ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ( Union Education Minister Dharmendra Pradhan) ರಾಜೀನಾಮೆ ಬಳಿಕ ಕಾಕ್ರೋಚ್ ಜನತಾ ಪಕ್ಷದ ( Cockroach Janata Party) ನಾಯಕರು ಪ್ರತಿಭಟನೆಯನ್ನು ಹಿಂತೆಗೆದುಕೊಂಡರು. ಇದರ ಬಳಿಕ ಮೊದಲ ಬಾರಿಗೆ ಈ ಕುರಿತು ಪ್ರತಿಕ್ರಿಯಿಸಿರುವ ಸಾಮಾಜಿಕ ಕಾರ್ಯಕರ್ತ (Social activist) ಅಣ್ಣಾ ಹಜಾರೆ (Anna Hazare), ಸಾಮಾಜಿಕ ಕುಂದುಕೊರತೆಗಳನ್ನು ಬಗೆ ಹರಿಸಲು ಹಿಂಸಾತ್ಮಕ ದಾರಿಯನ್ನು ಆಯ್ಕೆ ಮಾಡಿಕೊಳ್ಳಬೇಡಿ. ಸಂವಾದದ ಪರಿಹಾರಕ್ಕೆ ದಾರಿ ಹುಡುಕಿ. ಉದ್ವಿಗ್ನತೆ ಮತ್ತು ಘರ್ಷಣೆಗಳಿಂದ ಪರಿಹಾರ ಕಾರ್ಯಗಳು ವಿಳಂಬವಾಗುತ್ತದೆ ಎಂದು ಹೇಳಿದರು.
ದೆಹಲಿಯ ಜಂತರ್ ಮಂತರ್ ನಲ್ಲಿ ಕಳೆದ 37 ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಯನ್ನು ಕಾಕ್ರೋಚ್ ಜನತಾ ಪಕ್ಷ ಹಿಂತೆಗೆದುಕೊಂಡ ಬಳಿಕ ಪ್ರತಿಕ್ರಿಯಿಸಿರುವ ಅಣ್ಣಾ ಹಜಾರೆ, ಸಾರ್ವಜನಿಕ ಕುಂದುಕೊರತೆಗಳನ್ನು ಶಾಂತಿಯುತವಾಗಿ ಸಂವಾದ ಮತ್ತು ಪ್ರಜಾಪ್ರಭುತ್ವ ವಿಧಾನಗಳ ಮೂಲಕ ಪರಿಹರಿಸಬೇಕು ಎಂದು ಹೇಳಿದರು.
ನೂತನ ಶಿಕ್ಷಣ ಸಚಿವರಾಗಿ ಆಯ್ಕೆಯಾದ ಪ್ರಲ್ಹಾದ್ ಜೋಶಿ ಹೇಳಿದ್ದೇನು? ಇಲ್ಲಿದೆ ಫಸ್ಟ್ ರಿಯಾಕ್ಷನ್
ನಮ್ಮದು ಪ್ರಜಾಪ್ರಭುತ್ವ. ಇಲ್ಲಿ ಆಜ್ಞೆಯ ಆಳ್ವಿಕೆಯಲ್ಲ. ಆದ್ದರಿಂದ ಪ್ರಜಾಪ್ರಭುತ್ವದ ಮಾರ್ಗವನ್ನು ಅನುಸರಿಸಬೇಕು ಅಣ್ಣಾ ಹಜಾರೆ, ಹಿಂಸಾಚಾರವನ್ನು ನಡೆಸದೆ ತಾವು ಮಾಡಿರುವ 22 ದಿನಗಳ ಉಪವಾಸ ಸತ್ಯಾಗ್ರಹಗಳನ್ನು ನೆನಪಿಸಿಕೊಂಡರು.
ತಾವು ಮಾಡಿರುವ ಶಾಂತಿಯುತ ಪ್ರತಿಭಟನೆಯ ಕಾರಣಗಳಿಂದಾಗಿ ಶಾಸಕಾಂಗದಲ್ಲಿ ಗಮನಾರ್ಹ ಬದಲಾವಣೆಗಳನ್ನು ತರಲು ಸಹಾಯವಾಗಿದೆ. ನಾನು 22 ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದ್ದೇನೆ. ಎಂದಿಗೂ ಹಿಂಸೆಯನ್ನು ಬಳಸಲಿಲ್ಲ. ಇದರಿಂದಾಗಿ 10 ಕಾನೂನುಗಳನ್ನು ಜಾರಿಗೆ ತರಲಾಯಿತು ಎಂದರು.
ಸಂವಾದದ ಮಹತ್ವದ ಕುರಿತು ಮಾತನಾಡಿದ ಅವರು, ಸಮಸ್ಯೆಗಳನ್ನು ಮುಖಾಮುಖಿ ಸಂವಾದದ ಮೂಲಕ ಪರಿಹರಿಸಲು ಸಾಧ್ಯ. ಉದ್ವಿಗ್ನತೆಯನ್ನು ಸೃಷ್ಟಿಸುವುದು ಯಾವುದನ್ನೂ ಪರಿಹರಿಸುವುದಿಲ್ಲ ಎಂದ ಅವರು, ಸರ್ಕಾರಗಳು ಸಾರ್ವಜನಿಕ ಭಾವನೆಗಳಿಗೆ ಗಮನ ಕೊಡಬೇಕು ಮತ್ತು ಜನರ ಕಲ್ಯಾಣಕ್ಕೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.
ದೆಹಲಿ ಜಂತರ್ ಮಂತರ್ ಪ್ರತಿಭಟನಾಕಾರರ ಆಹಾರ ತಡೆದಿದ್ದರೆ ಪೊಲೀಸರು? ಸಿಜೆಪಿ ದೂರಿನ ಸತ್ಯಾಸತ್ಯತೆ ಏನು?
ಕೇಂದ್ರ ಸಚಿವರಾದ ಜೆಪಿ ನಡ್ಡಾ ಮತ್ತು ಜಿತೇಂದ್ರ ಸಿಂಗ್ ಅವರೊಂದಿಗೆ ಕಾನ್ಸ್ ಟಿಟ್ಯೂಷನ್ ಕ್ಲಬ್ ಆಫ್ ಇಂಡಿಯಾದಲ್ಲಿ ಮೂರನೇ ಸುತ್ತಿನ ಮಾತುಕತೆ ನಡೆದ ಬಳಿಕ ಸಿಜೆಪಿ ನಾಯಕರು ಪ್ರತಿಭಟನೆಯನ್ನು ಹಿಂಪಡೆಯುವ ಬಗ್ಗೆ ಘೋಷಿಸಿದರು. ಸಿಜೆಪಿ ಮುಖ್ಯ ವಕ್ತಾರ ಸೌರವ್ ದಾಸ್, ಮಾತುಕತೆ ಸಮಯದಲ್ಲಿ ನೀಡಿರುವ ಭರವಸೆಗಳನ್ನು ನಿಗದಿತ ಸಮಯದೊಳಗೆ ಜಾರಿಗೆ ತರುವುದಾಗಿ ಸಚಿವರು ಭರವಸೆ ನೀಡಿರುವುದರಿಂದ ಸಂಘಟನೆಯು ಸದ್ಭಾವನೆಯಿಂದ ಪ್ರತಿಭಟನೆಯನ್ನು ಕೊನೆಗೊಳಿಸುತ್ತಿದೆ ಎಂದು ತಿಳಿಸಿದರು.