ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪಹಲ್ಗಾಮ್ ಭಯೋತ್ಪಾದಕ ದಾಳಿ ಬಳಿಕ ಪ್ರಧಾನಿ ನರೇಂದ್ರ ಮೋದಿ ಮೊದಲು ಕೇಳಿದ್ದೇನು? ಹಲವು ಕುತೂಹಲದ ಮಾಹಿತಿ ಬಹಿರಂಗಪಡಿಸಿದ ಅಜಿತ್ ದೋವಲ್

ಆಪರೇಷನ್ ಸಿಂದೂರ್ ಬಳಿಕ ಮೊದಲ ಸಂದರ್ಶನದಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಅಜಿತ್ ದೋವಲ್ ಅವರು ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಏನಾಯಿತು, ಪ್ರಧಾನಿ ನರೇಂದ್ರ ಮೋದಿ ಅವರ ಮೊದಲ ಪ್ರತಿಕ್ರಿಯೆ ಏನಾಗಿತ್ತು, ಬಳಿಕ ಕೈಗೊಂಡ ನಿರ್ಧಾರಗಳ ಕುರಿತು ಮಾಹಿತಿ ಹಂಚಿಕೊಂಡಿದ್ದು ಅದರ ಸಂಪೂರ್ಣ ವಿವರ ಇಲ್ಲಿದೆ.

ಸಂಗ್ರಹ ಚಿತ್ರ

ನವದೆಹಲಿ: ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನ ಬೈಸರನ್ ಕಣಿವೆಯಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯ (Pahalgam terror attack) ಬಳಿಕ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ತಿಳಿದುಕೊಳ್ಳಲು ಬಯಸಿದ್ದ ಮೊದಲ ವಿಷಯವೆಂದರೆ ದಾಳಿಯ ಹೊಣೆಗಾರರು ಯಾರು ಎಂಬುದು. ಆ ಮಾಹಿತಿ ತಕ್ಷಣ ನನಗೆ ಬೇಕು ಎಂದು ಅವರು ಹೇಳಿದ್ದರು ಎಂಬುದಾಗಿ ರಾಷ್ಟ್ರೀಯ ಭದ್ರತಾ ಸಲಹೆಗಾರ (National security advisor) ಅಜಿತ್ ದೋವಲ್ (Ajit Doval) ಅವರು ಹೇಳಿದರು. ಭಾರತದ ಆಪರೇಷನ್ ಸಿಂದೂರ್‌ಗೆ ಕಾರಣವಾದ ಕ್ಷಣಗಳ ಕುರಿತು ನಡೆಸಿದ ಸಂದರ್ಶನದಲ್ಲಿ ಅವರು ಈ ಮಾಹಿತಿಯನ್ನು ಹಂಚಿಕೊಂಡರು.

ಡಿಸ್ಕವರಿ ದಾಖಲೆ ಸರಣಿಯಲ್ಲಿ "ಡಿಕ್ಲಾಸಿಫೈಡ್: ಆಪರೇಷನ್ ಸಿಂದೂರ್" ಎಂಬ ಕುರಿತು ನಡೆದ ಸಂದರ್ಶನದಲ್ಲಿ ಅವರು 88 ಗಂಟೆಗಳ ಮಿಲಿಟರಿ ಕಾರ್ಯಾಚರಣೆ ಕುರಿತು ಮಾಹಿತಿ ನೀಡಿದರು. ಈ ದಾಳಿಯ ಮುಖ್ಯ ಉದ್ದೇಶ ವಿಶೇಷವಾಗಿ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಸಂಬಂಧಿಸಿದ ಭಯೋತ್ಪಾದಕರ ಶಿಬಿರಗಳನ್ನು ನಾಶಪಡಿಸುವುದಾಗಿತ್ತು ಎಂದು ತಿಳಿಸಿದರು.

ಭೂಮಿ ಮಾರಾಟ ಮಾಡಲು ನಿರಾಕರಿಸಿದ ಪತ್ನಿ: ಖಾಸಗಿ ಅಂಗಕ್ಕೆ ಕರೆಂಟ್ ಶಾಕ್ ನೀಡಿ ಕೊಂದ ಪಾಪಿ ಪತಿ

ಪಹಲ್ಗಾಮ್ ಭಯೋತ್ಪಾದಕ ದಾಳಿ ನಡೆದಾಗ ಪ್ರಧಾನಿ ನರೇಂದ್ರ ಮೋದಿ ಅವರು ಸೌದಿ ಅರೇಬಿಯಾದಲ್ಲಿದ್ದರು. ತಕ್ಷಣವೇ ಅವರು ಅಲ್ಲಿಂದ ಹೊರಟು ಬಂದು ಮೊದಲು ತಮ್ಮನ್ನು ಭೇಟಿಯಾದರು. ವಿದೇಶಾಂಗ ಕಾರ್ಯದರ್ಶಿ ಸೇರಿದಂತೆ ನಾವು ಅವರೊಂದಿಗೆ ವಿಮಾನ ನಿಲ್ದಾಣದಲ್ಲಿಯೇ ಸಭೆ ನಡೆಸಿದೆವು. ಆಗ ಅವರು ಮೊದಲು ಎಲ್ಲಾ ಸಂಗತಿಗಳನ್ನು ತಿಳಿದುಕೊಳ್ಳಲು ಬಯಸಿದ್ದರು ಎಂದರು.



ದಾಳಿಯ ಹಿಂದೆ ಯಾರಿದ್ದಾರೆ, ಇದಕ್ಕೆ ಯಾರೆಲ್ಲಾ ಜವಾಬ್ದಾರರು ಮೊದಲಾದ ವಿವರಗಳನ್ನು ಕೇಳಿದರು. ಅಪರಾಧಿಗಳು ಯಾರು ಎಂದು ನಮಗೆ ಸ್ಪಷ್ಟವಾಗಿರಬೇಕು. ನನಗೆ ಅದು ತಕ್ಷಣ ಬೇಕು ಎಂದು ಅವರು ಕೇಳಿದ್ದರು ಎಂದರು.

ಭಾರತದ ಔದಾರ್ಯ ಅಥವಾ ಸಹಿಷ್ಣುತೆಯನ್ನು ದೌರ್ಬಲ್ಯವೆಂದು ತಪ್ಪಾಗಿ ಭಾವಿಸಬಾರದು. ಭಾರತ ಅಪಾಯಗಳನ್ನು ಎದುರಿಸಲು ಕೂಡ ಸಜ್ಜಾಗಿರುತ್ತದೆ. ಪರಿಣಾಮಗಳನ್ನು ಲೆಕ್ಕಿಸದೆ ತೀವ್ರವಾಗಿ ದಾಳಿ ಮಾಡಲು ಕೂಡ ತಯಾರಾಗಿರುತ್ತದೆ. ಈ ಸಂದೇಶ ಶತ್ರು ರಾಷ್ಟ್ರಕ್ಕೆ ಹೋಗಬೇಕು ಎಂದು ಅವರು ಹೇಳಿದರು.

ಪಹಲ್ಗಾಮ್ ದಾಳಿಗೆ ಸಂಬಂಧಿಸಿ ಮಾತನಾಡಿದ ಅವರು ಆಪರೇಷನ್ ಸಿಂದೂರ್ ನಲ್ಲಿ ಮುಖ್ಯವಾಗಿ ಭಾರತೀಯ ಸೇನೆಯು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ನಡೆಸಿತ್ತು. ಪಾಕಿಸ್ತಾನ ಸೇನೆಯು ಭಯೋತ್ಪಾದನೆಗೆ ಬೆಂಬಲ ನೀಡುವುದು ಅಥವಾ ಭಯೋತ್ಪಾದಕರ ವಿರುದ್ಧ ಪರಿಣಾಮಕಾರಿ ಕ್ರಮ ಕೈಗೊಳ್ಳಲು ಅಸಮರ್ಥವಾಗಿರುವುದು ನಮಗೆ ಸಹಿಸಲಾಗದ ವಿಷಯ ಎಂಬುದನ್ನು ಭಾರತ ಅರ್ಥ ಮಾಡಿಕೊಂಡಿದೆ ಎಂಬುದನ್ನು ಅವರು ತಿಳಿಯಬೇಕು ಎಂದು ಪ್ರಧಾನಿ ಮೋದಿ ಬಯಸಿದ್ದರು ಎಂದರು.

ಅಯೋಧ್ಯೆ ರಾಮ ಮಂದಿರ ದೇಣಿಗೆ ಕಳವು ಪ್ರಕರಣ: ಟ್ರಸ್ಟ್‌ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್‌ಗೆ ಕ್ಲೀನ್‌ಚಿಟ್

ಆಪರೇಷನ್ ಸಿಂದೂರ್ ಬಳಿಕ ಪಾಕಿಸ್ತಾನ ಕೂಡ ಪ್ರತಿ ದಾಳಿ ನಡೆಸಿದ್ದರಿಂದ ಎರಡು ರಾಷ್ಟ್ರಗಳ ನಡುವೆ ಮೇ 10ರ ಸಂಜೆವರೆಗೆ ಸಂಘರ್ಷ ನಡೆಯಿತು. ಇದರ ಬಳಿಕ ಪ್ರಧಾನಿ ಮೋದಿ ಅವರು ಭಾರತ ತನ್ನ ಸಾರ್ವಭೌಮತ್ವವನ್ನು ಕಾಪಾಡಿಕೊಳ್ಳಲು ಅಗತ್ಯವಿರುವಷ್ಟು ದೂರ ಹೋಗಲು ಸಿದ್ದವಾಗಿತ್ತು. ಅದರ ಮೇಲೆ ಯಾವುದೇ ಮಿತಿಗಳಿಲ್ಲ. ಕೊನೆಯ ರಕ್ತದ ಹನಿಯವರೆಗೆ ನಾವು ಹೋರಾಡುತ್ತೇವೆ. ಆಪರೇಷನ್ ಸಿಂದೂರ್ ಜೀವಂತವಾಗಿದೆ. ಕೊನೆಯ ಭಯೋತ್ಪಾದಕನನ್ನು ನಿರ್ನಾಮ ಮಾಡುವವರೆಗೆ ಭಯೋತ್ಪಾದನೆಯ ವಿರುದ್ಧದ ಹೋರಾಟ ಮುಂದುವರಿಯುತ್ತದೆ ಎಂದು ಅವರು ಹೇಳಿದ್ದರು ಎಂಬುದಾಗಿ ದೋವಲ್ ನೆನಪಿಸಿಕೊಂಡರು.

ವಿದ್ಯಾ ಇರ್ವತ್ತೂರು

View all posts by this author