ನವದೆಹಲಿ: ಸ್ವಾತಂತ್ರ್ಯ ಹೋರಾಟಕ್ಕೆ (Inspired India’s freedom struggle) ಸ್ಫೂರ್ತಿಯಾಗಿದ್ದ ʼವಂದೇ ಮಾತರಂʼ (Vande Mataram) ಗೀತೆಯನ್ನು ಬಂಕಿಮ್ ಚಂದ್ರ ಚಟರ್ಜಿ (Bankim Chandra Chatterjee )ರಚಿಸಿದ್ದರು. ಸಂಸ್ಕೃತದಲ್ಲಿ ಬಂಕಿಮ್ ಚಂದ್ರ ಚಟರ್ಜಿ ರಚಿಸಿರುವ ಈ ಗೀತೆ ಧೈರ್ಯ ಮತ್ತು ಏಕತೆಯ ಕಲ್ಪನೆಯನ್ನು ಪ್ರತಿಬಿಂಬಿಸುತ್ತಿದ್ದು, ಆ ಕಾಲದಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಫೂರ್ತಿ ತುಂಬಿತ್ತು. ಇದೀಗ ಈ ಗೀತೆಗೆ 150 ವರ್ಷಗಳ ಸಂಭ್ರಮ. ಈ ಹಿನ್ನೆಲೆಯಲ್ಲಿ ನವೆಂಬರ್ 7ರಂದು ದೇಶಾದ್ಯಂತ 'ವಂದೇ ಮಾತರಂ' ಗೀತೆಯ 150ನೇ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದೆ. ಇದಕ್ಕಾಗಿ ಭಾರಿ ಸಿದ್ಧತೆಗಳನ್ನು ನಡೆಸಲಾಗುತ್ತಿದೆ.
'ವಂದೇ ಮಾತರಂ' ಗೀತೆಯು ರಾಷ್ಟ್ರಗೀತೆಯಾದ 'ಜನ ಗಣ ಮನ'ಕ್ಕೆ ಸಮಾನವಾದ ಗೌರವವನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಗೀತೆಯ 150 ವರ್ಷಗಳ ಸಂಭ್ರಮವನ್ನು ದೇಶದ ಮೈಲಿಗಲ್ಲು ಎಂದೇ ಪರಿಗಣಿಸಲಾಗುತ್ತಿದೆ. ಈ ಹಾಡನ್ನು ಭಾರತದ ಆತ್ಮದ ಸಂಕೇತವನ್ನಾಗಿ ಮಾಡಲಾಗಿದೆ. ಈ ಗೀತೆಯನ್ನು ಬಂಕಿಮ್ ಚಂದ್ರ ಚಟರ್ಜಿ aವರ 1882ರ ಪ್ರಸಿದ್ಧ ಕಾದಂಬರಿ 'ಆನಂದ ಮಠ'ದಲ್ಲಿ ಮುದ್ರಿಸಲಾಗಿದೆ.
ಬ್ರಿಟಿಷರು 'ಗಾಡ್ ಸೇವ್ ಅವರ್ ಕ್ವೀನ್' ಅನ್ನು ಬ್ರಿಟಿಷ್ ಭಾರತದ ರಾಷ್ಟ್ರಗೀತೆಯಾಗಿ ಜನಪ್ರಿಯಗೊಳಿಸಲು ಪ್ರಯತ್ನಿಸುತ್ತಿದ್ದರು. ಇದು ಸ್ವಾಭಿಮಾನ ಮತ್ತು ಗುರುತಿಗಾಗಿ ಹಂಬಲಿಸುತ್ತಿದ್ದ ಭಾರತೀಯರ ವಿರೋಧಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ: Women’s ODI World Cup 2025: ಭಾರತ vs ಆಸ್ಟ್ರೇಲಿಯಾ ವಿಶ್ವಕಪ್ ಸೆಮಿಫೈನಲ್ ಪಂದ್ಯಕ್ಕೆ ಮೀಸಲು ದಿನವಿದೆಯೇ?
1896ರಲ್ಲಿ ಕೋಲ್ಕತ್ತಾದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ರವೀಂದ್ರನಾಥ ಟ್ಯಾಗೋರ್ ʼವಂದೇ ಮಾತರಂʼ ಹಾಡಿದಾಗ ರಾಷ್ಟ್ರವ್ಯಾಪಿ ಪ್ರಾಮುಖ್ಯತೆಯನ್ನು ಗಳಿಸಿತು. ಇದು ಭಾರತದ ಜಾಗೃತಿಯ ಪ್ರಬಲ ಸಂಕೇತವಾಗಿ ರೂಪುಗೊಂಡಿತು. ಮಾತೃಭೂಮಿಗೆ ಅದರ ಭಾವಗೀತಾತ್ಮಕ ಗೌರವವು ದೇಶಾದ್ಯಂತ ಪ್ರತಿಧ್ವನಿಸಿತು. ಅನಂತರ ಕ್ರಾಂತಿಕಾರಿ ಮತ್ತು ತತ್ವಜ್ಞಾನಿ ಅರಬಿಂದೋ ಘೋಷ್ ಈ ಹಾಡನ್ನು ಇಂಗ್ಲಿಷ್‌ಗೆ ಅನುವಾದಿಸಿದರು.
ಇದನ್ನೂ ಓದಿ: Viral Video: ಹುಲಿಯ ಡೆಡ್ಲಿ ಅಟ್ಯಾಕ್! ಕೂದಲೆಳೆ ಅಂತರದಲ್ಲಿ ಪಾರಾದ ಪ್ರಯಾಣಿಕರು; ಇಲ್ಲಿದೆ ಮೈಜುಮ್ಮೆನ್ನಿಸುವ ವಿಡಿಯೊ
1950ರಲ್ಲಿ ಭಾರತ ಸಂವಿಧಾನ ಸಭೆಯಲ್ಲಿ ಈ ಹಾಡನ್ನು ಔಪಚಾರಿಕವಾಗಿ ರಾಷ್ಟ್ರಗೀತೆಯಾಗಿ ಅಳವಡಿಸಿಕೊಳ್ಳಲಾಯಿತು. ಭಾರತದ ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಈ ಗೀತೆಗೆ ರಾಷ್ಟ್ರೀಯ ಗೀತೆಯ ಸ್ಥಾನಮಾನವನ್ನು ನೀಡಿದರು.
ಇದೀಗ ಕೇಂದ್ರ ಸಚಿವ ಸಂಪುಟವು ಅಕ್ಟೋಬರ್ 1ರಂದು ದೇಶಾದ್ಯಂತ ಈ ಗೀತೆಯ 150ನೇ ವಾರ್ಷಿಕೋತ್ಸವವನ್ನು ಆಚರಿಸಲು ಘೋಷಣೆ ಹೊರಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಮನ್ ಕೀ ಬಾತ್ ಮಾಸಿಕ ರೇಡಿಯೋ ಕಾರ್ಯಕ್ರಮದಲ್ಲಿ ʼವಂದೇ ಮಾತರಂʼ ಗೀತೆಯ 150ನೇ ವರ್ಷಾಚರಣೆ ಸಂಭ್ರಮದಲ್ಲಿ ದೇಶದ ನಾಗರಿಕರು ಸಕ್ರಿಯವಾಗಿ ಭಾಗವಹಿಸುವಂತೆ ಕರೆ ನೀಡಿದ್ದಾರೆ.