ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

"ಸುಪ್ರಿಯಾ ಮತ್ತು ನಾವು ಸೇರಿ ದೇಶ ನಿಭಾಯಿಸುತ್ತೇವೆ": ಶರದ್‌ ಪವಾರ್‌ಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ, ಎನ್‌ಸಿಪಿ ವಿಲೀನ?

ತೀವ್ರ ಕೆಮ್ಮು ಮತ್ತು ಎದೆನೋವಿನ ಕಾರಣದಿಂದಾಗಿ ಪುಣೆಯ ರುಬಿ ಹಾಲ್ ಕ್ಲಿನಿಕ್ ಆಸ್ಪತ್ರೆಗೆ ದಾಖಲಾಗಿದ್ದ ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಬುಧವಾರ ಬಿಡುಗಡೆಯಾಗಿದ್ದಾರೆ. ಪವಾರ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ಮಾಡಿ ಅವರ ಆರೋಗ್ಯ ವಿಚಾರಿಸಿದ್ದಾರೆ.

ಸಂಗ್ರಹ ಚಿತ್ರ

ಮುಂಬೈ: ತೀವ್ರ ಕೆಮ್ಮು ಮತ್ತು ಎದೆನೋವಿನ ಕಾರಣದಿಂದಾಗಿ ಪುಣೆಯ ರುಬಿ ಹಾಲ್ ಕ್ಲಿನಿಕ್ ಆಸ್ಪತ್ರೆಗೆ ದಾಖಲಾಗಿದ್ದ ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ( Sharad Pawar) ಬುಧವಾರ ಬಿಡುಗಡೆಯಾಗಿದ್ದಾರೆ. ಪವಾರ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಕರೆ ಮಾಡಿ ಅವರ ಆರೋಗ್ಯ ವಿಚಾರಿಸಿದ್ದಾರೆ. ರಾಜಕೀಯ ಭಿನ್ನಾಭಿಪ್ರಾಯಗಳ ನಡುವೆಯೂ ಉಭಯ ನಾಯಕರ ನಡುವೆ ನಡೆದ ಈ ದೂರವಾಣಿ ಸಂಭಾಷಣೆ ಈಗ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಶರದ್ ಪವಾರ್ ಅವರನ್ನು 'ಸಾಹೇಬರೇ' ಎಂದು ಸಂಬೋಧಿಸಿದ ಪ್ರಧಾನಿ ಮೋದಿ, , ನೀವು ದಯವಿಟ್ಟು ಸಂಪೂರ್ಣ ವಿಶ್ರಾಂತಿ ಪಡೆಯಿರಿ. ಈಗ ಸುಪ್ರಿಯಾ ಸುಳೆ ಸಿದ್ಧರಾಗಿದ್ದಾರೆ. ಸುಪ್ರಿಯಾ ಮತ್ತು ನಾವು ಸೇರಿ ದೇಶವನ್ನು ನಿಭಾಯಿಸುತ್ತೇವೆ. ನೀವು ಯಾವುದೇ ಚಿಂತೆ ಮಾಡದೆ ವಿಶ್ರಾಂತಿ ತಗೊಳ್ಳಿ, ಇದು ನನ್ನ ವಿನಂತಿ" ಎಂದು ಹೇಳಿದ್ದಾರೆ. ಪ್ರಧಾನಿಯವರ ಈ ಪ್ರೀತಿಯ ವಿನಂತಿಗೆ ಧನ್ಯವಾದ ಅರ್ಪಿಸಿದ 85 ವರ್ಷದ ಹಿರಿಯ ಮುತ್ಸದ್ದಿ ಶರದ್ ಪವಾರ್, "ನಾನು ವಿಶ್ರಾಂತಿ ಪಡೆಯುತ್ತಿದ್ದೇನೆ. ನೀವೆಲ್ಲರೂ ಜೊತೆಯಾಗಿ ಇರುವಾಗ ನನಗೆ ದೇಶದ ಬಗ್ಗೆ ಯಾವುದೇ ಚಿಂತೆ ಇಲ್ಲ. ನೀವು ನಿಮ್ಮ ಕೆಲಸವನ್ನು ಮುಂದುವರಿಸಿ," ಎಂದು ಮೋದಿಯವರಿಗೆ ಉತ್ತರಿಸಿದ್ದಾರೆ ಎನ್ನಲಾಗಿದೆ.

ಮೋದಿಯವರ ಈ ನಡೆ ಮಹಾರಾಷ್ಟ್ರದ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗಳನ್ನು ಹುಟ್ಟುಹಾಕಿದೆ. 2026ರ ಜನವರಿಯಲ್ಲಿ ಎನ್‌ಸಿಪಿ ಬಣದ ನಾಯಕ ಅಜಿತ್ ಪವಾರ್ ಅವರ ಆಕಸ್ಮಿಕ ನಿಧನದ ನಂತರ, ಶರದ್ ಪವಾರ್ ಮತ್ತು ಅಜಿತ್ ಪವಾರ್ ಬಣಗಳ ವಿಲೀನದ ಮಾತುಕತೆಗಳು ಸ್ಥಗಿತಗೊಂಡಿದ್ದವು. ಆದರೀಗ, ಸಾರ್ವತ್ರಿಕ ಚುನಾವಣೆಗಳು ಸಮೀಪಿಸುತ್ತಿರುವ ಹೊತ್ತಿನಲ್ಲಿ ಪ್ರಧಾನಿ ಮೋದಿಯವರು ಇಂಡಿಯಾ ಒಕ್ಕೂಟದ ಪ್ರಮುಖ ಮುಖವಾಗಿರುವ ಸುಪ್ರಿಯಾ ಸುಳೆ ಅವರ ಹೆಸರನ್ನು ಪ್ರಸ್ತಾಪಿಸಿರುವುದು ರಾಜಕೀಯ ಮಹತ್ವ ಪಡೆದುಕೊಂಡಿದೆ.

2023ರಲ್ಲಿ ಶರದ್ ಪವಾರ್ ಅವರಿಂದ ಒಡೆದು ಹೋಗಿ ಬಿಜೆಪಿಯೊಂದಿಗೆ ಕೈಜೋಡಿಸಿದ್ದ ಅಜಿತ್ ಪವಾರ್ ಅವರು, 2026ರ ಜನವರಿಯಲ್ಲಿ ಸಂಭವಿಸಿದ ಭೀಕರ ವಿಮಾನ ದುರಂತದಲ್ಲಿ ನಿಧನರಾದರು. ಅವರ ನಿಧನದ ನಂತರ ಪಕ್ಷದ ನಾಯಕತ್ವದಲ್ಲಿ ಭಿನ್ನಾಭಿಪ್ರಾಯಗಳು ತಲೆದೋರಿದ್ದು, ಎರಡು ಬಣಗಳ ಪುನರೇಕೀಕರಣದ ಮಾತುಕತೆಗಳು ಮುಂಚೂಣಿಗೆ ಬಂದಿವೆ.

ಅತ್ತ ವಿಪಕ್ಷಗಳ ಪ್ರತಿಭಟನೆ: ಇತ್ತ ಪ್ರಧಾನಿ ನರೇಂದ್ರ ಮೋದಿ ಭೇಟಿಯಾದ ಶರದ್ ಪವಾರ್, ಸುಪ್ರಿಯಾ ಸುಳೆ; ಎನ್‌ಡಿಎಗೆ ಸಿಗುತ್ತಾ ಎನ್‌ಸಿಪಿ ಬೆಂಬಲ?

ಇತ್ತೀಚೆಗೆ ಎನ್‌ಸಿಪಿ (ಅಜಿತ್ ಬಣ) ಹಿರಿಯ ನಾಯಕರಾದ ಪ್ರಫುಲ್ ಪಟೇಲ್, ಸುನಿಲ್ ತಟಕರೆ ಮತ್ತು ಛಗನ್ ಭುಜಬಲ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದ್ದಾರೆ. ಈ ಸಭೆಯಲ್ಲಿ ಎರಡು ಬಣಗಳನ್ನು ಒಟ್ಟುಗೂಡಿಸಿ, ಒಂದೇ ಪಕ್ಷವಾಗಿ ಎನ್‌ಡಿಎ (NDA) ಮೈತ್ರಿಕೂಟದಲ್ಲಿ ಮುಂದುವರಿಯುವ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ.

Vishakha Bhat Heggar

View all posts by this author