ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಲವ್ವರ್‌ ಜೊತೆ ಸರಸವಾಡ್ತಿದ್ದ ವೇಳೆ ಪತಿ ಕೈಗೆ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದ ಪತ್ನಿ; ಆಮೇಲೆ ಆಗಿದ್ದೇನು ಗೊತ್ತಾ? ವಿಡಿಯೊ ನೋಡಿ

Man Catches Wife: ಹೋಟೆಲ್‌ನಲ್ಲಿ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಇನ್ನೊಬ್ಬ ವ್ಯಕ್ತಿಯೊಂದಿಗಿರುವ ದೃಶ್ಯವನ್ನು ಸೆರೆಹಿಡಿದ ನಂತರ ಪರಸ್ಪರ ತೀವ್ರ ಜಗಳ ನಡೆದಿದೆ. ಹರಿಯಾಣದ ಜಿಂದ್‌ನಲ್ಲಿ ನಡೆದ ಆಘಾತಕಾರಿ ಘಟನೆ ಇದೀಗ ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ. ಈ ದೃಶ್ಯದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಲವ್ವರ್‌ ಜೊತೆ ಪತಿ ಕೈಗೆ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದ ಪತ್ನಿ

-

Priyanka P Priyanka P Sep 27, 2025 2:27 PM

ಗುರುಗ್ರಾಮ: ಹರಿಯಾಣದ ಜಿಂದ್‌ನಲ್ಲಿ ನಡೆದ ಆಘಾತಕಾರಿ ಘಟನೆಯೊಂದು ಇದೀಗ ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ. ಹೋಟೆಲ್‌ನಲ್ಲಿ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಇನ್ನೊಬ್ಬ ವ್ಯಕ್ತಿಯೊಂದಿಗಿರುವ ದೃಶ್ಯವನ್ನು ಸೆರೆಹಿಡಿದ ನಂತರ ಈ ಘಟನೆ ನಡೆದಿದೆ. ಈ ವೇಳೆ ಪರಸ್ಪರ ತೀವ್ರ ಜಗಳ ನಡೆದಿದೆ. ಈ ದೃಶ್ಯದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್(Viral Video) ಆಗುತ್ತಿದ್ದಂತೆ, ಅನೇಕರು ಈ ವಿಡಿಯೊಗೆ ಪ್ರತಿಕ್ರಿಯಿಸಿದ್ದಾರೆ.

ರಾಕೇಶ್ ಎಂದು ಗುರುತಿಸಲ್ಪಟ್ಟ ಪತಿಯು ಕೆಲವು ಸಮಯದಿಂದ ವೈಯಕ್ತಿಕ ಸಮಸ್ಯೆಗಳಿಂದ ಒದ್ದಾಟುತ್ತಿದ್ದರು ಎಂದು ಹೇಳಿದ್ದಾರೆ. ತನ್ನ ಪತ್ನಿ ವಿಶ್ವಾಸದ್ರೋಹ ಎಸಗಿದ್ದಾಳೆ ಎಂದು ಆರೋಪಿಸಿದ ಅವರು, ತಾನು ಪ್ರತಿಭಟಿಸಿದಾಗ ಸುಳ್ಳು ಪ್ರಕರಣಗಳಲ್ಲಿ ತನ್ನನ್ನು ಸಿಲುಕಿಸಲು ಪ್ರಯತ್ನಿಸಲಾಯಿತು ಎಂದು ಆರೋಪಿಸಿದ್ದಾರೆ. ದಂಪತಿಗಳು ಈಗಾಗಲೇ ಕೌಟುಂಬಿಕ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಅವರಿಗೆ ಮೂರು ವರ್ಷದ ಹೆಣ್ಣು ಮಗು ಇದ್ದು, ಮಗಳು ಪತ್ನಿಯೊಂದಿಗೆ ಇದ್ದಾಳೆ.

ಸುಮಾರು ಎರಡು ನಿಮಿಷಗಳ ಈ ವಿಡಿಯೊದಲ್ಲಿ, ರಾಕೇಶ್ ಹೋಟೆಲ್ ಕಡೆಗೆ ಹೋಗುವಾಗ ದುಃಖಿತನಾಗಿ ಕಾಣುತ್ತಿರುವುದು ಕಂಡುಬರುತ್ತದೆ. ತನ್ನ ಫೋನ್ ಅನ್ನು ವ್ಯಕ್ತಿಯೊಬ್ಬನಿಗೆ ಕೊಟ್ಟು, ನನ್ನ ಜೀವನ ಹಾಳಾಗಿದೆ ಎಂದು ಹೇಳುತ್ತಾ ಸಾಗಿದ್ದಾನೆ. ನಂತರ ಸ್ವಾಗತ ಕೋಣೆಯಲ್ಲಿ (Reception room) ಕೊಠಡಿ ಸಂಖ್ಯೆಯನ್ನು ಕೇಳುತ್ತಾನೆ. ಪಕ್ಕದಲ್ಲಿ ಹಲವಾರು ಜನರಿದ್ದರೂ, ಅವನು ಕೋಣೆಗೆ ಧಾವಿಸಿ ಬಾಗಿಲು ಬಡಿಯಲು ಪ್ರಾರಂಭಿಸಿದ್ದಾನೆ.

ವಿಡಿಯೊ ವೀಕ್ಷಿಸಿ:



ಪದೇ ಪದೆ ಬಾಗಿಲು ತಟ್ಟಿದ ನಂತರ, ಬಾಗಿಲನ್ನು ತೆರೆಯಲಾಗುತ್ತದೆ. ಅವನ ಹೆಂಡತಿ ಒಳಗೆ ಇನ್ನೊಬ್ಬ ಪುರುಷನೊಂದಿಗೆ ಇರುವುದು ಕಂಡುಬಂದಿದೆ. ರಾಕೇಶ್ ಕೋಪದಿಂದ ಲೈಟ್ ಆನ್ ಮಾಡಬೇಕೆಂದು ಹೇಳಿದ್ದಾನೆ. ಮತ್ತೊಬ್ಬನೊಂದಿಗೆ ಇರುವ ಪತ್ನಿಯನ್ನು ನೋಡುತ್ತಿರುವಂತೆ ಅವನು ಜೋರಾಗಿ ಕೂಗಿದ್ದಾನೆ. ಒಂದು ಹಂತದಲ್ಲಿ, ಅವನ ಹೆಂಡತಿ ಕೈ ಎತ್ತಲು ಪ್ರಯತ್ನಿಸಿದ್ದಾಳೆ. ಆದರೆ ಅವನು ಅವಳನ್ನು ಹಿಂದಕ್ಕೆ ತಳ್ಳಿ, ಪೊಲೀಸರನ್ನು ಕರೆಯಬೇಕು ಎಂದು ಕೂಗಿದ್ದಾನೆ. ಅವಳ ಪ್ರಿಯಕರ ಎಂದು ಹೇಳಲಾದ ವ್ಯಕ್ತಿ ತನ್ನ ಬೂಟುಗಳನ್ನು ಆತುರದಿಂದ ಹಾಕಿಕೊಳ್ಳುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದು.

ಮಾನಸಿಕ ಯಾತನೆಯ ಬಗ್ಗೆ ಪತಿ ಹೇಳಿದ್ದು ಹೀಗೆ..

ನಂತರ, ರಾಕೇಶ್ ಮಾಧ್ಯಮಗಳಿಗೆ ತನ್ನ ಪತ್ನಿಯ ಕೃತ್ಯಗಳಿಂದ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದೇನೆ ಎಂದು ಹೇಳಿದ್ದಾನೆ. ನಗರದ ಆಸ್ಪತ್ರೆಯೊಂದರಲ್ಲಿ ಮೆಡಿಕಲ್ ಶಾಪ್ ನಡೆಸುತ್ತಿರುವ ಆಕೆಯ ಪ್ರೇಮಿ ತನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದರ ಹಿಂದೆ ಆತನ ಕೈವಾಡವಿದೆ ಎಂದು ಅವರು ಆರೋಪಿಸಿದ್ದಾರೆ. ರಾಕೇಶ್ ಅವರು ಮೂಲೆಗುಂಪಾಗಿದ್ದಾರೆ ಮತ್ತು ಅಸಹಾಯಕರಾಗಿದ್ದಾರೆಂದು ಹೇಳಿದರು. ತಾನು ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರ ತೆಗೆದುಕೊಳ್ಳಲೂ ಮುಂದಾಗಿದ್ದೆ ಎಂದು ಬಹಿರಂಗಪಡಿಸಿದ್ದಾನೆ.

ಸೆಪ್ಟೆಂಬರ್ 24 ರಂದು X (ಹಿಂದೆ ಟ್ವಿಟರ್) ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೊವನ್ನು 53,000 ಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಕಾಮೆಂಟ್‌ಗಳಲ್ಲಿ ಆಘಾತ, ಸಹಾನುಭೂತಿ ಮತ್ತು ಟೀಕೆಗಳನ್ನು ವ್ಯಕ್ತಪಡಿಸಿದ್ದಾರೆ. ನಮ್ಮ ದೇಶಕ್ಕೆ ಏನಾಗಿದೆ ಎಂದು ಒಬ್ಬ ಬಳಕೆದಾರರು ಪ್ರಶ್ನಿಸಿದ್ದಾರೆ. ಸಿಕ್ಕಿಬಿದ್ದ ಮೇಲೂ ಇಷ್ಟು ಅಹಂಕಾರ, ಆತ್ಮವಿಶ್ವಾಸ ಎಲ್ಲಿರುತ್ತದೆ ಎಂದು ಮತ್ತೊಬ್ಬರು ಹೇಳಿದರು.

ಇನ್ನು ಕೆಲವರು ಗಂಡನ ಬಗ್ಗೆ ಸಹಾನುಭೂತಿ ಹೊಂದಿದ್ದು, ಪತ್ನಿ ಬೇರೊಬ್ಬನೊಂದಿಗೆ ಇರುವುದನ್ನು ನೋಡುವುದು ನೋವಿನ ಸಂಗತಿ ಎಂದು ಹೇಳಿದರು. ಖಾಸಗಿ ವಿವಾದವಾಗಿ ಆರಂಭವಾದ ಈ ಘಟನೆ ದೊಡ್ಡ ಸಾರ್ವಜನಿಕ ಚರ್ಚೆಯಾಗಿ ಮಾರ್ಪಟ್ಟಿದೆ.

ಇದನ್ನೂ ಓದಿ: Viral Video: ಟ್ರಕ್ ಓಡಿಸುತ್ತಲೇ 2 ನಿಮಿಷ ನಿದ್ದೆಗೆ ಜಾರಿದ ಚಾಲಕ! ಆಮೇಲೆ ನಡೆದಿದ್ದು ಘನಘೋರ ಘಟನೆ