ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಉತ್ತರ ಪ್ರದೇಶದ ಚುನಾವಣೆಯಲ್ಲಿ Gen Z ಗಳೇ ಕಿಂಗ್‌ ಮೇಕರ್ಸ್‌? ಮತದಾರರ ಒಲವು ಯಾರತ್ತ, ಸಮೀಕ್ಷೆ ಹೇಳೋದೇನು?

ಮುಂಬರುವ 2027ರ ಉತ್ತರ ಪ್ರದೇಶದ ವಿಧಾನ ಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಭಾರೀ ತಯಾರಿಯನ್ನು ನಡೆಸುತ್ತಿವೆ. ಆಡಳಿತಾರೂಢ ಬಿಜೆಪಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲು ಕಸರತ್ತು ನಡೆಸಿದರೆ ಜಾತೀವಾದವನ್ನು ಮುಂದಿಟ್ಟು ಸಮಾಜವಾದಿ ಹಾಗೂ ಇಂಡಿಯಾ ಮೈತ್ರಿಕೂಟ ಸಜ್ಜಾಗಿದೆ.

ಸಂಗ್ರಹ ಚಿತ್ರ

ಲಖನೌ: ಮುಂಬರುವ 2027ರ ಉತ್ತರ ಪ್ರದೇಶದ ವಿಧಾನ ಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಭಾರೀ ತಯಾರಿಯನ್ನು ನಡೆಸುತ್ತಿವೆ. (Uttar Pradesh Election 2027) ಆಡಳಿತಾರೂಢ ಬಿಜೆಪಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲು ಕಸರತ್ತು ನಡೆಸಿದರೆ ಜಾತೀವಾದವನ್ನು ಮುಂದಿಟ್ಟು ಸಮಾಜವಾದಿ ಹಾಗೂ ಇಂಡಿಯಾ ಮೈತ್ರಿಕೂಟ ಸಜ್ಜಾಗಿದೆ. ಇದರ ನಡುವೆ ಹೊಸ ಪೀಳಿಗೆಯ ಅಂದರೆ ಸಾಂಪ್ರದಾಯಿಕ ಜಾತಿ ಸಮೀಕರಣಗಳಿಗಿಂತ ಹೆಚ್ಚಾಗಿ, ಇತ್ತೀಚಿನ ತಲೆಮಾರಿನ ಯುವ ಮತದಾರರು ಅಂದರೆ 'ಜೆನ್ ಜಿ' (Gen Z) ನಿರ್ಧರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಉತ್ತರ ಪ್ರದೇಶದಲ್ಲಿ ಚುನಾವಣಾ ಪೂರ್ವ ಸಮೀಕ್ಷೆ ನಡೆಸಲಾಗಿದ್ದು, ಇದರಲ್ಲಿ ಕೆಲ ಮಹತ್ವದ ವಿಷಯಗಳು ಹೊರ ಬಿದ್ದಿದೆ. ರಾಜ್ಯದ ಎಲ್ಲಾ 75 ಜಿಲ್ಲೆಗಳ ಸುಮಾರು 30,925 ಮತದಾರರ ಒಲವನ್ನು ಆಧರಿಸಿ ಸಿದ್ಧಪಡಿಸಲಾದ ಈ ಸಮೀಕ್ಷೆಯು, ಉತ್ತರ ಪ್ರದೇಶದ ರಾಜಕಾರಣದಲ್ಲಿ ಯುವ ತಲೆಮಾರಿನ ಪ್ರಭಾವ ಎಷ್ಟು ಗಾಢವಾಗಿದೆ ಎಂಬುದನ್ನು ಸಾಬೀತುಪಡಿಸಿದೆ. ಸಮೀಕ್ಷೆಯಲ್ಲಿ ಭಾಗವಹಿಸಿದ ಶೇ. 56 ರಷ್ಟು ಜನರು ಮುಂಬರುವ ಚುನಾವಣೆಯಲ್ಲಿ ಜೆನ್ ಜಿ ಯುವಕರೇ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ ಎಂದು ಬಲವಾಗಿ ಅಭಿಪ್ರಾಯಪಟ್ಟಿದ್ದಾರೆ. ಒಟ್ಟು ಮತದಾರರಲ್ಲಿ ಸುಮಾರು ಶೇ. 15 ರಿಂದ 20 ರಷ್ಟು ಪಾಲು ಹೊಂದಿರುವ 18 ರಿಂದ 29 ವರ್ಷದೊಳಗಿನ ಈ ಯುವ ಜನಾಂಗದ ಒಲವು ಸಣ್ಣ ಪ್ರಮಾಣದಲ್ಲಿ ಬದಲಾದರೂ ಸಹ, ಅದು ದೊಡ್ಡ ಮಟ್ಟದ ಸೀಟುಗಳ ಏರುಪೇರಿಗೆ ಕಾರಣವಾಗಲಿದೆ ಎಂದು ರಾಜಕೀಯ ವಿಶ್ಲೇಷಕರು ಅಂದಾಜಿಸಿದ್ದಾರೆ.

ಇನ್ನೊಂದು ವಿಶೇಷವೆಂದರೆ, ಬಿಜೆಪಿ ಮತ್ತು ಎನ್‌ಡಿಎ ಮೈತ್ರಿಕೂಟದ ಬೆಂಬಲಿಗರಲ್ಲಿ ಶೇ. 63.5 ರಷ್ಟು ಜನರು ಯುವ ಮತದಾರರ ಶಕ್ತಿಯನ್ನು ನಂಬಿದ್ದರೆ, ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ಮೈತ್ರಿಕೂಟದ ಬೆಂಬಲಿಗರಲ್ಲಿ ಶೇ. 41.7 ರಷ್ಟು ಜನರು ಜೆನ್ ಜಿ ಮತಗಳು ಫಲಿತಾಂಶ ಉಲ್ಟಾ ಮಾಡಬಲ್ಲವು ಎಂದು ಭಾವಿಸಿದ್ದಾರೆ.

ಬಿಜೆಪಿಗೆ ಮೈನಸ್‌ ಆಗುತ್ತಾ?

ಇನ್ನು ಸಮೀಕ್ಷೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷಾ ಅಕ್ರಮ ಮತ್ತು ಪೇಪರ್ ಲೀಕ್ ವಿಷಯವು ಯುವ ಮತದಾರರ ಮೇಲೆ ಭಾರಿ ಪ್ರಭಾವ ಬೀರಲಿದೆ ಎಂದು ಶೇ. 10.4 ರಷ್ಟು ಜನರು ಹೇಳಿದ್ದಾರೆ. ಈ ವರ್ಗದ ಯುವಕರಲ್ಲಿ ಶೇ. 50.1 ರಷ್ಟು ಮಂದಿ ಬಿಜೆಪಿಯನ್ನು ಬೆಂಬಲಿಸಿದರೆ, ಶೇ. 42.5 ರಷ್ಟು ಮಂದಿ ಎಸ್ಪಿ-ಕಾಂಗ್ರೆಸ್ ಒಕ್ಕೂಟಕ್ಕೆ ಜೈ ಎಂದಿದ್ದಾರೆ. ಇನ್ನು ಉದ್ಯೋಗ ಕೊರತೆ ಕುರಿತಾಗಿನ ಅಸಮಾಧಾನ ಕೂಡ ಇದೆ.

ರಾಮ ಮಂದಿರ ನಿರ್ಮಾಣವು ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದ್ದರೂ, 2027ರ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ಇದು ಪ್ರಮುಖ ಮಾನದಂಡವಲ್ಲ ಎಂದು ಮತದಾರರು ಸ್ಪಷ್ಟಪಡಿಸಿದ್ದಾರೆ. ಸಮೀಕ್ಷೆಯಲ್ಲಿ ಭಾಗವಹಿಸಿದವರ ಪೈಕಿ ಕೇವಲ ಶೇ. 1.6 ರಷ್ಟು ಜನರು ಮಾತ್ರ ರಾಮ ಮಂದಿರ ನಿರ್ಮಾಣವನ್ನು ತಮ್ಮ ಪ್ರಮುಖ ಚುನಾವಣಾ ವಿಷಯ ಎಂದು ಆಯ್ಕೆ ಮಾಡಿದ್ದಾರೆ.

MLA G B Jyoti ganesh: ​ಎನ್‌ಡಿಎ ಅಭ್ಯರ್ಥಿ ಗೆಲುವಿಗೆ ಬಿಜೆಪಿ-ಜೆಡಿಎಸ್ ಸಂಕಲ್ಪ: ದಾಖಲೆ ಮತಗಳ ಅಂತರಕ್ಕೆ ಶ್ರಮಿಸಲು ಕರೆ

ಮತದಾರರ ಒಲವು ಯಾರತ್ತ?

ಟ್ಟಾರೆ ಮತದಾರರ ಒಲವಿನಲ್ಲಿ ಶೇ. 66.6 ರಷ್ಟು ಬೆಂಬಲದೊಂದಿಗೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಭಾರಿ ಮುನ್ನಡೆ ಕಾಯ್ದುಕೊಂಡಿದೆ. ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಒಕ್ಕೂಟ ಶೇ. 26.4 ರಷ್ಟು ಹಾಗೂ ಬಿಎಸ್‌ಪಿ ಶೇ. 5.4 ರಷ್ಟು ಬೆಂಬಲ ಪಡೆದಿವೆ. ಅಲ್ಲದೆ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಆಡಳಿತದ ಶೈಲಿಗೆ ಶೇ. 77.1 ರಷ್ಟು ಜನರು ತೃಪ್ತಿ ವ್ಯಕ್ತಪಡಿಸಿದ್ದಾರೆ.

Vishakha Bhat Heggar

View all posts by this author