ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರಾಹುಲ್ ಗಾಂಧಿಯನ್ನು ಟಪೋರಿ ಎಂದು ಕರೆದ ಬಿಜೆಪಿ ಸಂಸದೆ ಕಂಗನಾ ರಣಾವತ್

Kangana Ranaut criticises Rahul’s Behaviour: ಕಾಂಗ್ರೆಸ್‌ ಸಂಸದ ರಾಹುಲ್ ಗಾಂಧಿ ಸಂಸದೆಯರಿಗೆ ಮುಜುಗರವಾಗುವ ರೀತಿಯಲ್ಲಿ ವರ್ತಿಸುತ್ತಾರೆ ಎಂದು ಬಿಜೆಪಿ ಸಂಸದೆ ಮತ್ತು ನಟಿ ಕಂಗನಾ ರಣಾವತ್ ಕಟುವಾಗಿ ಟೀಕಿಸಿದ್ದಾರೆ. ರಾಹುಲ್ ಗಾಂಧಿ ಟಪೋರಿಯಂತೆ ಕಾಣಿಸುತ್ತಾರೆ ಎಂದು ಹೇಳುವ ಮೂಲಕ ಹೊಸ ರಾಜಕೀಯ ವಿವಾದ ಹುಟ್ಟುಹಾಕಿದ್ದಾರೆ.

ರಾಹುಲ್ ಗಾಂಧಿಯ ನಡವಳಿಕೆಯನ್ನು ಟೀಕಿಸಿದ ಕಂಗನಾ ರಣಾವತ್

ಬಿಜೆಪಿ ಸಂಸದೆ ಕಂಗನಾ ರಣಾವತ್ ಹಾಗೂ ರಾಹುಲ್ ಗಾಂಧಿ (ಸಂಗ್ರಹ ಚಿತ್ರ) -

Priyanka P
Priyanka P Mar 19, 2026 3:25 PM

ನವದೆಹಲಿ, ಮಾ. 19: ಸಂಸತ್‌ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಬಿಜೆಪಿ ಸಂಸದೆ ಮತ್ತು ನಟಿ- ಕಂಗನಾ ರಣಾವತ್ (Kangana Ranaut) ಕಟುವಾಗಿ ಟೀಕಿಸಿದ್ದಾರೆ. ರಾಹುಲ್ ಗಾಂಧಿ ಸಂಸದೆಯರಿಗೆ (Rahul Gandhi) ಮುಜಿಗರವಾಗುವ ರೀತಿಯಲ್ಲಿ ವರ್ತಿಸುತ್ತಾರೆ ಎಂದು ಆರೋಪಿಸುವ ಮೂಲಕ ಹೊಸ ರಾಜಕೀಯ ವಿವಾದ ಹುಟ್ಟುಹಾಕಿದ್ದಾರೆ.

ಸಂಸತ್ತಿನ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕಂಗನಾ ರಣಾವತ್, ರಾಹುಲ್ ಗಾಂಧಿಯ ನಡವಳಿಕೆಯನ್ನು ಟೀಕಿಸುತ್ತಾ, ಅವರು ವರ್ತಿಸುವ ರೀತಿ ತುಂಬಾ ಅನಾನುಕೂಲದಿಂದ ಕೂಡಿದೆ ಎಂದು ಹೇಳಿದರು. ಅವರು ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಂದ ಸಲಹೆ ತೆಗೆದುಕೊಳ್ಳಬೇಕು ಎಂದರು. ಪ್ರಿಯಾಂಕಾ ಗಾಂಧಿ ವಾದ್ರಾ ಅವರ ನಡವಳಿಕೆ ತುಂಬಾ ಚೆನ್ನಾಗಿದೆ ಎಂದು ಬಣ್ಣಿಸಿದರು.

ರಾಹುಲ್ ಗಾಂಧಿ ಟಪೋರಿ (ಗಲಾಟೆ ಮಾಡುವ ರೀತಿಯ ವ್ಯಕ್ತಿ)ಯಂತೆ ಬರುತ್ತಾರೆ ಎಂದು ಕಂಗನಾ ಹೇಳಿದರು. ಆ ಮೂಲಕ ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ವಿರೋಧಕ್ಕೆ ತುಪ್ಪ ಸುರಿದರು.

ಸಂಸದೆ ಕಂಗನಾ ರಣಾವತ್ ಅವರ ಹೇಳಿಕೆ:



ಮುಸ್ಲಿಂ ವ್ಯಾಪಾರಿಗೆ ಬೆಂಬಲ ನೀಡಿದ ಮೊಹಮ್ಮದ್‌ ದೀಪಕ್‌ ಜಿಮ್‌ ಸೇರಲಿದ್ದಾರೆ ರಾಹುಲ್ ಗಾಂಧಿ

ಸಂಸತ್ತಿನ ಪ್ರಸ್ತುತ ಅಧಿವೇಶನದಲ್ಲಿ ಎರಡೂ ಪಕ್ಷಗಳ ನಾಯಕರ ನಡುವೆ ನಡೆಯುತ್ತಿರುವ ಉದ್ವಿಗ್ನತೆ ಮತ್ತು ಮಾತಿನ ಚಕಮಕಿಯ ಮಧ್ಯೆ ಕಂಗನಾ ರಣಾವತ್ ಈ ಹೇಳಿಕೆ ನೀಡಿದ್ದಾರೆ. ಕಂಗನಾ ಅವರ ಹೇಳಿಕೆಗಳಿಗೆ ರಾಹುಲ್ ಗಾಂಧಿ ಅಥವಾ ಕಾಂಗ್ರೆಸ್‌ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಕೇರಳ ಕಾಂಗ್ರೆಸ್‌ನಲ್ಲಿ ಆಂತರಿಕ ಕಲಹ

ಕೇರಳ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತು ಕಾಂಗ್ರೆಸ್‌ನೊಳಗೆ ಜಗಳ ತೀವ್ರಗೊಂಡಿದೆ. ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುವ ಸಂಸದರು ಪಕ್ಷದ ದೊಡ್ಡ ಸವಾಲಾಗಿದೆ.

ಮೂಲಗಳ ಪ್ರಕಾರ, ಕನಿಷ್ಠ ಐದು ಹಾಲಿ ಸಂಸದರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಈ ಪಟ್ಟಿಯಲ್ಲಿರುವ ಹೆಸರುಗಳಲ್ಲಿ ರಾಜ್ಯ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆ. ಸುಧಾಕರನ್ ಕೂಡ ಒಬ್ಬರು. ಈ ಬೇಡಿಕೆಯು ಪಕ್ಷದ ನಾಯಕತ್ವವನ್ನು ಕಠಿಣ ಸ್ಥಿತಿಯಲ್ಲಿರಿಸಿದೆ.

ಪಕ್ಷದೊಳಗಿನ ಒಂದು ದೊಡ್ಡ ಬಣ ಈ ಸಂಸದರಿಗೆ ಟಿಕೆಟ್ ನೀಡುವುದನ್ನು ವಿರೋಧಿಸುತ್ತಿದೆ. ಈ ಐದು ಸಂಸದರಿಗೆ ವಿಧಾನಸಭಾ ಟಿಕೆಟ್ ನೀಡಿ ಗೆದ್ದರೆ, ಪಕ್ಷವು ಹಲವಾರು ಲೋಕಸಭಾ ಸ್ಥಾನಗಳಲ್ಲಿ ಮರು ಚುನಾವಣೆಗಳನ್ನು (ಉಪಚುನಾವಣೆ) ನಡೆಸಬೇಕಾಗಬಹುದು. ಇದು ಪಕ್ಷಕ್ಕೆ ಗಮನಾರ್ಹ ಸವಾಲಾಗಲಿದೆ ಎನ್ನುವುದು ಅವರ ವಾದ.

ಅಲ್ಲದೆ ಇಷ್ಟೊಂದು ಹಿರಿಯ ಸಂಸದರು ಚುನಾವಣಾ ಕಣಕ್ಕೆ ಇಳಿಯುವುದರಿಂದ ಮುಖ್ಯಮಂತ್ರಿ ಅಭ್ಯರ್ಥಿಯ ಬಗ್ಗೆ ಮತದಾರರಲ್ಲಿ ಗೊಂದಲ ಉಂಟಾಗಬಹುದು. ಇದು ಪಕ್ಷದೊಳಗಿನ ಗುಂಪುಗಾರಿಕೆಯನ್ನು ಹೆಚ್ಚಿಸುವ ಅಪಾಯವನ್ನುಂಟು ಮಾಡಬಹುದೂ ಎನ್ನಲಾಗಿದೆ.

"ನೀವು ಆ ಸ್ಥಾನಕ್ಕೆ ಅರ್ಹರಲ್ಲ": ರಾಹುಲ್ ಗಾಂಧಿ ವಿರುದ್ಧ ನವಜೋತ್ ಕೌರ್ ಸಿಧು ಆಕ್ರೋಶ

ಟಿಕೆಟ್ ಹಂಚಿಕೆ ಪ್ರಕ್ರಿಯೆಯ ಬಗ್ಗೆ ರಾಹುಲ್ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇವಲ ಶಿಫಾರಸುಗಳೊಂದಿಗೆ ತಮ್ಮ ಬಳಿಗೆ ಬರಬೇಡಿ ಎಂದು ಅವರು ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ಮತ್ತು ಸ್ಕ್ರೀನಿಂಗ್ ಸಮಿತಿ ಸದಸ್ಯರಿಗೆ ಹೇಳಿದ್ದಾರೆ.

ಪ್ರತಿ ವಿಧಾನಸಭಾ ಕ್ಷೇತ್ರದ ಜಾತಿ ಆಧಾರಿತ ಸಾಮಾಜಿಕ ಅಂಕಗಣಿತವನ್ನು ವಿವರಿಸುವ, ಅಭ್ಯರ್ಥಿಗಳ ಬಗ್ಗೆ ಜನ ಸಾಮಾನ್ಯರಿಗೆ ಇರುವ ಅಭಿಪ್ರಾಯ ತಿಳಿಸುವಂತೆ ರಾಹುಲ್ ಗಾಂಧಿ ನಾಯಕರನ್ನು ಕೇಳಿದ್ದಾರೆ. ಇದು ಅಭ್ಯರ್ಥಿಯ ಹಿಂದಿನ ಸಾಧನೆ ಮತ್ತು ಅವರು ಗೆಲ್ಲುವ ಸಾಧ್ಯತೆಯನ್ನು ಸಹ ಒಳಗೊಂಡಿರಬೇಕು.

ಪ್ರದೇಶ ಕಾಂಗ್ರೆಸ್ ಸಮಿತಿ (ಪಿಸಿಸಿ) ಶಿಫಾರಸು ಮಾಡಿದ ಹೆಸರನ್ನು ಕುರುಡಾಗಿ ಅನುಮೋದಿಸಲಾಗುವುದಿಲ್ಲ ಎಂದು ರಾಹುಲ್ ಸ್ಪಷ್ಟಪಡಿಸಿದರು. ಸಂಸದರನ್ನು ಕಣಕ್ಕಿಳಿಸುವ ಕಲ್ಪನೆಯನ್ನು ಸ್ಕ್ರೀನಿಂಗ್ ಸಮಿತಿ ಮತ್ತು ಸಿಇಸಿಯ ಹಲವಾರು ಸದಸ್ಯರು ವಿರೋಧಿಸುತ್ತಿದ್ದಾರೆ, ಆದರೆ ಇನ್ನೂ ಯಾವುದೇ ನಿರ್ದಿಷ್ಟ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ.