ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Illegal immigrants: ನನ್ನ ಪೇಟವನ್ನು ಕಸದ ಬುಟ್ಟಿಗೆಸೆದರು; ಅಮೆರಿಕದ ಗಡಿಪಾರು ನೀತಿಯ ಭಯಾನಕ ಚಿತ್ರಣ ಬಿಚ್ಚಿಟ್ಟ ವಲಸಿಗ

ಅಮೆರಿಕದಿಂದ ವಲಸಿಗರನ್ನು ಹೊರ ಹಾಕಲಾಗುತ್ತಿದೆ. ಇದೀಗ ಎರಡು ಸುತ್ತಿನಲ್ಲಿ ಭಾರತೀಯರು ತಾಯ್ನಾಡಿಗೆ ಮರಳಿದ್ದಾರೆ. ಅಮೆರಿಕ ಸೇನೆ ನಡೆದುಕೊಂಡ ಬಗ್ಗೆ ವಿರೋಧ ವ್ಯಕ್ತವಾಗುತ್ತಿದ್ದು, ನಿನ್ನೆ ಅಷ್ಟೇ ಮರಳಿದ್ದ ಭಾರತೀಯನೊಬ್ಬ ಅಮೆರಿಕ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಜತೀಂದರ್ ಸಿಂಗ್ ಎಂಬುವವರು ಕೆಲ ಆರೋಪ ಮಾಡಿದ್ದಾರೆ.

ಟರ್ಬನ್‌ ಎಸೆದು ಅವಮಾನಿಸಿದರು! ಶಾಕಿಂಗ್‌ ಸಂಗತಿ ಬಿಚ್ಚಿಟ್ಟ ವಲಸಿಗ

ಜತೀಂದರ್‌ ಸಿಂಗ್‌

Profile Vishakha Bhat Feb 17, 2025 7:33 PM

ಚಂಡೀಗಢ: ಅಮೆರಿಕದಲ್ಲಿ ಟ್ರಂಪ್‌ ಆಡಳಿತ ಶುರುವಾಗುತ್ತಿದ್ದಂತೆ ವಲಸಿಗರನ್ನು (Illegal immigrants) ಹೊರ ಹಾಕಲಾಗುತ್ತಿದೆ. ಇದೀಗ ಎರಡು ಸುತ್ತಿನಲ್ಲಿ ಭಾರತೀಯರು ತಾಯ್ನಾಡಿಗೆ ಮರಳಿದ್ದಾರೆ. ನಿನ್ನೆ ಅಷ್ಟೇ ಮರಳಿದ್ದ ಭಾರತೀಯನೊಬ್ಬ ಅಮೆರಿಕ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಜತೀಂದರ್ ಸಿಂಗ್ ಎಂಬುವವರು ಆರೋಪಿಸಿದ್ದು, ಅಮೆರಿಕದ ಬಂಧನ ಶಿಬಿರದಲ್ಲಿ ಎರಡು ವಾರಗಳ ಕಾಲ ತಂಗಿದ್ದ ಅನುಭವವನ್ನು ವಿವರಿಸುತ್ತಾ, ತನಗೆ ಚಿತ್ರಹಿಂಸೆ ನೀಡಲಾಯಿತು ಮತ್ತು ಸರಿಯಾದ ಆಹಾರ ಸಿಗಲಿಲ್ಲ ಎಂದು ಹೇಳಿದ್ದಾರೆ. ಅಮೆರಿಕ ಸೇನೆಯು ತಾನು ಧರಿಸಿದ್ದ ಪೇಟವನ್ನು ತೆಗೆಯುವಂತೆ ಸೂಚಿಸಿತು. ನಂತರ ಅದನ್ನು ಕಸದ ಬುಟ್ಟಿಗೆ ಎಸೆದಿದೆ ಎಂದು ಅವರು ಆರೋಪಿಸಿದರು.

ತನಗೆ ನೀಡಿದ ಚಿತ್ರ ಹಿಂಸೆಗಳ ಬಗ್ಗೆ ಮಾತನಾಡಿದ 23 ವರ್ಷದ ಜತೀಂದರ್ ಸಿಂಗ್ ಅಮೃತಸರದಲ್ಲಿ ಉದ್ಯೋಗಾವಕಾಶಗಳ ಕೊರತೆಯಿಂದಾಗಿ ತನ್ನ ಕುಟುಂಬವನ್ನು ನೋಡಿಕೊಳ್ಳಲು ವಿದೇಶಕ್ಕೆ ತೆರಳಿದ್ದೆ ಎಂದು ಹೇಳಿದ್ದಾರೆ. ಭಾನುವಾರ ರಾತ್ರಿ ತನ್ನನ್ನು ಮತ್ತು 111 ದಾಖಲೆರಹಿತ ಭಾರತೀಯರನ್ನು ಅಮೃತಸರಕ್ಕೆ ಮರಳಿ ಕರೆ ತರುವಾಗ ಅಮೆರಿಕದ ಮಿಲಿಟರಿ ವಿಮಾನದಲ್ಲಿ ಸುಮಾರು 36 ಗಂಟೆಗಳ ಕಾಲ ಬಂಧನದಲ್ಲಿದ್ದೆವು ಎಂದು ಅವರು ಆರೋಪಿಸಿದ್ದಾರೆ. ಗಡಿಪಾರು ಮಾಡುವ ಆದೇಶ ಪ್ರಕಟವಾಗುತ್ತಿದ್ದಂತೆ ನನ್ನನ್ನು ಎರಡು ವಾರಗಳ ಕಾಲ ಬಂಧನ ಶಿಬಿರಕ್ಕೆ ಕಳುಹಿಸಲಾಯಿತು. ಅಲ್ಲಿ ನನ್ನ ಆಕ್ಷೇಪಣೆಯ ಹೊರತಾಗಿಯೂ ಅವರು ನನ್ನ ಪೇಟವನ್ನು ತೆಗೆಯುವಂತೆ ಒತ್ತಾಯಿಸಿದರು. ನಂತರ ಅದನ್ನು ತೆಗೆದು ಕಸದ ಬುಟ್ಟಿಗೆ ಎಸೆದಿದ್ದಾರೆ ಎಂದು ಆರೋಪಿಸಿದ್ದಾರೆ.



ತಮಗಾದ ಕಷ್ಟಗಳನ್ನು ವಿವರಿಸುತ್ತಾ ನಮಗೆ ಅಲ್ಲಿ ಸರಿಯಾದ ಆಹಾರ ಸಿಗಲಿಲ್ಲ. ಅವರು ನನಗೆ ದಿನಕ್ಕೆ ಎರಡು ಬಾರಿ ಲೇಸ್ ಚಿಪ್ಸ್ ಮತ್ತು ಫ್ರೂಟಿ ಜ್ಯೂಸ್ ಮಾತ್ರ ಕೊಟ್ಟಿದ್ದಾರೆ ಎಂದು ಸಿಂಗ್‌ ವಿವರಿಸಿದ್ದಾರೆ. 2024 ರ ನವೆಂಬರ್‌ನಲ್ಲಿ ತನ್ನ ಸ್ನೇಹಿತರ ಸಲಹೆಯ ಮೇರೆಗೆ ಏಜೆಂಟ್‌ ಜೊತೆ ಸಂಪರ್ಕಕ್ಕೆ ಬಂದ ಜತೀಂದರ್ ಸಿಂಗ್, ಅಮೆರಕಕ್ಕೆ ತೆರಳಲು ಏಜೆಂಟ್‌ಗೆ 50 ಲಕ್ಷ ರೂ.ಗಳನ್ನು ಪಾವತಿಸಿದ್ದರು. . "ನನ್ನ ಕುಟುಂಬವು ಅವರಲ್ಲಿದ್ದ ಎಲ್ಲಾ ಭೂಮಿಯನ್ನು (1.3 ಎಕರೆ) ಮಾರಾಟ ಮಾಡಿ, ನನಗೆ ಏಜೆಂಟ್‌ಗೆ ಕೊಡಲು ಮುಂಗಡವಾಗಿ 22 ಲಕ್ಷ ರೂ.ಗಳನ್ನು ನೀಡಿತ್ತು. ಅಮೆರಿಕಕ್ಕೆ ಅಕ್ರಮವಾಗಿ ಹೋದರೆ ಗಡಿಪಾರು ಮಾಡುವುದಿಲ್ಲವೇ ಎಂದು ನಾನು ಅವರ ಬಳಿ ಕೇಳಿದ್ದೆ. ಆದರೆ ಆತ ನನಗೆ ಭರವಸೆ ನೀಡಿದ್ದ. ನಂತರ ಅರ್ಧ ದಾರಿಯಲ್ಲಿಯೇ ನನ್ನ ಕೈ ಬಿಟ್ಟ ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Illegal Immigrants: ದಟ್ಟ ಅರಣ್ಯದಲ್ಲಿ ಅಡಗಿ ಕುಳಿತು ಅಮೆರಿಕಗೆ ಎಂಟ್ರಿ ಕೊಟ್ಟಿದ್ದ ಅಕ್ರಮ ವಲಸಿಗರು! ಹಳೆಯ ವಿಡಿಯೊ ವೈರಲ್

ಪನಾಮದ ಕಾಡುಗಳು ತುಂಬಾ ದಟ್ಟವಾಗಿವೆ ಮತ್ತು ಅಕ್ರಮ ವಲಸಿಗರ ಶವಗಳನ್ನು ತಾನು ನೋಡಿದ್ದೇನೆ. ನನಗೆ ಪನಾಮ ಕಾಡುಗಳನ್ನು ದಾಟಲು 3 ದಿನಗಳು ಬೇಕಾಯಿತು. ನಂತರ ನಾನು ಅಮೆರಿಕ ಸೇನಾಧಿಕಾರಿಗಳ ಕೈಗೆ ಸಿಲುಕಿದೆ. ಅಲ್ಲಿ ನನಗೆ ಚಿತ್ರ ಹಿಂಸೆ ನೀಡಲಾಯಿತು ಎಂದು ಅವರು ಹೇಳಿದ್ದಾರೆ.