ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಅಗ್ನಿ-3 ಕ್ಷಿಪಣಿಯ ಯಶಸ್ವಿ ಪರೀಕ್ಷೆ ನಡೆಸಿದ ಭಾರತ; 3500 ಕಿ.ಮೀಟರ್‌ವರೆಗೆ ನಿಖರ ದಾಳಿ ಸಾಮರ್ಥ್ಯ

ಭಾರತವು ಮಧ್ಯಂತರ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿ ‘ಅಗ್ನಿ-3’ ಅನ್ನು ಒಡಿಶಾದ ಚಂಡೀಪುರದಲ್ಲಿನ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್‌ನಿಂದ ಫೆಬ್ರವರಿ 6, 2026ರಂದು ಯಶಸ್ವಿಯಾಗಿ ಪರೀಕ್ಷಿಸಿ ತನ್ನ ರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಿದೆ. ಪರೀಕ್ಷೆಯ ವೇಳೆ ಕ್ಷಿಪಣಿಯು ಎಲ್ಲಾ ಕಾರ್ಯಾಚರಣಾ ಮತ್ತು ತಾಂತ್ರಿಕ ಮಾನದಂಡಗಳನ್ನು ಯಶಸ್ವಿಯಾಗಿ ಪೂರೈಸಿದೆ ಎಂದು ವರದಿಗಳು ತಿಳಿಸಿವೆ.

ಅಗ್ನಿ 3

ನವದೆಹಲಿ: ಮಧ್ಯಂತರ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿ 'ಅಗ್ನಿ-3' ಅನ್ನು ಯಶಸ್ವಿಯಾಗಿ ಪರೀಕ್ಷಿಸುವ ಮೂಲಕ ಭಾರತವು ತನ್ನ ರಕ್ಷಣಾ ಸಾಮರ್ಥ್ಯಗಳನ್ನು ಮತ್ತಷ್ಟು ಬಲಪಡಿಸಿಕೊಂಡಿದೆ. ಇಂದು (ಫೆಬ್ರವರಿ 6, 2026) ಒಡಿಶಾದ ಚಂಡೀಪುರದಲ್ಲಿರುವ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್‌ನಿಂದ (ITR) ಈ ಪರೀಕ್ಷೆಯನ್ನು ನಡೆಸಲಾಯಿತು. ಈ ಉಡಾವಣೆ ವೇಳೆ ಕ್ಷಿಪಣಿಯು ಎಲ್ಲಾ ಕಾರ್ಯಾಚರಣೆ ಮತ್ತು ತಾಂತ್ರಿಕ ಮಾನದಂಡಗಳನ್ನು ಯಶಸ್ವಿಯಾಗಿ ಪೂರೈಸಿದೆ ಎಂದು ವರದಿಗಳು ತಿಳಿಸಿವೆ.

ಕಾರ್ಯತಂತ್ರದ ಬಲವರ್ಧನೆ:


ಭಾರತೀಯ ಸೇನೆಯ 'ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್' ಅಡಿಯಲ್ಲಿ ಈ ಪರೀಕ್ಷೆ ನಡೆದಿದ್ದು, ವ್ಯವಸ್ಥೆಯ ವಿಶ್ವಾಸಾರ್ಹತೆ ಮತ್ತು ಸನ್ನದ್ಧತೆಯನ್ನು ಇದು ದೃಢಪಡಿಸಿದೆ. ಅಗ್ನಿ-3 ಪರಮಾಣು ಸಾಮರ್ಥ್ಯದ ಮಧ್ಯಂತರ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದ್ದು, ಸುಮಾರು 3,000 ರಿಂದ 3,500 ಕಿಲೋಮೀಟರ್‌ಗಳ ವ್ಯಾಪ್ತಿಯನ್ನು ಹೊಂದಿದೆ. ಇದು ಭಾರತವು ಶತ್ರು ದೇಶದೊಳಗಿನ ರಕ್ಷಣಾ ಸ್ಥಳಗಳನ್ನು ಗುರಿಯಾಗಿಸಲು ಅನುವು ಮಾಡಿಕೊಡುತ್ತದೆ. ಫೆಬ್ರವರಿ 6ರಂದು ಒಡಿಶಾ ಕರಾವಳಿಯಲ್ಲಿ ಅಗ್ನಿ-3 ಕ್ಷಿಪಣಿಯ ಉಡಾವಣೆ ಯಶಸ್ವಿಯಾಗಿದ್ದು, ತಾಂತ್ರಿಕವಾಗಿ ಅತ್ಯುತ್ತಮ ಪ್ರದರ್ಶನ ನೀಡಿದೆ, ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಅಗ್ನಿ ಕ್ಷಿಪಣಿ ಸರಣಿಯ ಶಕ್ತಿ: ಈ ಪರೀಕ್ಷೆಯೊಂದಿಗೆ ಭಾರತದ ಅಗ್ನಿ ಸರಣಿಯ ಕ್ಷಿಪಣಿಗಳು ದೇಶದ ರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಿವೆ. ಅಗ್ನಿ ಸರಣಿಯ ವಿವರಗಳು ಹೀಗಿವೆ:

ಚೆನ್ನೈನಲ್ಲಿ ಹಕ್ಕಿ ಜ್ವರದ ಭೀತಿ; ನೂರಾರು ಕಾಗೆಗಳ ಹಠಾತ್ ಸಾವು: ಮತ್ತೊಮ್ಮೆ ಕೋವಿಡ್‌ ರೀತಿಯ ಸಾಂಕ್ರಾಮಿಕ ರೋಗ ಹರಡುತ್ತಾ?

ಅಗ್ನಿ-1: 700 ಕಿ.ಮೀ ವ್ಯಾಪ್ತಿ

ಅಗ್ನಿ-2: 2,000 ಕಿ.ಮೀ ವ್ಯಾಪ್ತಿ

ಅಗ್ನಿ-3: 3,000 ಕಿ.ಮೀ ವ್ಯಾಪ್ತಿ

ಅಗ್ನಿ-4: 4,000 ಕಿ.ಮೀ ವ್ಯಾಪ್ತಿ

ಅಗ್ನಿ-5: 5,000 ಕಿ.ಮೀ ಗೂ ಅಧಿಕ (ಅತಿ ದೂರಗಾಮಿ)

ಬ್ರಹ್ಮೋಸ್ ಮತ್ತು ಅಗ್ನಿ ಜೋಡಿ: ಭಾರತವು ಈಗ 30 ಕಿ.ಮೀ ನಿಂದ 5,000 ಕಿ.ಮೀ ವರೆಗಿನ ಯಾವುದೇ ಶತ್ರು ದೇಶದೊಳಗಿ ಗುರಿಗಳನ್ನು ಧ್ವಂಸ ಮಾಡುವ ಸಾಮರ್ಥ್ಯ ಹೊಂದಿದೆ. 30 ರಿಂದ 300 ಕಿ.ಮೀ ವರೆಗಿನ ಗುರಿಗಳನ್ನು 'ಬ್ರಹ್ಮೋಸ್' ಕ್ರೂಸ್ ಕ್ಷಿಪಣಿಗಳು ನಿಭಾಯಿಸಿದರೆ, ಅದಕ್ಕಿಂತ ಹೆಚ್ಚಿನ ದೂರದ ಗುರಿಗಳನ್ನು 'ಅಗ್ನಿ' ಸರಣಿಯ ಕ್ಷಿಪಣಿಗಳು ಹೊಡೆದುರುಳಿಸಬಲ್ಲವು.

ಸ್ನೇಹಿತ ರಾಷ್ಟ್ರಗಳಿಂದ ಬೇಡಿಕೆ: ಡಿಆರ್‌ಡಿಒ (DRDO) ಮೂಲಗಳ ಪ್ರಕಾರ, 700 ಕಿ.ಮೀ. ವ್ಯಾಪ್ತಿಯ ಅಗ್ನಿ–1 ಕ್ಷಿಪಣಿಯನ್ನು ಕನಿಷ್ಠ 220 ಕಿ.ಮೀ. ದೂರದ ಗುರಿಗಳಿಗೂ ಬಳಸಬಹುದು. ಇದರಿಂದ 150 ರಿಂದ 350 ಕಿ.ಮೀ.ವರೆಗೆ ಗುರಿ ತಾಕುವ ಪ್ರಿಥ್ವಿ ಸರಣಿಯ ಕ್ಷಿಪಣಿಗಳ ವ್ಯಾಪ್ತಿಯನ್ನು ಸಹ ಆವರಿಸಲು ಸಾಧ್ಯವಾಗುತ್ತದೆ.. ವಿಶೇಷವೆಂದರೆ, ಅಗ್ನಿ ಸರಣಿಯ ಕೆಲವು ಕ್ಷಿಪಣಿಗಳಿಗೆ ಈಗ ವಿದೇಶಗಳಿಂದಲೂ ಬೇಡಿಕೆ ಬರುತ್ತಿದ್ದು, ಸ್ನೇಹಿತ ರಾಷ್ಟ್ರಗಳು ಇವುಗಳನ್ನು ಆಮದು ಮಾಡಿಕೊಳ್ಳಲು ಭಾರತವನ್ನು ಸಂಪರ್ಕಿಸುತ್ತಿವೆ.