ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆಗೆ ಶಾಯಿ ಎರಚಿದ ಮಹಿಳೆ ಬರ್ಖಾ ಟ್ರೆಹಾನ್ ಯಾರು? ಕೃತ್ಯದ ಹಿಂದಿದೆ ಧಾರ್ಮಿಕ ಕಾರಣ

Abhijeet Dipke: ಪ್ರತಿಭಟನಾಕಾರರನ್ನು ಉದ್ದೇಶಿಸಿ ಅಭಿಜಿತ್ ದೀಪ್ಕೆ ಮಾತನಾಡುತ್ತಿದ್ದಂತೆ ಮಹಿಳೆಯೊಬ್ಬರು ನಿಧಾನವಾಗಿ ವೇದಿಕೆಯ ಕಡೆಗೆ ಸಾಗಿ, ಹತ್ತಿರದಿಂದ ಅವರ ಮೇಲೆ ಶಾಯಿ ಎರಚಿದ್ದರು. ಸದ್ಯ ಆ ಮಹಿಳೆಯನ್ನು 32 ವರ್ಷದ ಬರ್ಖಾ ಟ್ರೆಹಾನ್ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಸಿಜೆಪಿ ಬೆಂಬಲಿಗರು ಆಕೆಯನ್ನು ವೇದಿಕೆಯಿಂದ ದೂರ ಎಳೆದು, ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.

ಅಭಿಜೀತ್ ದೀಪ್ಕೆ (ಎಡ), ಬರ್ಖಾ ಟ್ರೆಹಾನ್ (ಬಲ)

ನವದೆಹಲಿ, ಜು. 19: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜಿತ್ ದೀಪ್ಕೆ (Abhijeet Dipke) ಅವರ ಮೇಲೆ ಮಹಿಳೆಯೊಬ್ಬರು ಶಾಯಿ ಎರಚಿದ ಘಟನೆ ಭಾರಿ ಸಂಚಲನ ಮೂಡಿಸಿದೆ. ದೀಪ್ಕೆ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಈ ಘಟನೆ ನಡೆದಿತ್ತು. ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ (Sonam Vangchuk) ಅವರನ್ನು ದೆಹಲಿ ಪೊಲೀಸರು ಬಲವಂತದಿಂದ ಕರೆದುಕೊಂಡು ಹೋಗಿದ್ದಾರೆ ಎಂದು ದೀಪ್ಕೆ ಆರೋಪಿಸಿದ್ದರು. ಅವರ ಕ್ರಮಗಳು ಸಮರ್ಥನೀಯವಾಗಿದ್ದರೆ ಅಧಿಕಾರಿಗಳು ಸಮವಸ್ತ್ರದಲ್ಲಿ ಏಕೆ ಬಂದಿಲ್ಲ ಎಂದು ಪ್ರಶ್ನಿಸಿದ್ದರು. ಈ ವೇಳೆ ಅವರ ಮೇಲೆ ಶಾಯಿ ಎರಚಲಾಯಿತು.

ದೀಪ್ಕೆ ಮಾತನಾಡುತ್ತಿದ್ದಂತೆ ಮಹಿಳೆಯೊಬ್ಬರು ನಿಧಾನವಾಗಿ ವೇದಿಕೆಯ ಕಡೆಗೆ ಸಾಗಿ, ಹತ್ತಿರದಿಂದ ಅವರ ಮೇಲೆ ಶಾಯಿ ಎರಚಿದ್ದರು. ಆ ಮಹಿಳೆಯನ್ನು 32 ವರ್ಷದ ಬರ್ಖಾ ಟ್ರೆಹಾನ್ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಸಿಜೆಪಿ ಬೆಂಬಲಿಗರು ಆಕೆಯನ್ನು ವೇದಿಕೆಯಿಂದ ದೂರ ಎಳೆದು, ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.

ಘಟನೆಯ ನಂತರ, ಟ್ರೆಹಾನ್ ತನ್ನ ಕ್ರಮಗಳನ್ನು ಸಮರ್ಥಿಸಿಕೊಂಡರು. ಅವರು ಶಾಂತಿಯುತ ಪ್ರತಿಭಟನೆಗಳನ್ನು ವಿರೋಧಿಸುವುದಿಲ್ಲ ಮತ್ತು ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧಹೊಂದಿಲ್ಲ ಎಂದು ಹೇಳಿದ್ದಾರೆ. ಸಿಜೆಪಿ ಆಯೋಜಿಸಿದ್ದ ಸಭೆಯು ನೀಟ್ ಕುರಿತಾಗಿಲ್ಲ, ಬದಲಿಗೆ ರಾಜಕೀಯ ಪ್ರೇರಿತ ಎನ್ನುವುದು ಅವರ ಆರೋಪ.

ಅಭಿಜಿತ್ ದೀಪ್ಕೆ ಮೈಮೇಲೆ ಮೇಲೆ ಶಾಯಿ ಎರಚಿದ ಮಹಿಳೆ

ದೀಪ್ಕೆ ಮತ್ತು ಅವರ ಸಹಚರರು ರಾಮ ಮತ್ತು ಸೀತಾ ದೇವಿಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಟ್ರೆಹಾನ್ ಆರೋಪಿಸಿದ್ದಾರೆ. ಆ ಹೇಳಿಕೆಗಳ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಲು ಶಾಯಿ ಎರಚಿದ್ದಾಗಿ ಅವರು ಹೇಳಿದ್ದಾರೆ. ಹಿಂದೂ ದೇವತೆಗಳನ್ನು ಅವಮಾನಿಸುವುದನ್ನು ಸಹಿಸಲಾಗದ ಕಾರಣ ತಾನು ಹಾಗೆ ಮಾಡಿರುವುದಾಗಿ ಕಾರಣ ನೀಡಿದ್ದಾರೆ.

ಘಟನೆಯ ನಂತರ ಸಿಜೆಪಿ ಬೆಂಬಲಿಗರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಟ್ರೆಹಾನ್ ದೂರಿದ್ದಾರೆ. ತನ್ನ ಮೇಲೆ ಹಲ್ಲೆ ನಡೆಸಿ ಕೂದಲು ಎಳೆದಿದ್ದಾರೆ ಎಂದು ಹೇಳಿದ್ದಾರೆ. ಸೋನಮ್ ವಾಂಗ್ಚುಕ್ ಅವರನ್ನು ಸಂಘಟಕರು ಬಳಸಿಕೊಳ್ಳುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಸ್ಥಳದಿಂದ ಹೊರಗೆ ಕರೆದೊಯ್ಯುವಾಗ ಟ್ರೆಹಾನ್ ಜೈ ಶ್ರೀ ರಾಮ್ ಎಂದು ಘೋಷಣೆ ಕೂಗಿದ್ದರು. ಆಗಾಗ ಅವರು ಕಾಕ್ರೋಚ್ ಜನತಾ ಪಾರ್ಟಿಯನ್ನು ಟೀಕಿಸಿ ಎಕ್ಸ್‌ನಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ.

ಕಾಕ್ರೋಚ್ ಜನತಾ ಪಾರ್ಟಿ ಸ್ಥಾಪಕನ ಮೇಲೆ ಜೈಪುರದಲ್ಲಿ ಹಲ್ಲೆ

ಬರ್ಖಾ ಟ್ರೆಹಾನ್ ಯಾರು?

ಬರ್ಖಾ ಟ್ರೆಹಾನ್ ಒಬ್ಬ ಸಾಮಾಜಿಕ ಕಾರ್ಯಕರ್ತೆ, ಪುರುಷ ಆಯೋಗದ ಅಧ್ಯಕ್ಷೆ ಎಂದೇ ಪ್ರಸಿದ್ಧ. ಇದು ಪುರುಷರ ಹಕ್ಕುಗಳನ್ನು ಪ್ರಚಾರ ಮಾಡುವ ಮತ್ತು ಲಿಂಗಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಕಾನೂನು ಸುಧಾರಣೆಗಳನ್ನು ಪ್ರತಿಪಾದಿಸುವ ಸಂಸ್ಥೆ.

ವರದಕ್ಷಿಣೆ, ಕೌಟುಂಬಿಕ ಹಿಂಸೆ ಮತ್ತು ವೈವಾಹಿಕ ವಿವಾದಗಳಿಗೆ ಸಂಬಂಧಿಸಿದ ಕಾನೂನುಗಳ ದುರುಪಯೋಗದ ಬಗ್ಗೆ ಅವರು ನಿರಂತರವಾಗಿ ಕಳವಳ ವ್ಯಕ್ತಪಡಿಸುತ್ತಾರೆ. ಭಾರತದಲ್ಲಿ ಶಾಸನಬದ್ಧ ಪುರುಷ ಆಯೋಗವನ್ನು ಸ್ಥಾಪಿಸಲು ಅವರು ಕರೆ ನೀಡಿದ್ದಾರೆ ಮತ್ತು ಲಿಂಗ-ತಟಸ್ಥ ಕಾನೂನನ್ನು ಪ್ರತಿಪಾದಿಸಿದ್ದಾರೆ. ಪುರುಷರು ಮತ್ತು ಮಹಿಳೆಯರಿಬ್ಬರಿಗೂ ಸಮಾನಾಗಿ ನ್ಯಾಯ ಸಿಗಬೇಕು ಎಂಬುದು ಅವರ ವಾದ.

ಟ್ರೆಹಾನ್ ಹಲವು ವರ್ಷಗಳಿಂದ ಸಾಕಷ್ಟು ವಿವಾದಗಳಲ್ಲಿ ಸಿಲುಕಿದ್ದಾರೆ. ಉನ್ನಾವ್ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾಗುವ ಮೊದಲು ಬಿಜೆಪಿ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಅವರ ವಿರುದ್ಧದ ಪ್ರಕರಣದಲ್ಲಿ ನ್ಯಾಯಯುತ ಪ್ರಕ್ರಿಯೆಯನ್ನು ಸಾರ್ವಜನಿಕವಾಗಿ ಬೆಂಬಲಿಸಿದ್ದಕ್ಕಾಗಿ ಅವರು ಈ ಹಿಂದೆ ಟೀಕೆಗೆ ಗುರಿಯಾಗಿದ್ದರು.