ನವದೆಹಲಿ: ಪಾಕಿಸ್ತಾನದ ಜೆಟ್ (Pakistani F-16 fighter jet) ಉರುಳಿಸಿ ಮೂರು ದಿನಗಳ ಕಾಲ ಪಾಕಿಸ್ತಾನ ಸೇನೆಯ ವಶದಲ್ಲಿದ್ದ ಭಾರತೀಯ ವಾಯುಪಡೆಯ ಮಾಜಿ ಗ್ರೂಪ್ ಕ್ಯಾಪ್ಟನ್ (Former Indian Air Force Group Captain) ಮತ್ತು ವೀರ ಚಕ್ರ ಪ್ರಶಸ್ತಿ ಪುರಸ್ಕೃತರಾದ ಅಭಿನಂದನ್ ವರ್ತಮಾನ್ (Fighter pilot Abhinandan Varthaman) ಅವರು ಇದೀಗ ಗೋವಾ ಏರ್‌ಲೈನ್ಸ್ (Goa-based airline FLY91) ಸೇರಿಕೊಂಡಿದ್ದಾರೆ. ಗೋವಾ ಮೂಲದ ಏರ್‌ಲೈನ್ಸ್ ಎಫ್ ಎಲ್ ವೈ 91ನಲ್ಲಿ ಪೈಲಟ್ ಆಗಿ ಸೇರಿಕೊಂಡಿರುವ ಅಭಿನಂದನ್, ಕೊನೆಯದಾಗಿ 2019ರ ವೈಮಾನಿಕ ಯುದ್ಧದಲ್ಲಿ (2019 Balakot air strike) ದೇಶ ಸೇವೆ ಸಲ್ಲಿಸಿದ್ದರು.
ಐಎಎಫ್ ನ ಮಾಜಿ ಗ್ರೂಪ್ ಕ್ಯಾಪ್ಟನ್ ಅಭಿನಂದನ್ ವರ್ತಮಾನ್ ಅವರು ಗೋವಾ ಮೂಲದ ಏರ್‌ಲೈನ್ಸ್ FLY91 ನಲ್ಲಿ ಪೈಲಟ್ ಆಗಿ ಸೇರಿಕೊಂಡಿದ್ದಾರೆ. 2019ರ ಬಾಲಕೋಟ್ ಯುದ್ಧದಲ್ಲಿ ಭಾಗವಹಿಸಿದ ಬಳಿಕ ಅವರಿಗೆ ವೀರ ಚಕ್ರ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಬಳಿಕ ಅವರು ಸೇನೆಯಿಂದ ನಿವೃತ್ತಿ ಪಡೆದಿದ್ದಾರೆ.
ಬಾಲಕೋಟ್ ವಾಯುದಾಳಿಯ ವೇಳೆ ಅವರು ಪಾಕಿಸ್ತಾನದ ಎಫ್-16 ಫೈಟರ್ ಜೆಟ್ ಅನ್ನು ಹೊಡೆದುರುಳಿಸಿದ್ದರು. ಬಳಿಕ ಮೂರು ದಿನಗಳ ಕಾಲ ಪಾಕಿಸ್ತಾನ ಸೇನೆಯ ವಶದಲ್ಲಿದ್ದರು. ಕಳೆದ ಮಾರ್ಚ್ ತಿಂಗಳಲ್ಲಿ ವಾಯುಸೇನೆಯಿಂದ ನಿವೃತ್ತ ಪಡೆದಿದ್ದಾರೆ. ಅವರಿಗೆ ಈಗ 43 ವರ್ಷ.
2019ರ ಫೆಬ್ರವರಿಯಲ್ಲಿ ನಡೆದ ಸಂಘರ್ಷದ ವೇಳೆ ಅಭಿನಂದನ್ ಅವರು ಪಾಕಿಸ್ತಾನದ ಎಫ್-16 ಅನ್ನು ಹೊಡೆದುರುಳಿಸಿದ ಬಳಿಕ ಅವರ ಮಿಗ್ -21 ಬೈಸನ್ ಕೂಡ ಹಾನಿಯಾಗಿದ್ದರಿಂದ ಅವರು ಪಾಕಿಸ್ತಾನ ಆಕ್ರಮಿತ ಪ್ರದೇಶದ ಮೇಲೆ ಜಿಗಿಯಬೇಕಾಯಿತು. ಇದರಿಂದ ಅವರನ್ನು ಪಾಕಿಸ್ತಾನಿ ಪಡೆಗಳು ಸೆರೆ ಹಿಡಿದವು. ಬಾಲಕೋಟ್ ದಾಳಿಯ ವೇಳೆ ವಿಂಗ್ ಕಮಾಂಡರ್ ಆಗಿದ್ದಾಗ ಅಭಿನಂದನ್ ಅವರನ್ನು ಭಾರತೀಯ ವಾಯುಸೇನೆಯು ಗ್ರೂಪ್ ಕ್ಯಾಪ್ಟನ್ ಹುದ್ದೆಗೆ ಬಡ್ತಿ ನೀಡಿತು.
ಎಫ್-16 ಅನ್ನು ಹೊಡೆದುರುಳಿಸಿದ ಏಕೈಕ ಮಿಗ್-21 ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾದ ಅಭಿನಂದನ್ ಅವರು ಗೋವಾ ಏರ್‌ಲೈನ್ಸ್ ಸೇರಿದ್ದು, ಇಲ್ಲಿ ಅವರ ಪಾತ್ರ ಅಥವಾ ಹಾರಾಟದ ಜವಾಬ್ದಾರಿಗಳ ಬಗ್ಗೆ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಪ್ರಧಾನಿ ತಾರಿಕ್ ರೆಹಮಾನ್ ಭಾರತಕ್ಕೆ ಭೇಟಿ ನೀಡುವ ಬಗ್ಗೆ ಮಹತ್ವದ ನಿರ್ಧಾರ ಪ್ರಕಟಿಸಿದ ಬಾಂಗ್ಲಾದೇಶ
ಎಫ್ಎಲ್ ವೈ 91 ವಕ್ತಾರರು ಕೂಡ ಉದ್ಯೋಗಿಗಳ ಬಗ್ಗೆ ವೈಯಕ್ತಿಕ ಮಾಹಿತಿ ಖಾಸಗಿ ವಿಷಯ ಎಂದು ಹೇಳಿದ್ದು, ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಗೋವಾ ಮತ್ತು ಹೈದರಾಬಾದ್‌ನಲ್ಲಿ ನೆಲೆಗಳನ್ನು ಹೊಂದಿರುವ ಗೋವಾ ಏರ್‌ಲೈನ್ಸ್ ನ ಎಫ್ ಎಲ್ ವೈ 91 ವಾಣಿಜ್ಯ ಕಾರ್ಯಾಚರಣೆಗಳನ್ನು 2024 ರ ಮಾರ್ಚ್ ನಿಂದ ಪ್ರಾರಂಭಿಸಿದ್ದು, ಪ್ರಸ್ತುತ ಆರು ಎಟಿಆರ್ 72-600 ವಿಮಾನಗಳ ಫ್ಲೀಟ್ ಅನ್ನು ನಿರ್ವಹಿಸುತ್ತಿದೆ.