ನವದೆಹಲಿ: ಕಾಕ್ರೋಚ್ ಜನತಾ ಪಕ್ಷದ (Cockroach Janta Party) ವತಿಯಿಂದ ಇತ್ತೀಚೆಗೆ ದೆಹಲಿಯ (Delhi) ಜಂತರ್ ಮಂತರ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಎಲ್ಲರ ಗಮನ ಸೆಳೆದಿರುವ ವ್ಯಾಪಾರಿ ಮೊಹಮ್ಮದ್ ಇರ್ಫಾನ್ (Mohammad Irfan) ಅವರ ಹೇಳಿಕೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral News) ಆಗಿದೆ. ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು, ಕೊಟ್ಟಿರುವ ಭರವಸೆ ಈಡೇರದಿದ್ದರೆ ರಾಹುಲ್ ಗಾಂಧಿ (Rahul gandhi) ಅವರನ್ನು ಕೂಡ ವಿರೋಧಿಸುವುದಾಗಿ ಹೇಳಿದ್ದಾರೆ. ಅಲ್ಲದೇ ಸಮಸ್ಯೆಗಳ ಕುರಿತು ಚರ್ಚಿಸಲು ನಾನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗಿಂತ ಮೊದಲು ಗೃಹ ಸಚಿವ ಅಮಿತ್ ಶಾ (Home minister Amit shah) ಅವರನ್ನು ಮೊದಲು ಭೇಟಿ ಮಾಡುವುದಾಗಿ ತಿಳಿಸಿದರು.
ಜಂತರ್ ಮಂತರ್ ನಲ್ಲಿ ಕಾಕ್ರೋಚ್ ಜನತಾ ಪಕ್ಷದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮೊಹಮ್ಮದ್ ಇರ್ಫಾನ್ ಅವರು ರಾಜಕೀಯವಾಗಿ ಸಂಬಂಧ ಹೊಂದಿಲ್ಲ, ಯಾವುದೇ ಔಪಚಾರಿಕ ಶಿಕ್ಷಣ ಪಡೆಯದೇ ಇದ್ದರೂ ಕೂಡ ಅವರ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಂಚಲನ ಮೂಡಿಸಿದೆ.
ಆನೆಗೆ ಬೆಲ್ಲ ತಿನ್ನಿಸಲು ಹೋಗಿ ಪ್ರಾಣ ಕಳೆದುಕೊಂಡ ಆಟೋ ಚಾಲಕ; ದಾಳಿಯ ಭಯಾನಕ ವಿಡಿಯೊ ವೈರಲ್
ಪ್ರತಿಭಟನೆ ವೇಳೆ ಕಾರ್ಮಿಕರು, ದಿನಗೂಲಿ ನೌಕರರ ದೈನಂದಿನ ಹೋರಾಟಗಳ ಬಗ್ಗೆ ಅವರು ತಮ್ಮ ಸ್ಪಷ್ಟ ಅಭಿಪ್ರಾಯಗಳನ್ನು ಮಂಡಿಸಿದ್ದು ಮಾತ್ರವಲ್ಲದೆ ಉರ್ದು ಕವಿ ಅಹ್ಮದ್ ಫರಾಜ್ ಅವರ ಪದ್ಯಗಳನ್ನು ಹೇಳುತ್ತಿರುವ ವಿಡಿಯೋಗಳು ವೈರಲ್ ಆಗಿವೆ. ಇದರ ಬಳಿಕ ಸೋಮವಾರ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರನ್ನು ಭೇಟಿಯಾದ ಮೇಲೆ ವಿರೋಧ ಪಕ್ಷದ ನಾಯಕ ತಮ್ಮ ಭರವಸೆಗಳನ್ನು ಉಳಿಸಿಕೊಳ್ಳಲು ವಿಫಲವಾದರೆ ಅವರ ವಿರುದ್ಧ ಪ್ರತಿಭಟಿಸಲು ಹಿಂಜರಿಯುವುದಿಲ್ಲ ಎಂದು ಹೇಳಿದರು.
ರಾಹುಲ್ ಗಾಂಧಿ ಅವರೊಂದಿಗೆ ಚರ್ಚೆಯ ವೇಳೆ ಬಡತನದ ಅನುಭವಗಳು, ಕಾರ್ಮಿಕರು ಎದುರಿಸುತ್ತಿರುವ ಸವಾಲುಗಳು ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗಿಂತ ಮೊದಲು ತಾವು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲು ಏಕೆ ಬಯಸುತ್ತಿರುವುದಾಗಿ ತಿಳಿಸಿದ್ದಾರೆ.
ದೇಶಾದ್ಯಂತ ವಲಸೆ ಮತ್ತು ದಿನಗೂಲಿ ಕಾರ್ಮಿಕರ ಕಲ್ಯಾಣಕ್ಕಾಗಿ ಕೆಲಸ ಮಾಡುವುದಾಗಿ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ ಎಂದ ಅವರು, ತಮ್ಮ ಭರವಸೆಗಳನ್ನು ಉಳಿಸಿಕೊಳ್ಳದೇ ಇದ್ದರೆ ಅವರನ್ನು ಕೂಡ ನಾವು ವಿರೋಧಿಸುತ್ತೇವೆ. ಅವರ ವಿರುದ್ದವೂ ಬೀದಿಗಿಳಿಯುತ್ತೇವೆ ಎಂದು ಅವರಿಗೆ ಹೇಳಿದೆ ಎಂದರು.
ದೇಶವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರೆ ಎಲ್ಲಾ ಜನರಿಗೆ ಮೂಲ ಸೌಕರ್ಯಗಳು ಸಿಗಬೇಕು. ಯಾರೂ ವಂಚಿತರಾಗಬಾರದು ಎಂದ ಇರ್ಫಾನ್ ಅವ ಭಾವನಾತ್ಮಕ ಹೇಳಿಕೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಕುತ್ತಿಗೆಗೆ ಗ್ಯಾಮ್ಚಾ ಕಟ್ಟಿಕೊಂಡು ಬಿಳಿ ಬಟ್ಟೆ ಧರಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಇರ್ಫಾನ್, ದೆಹಲಿಯ ಸಾವ್ಡಾ ಜೆಜೆ ಕಾಲೋನಿಯ ನಿವಾಸಿ. ದೇಶದಲ್ಲಿ ಹೆಚ್ಚುತ್ತಿರುವ ಕಾರ್ಮಿಕರ ಆತ್ಮಹತ್ಯೆಗಳ ಬಗ್ಗೆಯೂ ರಾಹುಲ್ ಗಾಂಧಿ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಅಲ್ಲದೇ 10 ಅಥವಾ 12 ನೇ ತರಗತಿಗೆ ಮುನ್ನ ಶಾಲೆ ಬಿಡುವವರ ಸಂಖ್ಯೆ ಹೆಚ್ಚುತ್ತಿರುವುದಾಗಿ ಹೇಳಿದ ಅವರು ಶಿಕ್ಷಣ ವ್ಯವಸ್ಥೆಯಲ್ಲಿರುವ ಲೋಪದೋಷಗಳನ್ನು ಎತ್ತಿ ತೋರಿಸಿದರು.
ಸರ್ಕಾರವು ಯುವಜನರಿಗಾಗಿ ಪಾಲಿಟೆಕ್ನಿಕ್‌ಗಳು ಮತ್ತು ಐಟಿಐಗಳನ್ನು ಸ್ಥಾಪಿಸಿದ್ದರೂ ಇವು ಹೆಚ್ಚಾಗಿ ಮಧ್ಯಮ ಮತ್ತು ಶ್ರೀಮಂತ ವರ್ಗಕ್ಕೆ ಮೀಸಲಾಗಿದೆ. ಇದರಿಂದ ಶ್ರೀಮಂತ ಮತ್ತು ಬಡವರ ನಡುವಿನ ಅಂತರ ಹೆಚ್ಚಾಗಿದೆ. ಶಿಕ್ಷಣದಲ್ಲಿ ಎಲ್ಲರಿಗೂ ಸಮಾನ ಅವಕಾಶಗಳು ಸಿಗಬೇಕು ಎಂದು ನಾವು ಜಂತರ್ ಮಂತರ್‌ನಲ್ಲಿ ಕುಳಿತಿದ್ದೇವು ಎಂದರು.
ರಾಹುಲ್ ಅವರೊಂದಿಗಿನ ಭೇಟಿಯ ಸಮಯದಲ್ಲಿ ಪ್ರಿಯಾಂಕಾ ಗಾಂಧಿಯವರು ಕರೆ ಮಾಡಿದ್ದು ನಮ್ಮ ಚರ್ಚೆಗೆ ಅಡ್ಡಿಯಾಯಿತು ಎಂದ ಇರ್ಫಾನ್, ಪ್ರಿಯಾಂಕಾ ಅವರು ನನ್ನೊಂದಿಗೆ ಮಾತನಾಡಿ ದಯವಿಟ್ಟು ರಾಹುಲ್ ಗಾಂಧಿಗೆ ಮದುವೆಯಾಗಲು ಹೇಳಿ. ಅವರು ಎಂದಿಗೂ ನನ್ನ ಮಾತನ್ನು ಕೇಳುವುದಿಲ್ಲ ಎಂದು ಕೇಳಿಕೊಂಡರು ಎಂದರು ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಯಾವುದೇ ಹಿಂಜರಿಕೆ ಇಲ್ಲ. ಆದರೆ ಅವರಿಗಿಂತ ಮೊದಲು ನಾನು ಅಮಿತ್ ಶಾ ಅವರನ್ನು ಭೇಟಿಯಾಗಲು ಬಯಸುತ್ತೇನೆ. ಮಾದಕ ದ್ರವ್ಯ ಸಂಬಂಧಿತ ಪ್ರಕರಣಗಳನ್ನು ನಿಭಾಯಿಸುವಲ್ಲಿ ಪೊಲೀಸರ ನಿರ್ಲಕ್ಷ್ಯವನ್ನು ಅವರ ಗಮನಕ್ಕೆ ತರಬೇಡಿಕೆ. ದೂರುಗಳಿದ್ದರೂ ಪೊಲೀಸರು ಹೆಚ್ಚಾಗಿ ಕ್ರಮ ಕೈಗೊಳ್ಳಲು ವಿಫಲರಾಗುತ್ತಾರೆ ಎಂದರು.
ತಮ್ಮ ಕೊಳಚೆ ಪ್ರದೇಶದಲ್ಲಿ 12 ವರ್ಷದ ಮಗುವಿಗೆ ಗಾಂಜಾ ಮತ್ತು ಇತರ ಮಾದಕ ದ್ರವ್ಯಗಳು ಎಲ್ಲಿ ಮಾರಾಟವಾಗುತ್ತವೆ ಎಂದು ತಿಳಿದಿದೆ. ಆದರೆ ಅದು ಪೊಲೀಸರಿಗೆ ಗೊತ್ತಿಲ್ಲ ಎಂದ ಇರ್ಫಾನ್, ನಮ್ಮ ಸಂವಿಧಾನದ ಪೀಠಿಕೆಯು ಸಮಾನತೆಯ ಬಗ್ಗೆ ಮಾತನಾಡುತ್ತದೆ. ಅದು ಎಲ್ಲಾ ಸಂಪನ್ಮೂಲಗಳಲ್ಲಿ ಕೂಡ ಆಗಿದೆ. ಹಾಗಾದರೆ ನಮ್ಮ ದೇಶದ ಬಹುತೇಕ ಜನರು ಯಾಕೆ ವಂಚಿತರಾಗಿದ್ದಾರೆ ಎಂದು ಅವರು ಪ್ರಶ್ನಿಸಿದರು.
ಪ್ರೀತಿ ನಿರಾಕರಣೆ ವಿಚಾರವಾಗಿ ರಸ್ತೆಯಲ್ಲೆ ಹೈಡ್ರಾಮಾ! ಯುವತಿಯನ್ನು ಚಲಿಸುವ ಬೈಕ್‌ನಲ್ಲಿ ಎಳೆದೊಯ್ದ ಪ್ರಿಯತಮ!
ಇರ್ಫಾನ್ ಅವರನ್ನು ಭೇಟಿ ಮಾಡಿದ ಬಳಿಕ ಸೋಮವಾರ, ರಾಹುಲ್ ಗಾಂಧಿ ಅವರು ಸಾಮಾಜಿಕ ಮಾಧ್ಯಮ ಖಾತೆಯಾದ ಎಕ್ಸ್ ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡು, ದೇಶ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಇರ್ಫಾನ್ ಅವರ ದೃಷ್ಟಿಕೋನವು ಭಾರತದ ದೊಡ್ಡ ಶಕ್ತಿ ಅದರ ಯೌವನದಲ್ಲಿದೆ ಎಂಬುದನ್ನು ತೋರಿಸಿದೆ ಎಂದು ಹೇಳಿದರು.