ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

UP Professor: ವಿದ್ಯಾರ್ಥಿಗಳ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದ ನೀಚ ಪ್ರೊಫೆಸರ್‌ ಅರೆಸ್ಟ್‌

ಮಾರ್ಕ್ಸ್‌ ಹೆಚ್ಚು ಮಾಡುವ ಆಸೆ ತೋರಿಸಿ ಅದೆಷ್ಟೋ ವಿದ್ಯಾರ್ಥಿಗಳ ಮೇಲೆ ಅತ್ಯಾಚಾರ ಎಸಗಿ ಅದನ್ನು ರೆಕಾರ್ಡ್‌ ಮಾಡಿ ಬೆದರಿಕೆವೊಡ್ಡುತ್ತಿದ್ದ 50ವರ್ಷದ ಪ್ರೊಫೆಸರ್‌ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಉತ್ತರಪ್ರದೇಶದ ಹತ್ರಾಸ್‌ನಲ್ಲಿ ಈ ಘಟನೆ ನಡೆದಿದ್ದು, ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಪ್ರೊಫೆಸರ್‌ ಅರೆಸ್ಟ್‌ ಆಗಿದ್ದಾನೆ.

ಕೊನೆಗೂ ಪೊಲೀಸ್‌ ಬಲೆಗೆ ಬಿದ್ದ ಅತ್ಯಾಚಾರಿ ಪ್ರೊಫೆಸರ್‌!

-

Rakshita Karkera Rakshita Karkera Mar 21, 2025 9:01 AM

ಲಖನೌ: ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ(Physical Abuse) ಎಸಗಿ, ಅದನ್ನು ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಉತ್ತರಪ್ರದೇಶದ ನೀಚ ಪ್ರಾಧ್ಯಾಪಕ(UP Professor) ಕೊನೆಗೂ ಪೊಲೀಸ್‌ ಬಲೆಗೆ ಬಿದ್ದಿದ್ದಾನೆ. ಪ್ರಕರಣ ಬಯಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಹತ್ರಾಸ್‌ನ ಸೇಥ್ ಫೂಲ್ ಚಂದ್ ಬಾಗ್ಲಾ ಪಿಜಿ ಕಾಲೇಜಿನ ಪ್ರಾಧ್ಯಾಪಕ ರಜನೀಶ್ ಕುಮಾರನ್ನು ಹೆಡೆಮುರಿ ಕಟ್ಟುವಲ್ಲಿ ಯುಪಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈತನ ಬಳಿಯಿಂದ 59ಕ್ಕೂ ಹೆಚ್ಚಿನ ವಿಡಿಯೊಗಳಿದ್ದ ಯುಎಸ್‌ಬಿ ಫ್ಲ್ಯಾಷ್ ಅಥವಾ ಪೆನ್ ಡ್ರೈವ್‌ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರಜನೀಶ್ ಕುಮಾರ್ ಯಾರು?

ಕುಮಾರ್ ಈ ಹಿಂದೆ 1996 ರಲ್ಲಿ ವಿವಾಹವಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಆ ಮದುವೆಯ ಸ್ಥಿತಿ ಸ್ಪಷ್ಟವಾಗಿಲ್ಲ. ಆದಾಗ್ಯೂ, ದಂಪತಿಗೆ ಮಕ್ಕಳಿರಲಿಲ್ಲ. 2001 ರಲ್ಲಿ ಆತನನ್ನು ಬಾಗ್ಲಾ ಕಾಲೇಜಿನಲ್ಲಿ ಶಿಕ್ಷಕನನ್ನಾಗಿ ನೇಮಿಸಲಾಯಿತು. ಕಳೆದ ವರ್ಷ ಅವರನ್ನು ಮುಖ್ಯ ಪ್ರಾಕ್ಟರ್ ಆಗಿ ಬಡ್ತಿ ನೀಡಲಾಯಿತು. 2008ರ ನಂತರ ಈ ನೀಚ ಕೃತ್ಯವನ್ನು ಆರಂಭಿಸಿದ್ದಾನೆ. ಅದೆಷ್ಟೋ ವಿದ್ಯಾರ್ಥಿನಿಯರ ಬದುಕಿನಲ್ಲಿ ಆಟ ಆಡಿ, ಆ ಹೀನ ಕೃತ್ಯವನ್ನು ರೆಕಾರ್ಡ್‌ ಮಾಡಿ ಬ್ಲ್ಯಾಕ್‌ಮೇಲ್‌ಗೆ ಇಳಿದಿದ್ದ. ಈಗಾಗಲೇ ಈ ಪಾಪಿ ಚಿತ್ರೀಕರಿಸಿರುವ 65 ಕ್ಕೂ ಹೆಚ್ಚು ವೀಡಿಯೊಗಳಲ್ಲಿ ಕೆಲವು ಅಶ್ಲೀಲ ವೆಬ್‌ಸೈಟ್‌ಗಳಲ್ಲಿ ಅಪ್‌ಲೋಡ್ ಆಗಿವೆ ಎಂಬ ಭಯಾನಕ ಸಂಗತಿಯನ್ನು ಪೊಲೀಸರು ಬಾಯ್ಬಿಟ್ಟಿದ್ದಾರೆ.

ಅನಾಮಧೇಯ ಪತ್ರ ಕೊಟ್ಟ ಸುಳಿವು

ಸುಮಾರು 10 ತಿಂಗಳ ಹಿಂದೆ ಪೊಲೀಸರಿಗೆ ಅನಾಮಧೇಯ ಪತ್ರ ಬಂದಿದ್ದು, ಅದರಲ್ಲಿ ಕುಮಾರ್ ಹೆಚ್ಚಿನ ಅಂಕ ಹಾಗೂ ಉದ್ಯೋಗಾವಕಾಶವನ್ನು ನೀಡುವುದಾಗಿ ಆಮಿಷವೊಡ್ಡಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆಸುತ್ತಿದ್ದ. ಅಷ್ಟೇ ಅಲ್ಲದೆ ಅದನ್ನು ವಿಡಿಯೋ ಮಾಡಿಕೊಂಡು ಬ್ಲಾಕ್‌ ಮೇಲ್‌ ಮಾಡುತ್ತಿದ್ದ ಎಂದು ಪ್ರತದಲ್ಲಿ ಉಲ್ಲೇಖಿಸಲಾಗಿತ್ತು. "ನಾನು ನನ್ನ ನಿಜವಾದ ಹೆಸರನ್ನು ಬಳಸಿಲ್ಲ ಏಕೆಂದರೆ ಈತನ ಹೆಸರನ್ನು ಹೇಳಿದರೆ ನನ್ನನ್ನು ಕೊಲ್ಲುತ್ತಾನೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಅನಾಮಧೇಯ ದೂರುಗಳೊಂದಿಗೆ ಕುಮಾರ್ ವಿದ್ಯಾರ್ಥಿಗಳೊಂದಿಗೆ ಆತ್ಮೀಯವಾಗಿರುವ 59 ವೀಡಿಯೊಗಳನ್ನು ಹೊಂದಿರುವ ಪೆನ್ ಡ್ರೈವ್ ಕೂಡ ಇಡಲಾಗಿದೆ. ಕುಮಾರ್, ಗುಪ್ತ ಕ್ಯಾಮೆರಾದೊಂದಿಗೆ ಕೃತ್ಯಗಳನ್ನು ರೆಕಾರ್ಡ್ ಮಾಡುತ್ತಿದ್ದನು ಮತ್ತು ನಂತರ ವಿದ್ಯಾರ್ಥಿಗಳನ್ನು ಮತ್ತೆ ತನ್ನ ಜೊತೆ ಬರುವಂತೆ ಬ್ಲಾಕ್‌ಮೇಲ್‌ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

Physical Abuse: Physical Abuse: 7 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಬಿಜೆಪಿ ಯುವ ಮುಖಂಡ ಅರೆಸ್ಟ್‌

ಪೊಲೀಸರು ಕುಮಾರ್ ವಿರುದ್ಧ ಪ್ರಕರಣ ದಾಖಲಿಸಿದ್ದು, ಅಧಿಕಾರದಲ್ಲಿರುವ ವ್ಯಕ್ತಿಯಿಂದ ಅತ್ಯಾಚಾರ, ಲೈಂಗಿಕ ಕಿರುಕುಳ ಮತ್ತು ಲೈಂಗಿಕ ಸಂಭೋಗಕ್ಕೆ ಸಂಬಂಧಿಸಿದ ವಿಭಾಗಗಳ ಅಡಿಯಲ್ಲಿ ಆರೋಪ ಹೊರಿಸಿದ್ದಾರೆ. ಸದ್ಯ ಆರೋಪಿಯನ್ನು ಶಿಕ್ಷಕ ಸ್ಥಾನದಿಂದ ಅಮಾನತು ಮಾಡಲಾಗಿದೆ. ಈ ವೀಡಿಯೊಗಳು 2023 ಕ್ಕೂ ಮೊದಲಿನವು ಎಂದು ಹೇಳಲಾಗಿದೆ. ಪೊಲೀಸರ ಪ್ರಕಾರ, ದೂರುದಾರು ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ವಿದ್ಯಾರ್ಥಿನಿಯರು ಯಾರೂ ದೂರನ್ನು ದಾಖಲಿಸಿಲ್ಲ.