ಚೆನ್ನೈ: ಕಳೆದ ವರ್ಷ ಕರೂರ್‌ನಲ್ಲಿ (Karur Stampede) ನಡೆದ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸಾರ್ವಜನಿಕ ಉದ್ಯೋಗ ನೀಡುವ ವಿಜಯ್ (CM Vijay) ನೇತೃತ್ವದ ಟಿವಿಕೆ (TVK) ಸರ್ಕಾರದ ನಿರ್ಧಾರವನ್ನು ಮದ್ರಾಸ್ ಹೈಕೋರ್ಟ್ (Madras High Court) ಸೋಮವಾರ ರದ್ದುಗೊಳಿಸಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರ ಅಧಿಕಾರದಲ್ಲಿದ್ದಾಗ ಟಿವಿಕೆ ರ್ಯಾಲಿಯಲ್ಲಿ ನಡೆದ ಕಾಲ್ತುಳಿತದಲ್ಲಿ ಮಕ್ಕಳು ಸೇರಿದಂತೆ ನಲವತ್ತೊಂದು ಜನರು ಸಾವನ್ನಪ್ಪಿದ್ದರು.
ವಿಜಯ್ ಕಾರ್ಯಕ್ರಮಕ್ಕೆ ತಡವಾಗಿ ಆಗಮಿಸಿದ್ದರಿಂದ ಜನಸಂದಣಿ ಹೆಚ್ಚಾಗಿತ್ತು. ಅನುಮತಿಸಿದ್ದಕ್ಕಿಂತ ಹೆಚ್ಚಿನ ಜನರು ಸೇರಿದ್ದರು ಎಂದು ಪೊಲೀಸರು ತಿಳಿಸಿದ್ದರು. ಅಕ್ಟೋಬರ್ 2025 ರಲ್ಲಿ, ಸುಪ್ರೀಂ ಕೋರ್ಟ್ ತನಿಖೆಯನ್ನು ರಾಜ್ಯ ಮಟ್ಟದ ವಿಶೇಷ ತನಿಖಾ ತಂಡದಿಂದ (SIT) ಕೇಂದ್ರ ತನಿಖಾ ದಳಕ್ಕೆ (CBI) ವರ್ಗಾಯಿಸಿತು, ಸ್ವತಂತ್ರ ಮತ್ತು ನಿಷ್ಪಕ್ಷಪಾತ ತನಿಖೆಯಗೆ ಆದೇಶಿಸಿತ್ತು.
ಕಾಲ್ತುಳಿತ ಸಂಭವಿಸಿ 9 ತಿಂಗಳ ಬಳಿಕ ವಿಜಯ್ ಕರೂರಿಗೆ ತೆರಳಿ ದುರಂತವನ್ನು ಭಾವುಕರಾಗಿ ಸ್ಮರಿಸಿದ ಅವರು, ಆ ಘಟನೆಯ ನೋವು ಇನ್ನೂ ತಮ್ಮನ್ನು ಕಾಡುತ್ತಿದೆ ಎಂದು ಹೇಳಿದರು. ಕರೂರು ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಸ್ಮರಣಾರ್ಥ ಸ್ಮಾರಕ ನಿರ್ಮಿಸಲಾಗುವುದು; ರಾಜಕೀಯ ಲಾಭಕ್ಕಾಗಿ ಇಂತಹ ದುರಂತಗಳು ಮತ್ತೆ ಮರುಕಳಿಸಬಾರದು ಎಂದು ಹೇಳಿದ್ದರು. ಕಾಲ್ತುಳಿತ ದುರಂತದಿಂದ ಬಾಧಿತಗೊಂಡ 32 ಕುಟುಂಬಗಳ ಸದಸ್ಯರಿಗೆ ಮುಖ್ಯಮಂತ್ರಿ ವಿಜಯ್ ನೇಮಕಾತಿ ಆದೇಶಗಳನ್ನು ವಿತರಿಸಿದ್ದರು.
ಅಂದಿನ ಡಿಎಂಕೆ ಸರ್ಕಾರ ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ಪರಿಹಾರ ಘೋಷಿಸಿತ್ತು. ಇದರ ಜೊತೆಗೆ ವಿಜಯ್ ಅವರು ಕೂಡ ಮೃತರ ಕುಟುಂಬಗಳಿಗೆ ತಲಾ 20 ಲಕ್ಷ ನೆರವು ನೀಡಿದ್ದರು. ಬಳಿಕ 2025ರ ಅಕ್ಟೋಬರ್‌ನಲ್ಲಿ, ಚೆನ್ನೈ ಸಮೀಪದ ಹೋಟೆಲ್‌ನಲ್ಲಿ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳನ್ನು ಅವರು ಭೇಟಿ ಮಾಡಿದ್ದರು.
3ನೇ ದಿನಕ್ಕೆ ಚೇತರಿಸಿಕೊಂಡ ʻಜನ ನಾಯಗನ್ʼ; ʻದಳಪತಿʼ ವಿಜಯ್ ಸಿನಿಮಾದ ಕಲೆಕ್ಷನ್‌ನಲ್ಲಿ ಏರಿಕೆ!
ವಿಪಕ್ಷಗಳಿಂದ ಟೀಕೆ
ಹಿರಿಯ ಎಐಎಡಿಎಂಕೆ ನಾಯಕ ಆರ್.ಬಿ. ಉದಯಕುಮಾರ್ ಅವರು ಮುಖ್ಯಮಂತ್ರಿಯವರ ಈ ಕ್ರಮವನ್ನು ತೀವ್ರವಾಗಿ ಟೀಕಿಸಿ, ಇದನ್ನು ಎಂದು ಕರೆದಿದ್ದರು. ಸರ್ಕಾರಿ ಉದ್ಯೋಗಕ್ಕಾಗಿ ವರ್ಷಗಳ ಕಾಲ ಕಾಯುತ್ತಿರುವ ಸಾಮಾನ್ಯ ಕುಟುಂಬಗಳ ಲಕ್ಷಾಂತರ ಯುವಜನರ ಜೀವನೋಪಾಯದ ಮೇಲೆ ಈ ಕ್ರಮ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದ್ದರು. ಪ್ರಮಾಣಿತ ಶಾಸನಬದ್ಧ ಕಾರ್ಯವಿಧಾನಗಳನ್ನು ಮೀರಿ ತಾತ್ಕಾಲಿಕ ಸರ್ಕಾರಿ ಉದ್ಯೋಗಗಳನ್ನು ನೀಡಲಾಗಿದೆ ಎಂದು ಎಐಎಡಿಎಂಕೆ ನಾಯಕರು ಆರೋಪಿಸಿದ್ದಾರೆ. ತಮಿಳುನಾಡಿನಲ್ಲಿ ಎಲ್ಲಾ ಸರ್ಕಾರಿ ನೇಮಕಾತಿಗಳನ್ನು ತಮಿಳುನಾಡು ಸಾರ್ವಜನಿಕ ಸೇವಾ ಆಯೋಗದ (ಟಿಎನ್‌ಪಿಎಸ್‌ಸಿ) ಮೂಲಕ ಕಟ್ಟುನಿಟ್ಟಾಗಿ ನಡೆಸಬೇಕು ಎಂದು ಅವರು ಒತ್ತಿ ಹೇಳಿದ್ದರು.