ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದೆಹಲಿಯ ಉಸಿರುಗಟ್ಟಿಸುತ್ತಿರುವ 'ವಿಷಗಾಳಿ': ರಾಜಧಾನಿಯ ಮಹಾ ಮಾಲಿನ್ಯಕ್ಕೆ ನಿಜವಾದ ಕಾರಣಗಳೇನು?

ಚಳಿಗಾಲ ಪ್ರಾರಂಭವಾಗುತ್ತಿದ್ದಂತೆ ದೆಹಲಿಯಲ್ಲಿ ವಾಯು ಮಾಲಿನ್ಯವೂ ಹೆಚ್ಚಾಗುತ್ತಿದೆ. ನವೆಂಬರ್ 2026 ರ ಆರಂಭದಲ್ಲೂ ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ (AQI) ಅತ್ಯಂತ ಕಳಪೆ ಮಟ್ಟ ತಲುಪಿದ್ದು, ದಟ್ಟವಾದ ಹೊಗೆ ಮತ್ತು ಧೂಳಿನಿಂದ ಇಡೀ ನಗರ ಆವೃತವಾಗಿದೆ. ಈಗಾಗಲೇ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆಯಾದರೂ ಪ್ರತಿ ವರ್ಷವೂ ದೆಹಲಿಯಲ್ಲಿ ಹವಾಮಾನ ಅತ್ಯಂತ ಕಳಪೆಯಾಗುತ್ತಲೇ ಇದೆ.

ಸಂಗ್ರಹ ಚಿತ್ರ

ನವದೆಹಲಿ: ಚಳಿಗಾಲ ಪ್ರಾರಂಭವಾಗುತ್ತಿದ್ದಂತೆ ದೆಹಲಿಯಲ್ಲಿ ವಾಯು ಮಾಲಿನ್ಯವೂ (Delhi Pollution) ಹೆಚ್ಚಾಗುತ್ತಿದೆ. ನವೆಂಬರ್ 2026 ರ ಆರಂಭದಲ್ಲೂ ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ (AQI) ಅತ್ಯಂತ ಕಳಪೆ ಮಟ್ಟ ತಲುಪಿದ್ದು, ದಟ್ಟವಾದ ಹೊಗೆ ಮತ್ತು ಧೂಳಿನಿಂದ ಇಡೀ ನಗರ ಆವೃತವಾಗಿದೆ. ಈಗಾಗಲೇ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆಯಾದರೂ ಪ್ರತಿ ವರ್ಷವೂ ದೆಹಲಿಯಲ್ಲಿ ಹವಾಮಾನ ಅತ್ಯಂತ ಕಳಪೆಯಾಗುತ್ತಲೇ ಇದೆ. ರಾಷ್ಟ್ರ ರಾಜಧಾನಿಯಲ್ಲಿ ಯಾಕಿಷ್ಟು ಮಾಲಿನ್ಯ? ಇಲ್ಲಿದೆ ಸಂಪೂರ್ಣ ಮಾಹಿತಿ.

ದೆಹಲಿಯಲ್ಲಿ ವಾಯು ಮಾಲಿನ್ಯಕ್ಕೆ ಮೂಲ ಕಾರಣಗಳು ನಗರೀಕರಣ ಮತ್ತು ಹವಾಮಾನದ ವಿಶಿಷ್ಟ ಸಮ್ಮಿಲನವಾಗಿದೆ. ವಿವಿಧ ವೈಜ್ಞಾನಿಕ ಅಧ್ಯಯನಗಳು ಮತ್ತು ಸರ್ಕಾರಿ ಸಂಸ್ಥೆಗಳ (SAFAR ಮತ್ತು IIT ಗಳ ವರದಿಗಳ) ಪ್ರಕಾರ, ದೆಹಲಿಯ ಮಾಲಿನ್ಯಕ್ಕೆ ಯಾವುದೇ ಒಂದು ಕಾರಣವಿಲ್ಲ. ದೆಹಲಿಯ ಒಟ್ಟಾರೆ ವಾಯು ಮಾಲಿನ್ಯದ ಹೊರೆಗೆ ಶೇ. 23 ರಿಂದ 41 ರಷ್ಟು ಕೊಡುಗೆ ವಾಹನಗಳಿಂದಲೇ ಬರುತ್ತದೆ. ನಗರದಲ್ಲಿರುವ ಕೋಟ್ಯಂತರ ನೋಂದಾಯಿತ ವಾಹನಗಳು, ಅದರಲ್ಲೂ ವಿಶೇಷವಾಗಿ ಡೀಸೆಲ್ ಇಂಜಿನ್‌ಗಳು ನಿರಂತರವಾಗಿ ಹಾನಿಕಾರಕ ಪಿಎಂ 2.5 ಕಣಗಳನ್ನು ಗಾಳಿಗೆ ಸೂಸುತ್ತವೆ.

ದೆಹಲಿ ಸುತ್ತಮುತ್ತಲಿನ ವಲಯಗಳಲ್ಲಿ ಕಾರ್ಯಾಚರಿಸುವ ಸಾವಿರಾರು ಸಣ್ಣ ಮತ್ತು ದೊಡ್ಡ ಪ್ರಮಾಣದ ಕೈಗಾರಿಕೆಗಳು ಹಾಗೂ ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳು ಸಲ್ಫರ್ ಡೈಆಕ್ಸೈಡ್ ಮತ್ತು ನೈಟ್ರೋಜನ್ ಆಕ್ಸೈಡ್‌ಗಳನ್ನು ವಾತಾವರಣಕ್ಕೆ ಮುಕ್ತವಾಗಿ ಬಿಡುತ್ತವೆ. ದೆಹಲಿ-ಎನ್‌ಸಿಆರ್ ಸುತ್ತಮುತ್ತ ನಡೆಯುವ ಬೃಹತ್ ಮೂಲಸೌಕರ್ಯ ಕಾಮಗಾರಿಗಳು, ಮೆಟ್ರೋ ಹಾಗೂ ರಸ್ತೆಗಳ ಧೂಳು ಒಟ್ಟು ಮಾಲಿನ್ಯದಲ್ಲಿ ಶೇ. 15 ರಿಂದ 27 ರಷ್ಟು ಪಾಲು ಹೊಂದಿವೆ.

ಇದು ಮಾತ್ರ ಅಲ್ಲದೇ ಅಕ್ಟೋಬರ್-ನವೆಂಬರ್ ಅವಧಿಯಲ್ಲಿ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದ ರೈತರು ಮುಂದಿನ ಬೆಳೆಗೆ ಭೂಮಿ ಸಿದ್ಧಪಡಿಸಲು ಲಕ್ಷಾಂತರ ಟನ್ ಕೃಷಿ ಅವಶೇಷಗಳನ್ನು ಒಟ್ಟಿಗೆ ಸುಡುತ್ತಾರೆ. ಚಳಿಗಾಲದ ಆರಂಭದಲ್ಲಿ ದೆಹಲಿಯ ಗಾಳಿಯಲ್ಲಿ ಹರಡುವ ದಟ್ಟ ಹೊಗೆಗೆ ಇದು ಕೂಡ ಒಂದು ಪ್ರಮುಖ ಕಾರಣವಾಗಿದೆ. ದೆಹಲಿಯು ಸಿಂಧೂ-ಗಂಗಾ ಬಯಲು ಪ್ರದೇಶದ ತಗ್ಗು ವಲಯದಲ್ಲಿದೆ. ಚಳಿಗಾಲದಲ್ಲಿ ಗಾಳಿಯ ವೇಗ ಅತ್ಯಂತ ಕಡಿಮೆಯಾಗಿ ತಾಪಮಾನ ಕುಸಿತವಾಗುವುದರಿಂದ, 'ಥರ್ಮಲ್ ಇನ್ವರ್ಷನ್' (Thermal Inversion) ಎಂಬ ಪ್ರಕ್ರಿಯೆ ನಡೆದು ಮಾಲಿನ್ಯಕಾರಕ ಕಣಗಳು ಮೇಲಕ್ಕೆ ಹೋಗಲಾಗದೆ ನೆಲದ ಮಟ್ಟದಲ್ಲೇ ಹೊಗೆಮಂಜಿನಂತೆ ಸಿಲುಕಿಕೊಳ್ಳುತ್ತವೆ.

ದೆಹಲಿ-ಎನ್‌ಸಿಆರ್‌ನಲ್ಲಿ ಇಂದಿನಿಂದ ಕಠಿಣ ಮಾಲಿನ್ಯ ನಿಯಮ ಜಾರಿ: ಹಳೆಯ ವಾಹನಗಳಿಗೆ ನಿಷೇಧ, ಶೇ. 50 ವರ್ಕ್ ಫ್ರಮ್ ಹೋಮ್ ಕಡ್ಡಾಯ

ಸರ್ಕಾರ ಈಗಾಗಲೇ ಹಳೆ ವಾಹನಗಳ ನಿಷೇಧ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿದೆಯಾದರೂ ಶಾಶ್ವತ ಪರಿಹಾರ ಇನ್ನೂ ಸಿಕ್ಕಿಲ್ಲ. ಕೃಷಿ ತ್ಯಾಜ್ಯವನ್ನು ರೈತರಿಂದ ಸರ್ಕಾರವೇ ಖರೀದಿಸಿ, ಅದನ್ನು ಬಯೋ-ಸಿಎನ್‌ಜಿ (Bio-CNG), ವಿದ್ಯುತ್ ಉತ್ಪಾದನೆ ಅಥವಾ ಕಾಗದದ ಕಾರ್ಖಾನೆಗಳಿಗೆ ಕಚ್ಚಾ ವಸ್ತುವಾಗಿ ಬಳಸುವ ಉದ್ಯಮಗಳನ್ನು ಸ್ಥಾಪಿಸುವುದು. ಇದರಿಂದ ರೈತರಿಗೆ ಆದಾಯವೂ ಸಿಗುತ್ತದೆ, ಹೊಗೆಯೂ ನಿಲ್ಲುತ್ತದೆ.

Vishakha Bhat Heggar

View all posts by this author