ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Trump Jr: ಅಂಬಾನಿ ಕುಟುಂಬದ ಜೊತೆ ದಾಂಡಿಯಾ ನೃತ್ಯ ಮಾಡಿದ ಜೂನಿಯರ್ ಟ್ರಂಪ್- ವಿಡಿಯೊ ವೈರಲ್

ಜೂನಿಯರ್ ಟ್ರಂಪ್ ಅವರು ತಮ್ಮ ಪತ್ನಿ ವನೆಸ್ಸಾ ಟ್ರಂಪ್ ಜೊತೆಗೆ ಅಂಬಾನಿ ಕುಟುಂಬದೊಂದಿಗೆ ದಾಂಡಿಯ ನೃತ್ಯ ಮಾಡಿದ್ದಾರೆ.. ಉದ್ಯಮಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಕೂಡ ಈ ಸಂಭ್ರಮದಲ್ಲಿ ಭಾಗಿಯಾಗಿದ್ದು ದಾಂಡಿಯಾ ನೃತ್ಯ ಮಾಡಿದ್ದಾರೆ. ಈ ಮೂಲಕ ಈ ಒಂದು ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ನೆಟ್ಟಿಗರ ಗಮನ ಸೆಳೆಯುತ್ತಿದೆ.

ದಾಂಡಿಯಾ ನೃತ್ಯ ಮಾಡಿದ ಜೂನಿಯರ್ ಟ್ರಂಪ್

ನವದೆಹಲಿ: ಭಾರತೀಯ ಪರಂಪರೆಯನ್ನು ಬಿಂಬಿಸುವ ತಾಜ್ ಮಹಲ್ ಅನ್ನು ಕಾಣಲು ಪ್ರಪಂಚ ದಾದ್ಯಂತ ಪ್ರವಾಸಿಗರು ನಿತ್ಯ ಭೇಟಿ ನೀಡುತ್ತಲೇ ಇರುತ್ತಾರೆ. ಸೆಲೆಬ್ರಿಟಿಗಳಿಂದ ಹಿಡಿದು ಅಂತ ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದವರು ಕೂಡ ತಾಜ್ ಮಹಲ್ ನ ಸೌಂದರ್ಯಕ್ಕೆ ಮನ ಸೋತಿದ್ದಾರೆ. ಅಂತೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರ ಜೂನಿಯರ್ ಡೊನಾಲ್ಡ್ ಟ್ರಂಪ್ ಕೂಡ ಆಗ್ರಾದ ತಾಜ್ ಮಹಲ್‌ಗೆ ಭೇಟಿ ನೀಡಿದ್ದಾರೆ. ಅಲ್ಲಿಂದ ಜೂನಿಯರ್ ಡೊನಾಲ್ಡ್ ಟ್ರಂಪ್ ಅವರು ಜಾಮ್‌ನಗರದಲ್ಲಿರುವ ಅನಂತ್ ಅಂಬಾನಿ ಅವರ ವಂಟಾರಾ ವನ್ಯಜೀವಿ ಕೇಂದ್ರಕ್ಕೆ ಭೇಟಿ ನೀಡಿದ್ದಾರೆ. ಸಂಜೆ ಅನಂತ್ ಅಂಬಾನಿ ಆತಿಥ್ಯದ ವಂಟಾರಾದಲ್ಲಿ ಅವರು ತಂಗಿ ದ್ದಾರೆ. ಸದ್ಯ ಅಂಬಾನಿ ಕುಟುಂಬದ ಜೊತೆಗೆ ದಾಂಡಿಯಾ ನೃತ್ಯ ಮಾಡಿದ್ದ ವಿಡಿಯೋ ಒಂದು ಸೋಶಿಯಲ್ ಮಿಡಿಯಾದಲ್ಲಿ ಭಾರೀ ವೈರಲ್ (Viral Video) ಆಗಿದೆ.

ಅಂಬಾನಿ ಕುಟುಂಬದವರು ಜೂನಿಯರ್ ಟ್ರಂಪ್ ಅನ್ನು ಅತಿಥಿಯಾಗಿ ಆಹ್ವಾನಿಸಿದ್ದಾರೆ. ಈ ಸಂದರ್ಭ ಶ್ರೀಮಂತ ಉದ್ಯಮಿ ಅಂಬಾನಿ ಅವರೊಂದಿಗೆ ವನ್ಯ ಜೀವಿ ಕೇಂದ್ರಕ್ಕೆ ಮತ್ತು ಜಾಮ್ ನಗರದ ಕೆಲವು ಪ್ರಸಿದ್ಧ ದೇಗುಲಕ್ಕೆ ಕೂಡ ಭೇಟಿ ನೀಡಿದ್ದಾರೆ‌. ಬಳಿಕ ಸಂಜೆಯ ವೇಳೆ ಕೆಲವು ಸಾಂಸ್ಕೃತಿಕ ಕಾರ್ಯಕ್ರಮವನ್ನು ಕೂಡ ಅಂಬಾನಿ ಕುಟುಂಬದವರು ಆಯೋಜಿಸಿದ್ದಾರೆ. ಗುಜರಾತ್ ಸಾಂಪ್ರದಾಯಿಕ ನೃತ್ಯವಾದ ಗರ್ಬಾ ಮತ್ತು ದಾಂಡಿಯಾದಲ್ಲಿ ಜೂನಿಯರ್ ಟ್ರಂಪ್ ಭಾಗಿಯಾಗಿ ಖುಷಿಯ ಕ್ಷಣಗಳನ್ನು ಕಳೆದಿದ್ದಾರೆ.

ದಾಂಡಿಯಾ ನೃತ್ಯ ಮಾಡಿದ ಜೂನಿಯರ್ ಟ್ರಂಪ್



ವೈರಲ್ ಆದ ವಿಡಿಯೊದಲ್ಲಿ ಜೂನಿಯರ್ ಟ್ರಂಪ್ ಅವರು ತಮ್ಮ ಪತ್ನಿ ವನೆಸ್ಸಾ ಟ್ರಂಪ್ ಜೊತೆಗೆ ಅಂಬಾನಿ ಕುಟುಂಬ ದೊಂದಿಗೆ ದಾಂಡಿಯ ನೃತ್ಯ ಮಾಡಿದ್ದನ್ನು ಕಾಣಬಹುದು. ಉದ್ಯಮಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಕೂಡ ಈ ಸಂಭ್ರಮದಲ್ಲಿ ಭಾಗಿಯಾಗಿದ್ದು ದಾಂಡಿಯಾ ನೃತ್ಯ ಮಾಡಿದ್ದಾರೆ. ಈ ಮೂಲಕ ಈ ಒಂದು ವಿಡಿಯೋ ಸೋಶಿಯಲ್ ಮಿಡಿಯಾ ದಲ್ಲಿ ನೆಟ್ಟಿಗರ ಗಮನ ಸೆಳೆಯುತ್ತಿದೆ.

Viral Video: ಮರು ಮದುವೆಯಾಗಲು ಹೊರಟ ಪತಿಗೆ ಶಾಕ್ ಕೊಟ್ಟ ಮೊದಲ ಪತ್ನಿ-ವಿಡಿಯೊ ವೈರಲ್

ಜೂನಿಯರ್ ಟ್ರಂಪ್ ಮತ್ತು ಅನಂತ್ ಅಂಬಾನಿ ಅವರು ಕ್ರೀಂ ಮತ್ತು ಬ್ಲ್ಯಾಕ್ ಕಲರ್ ಸೂಟ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ವನೆಸ್ಸಾ ಟ್ರಂಪ್ ಅವರು ವೆಸ್ಟರ್ನ್ ಔಟ್ ಫಿಟ್ ನಲ್ಲಿ ಹಾಗೂ ಅನಂತ್ ಅಂಬಾನಿ ಪತ್ನಿ ರಾಧಿಕಾ ಅವರು ಸಾಂಪ್ರದಾಯಿಕ ಬಟ್ಟೆಯಲ್ಲಿ ಕಂಗೊಳಿಸಿದ್ದಾರೆ. ಈ ಕಾರ್ಯಕ್ರಮಕ್ಕಾಗಿಯೇ ನೃತ್ಯ ಕಲಾವಿದರು ಕೂಡ ಬಂದಿದ್ದು ದಾಂಡಿಯ ಸಾಂಪ್ರದಾಯಿಕ ಉಡುಗೆ ಉಟ್ಟು ಅವರು ಕೂಡ ನೃತ್ಯ ಮಾಡಿದ್ದನ್ನು ವೈರಲ್ ವಿಡಿಯೋದಲ್ಲಿ ಕಾಣಬಹುದು.

ಈ ಹಿಂದೆ 2018ರಲ್ಲಿ ಜೂನಿಯರ್ ಡೊನಾಲ್ಡ್ ಟ್ರಂಪ್ ಅವರು ದೆಹಲಿ, ಕೋಲ್ಕತ್ತಾ, ಮುಂಬೈ, ಪುಣೆಯ ಪ್ರಮುಖ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿದ್ದರು. ಇದೀಗ ಎರಡನೇ ಭಾರಿ ಭಾರತಕ್ಕೆ ಭೇಟಿ ನೀಡಿದ್ದಾರೆ. ರಾಜಸ್ಥಾನದ ಉದಯಪುರದಲ್ಲಿ ಆಪ್ತರ ವಿವಾಹ ಕಾರ್ಯಕ್ರಮಕ್ಕೆ ತೆರಳುವ ಹಿನ್ನೆಲೆ ಭಾರತಕ್ಕೆ ಬಂದಿದ್ದಾರೆ ಎಂದು ಮಾಧ್ಯಮ ಮೂಲಗಳು ತಿಳಿಸಿವೆ‌‌.