ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರಾಹುಲ್‌ ಗಾಂಧಿ ಜೊತೆ ಬೋಟ್‌ನಲ್ಲಿದ್ದ ಮಹಿಳೆ, ಮಗು ಯಾರು ಗೊತ್ತಾ? ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಯ್ತು ಫೋಟೋ

Rahul Gandhi: ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಚರ್ಚೆಗೆ ಕಾರಣವಾಗಿರುವ ಫೋಟೋದಲ್ಲಿ ರಾಹುಲ್‌ ಮಹಿಳೆ ಹಾಗೂ ಮಗುವಿನೊಟ್ಟಿಗೆ ಕುಳಿತು ಪ್ರಯಾಣಿಸುತ್ತಿದ್ದಾರೆ. ಈ ಕುರಿತು ಕೇಂದ್ರ ಸಚಿವ ಗಿರಿರಾಜ್ ಪೋಸ್ಟ್‌ ಒಂದನ್ನು ಹಾಕಿದ್ದು, ರಾಜಕೀಯಕ್ಕೆ ತಿರುಗಿದೆ. ಸಾಮಾಜಿಕ ಜಾಲತಾಣದಲ್ಲಿ ಬೋಟ್‌ನಲ್ಲಿ ಮಹಿಳೆಯೊಟ್ಟಿಗೆ ಕುಳಿತಿರುವ ಫೋಟೋವನ್ನು ಸಚಿವರು ಶೇರ್‌ ಮಾಡಿದ್ದರು.

ರಾಹುಲ್‌ ಗಾಂಧಿ

ನವದೆಹಲಿ: ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಚರ್ಚೆಗೆ ಕಾರಣವಾಗಿರುವ ಫೋಟೋದಲ್ಲಿ ರಾಹುಲ್‌ ಮಹಿಳೆ ಹಾಗೂ ಮಗುವಿನೊಟ್ಟಿಗೆ ಕುಳಿತು ಪ್ರಯಾಣಿಸುತ್ತಿದ್ದಾರೆ. ಈ ಕುರಿತು ಕೇಂದ್ರ ಸಚಿವ ಗಿರಿರಾಜ್ ಪೋಸ್ಟ್‌ ಒಂದನ್ನು ಹಾಕಿದ್ದು, ರಾಜಕೀಯಕ್ಕೆ ತಿರುಗಿದೆ. ಸಾಮಾಜಿಕ ಜಾಲತಾಣದಲ್ಲಿ ಬೋಟ್‌ನಲ್ಲಿ ಮಹಿಳೆಯೊಟ್ಟಿಗೆ ಕುಳಿತಿರುವ ಫೋಟೋ ಪೋಸ್ಟ್‌ ಮಾಡಿದ ಸಚಿವ ಈ ಚಿತ್ರವನ್ನು ಎಲ್ಲಿ ಮತ್ತು ಯಾವಾಗ ತೆಗೆಯಲಾಗಿದೆ ಮತ್ತು ಅವರೊಂದಿಗೆ ಯಾರು ಇದ್ದರು ಎಂಬುದನ್ನು ಬಹಿರಂಗಪಡಿಸುವಂತೆ ರಾಹುಲ್ ಅವರನ್ನು ಕೇಳಿದ್ದಾರೆ.

"ರಾಹುಲ್ ಜಿ, ಈ ಫೋಟೋ ಎಲ್ಲಿ ತೆಗೆದಿದ್ದು, ಯಾವಾಗ ತೆಗೆದಿದ್ದು, ಮತ್ತು ಈ ಫೋಟೋದಲ್ಲಿ ನಿಮ್ಮ ಜೊತೆ ಇರುವವರು ಯಾರು? ತಿಳಿಯಲು ನನಗೆ ಕುತೂಹಲವಿದೆ!" ಎಂದು ಸಿಂಗ್ ಟ್ವೀಟ್ ಮಾಡಿದ್ದಾರೆ. ಸಚಿವರು ಹಂಚಿಕೊಂಡಿರುವ ಚಿತ್ರದಲ್ಲಿ ರಾಹುಲ್ ಗಾಂಧಿ ಮಹಿಳೆಯೊಬ್ಬರು ತಲೆಗೆ ಸ್ಕಾರ್ಫ್ ಮತ್ತು ಸನ್ ಗ್ಲಾಸ್ ಧರಿಸಿ ರಾಹುಲ್‌ ಗಾಂಧಿಯವರ ಪಕ್ಕದಲ್ಲಿ ಕುಳಿತುಕೊಂಡಿದ್ದಾರೆ. ಅವರ ಪಕ್ಕದಲ್ಲಿ 8-9 ವರ್ಷದ ಮಗುವಿದೆ.

ಕೇಂದ್ರ ಸಚಿವರ ಪೋಸ್ಟ್‌ಗೆ ತಿರುಗೇಟು ನೀಡಿದ ಕಾಂಗ್ರೆಸ್‌, ಚಿತ್ರದಲ್ಲಿ ಕಾಣುವ ಮಹಿಳೆ ಮತ್ತು ಮಗು ರಾಹುಲ್ ಸ್ನೇಹಿತನ ಪತ್ನಿ ಮತ್ತು ಮಗ ಎಂದು ಸ್ವಷ್ಟಪಡಿಸಿದೆ. ಸಿಂಗ್ ಅವರನ್ನು "ಕಾಮುಕ" ವ್ಯಕ್ತಿ ಎಂದು ಕರೆದ ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾಟೆ, "ಚಿತ್ರದಲ್ಲಿರುವ ಜನರು ರಾಹುಲ್ ಅವರ ಸ್ನೇಹಿತನ ಪತ್ನಿ ಮತ್ತು ಮಗು. ಅವರು ಕುಟುಂಬ ರಜೆಯಲ್ಲಿ ಒಟ್ಟಿಗೆ ಇದ್ದರು. ಆ ಸ್ನೇಹಿತ ಫೋಟೋದಲ್ಲಿ ಇಲ್ಲ" ಎಂದು ಟ್ವೀಟ್‌ ಮಾಡಿದ್ದಾರೆ.

ʼʼಅತ್ಯಾಚಾರಿಗಳಿಗೆ ಬೆಂಬಲ ನೀಡಿದವರಿಗೆ ಶಿಕ್ಷಣ ಸಚಿವ ಪಟ್ಟʼʼ: ಪ್ರಲ್ಹಾದ ಜೋಶಿ ವಿರುದ್ಧ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ವಿವಾದಾತ್ಮಕ ಹೇಳಿಕೆ

ಭಾರತೀಯ ಸಾಗರೋತ್ತರ ಕಾಂಗ್ರೆಸ್ (ಐಒಸಿ) ನ ಸಾಮಾಜಿಕ ಮಾಧ್ಯಮ ಉಸ್ತುವಾರಿ ಅವಿ ದಾಂಡಿಯಾ ಫೋಟೋ ಕುರಿತು ಮಾಹಿತಿ ನೀಡಿ, "ಈ ಛಾಯಾಚಿತ್ರವನ್ನು ಟೆಕ್ಸಾಸ್‌ನ ಲೇಕ್ ರೇ ರಾಬರ್ಟ್ಸ್‌ನಲ್ಲಿ ತೆಗೆದುಕೊಳ್ಳಲಾಗಿದೆ... ಗಿರಿರಾಜ್ ಸಿಂಗ್, ಇದು ನಿಜವೋ ಅಲ್ಲವೋ ಎಂಬುದನ್ನು ನೀವೇ ಕಂಡುಹಿಡಿಯಬಹುದು" ಎಂದು ಕಾಲೆಳೆದಿದ್ದಾರೆ.

Vishakha Bhat Heggar

View all posts by this author