ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪಶ್ಚಿಮ ಬಂಗಾಳ ಚುನಾವಣೆ: ನಾಡಿಯಾದಲ್ಲಿ ಬಿಜೆಪಿ ಬೂತ್ ಏಜೆಂಟ್ ಮೇಲೆ ದಾಳಿ, ಹೌರಾದಲ್ಲಿ ಘರ್ಷಣೆ

ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ಮತದಾನ ನಡೆಯುತ್ತಿದ್ದು, ಈ ವೇಳೆ ನಾಡಿಯಾದಲ್ಲಿ ಬಿಜೆಪಿ ಬೂತ್ ಏಜೆಂಟ್ ಮೇಲೆ ಟಿಎಂಸಿ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ಛಪ್ರಾದ ಬೂತ್ ಸಂಖ್ಯೆ 53ರಲ್ಲಿ ಬಿಜೆಪಿ ಬೂತ್ ಏಜೆಂಟ್ ಮೇಲೆ ದಾಳಿ ನಡೆಸಿರುವ ಟಿಎಂಸಿ ಕಾರ್ಯಕರ್ತರು ಕೋಲು, ಬಂದೂಕು, ಕಚ್ಚಾ ಬಾಂಬ್‌ ಹಿಡಿದುಕೊಂಡು ಬೆನ್ನಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.

ಸಂಗ್ರಹ ಚಿತ್ರ

ನಾಡಿಯಾ: ಭಾರಿ ಭದ್ರತೆಯ ನಡುವೆಯೂ ಎರಡನೇ ಹಂತದ ಮತದಾನದ (2nd phase of voting) ವೇಳೆ ಘರ್ಷಣೆ ನಡೆದಿರುವ ಘಟನೆ ಬುಧವಾರ ಪಶ್ಚಿಮ ಬಂಗಾಳದಲ್ಲಿ (west bengal) ನಡೆದಿದೆ. ಬಿಜೆಪಿ (BJP) ಬೂತ್ ಏಜೆಂಟ್ ಒಬ್ಬ ತನ್ನ ಮೇಲೆ ಟಿಎಂಸಿ (TMC) ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ಆರೋಪಿಸಿದ್ದಾನೆ. ಮತದಾನದ (Voting) ವೇಳೆ ಪಶ್ಚಿಮ ಬಂಗಾಳದ ಕೆಲವು ಭಾಗಗಳಲ್ಲಿ ಹಿಂಸಾಚಾರ ನಡೆದಿದ್ದು, ನಾಡಿಯಾದಲ್ಲಿ (Nadia) ಟಿಎಂಸಿ ಕಾರ್ಯಕರ್ತರ ದಾಳಿ ಮತ್ತು ಹೌರಾದಲ್ಲಿ (howrah) ಇವಿಎಂ ದೋಷದಿಂದಾಗಿ ಘರ್ಷಣೆಗಳು ಉಂಟಾಗಿದೆ.

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನವನ್ನು ಒಟ್ಟು 142 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಸಲಾಗುತ್ತಿದ್ದು, ಈ ವೇಳೆ ನಾಡಿಯಾ ಮತ್ತು ಹೌರಾ ಜಿಲ್ಲೆಯಲ್ಲಿ ಘರ್ಷಣೆ ಉಂಟಾಗಿರುವ ಘಟನೆ ಬುಧವಾರ ನಡೆದಿದೆ.

ಏನಿದು ಗ್ರೇಟ್ ನಿಕೋಬಾರ್ ಯೋಜನೆ? ಕೇಂದ್ರ ಸರ್ಕಾರದ ವಿರುದ್ಧ ರಾಹುಲ್‌ ಗಾಂಧಿ ಆರೋಪಿಸುತ್ತಿರುವುದೇನು?

ನಾಡಿಯಾ ಜಿಲ್ಲೆಯ ಛಪ್ರಾದ ಬೂತ್ ಸಂಖ್ಯೆ 53ರಲ್ಲಿ ಬಿಜೆಪಿ ಬೂತ್ ಏಜೆಂಟ್ ಮೇಲೆ ದಾಳಿ ನಡೆಸಲಾಗಿದೆ. ಟಿಎಂಸಿ ಕಾರ್ಯಕರ್ತರು ತನ್ನ ಮೇಲೆ ದಾಳಿ ನಡೆಸಿರುವುದಾಗಿ ಬಿಜೆಪಿ ಏಜೆಂಟ್ ಆರೋಪಿಸಿದ್ದಾನೆ. ತಾನು ಬಿಜೆಪಿಯವನೆಂದು ಗುರುತಿಸಿ ಟಿಎಂಸಿ ಕಾರ್ಯಕರ್ತರು ಬಂದೂಕು, ಕಚ್ಚಾ ಬಾಂಬ್‌ ಮತ್ತು ಕೋಲುಗಳನ್ನು ಹಿಡಿದು ಬೆನ್ನಟ್ಟಿ ಬಂದಿದ್ದರು ಎಂದು ಆತ ಆರೋಪಿಸಿದ್ದಾನೆ.

ತನ್ನ ತಲೆಗೆ ಹೊಡೆಯಲಾಗಿದೆ. ಈ ದಾಳಿಯಲ್ಲಿ ಒಟ್ಟು ಐವರಿಗೆ ಗಾಯಗಳಾಗಿವೆ. ಕೆಲವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಭಯದ ಕಾರಣದಿಂದ ಉಳಿದವರು ಮನೆಗೆ ಹಿಂದಿರುಗಿದರು ಎಂದು ಆತ ವಿಡಿಯೋದಲ್ಲಿ ಹೇಳಿದ್ದಾನೆ.

ಹೌರಾದಲ್ಲಿ ಇವಿಎಂ ದೋಷ ಉಂಟಾಗಿದ್ದು, ಇದರಿಂದ ಘರ್ಷಣೆ ಸಂಭವಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಸಿಆರ್‌ಪಿಎಫ್ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ನಾಲ್ವರು ಭದ್ರತಾ ಸಿಬ್ಬಂದಿ ಒಬ್ಬ ವ್ಯಕ್ತಿಯನ್ನು ಕೈ ಮತ್ತು ಕಾಲುಗಳಿಂದ ಹಿಡಿದು ಎಳೆದುಕೊಂಡು ಹೋಗಿ ವಾಹನದೊಳಗೆ ಹಾಕುತ್ತಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ.

ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಎರಡನೇ ಹಂತದ ಮತದಾನದಲ್ಲಿ ಒಟ್ಟು 1.57 ಕೋಟಿ ಮಹಿಳೆಯರು, 792 ತೃತೀಯ ಲಿಂಗದ ಮತದಾರರು ಸೇರಿದಂತೆ ಒಟ್ಟು 3.21 ಕೋಟಿ ಮತದಾರರು ಮತ ಚಲಾಯಿಸಲು ಅರ್ಹರಾಗಿದ್ದಾರೆ. ಒಟ್ಟು 41,001 ಕೇಂದ್ರಗಳಲ್ಲಿ ಮತದಾನ ನಡೆಯುತ್ತಿದ್ದು, ಇವುಗಳನ್ನು ವೆಬ್‌ಕಾಸ್ಟಿಂಗ್ ನಿಗಾ ಮಾಡುತ್ತಿದೆ.

ಭದ್ರತೆಗಾಗಿ ಚುನಾವಣಾ ಆಯೋಗವು ಏಳು ಜಿಲ್ಲೆಗಳಲ್ಲಿ ಕೇಂದ್ರ ಪಡೆಗಳ ಒಟ್ಟು 2,321 ಕಂಪನಿಗಳನ್ನು ನಿಯೋಜಿಸಿದೆ. ಕೋಲ್ಕತ್ತಾದಲ್ಲಿ ಅತಿ ಹೆಚ್ಚು 273 ಕಂಪನಿಗಳನ್ನು ನಿಯೋಜಿಸಲಾಗಿದೆ. 142 ಸಾಮಾನ್ಯ ವೀಕ್ಷಕರು, 95 ಪೊಲೀಸ್ ವೀಕ್ಷಕರು ಮತ್ತು 100 ಖರ್ಚು ವೀಕ್ಷಕರನ್ನು ನಿಯೋಜಿಸಲಾಗಿದ್ದು, ಕೆಮರಾಗಳನ್ನು ಅಳವಡಿಸಲಾದ ಡ್ರೋನ್‌ಗಳನ್ನು ಮತದಾನ ಪ್ರಕ್ರಿಯೆ ಮೇಲೆ ನಿಗಾ ವಹಿಸಲಾಗಿದೆ.

ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ಮತದಾನ; ಮತದಾರರ ಒಲವು ಯಾರ ಕಡೆ?

ಅಸ್ಸಾಂ, ತಮಿಳುನಾಡು, ಪುದುಚೇರಿ, ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ಮತ ಎಣಿಕೆ ಕಾರ್ಯ ಮೇ 4 ರಂದು ನಡೆದು ಫಲಿತಾಂಶ ಹೊರ ಬೀಳಲಿದೆ.

ವಿದ್ಯಾ ಇರ್ವತ್ತೂರು

View all posts by this author