ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರಾಜಕಾರಣಿಯಲ್ಲ 'ಗ್ಲೋಬಲ್ ಐಕಾನ್': Gen Zಗಳ ಮನಗೆದ್ದು, ಮೋದಿ ಸೋಶಿಯಲ್ ಮೀಡಿಯಾದಲ್ಲಿ 'ನಂಬರ್ 1' ಆಗಿದ್ದು ಹೇಗೆ?

PM Modi: ಪ್ರಧಾನಿ ನರೇಂದ್ರ ಮೋದಿ ಅವರು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ 10 ಕೋಟಿ (100 ಮಿಲಿಯನ್) ಗೂ ಹೆಚ್ಚು ಫಾಲೋವರ್ಸ್‌ಗಳನ್ನು ದಾಟುವ ಮೂಲಕ ಈ ವೇದಿಕೆಯಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿದ ವಿಶ್ವದ ಏಕೈಕ ನಾಯಕರೆಂಬ ಹೆಗ್ಗಳಿಕೆ ಭಾಜನರಾಗಿದ್ದಾರೆ.

ಸಂಗ್ರಹ ಚಿತ್ರ

ನವದೆಹಲಿ: ಸಾಮಾನ್ಯಾಗಿ ರಾಜಕಾರಣಿಗಳ ಸೋಶಿಯಲ್‌ ಮೀಡಿಯಾ ಪೇಜ್‌ಗಳೆಂದರೆ ಕಾರ್ಯಕ್ರಮ ಉದ್ಘಾಟಣೆಗಳು, ಉದ್ದುದ್ದ ಭಾಷಣಗಳು ಹಾಗೂ ಸರ್ಕಾರಿ ಪ್ರಕಟಣೆಗಳಿಗಷ್ಟೇ ಸೀಮಿತವಾಗಿರುತ್ತವೆ. ಆದರೆ ಪ್ರಧಾನಿ ಮೋದಿ (PM Narendra Modi) ಅವರ ಸೋಶಿಯಲ್‌ ಮೀಡಿಯಾ ಖಾತೆಗಳ ಕಥೆಯೆ ಬೇರೆಯಾಗಿದೆ. ಅಲ್ಲಿ ರಾಜಕೀಯ ಗಂಭೀರತೆಗಿಂತ ಹೆಚ್ಚಾಗಿ ಯುವಜನರನ್ನು ಸೆಳೆಯುವ ಹೈ-ಟೆಕ್‌ ಕಂಟೆಂಟ್‌ಗಳು ಇರುತ್ತವೆ. ಇಂದು ತಮ್ಮ 76ನೇ ಜನ್ಮದಿನವನ್ನು (PM Modi Birthday) ಆಚರಿಸಿಕೊಳ್ಳುತ್ತಿರುವ ಪ್ರಧಾನಿ ಮೋದಿ, ರಾಜಕೀಯ ಜೀವನದಲ್ಲಿ ಎಷ್ಟು ಯಶಸ್ವಿಯಾಗಿದ್ದಾರೋ, ಡಿಜಿಟಲ್ ಜಗತ್ತಿನಲ್ಲಿಯೂ ಅಷ್ಟೇ ಪ್ರಸಿದ್ಧಿ ಪಡೆದಿದ್ದಾರೆ. ಹಾಗಿದ್ದರೆ ಸೋಶಿಯಲ್‌ ಮೀಡಿಯಾಗಳಿಲ್ಲಿ ಮೋದಿ ಇಷ್ಟರ ಮಟ್ಟಿಗೆ ಫೇಮಸ್‌ ಆಗಲು ಕಾರಣವಾದರು ಏನು ಇಲ್ಲಿದೆ ನೋಡಿ ಇಂಟ್ರಸ್ಟಿಂಗ್‌ ಮಾಹಿತಿ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ 76ನೇ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಕೇವಲ ರಾಜಕೀಯ ರಂಗದಲ್ಲಿ ಮಾತ್ರವಲ್ಲದೆ, ಇಂದಿನ ಡಿಜಿಟಲ್ ಯುಗದಲ್ಲಿ ಯುವ ಪೀಳಿಗೆಯನ್ನು ತಮ್ಮತ್ತ ಸೆಳೆಯುವಲ್ಲಿ ಮೋದಿ ವಿಶ್ವದ ಇತರ ಎಲ್ಲಾ ಜಾಗತಿಕ ನಾಯಕರನ್ನು ಹಿಂದಿಕ್ಕಿದ್ದಾರೆ. ಜಾಗತಿಕ ರಾಜಕಾರಣದಲ್ಲಿ ಸೋಶಿಯಲ್ ಮೀಡಿಯಾವನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿರುವ ಪ್ರಧಾನಿ ಮೋದಿ, ಇನ್‌ಸ್ಟಾಗ್ರಾಮ್‌ನಲ್ಲಿ ಬರೋಬ್ಬರಿ 100 ಮಿಲಿಯನ್‌ (10 ಕೋಟಿ) ಗೂ ಹೆಚ್ಚು ಫಾಲೋವರ್ಸ್‌ ಹೊಂದುವ ಮೂಲಕ ವಿಶ್ವದಲ್ಲೇ ಅತ್ಯಂತ ಹೆಚ್ಚು ಫಾಲೋವರ್ಸ್ ಹೊಂದಿರುವ ವಿಶ್ವ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಮೆರಿಕದ ಅಧ್ಯಕ್ಷ, ಯುರೋಪ್ ಹಾಗೂ ಏಷ್ಯಾದ ಪ್ರಮುಖ ರಾಷ್ಟ್ರನಾಯಕರನ್ನು ಬಹುದೂರ ಹಿಂದೆ ತಳ್ಳಿ, ಪ್ರಧಾನಿ ಮೋದಿ ಅವರು ಸೋಶಿಯಲ್ ಮೀಡಿಯಾ 'ಕಿಂಗ್' ಆಗಿ ಹೊರಹೊಮ್ಮಿರುವುದು ಕೇವಲ ಆಕಸ್ಮಿಕವಲ್ಲ ಅದರ ಹಿಂದೆ ಇಂದಿನ ಯುವ ಪೀಳಿಗೆಯನ್ನು ಸೆಳೆಯುವ ಪಕ್ಕಾ ಡಿಜಿಟಲ್ ತಂತ್ರಗಾರಿಕೆಯಿದೆ.

ಸೋಶಿಯಲ್‌ ಮೀಡಿಯಾದಲ್ಲಿ ಮಿಲಿಯನ್‌ ಫಾಲೋವರ್ಸ್‌ಗಳು

ಪ್ರಧಾನಿ ಮೋದಿ ಕೇವಲ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮಾತ್ರ ಮಿಲಿಯನ್‌ ಗಟ್ಟಲೆ ಫಾಲೋವರ್ಸ್‌ಗಳನ್ನು ಹೊಂದಿಲ್ಲ, ಬದಲಾಗಿ ಇತರ ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್, ಯೂಟ್ಯೂಬ್‌ ಮತ್ತು ಎಕ್ಸ್‌ ಖಾತೆಗಳಲ್ಲೂ ಮಿಲಿಯನ್‌ ಫಾಲೋವರ್ಸ್‌ಗಳನ್ನ ಹೊಂದಿದ್ದಾರೆ. ಸೆಪ್ಟೆಂಬರ್ 2026 ರ ಹೊತ್ತಿಗೆ, ಪ್ರಧಾನಿ ಮೋದಿ ಅವರು 'X' ನಲ್ಲಿದ್ದ 100 ಮಿಲಿಯನ್ ಫಾಲೋವರ್ಸ್‌ಗಳ ಮೈಲಿಗಲ್ಲನ್ನು ಜುಲೈ 2024 ರಲ್ಲೇ ದಾಟಿದ್ದು, ಪ್ರಸ್ತುತ ಅದಕ್ಕಿಂತಲೂ ಹೆಚ್ಚಿನ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಹಾಗೆಯೇ ಫೆಬ್ರವರಿ 2026 ರಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ 106 (10.6 ಕೋಟಿ) ಮಿಲಿಯನ್ ಫಾಲೋವರ್ಸ್‌ ತಲುಪುವ ಮೂಲಕ ಈ ಸಾಧನೆ ಮಾಡಿದ ವಿಶ್ವದ ಮೊದಲ ಜಾಗತಿಕ ನಾಯಕ ಮತ್ತು ರಾಜಕಾರಣಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಈ ವೇಳೆ ಅವರ ಯೂಟ್ಯೂಬ್‌ ಜನಪ್ರಿಯತೆಯೂ ವೇಗವಾಗಿ ಬೆಳೆದಿದೆ. ಮಾರ್ಚ್ 2026 ರಲ್ಲಿ, ಮೋದಿ ಅವರ ಅಧಿಕೃತ ಯೂಟ್ಯೂಬ್ ಚಾನಲ್ 30 ಮಿಲಿಯನ್‌ಗಿಂತಲೂ (3 ಕೋಟಿ) ಹೆಚ್ಚು ಸಬ್‌ಸ್ಕ್ರೈಬರ್‌ಗಳನ್ನು ಪಡೆದುಕೊಳ್ಳುವ ಮೂಲಕ ಆ ಸಮಯದಲ್ಲಿ ವಿಶ್ವದ ನಾಯಕನೊಬ್ಬನ ಅತಿ ಹೆಚ್ಚು ಸಬ್‌ಸ್ಕ್ರೈಬರ್‌ಗಳನ್ನು ಹೊಂದಿದ ಯೂಟ್ಯೂಬ್ ಚಾನಲ್ ಎನಿಸಿಕೊಂಡಿತು.

ʼಚಾಯ್‌ ವಾಲಾʼನಿಂದ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶದ ಪ್ರಧಾನಿವರೆಗೆ: ಝೀರೋದಿಂದ ಉನ್ನತ ಹುದ್ದೆಗೇರಿದ ನರೇಂದ್ರ ಮೋದಿ ಹೋರಾಟದ ಬದುಕು ಇಲ್ಲಿದೆ

Gen-Zಗಳನ್ನು ಮೋದಿ ಸೆಳೆಯಲು ಮೋದಿ ಬಳಸುತ್ತಿರುವ ತಂತ್ರವೇನು?

ಪ್ರಧಾನಿ ಮೋದಿ ದೇಶದ ಯುವಜನರನ್ನು ಸೆಳೆಯಲು ಮುಖ್ಯವಾಗಿ Gen-Z ಯುವಜನೆತೆಯನ್ನು ಸೆಳೆಯಲು ತಮ್ಮ ಸೋಶಿಯಲ್‌ ಮೀಡಿಯಾ ಖಾತೆಗಳನ್ನು ಬಳಸಿರುವ ರೀತಿ ಸಂಪೂರ್ಣ ಭಿನ್ನ. ಕೇವಲ ದೀರ್ಘ ಭಾಷಣಗಳನ್ನಷ್ಟೇ ನೀಡದೆ, ಯುವಜನರಿಗೆ ಇಷ್ಟವಾಗುವ ಟ್ರೆಂಡಿಂಗ್ ಹಿನ್ನೆಲೆ ಸಂಗೀತ, ಸ್ಪೀಡ್-ಕಟ್ ಎಡಿಟಿಂಗ್ ಮತ್ತು ಹೈ-ಕ್ವಾಲಿಟಿ ವೀಡಿಯೊ ರೀಲ್ಸ್‌ಗಳನ್ನು ಮಾಡಿ ಯುಜನರನ್ನು ಸೆಳೆಯವ ಪ್ರಯತ್ನ ಮಾಡುತಿದ್ದಾರೆ. ವಿದೇಶಿ ಪ್ರವಾಸಗಳು, ಗಣ್ಯರೊಂದಿಗಿನ ಅನೌಪಚಾರಿಕ ಮಾತುಕತೆ, ವಿಮಾನದೊಳಗಿನ ಕ್ಷಣಗಳು ಮತ್ತು ನಾಯಕತ್ವದ ಹಿಂದಿನ ಹ್ಯೂಮನ್-ಟಚ್ ಕ್ಷಣಗಳನ್ನು ಬಿಹೈಂಡ್ ದಿ ಸೀನ್ಸ್ ಮೂಲಕ ಹಂಚಿಕೊಳ್ಳುವದರಿಂದ ಜನರಿಗೆ ತೀರಾ ಹತ್ತಿರವಾಗಿದ್ದಾರೆ. ದೇಶದ ಪ್ರಮುಖ ಯೂಟ್ಯೂಬರ್‌ಗಳು, ಗೇಮರ್ಸ್, ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಸ್ ಮತ್ತು ಬಿಲ್ ಗೇಟ್ಸ್‌ರಂತಹ ಜಾಗತಿಕ ಗಣ್ಯರ ಜೊತೆ ನಡೆಸುವ ತಮಾಷೆಯ ಮತ್ತು ಮುಕ್ತ ಮಾತುಕತೆಗಳು ಯುವ ಪೀಳಿಗೆಯಲ್ಲಿ ಭಾರಿ ಸದ್ದು ಮಾಡಿವೆ. ಪ್ರತಿಯೊಂದು ರಾಜ್ಯ ಅಥವಾ ದೇಶದ ಪ್ರವಾಸದ ವೇಳೆ ಅಲ್ಲಿನ ಸ್ಥಳೀಯ ಉಡುಪು, ಭಾಷೆ ಮತ್ತು ಸಾಂಸ್ಕೃತಿಕ ಎಲಿಮೆಂಟ್ಸ್‌ಗಳನ್ನು ಪೋಸ್ಟ್‌ಗಳಲ್ಲಿ ಅತ್ಯಂತ ಆಕರ್ಷಕವಾಗಿ ತೋರಿಸುತ್ತಾರೆ.

ಟ್ರೆಂಡ್‌ ಬಳಸಿ ಯುವಜನರನ್ನ ಸೆಳೆದ ಮೋದಿ

ಮೋದಿ ಅವರ ಸೋಶಿಯಲ್ ಮೀಡಿಯಾ ಟೀಮ್ ಇತ್ತೀಚಿನ ಟ್ರೆಂಡ್‌ಗಳನ್ನು ಬಳಸಿ ಯುವಕರಿಗೆ ಇಷ್ಟವಾಗುವಂತಹ ವಿಷಯಗಳನ್ನು ರೂಪಿಸುತ್ತದೆ. ಇತ್ತೀಚೆಗೆ ವಡೋದರಾದ ಮಹಾರಾಜ ಸಾಯಾಜಿರಾವ್ ವಿಶ್ವವಿದ್ಯಾಲಯಕ್ಕೆ ಮೋದಿ ಭೇಟಿ ನೀಡಿದ್ದಾಗ, 'ಧುರಂಧರ್' ಸಿನಿಮಾದ 'ಆರಿ-ಆರಿ' ಎಂಬ ಪ್ರಸಿದ್ಧ ಬಾಲಿವುಡ್ ಹಾಡನ್ನು ಹಿನ್ನೆಲೆಯಾಗಿ ಬಳಸಿ ಅವರ ಎಂಟ್ರಿ ವೀಡಿಯೊ ಮಾಡಲಾಗಿತ್ತು. ರಾಜಕೀಯ ಸಂದೇಶಗಳನ್ನು ಯುವಜನರಿಗೆ ಇಷ್ಟವಾಗುವಂತೆ ರೀಲ್ಸ್‌ಗಳು, ಹಿಟ್ ಹಾಡುಗಳು ಮತ್ತು ಆಕರ್ಷಕ ದೃಶ್ಯಗಳ ಮೂಲಕ ಹೇಗೆ ತಲುಪಿಸಬಹುದು ಎಂಬುದಕ್ಕೆ ಈ ವೀಡಿಯೊ ಸೂಕ್ತ ಉದಾಹರಣೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು.

ಪ್ರಧಾನಿ ಮೋದಿ ಆಗಸ್ಟ್ 2026 ರಲ್ಲಿ, ತಮ್ಮ ಕೇಂದ್ರ ಸಚಿವರಿಗೂ ಸಹ ಇನ್‌ಸ್ಟಾಗ್ರಾಮ್‌ನಲ್ಲಿ ಹೆಚ್ಚು ಸಕ್ರಿಯರಾಗಿ ರೀಲ್ಸ್‌ಗಳ ಮೂಲಕ ಯುವಕರನ್ನು ತಲುಪಬೇಕು ಎಂದು ಸೂಚಿಸಿದ್ದರು. ಯುವಜನತೆ ಮತ್ತು ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸುವುದೂ ಅವರ ಡಿಜಿಟಲ್ ಶೈಲಿಯಲ್ಲಿದೆ. ಇತ್ತೀಚಿಗೆ ಜುಲೈ 2026 ರಲ್ಲಿ ನವದೆಹಲಿಯ ಜಂತರ-ಮಂತರ ನಡೆದ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ವಿದ್ಯಾರ್ಥಿ ಪ್ರತಿಭಟನೆಯಲ್ಲಿ ಮೋದಿ ಯುಜನರನ್ನು ಸೆಳೆದ ರೀತಿ ಭಾರಿ ಮೆಚ್ಚುಗೆಗೆ ಕಾರಣವಾಗಿತ್ತು.

ವರ್ಷಗಳು ಉರುಳಿದಂತೆ, ಸೋಶಿಯಲ್ ಮೀಡಿಯಾವು ಮೋದಿ ಅವರಿಗೆ ಕೇವಲ ಸರ್ಕಾರದ ನಿರ್ಧಾರಗಳನ್ನು ಪ್ರಕಟಿಸುವ ತಾಣವಾಗಿ ಉಳಿದಿಲ್ಲ. ಸಾಂಪ್ರದಾಯಿಕ ಮಾಧ್ಯಮಗಳನ್ನೇ ಸಂಪೂರ್ಣವಾಗಿ ನೆಚ್ಚಿಕೊಳ್ಳದೇ, ನೇರವಾಗಿ ಕೋಟ್ಯಂತರ ಫಾಲೋವರ್ಸ್‌ಗಳೊಂದಿಗೆ ಸಂವಹನ ನಡೆಸಲು ಇದು ಸಾಧ್ಯವಾಯಿತು. ಅದರಲ್ಲೂ ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ಗಳಲ್ಲಿ ಅವರು ಕಂಡುಕೊಂಡ ಬೃಹತ್ ಯಶಸ್ಸು, ಭಾರತದಲ್ಲಿ ರಾಜಕೀಯ ಪ್ರಚಾರ ಮತ್ತು ಸಂವಹನವು ಈಗ ಡಿಜಿಟಲ್ ಯುಗಕ್ಕೆ ಸಂಪೂರ್ಣವಾಗಿ ಕಾಲಿಟ್ಟಿರುವುದನ್ನು ಸ್ಪಷ್ಟಪಡಿಸುತ್ತದೆ.

Vishakha Bhat Heggar

View all posts by this author