Viral News: ನಾನೂ ಆಕೆಗೆ ಮುತ್ತು ಕೊಡುತ್ತೇನಾ? ರಾಹುಲ್- ಪ್ರಿಯಾಂಕಾ ತೆಗಳುವ ಭರದಲ್ಲಿ ವಿವಾದ ಸೃಷ್ಟಿಸಿದ ಬಿಜೆಪಿ ನಾಯಕ
ಸದಾ ಒಂದಿಲ್ಲೊಂದು ವಿವಾದಗಳಿಂದ ಸುದ್ದಿಯಾಗುವ ಮಧ್ಯಪ್ರದೇಶದ ನಗರಾಭಿವೃದ್ಧಿ ಸಚಿವ ಕೈಲಾಶ್ ವಿಜಯವರ್ಗಿಯ ಅವರು ನೀಡಿದ ಹೇಳಿಕೆಗೆ ಮತ್ತೊಬ್ಬ ವಿವಾದಾತ್ಮಕ ಸಚಿವ ಬಹಿರಂಗವಾಗಿ ಬೆಂಬಲ ನೀಡಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ.

-

ಭೋಪಾಲ್: ಸದಾ ಒಂದಿಲ್ಲೊಂದು ವಿವಾದಗಳಿಂದ ಸುದ್ದಿಯಾಗುವ ಮಧ್ಯಪ್ರದೇಶದ ನಗರಾಭಿವೃದ್ಧಿ ಸಚಿವ ಕೈಲಾಶ್ ವಿಜಯವರ್ಗಿಯ ಅವರು (Viral News) ನೀಡಿದ ಹೇಳಿಕೆಗೆ ಮತ್ತೊಬ್ಬ ವಿವಾದಾತ್ಮಕ ಸಚಿವ ಬಹಿರಂಗವಾಗಿ ಬೆಂಬಲ ನೀಡಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಖಾಂಡ್ವಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಇದು ನಮ್ಮ ಸಂಸ್ಕೃತಿಯಲ್ಲ; ನಮ್ಮ ನಾಗರಿಕತೆ, ಪದ್ಧತಿಗಳು ಮತ್ತು ಸಂಪ್ರದಾಯಗಳು ಇದನ್ನು ಕಲಿಸುವುದಿಲ್ಲ. ಅವರು ಏನೇ ಕಲಿಸಿದರೂ, ಅದನ್ನು ನಿಮ್ಮ ಸ್ವಂತ ಮನೆಗಳಲ್ಲಿ ಆಚರಿಸಿ, ಸಾರ್ವಜನಿಕ ಸ್ಥಳಗಳಲ್ಲಿ ಅಲ್ಲ ಎಂದು ರಾಹುಲ್ ಪ್ರಿಯಾಂಕಾಗೆ ಮುತ್ತಿಟ್ಟಿದ್ದರ ಕುರಿತು ಟೀಕಿಸಿದರು.
ಒಡಹುಟ್ಟಿದವರ ನಡುವಿನ ಪ್ರೀತಿಯ ಸಾರ್ವಜನಿಕ ಪ್ರದರ್ಶನಗಳ ಬಗ್ಗೆ ಟೀಕಿಸಿದವರ ಅವರು, ಸಹ ಶಾಸಕ ಕಾಂಚನ್ ತನ್ವೆ ಅವರನ್ನು ತೋರಿಸುತ್ತಾ, ಅವರು ನನ್ನ ನಿಜವಾದ ಸಹೋದರಿ, ಹಾಗಾಗಿ ನಾನು ಅವರನ್ನು ಸಾರ್ವಜನಿಕವಾಗಿ ಚುಂಬಿಸುತ್ತೇನೆಯೇ? ಭಾರತೀಯ ಸಂಸ್ಕೃತಿ ಮತ್ತು ನಾಗರಿಕತೆ ಇದನ್ನು ಕಲಿಸುವುದಿಲ್ಲ ಎಂದು ಹೇಳಿದರು. ಶಾ ಆಕ್ರೋಶಕ್ಕೆ ಕಾರಣರಾಗಿರುವುದು ಇದೇ ಮೊದಲಲ್ಲ. ಮೇ 13, 2025 ರಂದು, ಆಪರೇಷನ್ ಸಿಂದೂರ್ ನಂತರ, ಅವರು ಕರ್ನಲ್ ಸೋಫಿಯಾ ಖುರೇಷಿ ಬಗ್ಗೆ ತೀವ್ರ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ನಂತರ ಅವರು ತಮ್ಮ ಮಾತನ್ನು ಹಿಂತೆಗೆದುಕೊಂಡರು, ಕ್ಷಮೆಯಾಚಿಸಿದರು ಮತ್ತು "ನಾನು ದೇವರಲ್ಲ, ನಾನು ಮನುಷ್ಯ, ಮತ್ತು ಯಾರ ಭಾವನೆಗಳಿಗೆ ನೋವಾಗಿದ್ದರೆ, ನಾನು ಹತ್ತು ಬಾರಿ ಕ್ಷಮೆಯಾಚಿಸುತ್ತೇನೆ" ಎಂದು ಹೇಳಿದ್ದರು. ಕಾಂಗ್ರೆಸ್ ರಾಜ್ಯಾದ್ಯಂತ ಪ್ರತಿಭಟನೆಗಳನ್ನು ಆರಂಭಿಸಿದ್ದು, ವಿಜಯವರ್ಗೀಯ ಅವರ ಪ್ರತಿಕೃತಿಗಳನ್ನು ಸುಟ್ಟುಹಾಕಿದೆ ಮತ್ತು ಶಾ ಅವರನ್ನು ಸಮರ್ಥಿಸಿಕೊಂಡಿದ್ದಕ್ಕಾಗಿ ಅವರನ್ನು ತರಾಟೆಗೆ ತೆಗೆದುಕೊಂಡಿದೆ. ಕಾಂಗ್ರೆಸ್ ವಕ್ತಾರ ಕೆ.ಕೆ. ಮಿಶ್ರಾ, "ನಿಂದನಾತ್ಮಕ ಮತ್ತು ಅವಹೇಳನಕಾರಿ ಭಾಷೆಯನ್ನು ಬಳಸುವ ಬಿಜೆಪಿ ಸಚಿವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ದುರದೃಷ್ಟಕರ" ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ: Vyomika Singh: ಸೋಫಿಯಾ ಖುರೇಷಿ ಆಯ್ತು...ಈಗ ವ್ಯೋಮಿಕಾ ಸಿಂಗ್ ಬಗ್ಗೆ ವಿವಾದಾತ್ಮಕ ಹೇಳಿಕೆ- ಸಮಾಜವಾದಿ ನಾಯಕ ಹೇಳಿದ್ದೇನು?
ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಜಿತು ಪಟ್ವಾರಿ ಅವರು, ವಿಜಯವರ್ಗೀಯ ಅವರ ಹೇಳಿಕೆಗಳನ್ನು "ಅಸಹ್ಯಕರ" ಮತ್ತು "ಭಾರತದ ಸಂಸ್ಕೃತಿ, ಸಂಪ್ರದಾಯ ಮತ್ತು ಪವಿತ್ರ ಸಹೋದರ-ಸಹೋದರಿಯರ ಸಂಬಂಧಕ್ಕೆ ನೇರ ಸವಾಲು" ಎಂದು ಕರೆದರು. 70 ನೇ ವಯಸ್ಸಿನಲ್ಲಿ ಅವರು ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ, ನಮ್ಮ ಸಂಸ್ಕೃತಿ ಮತ್ತು ಮಹಿಳೆಯರನ್ನು ಅವಮಾನಿಸುತ್ತಿದ್ದಾರೆ ಎಂದು ಅವರು ಕಿಡಿ ಕಾರಿದರು.