ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Taj Mahal: ತಾಜ್‌ ಮಹಲ್‌ನಲ್ಲಿಬೀಗ ಹಾಕಿರುವ ಕೋಣೆಯಲ್ಲಿದೆಯಾ ಘೋರ ರಹಸ್ಯ? ವಾಸ್ತು ತಜ್ಞರು ಹೇಳೋದೇನು?

ವಿಶ್ವದ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿರುವ ಆಗ್ರಾದ ತಾಜ್ ಮಹಲ್ ನೊಳಗೆ ಅನೇಕ ರಹಸ್ಯಗಳಿವೆ. ಮೊಘಲ್ ಚಕ್ರವರ್ತಿ ಷಹಜಹಾನ್ ತನ್ನ ಪ್ರೀತಿಯ ಮಡದಿ ಮುಮ್ತಾಜ್ ಗಾಗಿ ನಿರ್ಮಿಸಿರುವ ಈ ಮಹಲ್ ನೊಳಗಿರುವ ಬೀಗ ಹಾಕಿರುವ ಕೋಣೆಗಳ ಬಗ್ಗೆ ಸಾಕಷ್ಟು ಕುತೂಹಲ ಅನೇಕರಲ್ಲಿದೆ. ಇದರ ಕುರಿತು ಮೊಘಲ್ ವಾಸ್ತು ಶಿಲ್ಪ ತಜ್ಞರು, ಇತಿಹಾಸಕಾರರು ನೀಡಿರುವ ಮಾಹಿತಿ ಇಲ್ಲಿದೆ.

ಆಗ್ರಾ: ದೇಶದ ಹಲವಾರು ಸ್ಮಾರಕಗಳಲ್ಲಿ ಅನೇಕ ನಿಗೂಢ ಸಂಗತಿಗಳಿವೆ. ಅವುಗಳಲ್ಲಿ ಆಗ್ರಾದ (Agra) ತಾಜ್ ಮಹಲ್ (Taj Mahal) ಕೂಡ ಒಂದು. ಇಲ್ಲಿರುವ ಮುಚ್ಚಿದ ಬಾಗಿಲಿನ ಕೋಣೆಯ ಬಗ್ಗೆ ಸಾಕಷ್ಟು ಕುತೂಹಲ ಎಲ್ಲರಲ್ಲೂ ಇದೆ. 17ನೇ ಶತಮಾನದಲ್ಲಿ ಮೊಘಲ್ ಚಕ್ರವರ್ತಿ ಷಹಜಹಾನ್ (Mughal Emperor Shah Jahan) ತನ್ನ ಪ್ರೀತಿಯ ಮಡದಿಗಾಗಿ ನಿರ್ಮಿಸಿರುವ ಈ ಸ್ಮಾರಕ ಇಂದು ವಿಶ್ವ ಪಾರಂಪರಿಕ ಪಟ್ಟಿಯಲ್ಲಿ (World Heritage List) ಪ್ರೀತಿ ಮತ್ತು ನಿಗೂಢತೆಯ ಸ್ಮಾರಕ ಗುರುತಿಸಿಕೊಂಡಿದೆ. ಯಮುನಾ ನದಿಯ ದಡದಲ್ಲಿರುವ ಈ ಸ್ಮಾರಕ ವಿಶ್ವದ ಏಳು ಅದ್ಭುತಗಳಲ್ಲಿ ಒಂದಾಗಿದೆ.

ಮೊಘಲ್ ವಾಸ್ತು ಶಿಲ್ಪದ ಅದ್ಬುತ ಎಂದೇ ಪರಿಗಣಿಸಲ್ಪಟ್ಟಿರುವ ತಾಜ್ ಮಹಲ್ ಅಮೃತ ಶಿಲೆ, ಭವ್ಯವಾದ ರಚನೆ, ಜಾಲರಿಗಳಿಂದ ಪ್ರವಾಸಿಗರನ್ನು ಸೆಳೆಯುತ್ತದೆ. ಇದರಲ್ಲಿ ಅನೇಕ ರಹಸ್ಯಗಳಿದ್ದು, ಅದರಲ್ಲಿ ಒಂದು ಬೀಗ ಹಾಕಿ ಮುಚ್ಚಿರುವ ಕೋಣೆಗಳು. ಸ್ಮಾರಕದ ಹಲವಾರು ಭಾಗಗಳನ್ನು ಹಲವು ವರ್ಷಗಳಿಂದ ಸಾರ್ವಜನಿಕರಿಗೆ ಮುಚ್ಚಲಾಗಿದೆ. ಹೀಗಾಗಿ ಇಲ್ಲಿ ಏನಿರಬಹುದು ಎನ್ನುವ ಕುತೂಹಲ ಸಾಕಷ್ಟು ಮಂದಿಗೆ ಇದೆ.

ಇದನ್ನೂ ಓದಿ: 28ನೇ ಜೆಕೆ ಟೈರ್ ನ್ಯಾಷನಲ್ ರೇಸಿಂಗ್ ಚಾಂಪಿಯನ್‌ಶಿಪ್ ಗ್ರ್ಯಾಂಡ್ ಫಿನಾಲೆ; ಬೆಂಗಳೂರಿನ ಅನೀಶ್ ಶೆಟ್ಟಿ ಮೇಲೆ ಕಣ್ಣು!

ತಾಜ್ ಮಹಲ್ ನ ರಹಸ್ಯಗಳನ್ನು ಇದೀಗ ಪ್ರಮುಖ ಮೊಘಲ್ ವಾಸ್ತುಶಿಲ್ಪ ತಜ್ಞರಾದ ದ ಎಬ್ಬಾ ಕೋಚ್ ಅವರು ಮಾಧ್ಯಮವೊಂದಕ್ಕೆ ನೀಡಿರುವ ಮಾಹಿತಿ ಇಂತಿದೆ.

ತಾಜ್ ಮಹಲ್ ನ ಒಳಗೆ ರಾಜಮನೆತನದ ಸೌಕರ್ಯಕ್ಕಾಗಿ ವಿನ್ಯಾಸಗೊಳಿಸಲಾದ ಭೂಗತ ಕೊಠಡಿಗಳ ಜಾಲವಾದ ತಹ್ಖಾನಾ ಕೊಠಡಿ ಇದೆ. ಇದು ಬೇಸಗೆಯಲ್ಲಿ ಚಕ್ರವರ್ತಿ ಮತ್ತು ಅವನ ಕುಟುಂಬಕ್ಕೆ ತಂಪಾದ ವಿಶ್ರಾಂತಿ ತಾಣಗಳಾಗಿದ್ದವು. ವಿಶಾಲವಾಗಿರುವ ಈ ಕೊಠಡಿಗಳನ್ನು ಜ್ಯಾಮಿತೀಯ ಮತ್ತು ನಕ್ಷತ್ರ ಮಾದರಿಯ ವಿನ್ಯಾಸಗಳಿಂದ ಅಲಂಕರಿಸಲಾಗಿತ್ತು.

ತಹ್ಖಾನಾದಲ್ಲಿ ಕೊಠಡಿಗಳನ್ನು ನಿರ್ಮಿಸಲು ಇನ್ನೊಂದು ಪ್ರಮುಖ ಕಾರಣವೆಂದರೆ ಯಮುನಾ ನದಿಯಲ್ಲಿ ದೋಣಿ ಮೂಲಕ ಆಗಮಿಸುವ ಷಹಜಹಾನ್ ತಾಜ್ ಮಹಲ್ ನ ಮುಂಭಾಗದಲ್ಲಿರುವ ಈ ಕೋಣೆಗಳ ಮೂಲಕ ತಾಜ್ ಅನ್ನು ಪ್ರವೇಶಿಸುತ್ತಿದ್ದನು ಎನ್ನಲಾಗುತ್ತದೆ.

ಈ ಕೋಣೆಗಳನ್ನು ಮುಚ್ಚಿರುವುದು ಯಾಕೆಂದರೆ 1978ರಲ್ಲಿ ಸಂಭವಿಸಿದ ಪ್ರವಾಹ. ಇದರಿಂದ ಈ ಪ್ರದೇಶಗಳಿಗೆ ಅಪಾರ ಹಾನಿಯಾಗಿದೆ. ಹೀಗಾಗಿ ಇದನ್ನು ಮುಚ್ಚಿಡಲಾಗಿದೆ.

ದೆಹಲಿ ಮೂಲದ ಇತಿಹಾಸಕಾರ ರಾಣಾ ಸಫ್ವಿ ಅವರು ನೀಡಿರುವ ಮಾಹಿತಿ ಪ್ರಕಾರ 1978ರಲ್ಲಿ ಯಮುನಾ ನದಿಯಲ್ಲಿ ಉಂಟಾದ ಪ್ರವಾಹದಿಂದ ಈ ಕೋಣೆಗಳಿಗೆ ಅಪಾರ ಹಾನಿಯನ್ನು ಉಂಟು ಮಾಡಿತ್ತು. ಇದರಿಂದ ಕೋಣೆಗಳಲ್ಲಿ ಹೂಳು ತುಂಬಿಕೊಂಡಿತ್ತು, ಬಿರುಕುಗಳು ಉಂಟಾಗಿತ್ತು ಎಂದು ತಿಳಿಸಿದ್ದಾರೆ.

ಸ್ಮಾರಕದ ಸಂರಕ್ಷಣೆಗಾಗಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI)ಯು ಇಲ್ಲಿನ ಕೊಠಡಿಗಳನ್ನು ಮುಚ್ಚಿದೆ. ಇದಕ್ಕೆ ಸಾಕ್ಷಿಯಾಗಿ ಕೆಲವು ಫೋಟೋಗಳನ್ನು ಕೂಡ ಬಿಡುಗಡೆ ಮಾಡಿತ್ತು. ಅವುಗಳಸಂರಕ್ಷಣೆಗಾಗಿ ಕಾಲಕಾಲಕ್ಕೆ ತೆರೆದು ಸ್ವಚ್ಛಗೊಳಿಸಲಾಗುತ್ತದೆ ಎಂದು ಇಲಾಖೆ ಸ್ಪಷ್ಟಪಡಿಸಿತ್ತು.

ಇದನ್ನೂ ಓದಿ: Bihar Election Result 2025: ; ಬಿಹಾರದ ತೀರ್ಪಿನ ಮೇಲೆ ಎಲ್ಲರ ಕಣ್ಣು; ಸಿಎಂ ರೇಸ್‌ನಲ್ಲಿ ಯಾರೆಲ್ಲ ಇದ್ದಾರೆ?

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಮಾಜಿ ಪ್ರಾದೇಶಿಕ ನಿರ್ದೇಶಕ ಕೆ.ಕೆ. ಮುಹಮ್ಮದ್ ಅವರು ನೀಡಿರುವ ಮಾಹಿತಿ ಪ್ರಕಾರ , ಇದು ದೇವಾಲಯ ಅಲ್ಲ. ನಾನು ಹಲವು ಬಾರಿ ಅಲ್ಲಿಗೆ ಭೇಟಿ ನೀಡಿದ್ದೇನೆ. ಆದರೆ ಎಂದಿಗೂ ಅಲ್ಲಿ ದೇವಾಲಯ ಅಥವಾ ಶಿವಲಿಂಗವನ್ನು ನೋಡಿಲ್ಲ ಎಂದು ತಿಳಿಸಿದ್ದಾರೆ.

ಐತಿಹಾಸಿಕ ಸ್ಮಾರಕವನ್ನು ರಕ್ಷಿಸಲು ಇಲ್ಲಿನ ಕೊಠಡಿಗಳನ್ನು ಮುಚ್ಚಲಾಗಿದೆಯೇ ಹೊರತು ಇಲ್ಲಿ ಯಾವುದೇ ದೇವಾಲಯ ಅಥವಾ ನಿಧಿಗಳು ಇಲ್ಲ ಎಂದು ಅವರು ತಿಳಿಸಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author