ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಪುಣೆಯ ಬಾರಾಮತಿಗೆ ಹೊರಟಿದ್ದೇಕೆ? ಹುಟ್ಟೂರಲ್ಲೇ ಅಂತ್ಯ ಕಂಡ ನಾಯಕ

Ajit Pawar Plane Crash: ಮಹಾರಾಷ್ಟ್ರ ರಾಜಕೀಯ ವಲಯವನ್ನು ಬೆಚ್ಚಿಬೀಳಿಸಿದ ದುರ್ಘಟನೆಯಲ್ಲಿ, ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ಪುಣೆಯ ಬಾರಾಮತಿಗೆ ತೆರಳುತ್ತಿದ್ದ ವೇಳೆ ಚಾರ್ಟರ್ಡ್ ವಿಮಾನ ಅಪಘಾತಕ್ಕೀಡಾಗಿ ದುರ್ಮರಣಕ್ಕೀಡಾಗಿದ್ದಾರೆ. ಚುನಾವಣಾ ರ್ಯಾಲಿಗಳಿಗಾಗಿ ತವರು ಕ್ಷೇತ್ರಕ್ಕೆ ಹೊರಟಿದ್ದ ಪವಾರ್ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಅಜಿತ್ ಪವಾರ್ ಪುಣೆಯ ಬಾರಾಮತಿಗೆ ಹೋಗಿದ್ದೇಕೆ?

ಪುಣೆ: ಮಹಾರಾಷ್ಟ್ರದ ಬಾರಾಮತಿಯಲ್ಲಿ ಬುಧವಾರ (ಜನವರಿ 28) ಬೆಳಗ್ಗೆ ಚಾರ್ಟರ್ಡ್ ವಿಮಾನ ಅಪಘಾತಕ್ಕೀಡಾಗಿ ಉಪಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar Plane Crash) ದುರ್ಮರಣಕ್ಕೀಡಾದರು. ಎನ್‌ಸಿಪಿ ನಾಯಕನ ಜೊತೆಗೆ ವಿಮಾನದಲ್ಲಿದ್ದ ಇತರ ನಾಲ್ವರು ಕೂಡ ಮೃತಪಟ್ಟಿದ್ದಾರೆ. ಮಹಾಯುತಿ ಮೈತ್ರಿಕೂಟವು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ ಬಳಿಕ ಉಪಮುಖ್ಯಮಂತ್ರಿ ಆಗಿದ್ದ ಪವಾರ್ ಅವರು ಇಂದು ಬೆಳಗ್ಗೆ 8 ಗಂಟೆಗೆ ಮುಂಬೈನಿಂದ ಹೊರಟರು (Plane Crash in Maharashtra).

ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರು ತಮ್ಮ ತವರು ಕ್ಷೇತ್ರ ಬಾರಾಮತಿಯಲ್ಲಿ ನಾಲ್ಕು ಚುನಾವಣಾ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಬೇಕಿತ್ತು. ಆದರೆ, ದುರಾದೃಷ್ಟವಶಾತ್ ವಿಮಾನವು ಬಾರಾಮತಿಯ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ನಿಯಂತ್ರಣ ಕಳೆದುಕೊಂಡು ಪತನಗೊಂಡಿತು.

Ajit Pawar: ಅಜಿತ್‌ ಪವಾರ್‌ ರಾಜಕೀಯ ಬೆನ್ನೆಲುಬು ಈಕೆ; ಪತ್ನಿ ಸುನೇತ್ರಾ ಪವಾರ್‌ ಬಗ್ಗೆ ನಿಮಗೆಷ್ಟು ಗೊತ್ತು?

ಡಿಜಿಸಿಎ (DGCA) ಮಾಹಿತಿ ಪ್ರಕಾರ, ಅಪಘಾತದಲ್ಲಿ ವಿಮಾನದಲ್ಲಿದ್ದ ಯಾರೂ ಬದುಕುಳಿಯಲಿಲ್ಲ. ವಿಮಾನವು ಬಾರಾಮತಿಯಲ್ಲಿ ಅಪಘಾತಕ್ಕೀಡಾಗಿದೆ. ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ವಿಮಾನದಲ್ಲಿದ್ದರು. ಅವರೊಂದಿಗೆ ಇನ್ನೂ ಇಬ್ಬರು ಸಿಬ್ಬಂದಿ (ಒಬ್ಬ ಪಿಎಸ್‌ಒ ಹಾಗೂ ಒಬ್ಬ ಅಟೆಂಡೆಂಟ್) ಮತ್ತು ಇಬ್ಬರು ವಿಮಾನ ಸಿಬ್ಬಂದಿ (ಪೈಲಟ್ ಇನ್ ಕಮಾಂಡ್–PIC ಹಾಗೂ ಫಸ್ಟ್ ಆಫೀಸರ್–FO) ಇದ್ದರು. ಪ್ರಾಥಮಿಕ ಮಾಹಿತಿಯ ಪ್ರಕಾರ, ವಿಮಾನದಲ್ಲಿದ್ದ ಯಾರೂ ಅಪಘಾತದಲ್ಲಿ ಬದುಕುಳಿದಿಲ್ಲ ಎಂದು ಡಿಜಿಸಿಎ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

ವಿಮಾನ ಲ್ಯಾಂಡಿಂಗ್ ಆಗಲು ಪ್ರಯತ್ನಿಸುತ್ತಿತ್ತು. ಈ ವೇಳೆ ವಿಮಾನ ರನ್‌ವೇ ಬದಿಯಿಂದ ಜಾರಿ ಅಪಘಾತಕ್ಕೀಡಾಯಿತು ಎಂದು ಬಾರಾಮತಿ ವಿಮಾನ ನಿಲ್ದಾಣದ ವ್ಯವಸ್ಥಾಪಕ ಶಿವಾಜಿ ತಾವರೆ ತಿಳಿಸಿದ್ದಾರೆ

ದುರದೃಷ್ಟ ಸಂಭವಿಸುವ ಮೊದಲು ನಿಗದಿತ ವೇಳಾಪಟ್ಟಿಯಂತೆ ನಡೆದ ಚುನಾವಣಾ ಸಭೆಗಳು

ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಎರಡೂ ಘಟಕಗಳು ಮುಂದಿನ ಜಿಲ್ಲಾ ಪರಿಷತ್–ಪಂಚಾಯತ್ ಸಮಿತಿ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದ ನಂತರವೇ ಅಜಿತ್ ಪವಾರ್ ಅವರ ಬಾರಾಮತಿ ಭೇಟಿ ಕೂಡ ಯೋಜಿಸಲಾಗಿತ್ತು.

ರಾಜಕೀಯ ಗುರುವಾಗಿದ್ದ ಚಿಕ್ಕಪ್ಪನ ವಿರುದ್ಧವೇ ಅಜಿತ್ ಪವಾರ್ ತಿರುಗಿ ಬಿದ್ದಿದ್ದು ಏಕೆ?

ಪುಣೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎನ್‌ಸಿಪಿಯ ಎರಡೂ ಘಟಕಗಳು ಭಾರಿ ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ ಈ ಘೋಷಣೆ ಹೊರಬಂದಿದೆ. ಈ ಚುನಾವಣೆಯಲ್ಲಿ ಬಿಜೆಪಿ ತಮ್ಮ ಸಾಂಪ್ರದಾಯಿಕ ಭದ್ರಕೋಟೆಯಲ್ಲಿ ಪವಾರ್ ಅವರನ್ನು ದಿಗ್ಭ್ರಮೆಗೊಳಿಸಿತು.

ಸುದ್ದಿಗಾರರೊಂದಿಗೆ ಮಾತನಾಡಿದ ಎನ್‌ಸಿಪಿ (ಎಸ್‌ಪಿ) ಮಹಾರಾಷ್ಟ್ರ ಘಟಕದ ಅಧ್ಯಕ್ಷ ಶಶಿಕಾಂತ್ ಶಿಂಧೆ, ಫೆಬ್ರವರಿ 5 ರಂದು ನಡೆಯಲಿರುವ ಜಿಲ್ಲಾ ಪರಿಷತ್ ಮತ್ತು ಪಂಚಾಯತ್ ಸಮಿತಿ ಚುನಾವಣೆಗೆ ಬಣಗಳು ಕೈಜೋಡಿಸಲು ನಿರ್ಧರಿಸಿವೆ ಎಂದು ಹೇಳಿದರು.