ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಭಾರತದ ಮೇಲೆ ಶೇಕಡಾ 25ರಷ್ಟು ಸುಂಕ ವಿಧಿಸಲು ಮುಂದಾದ ಅಮೆರಿಕ; ವ್ಯಾಪಾರ ಒಪ್ಪಂದವಾದರೆ ಶೇಕಡಾ 17ರಷ್ಟು ಟಾರಿಫ್‌

US proposes tariffs: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಸೇರಿ ವಿವಿಧ ದೇಶಗಳ ಮೇಲೆ ಟಾರಿಫ್‌ ವಿಧಿಸಲು ಚಿಂತನೆ ನಡೆಸಿದ್ದಾರೆ. ಅದರಂತೆ ಭಾರತೀಯ ಸರಕುಗಳ ಮೇಲೆ ಶೇಕಡಾ 25ರವರೆಗೆ ಸುಂಕ ಹೇರಲು ಅಮೆರಿಕ ಪ್ರಸ್ತಾವಿಸಲಾಗಿದೆ. ಅಮೆರಿಕದ ಶೇಕಡಾ 25ರವರೆಗೆ ಸುಂಕ ಎದುರಿಸಲಿರುವ 7 ದೇಶಗಳಲ್ಲಿ ಭಾರತವೂ ಇದೆ.

ಡೊನಾಲ್ಡ್‌ ಟ್ರಂಪ್‌ (ಸಂಗ್ರಹ ಚಿತ್ರ)

ವಾಷಿಂಗ್ಟನ್‌, ನ. 25: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಭಾರತ ಸೇರಿ ವಿವಿಧ ದೇಶಗಳ ಮೇಲೆ ಟಾರಿಫ್‌ ವಿಧಿಸಲು ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅದರಂತೆ ಭಾರತೀಯ ಸರಕುಗಳ ಮೇಲೆ ಶೇಕಡಾ 25ರವರೆಗೆ ಸುಂಕ ಹೇರಲು ಪ್ರಸ್ತಾವಿಸಲಾಗಿದೆ. ರಾಯಿಟರ್ಸ್ ವರದಿ ಮಾಡಿರುವ ಅಧಿಕೃತ ಹೇಳಿಕೆಯ ಪ್ರಕಾರ, ಅಮೆರಿಕದ ಶೇಕಡಾ 25ರವರೆಗೆ ಸುಂಕ ಎದುರಿಸಲಿರುವ 7 ದೇಶಗಳಲ್ಲಿ ಭಾರತವೂ ಇದೆ. ಈ ಪಟ್ಟಿಯಲ್ಲಿ ಭಾರತದ ಜತೆಗೆ ಕಾಂಬೋಡಿಯಾ, ಇಂಡೋನೇಷ್ಯಾ, ದಕ್ಷಿಣ ಕೊರಿಯಾ, ಮಲೇಷ್ಯಾ, ತೈವಾನ್ ಮತ್ತು ಥಾಯ್ಲೆಂಡ್‌ ಹೆಸರಿದೆ. ಒಟ್ಟು 14 ಪ್ರಮುಖ ವ್ಯಾಪಾರ ಪಾಲುದಾರ ರಾಷ್ಟ್ರಗಳ ಮೇಲೆ ಹೊಸ ಸುಂಕ ವಿಧಿಸಲು ಟ್ರಂಪ್ ಆಡಳಿತ ಚಿಂತನೆ ನಡೆಸಿದೆ.

ಒಂದು ವೇಳೆ ಅಮೆರಿಕದೊಂದಿಗಿನ ಭಾರತದ ವ್ಯಾಪಾರ ಒಪ್ಪಂದ ಅಂತಿಮವಾದರೆ ಸುಂಕ ಶೇಕಡಾ 17ಕ್ಕೆ ಇಳಿಕೆಯಾಗುವ ಸಾಧ್ಯತೆ ಇದೆ. ಫೆಬ್ರವರಿಯ ಡೀಲ್‌ನಲ್ಲಿ ಶೇಕಡಾ 18ರಷ್ಟು ಇತ್ತು. ಈಗ ಅದನ್ನು ಶೇಕಡಾ 17ಕ್ಕೆ ಇಳಿಸಲಾಗಿದೆ. ಭಾರತಕ್ಕೆ ಪ್ರಸ್ತಾವಿಸಿರುವ ದರವು 14 ವ್ಯಾಪಾರ ಪಾಲುದಾರರನ್ನು ಒಳಗೊಂಡ ವಿಶಾಲ ಸುಂಕ ಪ್ಯಾಕೇಜ್‌ನ ಭಾಗ ಎನ್ನಲಾಗಿದೆ.

16 ದೇಶಗಳ ಜತೆ ನಡೆದ ವ್ಯಾಪಾರ ವಹಿವಾಟಿನ ಕುರಿತು ಅಮೆರಿಕವು 8 ತಿಂಗಳು ತನಿಖೆ ನಡೆಸಿದ ನಂತರ ಈ ಪ್ರಸ್ತಾವನೆ ಬಂದಿದೆ. ಮಾರುಕಟ್ಟೆಯ ಬೇಡಿಕೆಗಿಂತ ಹೆಚ್ಚಿನ ಪ್ರಮಾಣದ ಸರಕುಗಳನ್ನು ಉತ್ಪಾದಿಸುವ ಮೂಲಕ ಅಮೆರಿಕದ ಉದ್ಯಮಗಳ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಟ್ರಂಪ್ ಆಡಳಿತದ ತನಿಖೆಯು ಮಾರುಕಟ್ಟೆಯ ಬೇಡಿಕೆಗೆ ಅಗತ್ಯವಿರುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸರಕು ಉತ್ಪಾದಿಸುವ ಮತ್ತು ಕೈಗಾರಿಕಾ ಸಾಮರ್ಥ್ಯವನ್ನು ಉತ್ತೇಜಿಸುವ ಕ್ರಮಗಳ ಮೇಲೆ ಗಮನ ಕೇಂದ್ರೀಕರಿಸಿದೆ.

ಭಾರತ, ಚೀನಾ ಸೇರಿ 16 ದೇಶಗಳ ಮೇಲೆ ಹೊಸ ಸುಂಕ ವಿಧಿಸಲು ಡೊನಾಲ್ಡ್ ಟ್ರಂಪ್ ನಿರ್ಧಾರ

ಯಾರಿಗೆ ಎಷ್ಟು ಶುಲ್ಕ?

ಚೀನಾದ ಮೇಲೆ ಶೇಕಡಾ 40ರಷ್ಟು ಸುಂಕ ವಿಧಿಸಲಾಗಿದ್ದು ಮೊದಲ ಸ್ಥಾನದಲ್ಲಿದೆ. ವಿಯೆಟ್ನಾಂಗೆ ಶೇಕಡಾ 35ರಷ್ಟು ದರ ಪ್ರಸ್ತಾವಿಸಲಾಗಿದೆ. ಯುರೋಪಿಯನ್ ಒಕ್ಕೂಟದ 27 ರಾಷ್ಟ್ರಗಳ ಗುಂಪು, ಜಪಾನ್, ಸ್ವಿಟ್ಜರ್ಲೆಂಡ್, ಸಿಂಗಾಪುರ ಮತ್ತು ಬಾಂಗ್ಲಾದೇಶಗಳು ಶೇಕಡಾ 20ರಷ್ಟು ದರ ಅನ್ವಯವಾಗಲಿದೆ.

ಯಾವಾಗ ಜಾರಿ?

ಅದಾಗ್ಯೂ ಈ ಸುಂಕ ಪ್ರಮಾಣ ಇನ್ನೂ ಅಂತಿಮವಾಗಿಲ್ಲ. 2027ರ ಜನವರಿ 5ರವರೆಗೆ ಈ ಬಗ್ಗೆ ಅಮೆರಿಕ ಜನರ ಅಭಿಪ್ರಾಯ ಕೇಳಲಾಗುತ್ತದೆ. ಜನವರಿ 25ರಿಂದ ಸಮಾಲೋಚನೆ ನಡೆಸಿ ಆಮೇಲೆ ಜಾರಿಗೆ ತರಲಾಗುತ್ತದೆ. ಯಾವುದೇ ಕಾರಣಕ್ಕೂ ಜನವರಿಗಿಂತ ಮೊದಲು ಜಾರಿ ಆಗುವುದಿಲ್ಲ ಅಂತ ಅಧಿಕಾರಿಗಳು ಹೇಳಿದ್ದಾರೆ.

ವ್ಯಾಪಾರ ಒಪ್ಪಂದ ಅಂತಿಮಗೊಳಿಸಲು ಒತ್ತಡ?

ತಜ್ಞರ ಪ್ರಕಾರ ಅಮೆರಿಕದ ಈ ಕ್ರಮ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಲು ಭಾರತದ ಮೇಲೆ ಒತ್ತಡ ಹೇರುವ ತಂತ್ರದ ಭಾಗ. ವ್ಯಾಪಾರ ಒಪ್ಪಂದ ಅಂತಿಮವಾದರೆ ಟಾರಿಫ್‌ ಶೇಕಡಾ 17ಕ್ಕೆ ಇಳಿಯಲಿದೆ ಎನ್ನುವುದು ಇದರ ಸೂಚನೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಾರತದ ರಫ್ತು ಉದ್ಯಮದ ಮೇಲೆ ಪರಿಣಾಮವೇನು?

ಈ ಸುಂಕ ಜಾರಿಯಾದರೆ ಅಮೆರಿಕಕ್ಕೆ ರಫ್ತು ಮಾಡುವ ಭಾರತೀಯ ಉತ್ಪನ್ನಗಳ ಬೆಲೆ ಹೆಚ್ಚಾಗುವ ಸಾಧ್ಯತೆಯಿದೆ. ಇದರಿಂದ ಜವಳಿ, ಉಕ್ಕು, ರಾಸಾಯನಿಕ ಮತ್ತು ಇತರ ರಫ್ತು ವಲಯಗಳ ಮೇಲೆ ಪರಿಣಾಮ ಬೀರಬಹುದು.

ವಿದೇಶದ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author