#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Kuno cheetah: ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಎರಡು ಮರಿಗಳಿಗೆ ಜನ್ಮ ನೀಡಿದ ಚೀತಾ ವೀರಾ

ಎರಡು ಮರಿಗಳ ಜನನದಿಂದ ಕುನೊದಲ್ಲಿ ಚೀತಾಗಳ ಸಂಖ್ಯೆ 26ಕ್ಕೆ ಏರಿಕೆ ಯಾಗಿದೆ.2022ರ ಸೆಪ್ಟೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾದಿಂದ 12 ಚಿರತೆ ಹಾಗೂ ನಮೀಬಿಯಾದಿಂದ 8 ಚಿರತೆಯನ್ನು ಭಾರತಕ್ಕೆ ತರಲಾಗಿತ್ತು. ಅದರಲ್ಲಿ 7 ಚಿರತೆಗಳು ಮೃತಪಟ್ಟಿದ್ದು, ಚೀತಾ ಯೋಜನೆಗೆ ಆಘಾತ ತಂದಿತ್ತು. ಆದರೆ ಈಗ ಅದೇ ಚಿರತೆಯಲ್ಲಿ ಒಂದಾದ ವೀರಾ ಎರಡು ಮರಿಗಳಿಗೆ ಜನ್ಮ ನೀಡಿದ್ದು ಯೋಜನೆಗೆ ಮತ್ತಷ್ಟು ಬಲ ತಂದಾಂತಾಗಿದೆ.

ಕುನೊದಲ್ಲಿ ಅವಳಿ ಮರಿಗಳಿಗೆ ಜನ್ಮ ನೀಡಿದ ಚೀತಾ-26ಕ್ಕೇರಿದ ಚಿರತೆಗಳ ಸಂಖ್ಯೆ!

Two more cheetah

Profile Pushpa Kumari Feb 5, 2025 3:39 PM

ಭೋಪಾಲ್: ಮಧ್ಯಪ್ರದೇಶದ ಶಿಯೋನ್ ಪುರ್ ಜಿಲ್ಲೆಯ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಚೀತ ವೀರ‌ ಎರಡು ಮುದ್ದಾದ ಮರಿಗಳಿಗೆ ಜನ್ಮ ನೀಡಿದೆ(Kuno cheetah). ಇದರಿಂದಾಗಿ ಚೀತಾ (Cheetah) ಸಂಖ್ಯಾಬಲ ಹೆಚ್ಚಿದಂತಾಗಿದೆ ಎಂದು ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದಾರೆ. ಎರಡು ಮರಿಗಳ ಜನನದಿಂದ ಕುನೊದಲ್ಲಿ ಚೀತಾಗಳ ಸಂಖ್ಯೆ 26ಕ್ಕೆ ಏರಿಕೆಯಾಗಿದೆ. 2022ರ ಸೆಪ್ಟೆಂಬರ್ ನಲ್ಲಿ ದಕ್ಷಿಣ ಆಫ್ರಿಕಾದಿಂದ 12 ಚಿರತೆ ಹಾಗೂ ನಮೀಬಿಯಾದಿಂದ 8 ಚಿರತೆಯನ್ನು ಭಾರತಕ್ಕೆ ತರಲಾಗಿತ್ತು. ಅದರಲ್ಲಿ 7 ಚಿರತೆಗಳು ಮೃತಪಟ್ಟಿದ್ದು ಚೀತಾ ಯೋಜನೆಗೆ ಆಘಾತ ತಂದಿತ್ತು. ಆದರೆ ಈಗ ಅದೇ ಚಿರತೆಯಲ್ಲಿ ಒಂದಾದ ವೀರಾ ಎರಡು ಮರಿಗಳಿಗೆ ಜನ್ಮ ನೀಡಿದ್ದು ಯೋಜನೆಗೆ ಬಲ ತಂದಾಂತಾಗಿದೆ.



ಮುಖ್ಯ‌ಮಂತ್ರಿ ಮೋಹನ್ ಯಾದವ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು ವೀರಾ ಎಂಬ ಹೆಣ್ಣು ಚಿರತೆ ಎರಡು ಮರಿಗಳಿಗೆ ಜನ್ಮ ನೀಡಿದ್ದು ಈ ಮೂಲಕ ಮಧ್ಯ ಪ್ರದೇಶದ ಉದ್ಯಾವನದಲ್ಲಿ‌ ಎರಡು ಚಿರತೆ ಮರಿಗಳು ಸೇರ್ಪಡೆಯಾಗಿವೆ. ರಾಜ್ಯದಲ್ಲಿ ಚಿರತೆ ಸಂಖ್ಯೆ ಹೆಚ್ಚಾಗುತ್ತಿರು ವುದು ಬಹಳ ಸಂತೋಷದ ವಿಚಾರವಾಗಿದೆ. ಚೀತಾ ಯೋಜನೆ ಯಶಸ್ವಿಯಾಗಿ ಮುನ್ನಡೆಯಲು ಸಹಕರಿಸುತ್ತಿರುವ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ನಾವು ಚೀತಾಗಳೊಂದಿಗೆ ಎಲ್ಲಾ ವನ್ಯಜೀವಿಗಳ ಸಂರಕ್ಷಣೆಗೆ ಸದಾ ಸಿದ್ದರಿದ್ದೇವೆ ಎಂದು ಯಾದವ್ ಹೇಳಿದ್ದಾರೆ. ಚೀತಾಗಳ ಜೊತೆಗೆ ಇತರ ವನ್ಯಜೀವಿಗಳ ಸಂರಕ್ಷಣೆಗೆ ಅಧಿಕ ಒತ್ತು ನೀಡುವ ಗುರಿ ಹೊಂದಿದ್ದು ಚಿರತೆ ಸಂಖ್ಯೆ ಹೆಚ್ಚಾಗುವ ಜೊತೆಗೆ ಪ್ರವಾಸೋದ್ಯಮ ಕ್ಷೇತ್ರ ಕೂಡ ಅಭಿವೃದ್ಧಿಯಾಗುತ್ತಿದೆ. ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಚೀತಾಗಳ ಸಂಖ್ಯೆ 26ಕ್ಕೆ ಏರಿದ್ದು ಅದರಲ್ಲಿ 14 ಚಿರತೆ ಮರಿಗಳಿವೆ ಎಂದು ಎಂದು ಸಿಎಂ ಯಾದವ್ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನು ಓದಿ: Viral Video: ಕಾಡುಹಂದಿಯನ್ನು ಬೆನ್ನಟ್ಟಿ‌ ಬೇಟೆಯ ಜೊತೆಗೇ ಬಾವಿಗೆ ಬಿದ್ದ ಹುಲಿರಾಯ! ವಿಡಿಯೊ ನೋಡಿ

ಭಾರತದಲ್ಲಿ ಚಿರತೆಗಳ ಸಂಖ್ಯೆ ಅವನತಿಯತ್ತ ಸಾಗುತ್ತಿದ್ದು ಅವುಗಳ ಸಂಖ್ಯೆ ವೃದ್ಧಿಸುವ ಸಲುವಾಗಿ ಚೀತಾ ಯೋಜನೆ ಪರಿಚಯಿಸಲಾಯಿತು. ಕೀನ್ಯಾ, ದಕ್ಷಿಣ ಆಫ್ರಿಕಾ, ನಮೀಬಿಯಾದಿಂದ ಚಿರತೆಗಳನ್ನು ಕರೆತಂದು ಇಲ್ಲಿನ ರಾಷ್ಟ್ರೀಯ ಉದ್ಯಾನವನದಲ್ಲಿ ಅವುಗಳಿಗೆ ಆಶ್ರಯ ನೀಡಲಾಗಿದೆ. ಈ ಮೂಲಕ ಮಧ್ಯಪ್ರದೇಶದ ಈ ಅವಳಿ ಚಿರತೆಗಳು ಹೊಸ ಭರವಸೆ ಹುಟ್ಟು ಹಾಕಿವೆ ಎನ್ನಬಹುದು.