ನವದೆಹಲಿ: ಇಂಡಿಯಾ ಗೇಟ್‌ನಿಂದ (India Gate) ಜಂತರ್ ಮಂತರ್‌ವರೆಗಿನ (Jantar Mantar) ಭಾನುವಾರ ಎರಡು ಪ್ರತಿಭಟನಾ (Protest) ಮೆರವಣಿಗೆ ನಡೆಯಲಿದ್ದು, ಸುಮಾರು 5,000 ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಇದರೊಂದಿಗೆ ಹಲವಾರು ಡ್ರೋನ್‌ಗಳನ್ನು ಇಡಲಾಗಿದ್ದು, ಬ್ಯಾರಿಕೇಡ್‌ಗಳನ್ನು ಸಜ್ಜುಗೊಳಿಸಲಾಗಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ (Chief Election Commissioner Gyanesh Kumar) ವಿರುದ್ಧ ಕಳೆದೆರಡು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ಭಾನುವಾರ ಮೂರನೇ ದಿನಕ್ಕೆ ಕಾಲಿರಿಸಿದೆ. ಅನುಮತಿ ಇಲ್ಲದೇ ಇದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆ ಇರುವುದರಿಂದ ಭಾರಿ ಭದ್ರತೆ ಕಲ್ಪಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ಚುನಾವಣಾ ಆಯೋಗದ ವಿರುದ್ಧ ಇಂಡಿಯಾ ಗೇಟ್‌ನಿಂದ ಜಂತರ್ ಮಂತರ್‌ವರೆಗೆ ಎರಡು ಪ್ರತಿಭಟನಾ ಮೆರವಣಿಗೆಗಳಿಗೆ ಯಾವುದೇ ಅನುಮತಿ ನೀಡಿಲ್ಲ. ಆದರೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವ ನಿರೀಕ್ಷೆಯಿದೆ. ಭಾರಿ ಭದ್ರತೆಗಾಗಿ ರಾಪಿಡ್ ಆಕ್ಷನ್ ಫೋರ್ಸ್ ಮತ್ತು ಇತರ ಅರೆಸೇನಾ ಪಡೆಗಳ ಸಿಬ್ಬಂದಿ ಸೇರಿದಂತೆ ಒಟ್ಟು 5,000 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದರು.
ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಅವರ ವಿರುದ್ಧ ಮಧ್ಯಾಹ್ನ 3 ಗಂಟೆಗೆ ನಾಗರಿಕರ ಮೆರವಣಿಗೆ' ಮತ್ತು ಸಂಜೆ 5 ಗಂಟೆಗೆ 'ಭಾರತೀಯ ಯುವ ಕಾಂಗ್ರೆಸ್' ಮೆರವಣಿಗೆ ಇಂಡಿಯಾ ಗೇಟ್‌ನಿಂದ ಜಂತರ್ ಮಂತರ್‌ವರೆಗೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಈ ದಾರಿಯಲ್ಲಿ ಬಹು ಹಂತದ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಟಾಲ್‌ಸ್ಟಾಯ್ ಮಾರ್ಗ್, ಜನಪಥ್ ರಸ್ತೆ, ಸಂಸದ್ ಮಾರ್ಗ್ ಮತ್ತು ಕೇರಳ ಭವನದ ಕಡೆಯಿಂದ ಬರುವ ದಾರಿಗಳನ್ನು ತಡೆಯಲಾಗಿದ್ದು, ಅಶೋಕ ರಸ್ತೆ ಮತ್ತು ಸಿ-ಹೆಕ್ಸಗನ್ ಬಳಿಯೂ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ ಎಂದು ಹೇಳಿದರು.
ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಿಂದ ಜಂತರ್ ಮಂತರ್‌ವರೆಗಿನ ರಸ್ತೆಯ ಎರಡೂ ಬದಿಗಳಲ್ಲಿ ಜಿಲ್ಲಾ ಪಡೆಗಳು, ಮೀಸಲು ಸಿಬ್ಬಂದಿ, ರಾಪಿಡ್ ಆಕ್ಷನ್ ಫೋರ್ಸ್ ಮತ್ತು ಇತರ ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಧಾನಿಯಾಗಿದ್ದ ಶೇಖ್ ಹಸೀನಾಗೆ ಅವರಿಗೆ ಆಶ್ರಯ ನೀಡುವುದು ನಮ್ಮ ಕರ್ತವ್ಯವಾಗಿತ್ತು: ಸ್ಪಷ್ಟನೆ ನೀಡಿದ ಭಾರತ
ಜಂತರ್ ಮಂತರ್‌ಗೆ ಸಂಪರ್ಕ ಕಲ್ಪಿಸುವ ಎಲ್ಲಾ ಮಾರ್ಗಗಳಲ್ಲಿ ಪಿಸಿಆರ್ ವ್ಯಾನ್, ಪೊಲೀಸ್ ವಾಹನಗಳನ್ನು ನಿಯೋಜಿಸಲಾಗಿದೆ. ಡಿಸಿಪಿ ಕಚೇರಿಯಿಂದ ನೇರವಾಗಿ ಸಿಸಿಟಿವಿ ಕೆಮರಾಗಳ ಮೇಲ್ವಿಚಾರಣೆ ಮಾಡಲಾಗುವುದು. ಜೊತೆಗೆ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಲು ಡ್ರೋನ್‌ಗಳನ್ನು ಕೂಡ ಬಳಸಲಾಗುವುದು. ಸಿಬ್ಬಂದಿಗೆ ಗಲಭೆ ನಿಯಂತ್ರಣ ಸಾಧನಗಳನ್ನು ಒದಗಿಸಲಾಗಿದೆ. ಭದ್ರತಾ ವ್ಯವಸ್ಥೆಗಳ ಬಗ್ಗೆ ಗೃಹ ಸಚಿವಾಲಯಕ್ಕೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.