ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Delhi Blast: ಓದಿದ್ದು MBBS ಆದದ್ದು ಭಯೋತ್ಪಾದಕ; ಆತ್ಮಾಹುತಿ ಬಾಂಬರ್‌ ಡಾ. ಉಮರ್‌ನ ಹಿಸ್ಟರಿ ಕೇಳಿದ್ರೆ ರಕ್ತ ಕುದಿಯುತ್ತೆ

Terrorist Umar: ದೆಹಲಿಯ ಕೆಂಪು ಕೋಟೆ ಬಳಿ ಸ್ಫೋಟ ಸಂಭವಿಸಿದ್ದು, ಇದನ್ನು ಆತ್ಮಹುತಿ ಬಾಂಬ್‌ ದಾಳಿ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಕಾರಿನಲ್ಲಿದ್ದ ಚಾಲಕ ಉಗ್ರ ಡಾ. ಉಮರ್‌ ಎಂದು ಗುರುತಿಸಲಾಗಿದ್ದು, ಹುಂಡೈ i20 ಕಾರಿನಲ್ಲಿ ಅಮೋನಿಯಂ ನೈಟ್ರೇಟ್‌ ಉಪಯೋಗಿಸಿ ಸ್ಫೋಟ ಮಾಡಲಾಗಿದೆ.

ಸ್ಫೋಟವಾದ ಕಾರಿನಲ್ಲಿದ್ದ ಶಂಕಿತ ಉಗ್ರ ಡಾ. ಉಮರ್‌ ನಬಿ (ಸಂಗ್ರಹ ಚಿತ್ರ)

ನವದೆಹಲಿ: ದೆಹಲಿಯ (Delhi Blast) ಕೆಂಪು ಕೋಟೆ ಬಳಿ ಸ್ಫೋಟ ಸಂಭವಿಸಿದ್ದು, ಇದನ್ನು ಆತ್ಮಹುತಿ ಬಾಂಬ್‌ ದಾಳಿ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಕಾರಿನಲ್ಲಿದ್ದ ಚಾಲಕ ಉಗ್ರ ಡಾ. ಉಮರ್‌ ( Dr Umar Nabi) ಎಂದು ಗುರುತಿಸಲಾಗಿದ್ದು, ಹುಂಡೈ i20 ಕಾರಿನಲ್ಲಿ ಅಮೋನಿಯಂ ನೈಟ್ರೇಟ್‌ ಉಪಯೋಗಿಸಿ ಸ್ಫೋಟ ಮಾಡಲಾಗಿದೆ. ಘಟನೆಯಲ್ಲಿ ಎಂಟು ಜನ ಸಾವನ್ನಪ್ಪಿದ್ದಾರೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ತಳ ಮಟ್ಟದಿಂದ ತನಿಖೆ ನಡೆಯುತ್ತಿದ್ದು, ನೂರಕ್ಕೂ ಅಧಿಕ ಜನರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಆತ್ಮಾಹುತಿ ಬಾಂಬರ್‌ ಡಾ. ಉಮರ್‌ ಕುಟುಂಬಸ್ಥರನ್ನು ಇದೀಗ ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.

ಯಾರು ಈ ಉಮರ್ ಯು ನಬಿ?

ಡಾ. ಉಮರ್‌ ಘ್ ನಬಿ ಭಟ್ ಎಂಬಾತನ ಪುತ್ರನಾಗಿದ್ದು, ಫೆಬ್ರವರಿ 24, 1989 ರಂದು ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಜನಿಸಿದ. ಫರಿದಾಬಾದ್‌ನ ಅಲ್-ಫಲಾಹ್ ವೈದ್ಯಕೀಯ ಕಾಲೇಜಿನಲ್ಲಿ ಈತ ಸೇವೆ ಸಲ್ಲಿಸುತ್ತಿದ್ದ. ಮತ್ತೊಬ್ಬ ಉಗ್ರ ಡಾ. ಅದೀಲ್‌ನ ಜೊತೆಗೆ ಈತ ಸಂಪರ್ಕ ಹೊಂದಿದ್ದು, ಟೆಲಿಗ್ರಾಮನ್‌ನಲ್ಲಿ ನಡೆಸಿದ ಚಾಟ್‌ಗಳು ಇದೀಗ ತನಿಖಾಧಿಕಾರಿಗಳಿಗೆ ಲಭ್ಯವಾಗಿದೆ. ಉಮರ್ ಶ್ರೀನಗರದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಎಂಡಿ ವೈದ್ಯಕೀಯ ಪದವಿ ಪಡೆದಿದ್ದ. ಅಲ್ಲಿಂದಲೇ ಈತ ಉಗ್ರರ ಜೊತೆಗೆ ಸಂಪರ್ಕದಲ್ಲಿದ್ದ ಎಂದು ಹೇಳಲಾಗುತ್ತಿದೆ.

ಪೊಲೀಸ್ ಮೂಲಗಳು ತಿಳಿಸಿರುವ ಪ್ರಕಾರ ಫರಿದಾಬಾದ್‌ನಿಂದ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಸಂಘಟನೆಯೊಂದಿಗೆ ಈತ ಸಂಪರ್ಕದಲ್ಲಿದ್ದ. ಫರಿದಾಬಾದ್‌ ಕಾರ್ಯಾಚರಣೆಯ ಬಳಿಕ ಈ ತಲೆಮರೆಸಿಕೊಂಡಿದ್ದ. ನವೆಂಬರ್‌ 10 ರಂದು ಫರೀದಾಬಾದ್​ನಲ್ಲಿ 300 ಕೆಜಿ ಆರ್ಡಿಎಕ್ಸ್​, ಎಕೆ-47 ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದರು. ವಿಚಾರಣೆಯ ಸಮಯದಲ್ಲಿ ಡಾ. ಆದಿಲ್ ಅಹ್ಮದ್ ರಾಥರ್‌ನನ್ನು ಬಂಧಿಸಲಾಗಿತ್ತು. ಡಾ. ಉಮರ್‌ ಘ್ ನಬಿ ಭಟ್ ತಪ್ಪಿಸಿಕೊಂಡಿದ್ದ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ: Delhi Blast: ದೆಹಲಿಯಲ್ಲಿ ಸ್ಫೋಟಿಸಿದ ಕಾರಿಗೆ ಕಾಶ್ಮೀರದ ಪುಲ್ವಾಮಾ ನಂಟು ಪತ್ತೆ!

ಫರಿದಾಬಾದ್‌ನಿಂದ ಉಮರ್‌ ದೆಹಲಿಗೆ ಬಂದಿದ್ದ ಎನ್ನಲಾಗಿದ್ದು, ಸ್ಫೋಟಗೊಂಡ ಕಾರಿನಲ್ಲಿದ್ದ ಆತನ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹುಂಡೈ ಐ20 ವಾಹನವು ಬೆಳಿಗ್ಗೆ 8 ಗಂಟೆ ಸುಮಾರಿಗೆ ಬದರ್ಪುರ್ ಗಡಿಯಿಂದ ದೆಹಲಿಗೆ ಪ್ರವೇಶಿಸುತ್ತಿರುವುದು ಕಂಡುಬಂದಿದೆ. ಸಿಸಿಟಿವಿ ದೃಶ್ಯಾವಳಿಗಳು ಬದರ್ಪುರ್ ಗಡಿಯಿಂದ ಗೋಲ್ಡನ್ ಮಸೀದಿ ಬಳಿಯ ಕೆಂಪು ಕೋಟೆ ಪಾರ್ಕಿಂಗ್ ಸ್ಥಳದವರೆಗೆ ಕಾರಿನ ಚಲನೆಯನ್ನು ಪತ್ತೆಹಚ್ಚಿವೆ. ಕಾರು ಮಧ್ಯಾಹ್ನ 3:19 ರ ಸುಮಾರಿಗೆ ಆ ಪ್ರದೇಶವನ್ನು ಪ್ರವೇಶಿಸಿತು ಮತ್ತು ಸಂಜೆ 6:22 ಕ್ಕೆ ಹೊರಟಿದೆ. ಅದಾದ ಕೆಲವೇ ಸಮಯದ ಬಳಿಕ ಕಾರು ಸ್ಫೋಟಗೊಂಡಿದೆ.

ಸ್ಫೋಟದ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳು ಡಾ. ಉಮರ್‌ನ ತಾಯಿ ಹಾಗೂ ಸಹೋದರನನ್ನು ಬಂಧಿಸಿದ್ದು, ವಿಚಾರಣೆ ನಡೆಯುತ್ತಿದೆ. ಪುಲ್ವಾಮಾ ಸೇರಿದಂತೆ ಜಮ್ಮು ಕಾಶ್ಮೀರದ ಹಲವು ಕಡೆ ದಾಳಿ ನಡೆಸಲಾಗುತ್ತಿದೆ. ಇನ್ನು ಸ್ಫೋಟದ ಸ್ಥಳದಲ್ಲಿ ಮೃತರ ದೇಹಗಳು ದೊರೆತಿದ್ದು, ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ. ಸ್ಫೋಟದ ಸ್ಥಳದಲ್ಲಿ ಅಮೋನಿಯಂ ನೈಟ್ರೇಟ್ ಕುರುಹುಗಳು ಕಂಡುಬಂದಿದ್ದು, ಇದು ಆತ್ಮಾಹುತಿ ಬಾಂಬ್‌ ದಾಳಿ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.