ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರೌಡಿಗಳ ಹೆಡೆಮುರಿ ಕಟ್ಟಿ ಅರೆಬೆತ್ತಲೆ ಮೆರವಣಿಗೆ ನಡೆಸಿದ ಪೊಲೀಸರು: ಬದಲಾಗುತ್ತಿದೆ ಪಶ್ಚಿಮ ಬಂಗಾಳ

ವಿವಿಧ ಪ್ರಕರಣಕ್ಕೆ ಸಂಬಂಧಿಸಿದ ಅಪರಾಧಿಗಳಿಗೆ ಭಯ ಹುಟ್ಟಿಸಲು ಮತ್ತು ಸಾರ್ವಜನಿಕರಲ್ಲಿ ಪೊಲೀಸರ ಬಗ್ಗೆ ನಂಬಿಕೆ ಹೆಚ್ಚಿಸಲು ಪಶ್ಚಿಮ ಬಂಗಾಳದಲ್ಲಿ ಅಪರಾಧಿಗಳೊಂದಿಗೆ ಬೀದಿಗಳಲ್ಲಿ ಪೊಲೀಸರು ಮೆರವಣಿಗೆಯನ್ನು ನಡೆಸಿದರು. ಜನರಿಗೆ ಬೆದರಿಕೆ ಒಡ್ಡುತ್ತಿದ್ದ ಅಪರಾಧಿಗಳನ್ನು ಕೇವಲ ಒಳ ಉಡುಪುಗಳಲ್ಲಿ ಮೆರವಣಿಗೆ ಮಾಡಲಾಯಿತು.

ಸಂಗ್ರಹ ಚಿತ್ರ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಪೊಲೀಸರು (West Bengal police) ಕಳೆದ ಕೆಲವು ದಿನಗಳಿಂದ ಬೀದಿಗಳಲ್ಲಿ ಅಪರಾಧಿಗಳೊಂದಿಗೆ ಮೆರವಣಿಗೆ ನಡೆಸುತ್ತಿದ್ದಾರೆ. ಇದರ ದೃಶ್ಯಗಳು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral news) ಆಗಿದೆ. ವಿಧಾನ ಸಭಾ ಚುನಾವಣೆಯ (assembly election) ಬಳಿಕ ಹೊಸದಾಗಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರವು (BJP govt) ಗುಂಡಾಗಳ ಬಗ್ಗೆ ಸಾರ್ವಜನಿಕರ ಭಯವನ್ನು ಹೋಗಲಾಡಿಸಲು ಈ ಹೊಸ ಕ್ರಮವನ್ನು ಅನುಸರಿಸುತ್ತಿದೆ. ಬಂಗಾಳ ಪೊಲೀಸರು ಉತ್ತರ, ದಕ್ಷಿಣ ಮತ್ತು ಮಧ್ಯ ಹೌರಾದ ಬೀದಿಗಳಲ್ಲಿ ಅರೆನಗ್ನ ಸ್ಥಿತಿಯಲ್ಲಿ ಅಪರಾಧಿಗಳ ಮೆರವಣಿಗೆ (criminals parade) ನಡೆಸುತ್ತಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಹೊಸ ಮುಖ್ಯಮಂತ್ರಿಯಾಗಿ ಬಿಜೆಪಿಯ ಸುವೇಂದು ಅಧಿಕಾರಿ ಅಧಿಕಾರ ವಹಿಸಿಕೊಂಡ ಮೇಲೆ ಅಪರಾಧಿಗಳನ್ನು ಬೆದರಿಸಲು ಮತ್ತು ಸಾರ್ವಜನಿಕರಲ್ಲಿ ಪೊಲೀಸರ ಬಗ್ಗೆ ನಂಬಿಕೆಯನ್ನು ಬೆಳೆಸಲು ಈ ಹೊಸ ವಿಧಾನವನ್ನು ಪಾಲಿಸುತ್ತಿದೆ. ಇದರಿಂದ ಜನರಲ್ಲಿ ಅಪರಾಧಿಗಳ ಕುರಿತಾದ ಭಯದ ವಾತಾವರಣವನ್ನು ಹೋಗಲಾಡಿಸುತ್ತದೆ ಎನ್ನುವ ನಿರೀಕ್ಷೆ ಇದೆ.

Sushmita Sen: ಇದೊಂದು ಕಾರಣಕ್ಕೆ ನನ್ನ ಮ್ಯಾನೇಜರ್ ಓಡಿಹೋದ; ಸುಶ್ಮಿತಾ ಸೇನ್ ಮುಕ್ತ ಮಾತು

ಬಂಗಾಳದ ಉತ್ತರ, ದಕ್ಷಿಣ ಮತ್ತು ಮಧ್ಯ ಹೌರಾದ ಬೀದಿಗಳಲ್ಲಿ ಅರೆನಗ್ನ ಸ್ಥಿತಿಯಲ್ಲಿ ಬಂಧಿತ ಪ್ರತಿಯೊಬ್ಬ ಅಪರಾಧಿಯನ್ನು ಕೂಡ ಮೆರವಣಿಗೆ ಮಾಡಲಾಗಿದೆ. ಅಪರಾಧಿಗಳ ಬಂಧನದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದ ಮರುದಿನದಿಂದ ಅವರು ಕಾರ್ಯನಿರ್ವಹಿಸುತ್ತಿದ್ದ ಸ್ಥಳಗಳಲ್ಲಿ ಹೀಗೆ ಮೆರವಣಿಗೆ ನಡೆಸಲಾಗುತ್ತಿದೆ.

ಈ ಗೂಂಡಾಗಳನ್ನು ನೋಡಿ ಜನರು ಭಯಪಡುತ್ತಿದ್ದರು. ಇಷ್ಟವಿಲ್ಲದೇ ಇದ್ದರೂ ಕೂಡ ಗೌರವ ಕೊಡುತ್ತಿದ್ದರು. ಒಂದೇ ವೇಳೆ ಕೊಡದೇ ಇದ್ದರೆ ಗುಂಡಾಗಳೇ ಅವರನ್ನು ಬೆದರಿಸಿ ನಮಸ್ಕರಿಸುವಂತೆ ಒತ್ತಾಯಿಸುತ್ತಿದ್ದರು. ಆದರೆ ಇದೀಗ ಗ್ರಾಮದಲ್ಲಿ ಅವರ ಮೆರವಣಿಗೆ ನೋಡಿದ ಗ್ರಾಮಸ್ಥರು ಅವರ ಬಗ್ಗೆ ಮುಕ್ತವಾಗಿ ಮಾತನಾಡಲು ಮುಂದೆ ಬರುವ ಧೈರ್ಯ ಮಾಡುತ್ತಿದ್ದಾರೆ.

ಇತ್ತೀಚೆಗೆ ಉತ್ತರ ಹೌರಾದ ಕುಖ್ಯಾತ 'ಡಾನ್' ಎಂದು ಕರೆಯಲ್ಪಡುತ್ತಿದ್ದ ಆಕಾಶ್ ಸಿಂಗ್ ಎಂಬಾತನ ತಲೆ ಬೋಳಿಸಿ ತೋಳಿಲ್ಲದ ಜಾಕೆಟ್ ಮತ್ತು ಒಳ ಉಡುಪುಗಳನ್ನು ಹಾಕಿಸಿ ಪೊಲೀಸರು ಮೆರವಣಿಗೆ ನಡೆಸಿದ್ದರು. ಆತನನ್ನು ಮೇ ತಿಂಗಳ ಆರಂಭದಲ್ಲಿ ಬಂಧಿಸಲಾಗಿತ್ತು.

ಸುವೇಂದು ಅಧಿಕಾರಿಯವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾದ ಮೇಲೆ 2021ರ ಬಳಿಕದ ಹಲವಾರು ದಾಳಿಗಳು ಮತ್ತು ಅಪರಾಧ ಘಟನೆಗಳ ಕುರಿತು ತನಿಖೆಯನ್ನು ಪ್ರಾರಂಭಿಸಲಾಗಿದೆ. ಇದಕ್ಕೆ ಸಂಬಂಧಿಸಿ ಹಲವರ ಬಂಧನ ಕೂಡ ನಡೆದಿದೆ.

ದಕ್ಷಿಣ ಹೌರಾದ ಸಂಕ್ರೈಲ್ ಪ್ರದೇಶದಲ್ಲಿ ಶಾಹೀನ್ ಮೊಲ್ಲಾ ಎಂಬಾತನ ಮೆರವಣಿಗೆ ನಡೆಸಲಾಗಿದೆ. ಆತ ಸಂಚಾರ ಗೃಹರಕ್ಷಕನಾಗಿ ನೇಮಕವಾದ ಮೇಲೆ ಸ್ಥಳೀಯ ಶಾಸಕ ಪ್ರಿಯಾ ಪಾಲ್ ಅವರ ಹೆಸರಿನಲ್ಲಿ ದೊಡ್ಡ ಮೊತ್ತದ ಹಣ ಸುಲಿಗೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

CPI Self Harming: ಎಸ್‌ಡಿಆರ್‌ಎಫ್ʼಯ ಸಿಪಿಐ ಶ್ರೀಶೈಲ ಚೌಗಲಾ ನೇಣು ಬಿಗಿದು ಆತ್ಮಹತ್ಯೆ

ವಿವಿಧ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಮಧ್ಯ ಹೌರಾದ ಚೌರಾ ಬಸ್ತಿ ಪ್ರದೇಶದ ತೃಣಮೂಲ ಕಾಂಗ್ರೆಸ್ ನಾಯಕಿ, ವಾರ್ಡ್‌ನ ಮಾಜಿ ಕೌನ್ಸಿಲರ್‌ನ ಪತಿ ಶಮೀಮ್ ಅಹ್ಮದ್ 'ಬಡೆ' ಎಂಬಾತನನ್ನು ಪೊಲೀಸರು ಮೆರವಣಿಗೆ ನಡೆಸಿದರು. ವಿವಿಧ ಭಾಗಗಳಲ್ಲಿ ಅಪರಾಧಿಗಳನ್ನು ಬಂಧಿಸಿ ಮೆರವಣಿಗೆ ಮಾಡಲು ಪ್ರಾರಂಭಿಸಿದ ಮೇಲೆ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಅವರ ವಿರುದ್ದ ದೂರುಗಳನ್ನು ದಾಖಲಿಸಲು ಜನರು ಮುಂದೆ ಬರುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author