: ಬದಲಾಗುತ್ತಿದೆ ಪಶ್ಚಿಮ ಬಂಗಾಳ
ಬಂಗಾಳ ಟಿಎಂಸಿ ರಾಜ್ಯಾಧ್ಯಕ್ಷೆ ಚಂದ್ರಿಮಾ ರಾಜೀನಾಮೆ
ಇನ್ನು ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಫಲಿತಾಂಶವಾದ ಬಳಿಕ ತೃಣಮೂಲ ಕಾಂಗ್ರೆಸ್‍ಗೆ ಒಂದಲ್ಲ ಒಂದು ಹಿನ್ನಡೆಯಾಗುತ್ತಿದೆ. ಟಿಎಂಸಿ ರಾಜ್ಯಾಧ್ಯಕ್ಷೆ ಚಂದ್ರಿಮಾ ಭಟ್ಟಾಚಾರ್ಯ ಪಕ್ಷದ ಎಲ್ಲಾ ಹುದ್ದೆಗಳಿಗೆ ಇತ್ತೀಚೆಗಷ್ಟೇ ರಾಜೀನಾಮೆ ನೀಡಿದ್ದಾರೆ.
ವಿಧಾನಸಭಾ ಚುನಾವಣಾ ಸೋಲಿನ ನಂತರ ಭಟ್ಟಾಚಾರ್ಯ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಶುಕ್ರವಾರ (ಜು.3) ಕಾಲಿಘಾಟ್‌ನಲ್ಲಿ ನಡೆದ ಸಭೆಯಲ್ಲಿ “ನನಗೆ ನೀಡಲಾದ ಅಖಿಲ ಭಾರತ ತೃಣಮೂಲ ಕಾಂಗ್ರೆಸ್‌ನ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ನಾನು ಈ ಮೂಲಕ ರಾಜೀನಾಮೆ ನೀಡುತ್ತಿದ್ದೇನೆ. ಪ್ರಸ್ತುತ ನಾನು ಹೊಂದಿರುವ ಎಲ್ಲಾ ಇತರ ಹುದ್ದೆಗಳಿಗೂ ನಾನು ಈ ಮೂಲಕ ರಾಜೀನಾಮೆ ನೀಡುತ್ತೇನೆ” ಎಂದು ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.