ಕೋಲ್ಕತ್ತಾ: ಪಶ್ಚಿಮ ಬಂಗಾಳದ (west bengal election 2026) 294 ವಿಧಾನ ಸಭಾ ಕ್ಷೇತ್ರಗಳ ಚುನಾವಣಾ (Assembly election) ಫಲಿತಾಂಶ (election result) ಘೋಷಣೆಗೆ ಮೇ 4ರಂದು ದಿನ ನಿಗದಿಯಾಗಿದ್ದರೂ ಕೂಡ ಇವುಗಳಲ್ಲಿ ಒಂದು ಸ್ಥಾನಕ್ಕೆ ನಾಳೆ ನಾಯಕನ ಆಯ್ಕೆ ಮಾಡಲಾಗುವುದಿಲ್ಲ. ಘರ್ಷಣೆ, ಹಿಂಸಾಚಾರ ಮತ್ತು ಇವಿಎಂನ ದುರ್ಬಳಕೆ ಸಂಬಂಧಿಸಿ ಈ ಒಂದು ಬೂತ್ ನಲ್ಲಿ ಹೆಚ್ಚಿನ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಮರು ಮತದಾನ ನಡೆಸಲು ತೀರ್ಮಾನಿಸಲಾಗಿದೆ. ಏಪ್ರಿಲ್ 23 ಮತ್ತು 29ರಂದು ಪಶ್ಚಿಮ ಬಂಗಾಳದಲ್ಲಿ ಎರಡು ಹಂತದ ಮತದಾನ ನಡೆದಿದ್ದು, ಬಳಿಕ ಮೇ 2ರಂದು ಪಶ್ಚಿಮ್ ಮಗ್ರಹತ್ ಮತ್ತು ಡೈಮಂಡ್ ಹಾರ್ಬರ್ ವಿಧಾನಸಭಾ ಕ್ಷೇತ್ರಗಳ 15 ಮತಗಟ್ಟೆಗಳಲ್ಲಿ ಮರು ಮತದಾನ ನಡೆದಿತ್ತು. ಇವುಗಳಲ್ಲಿ ಫಾಲ್ಟಾದಲ್ಲಿ ಮತ್ತೆ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಇಲ್ಲಿ ಮರು ಮತದಾನ ನಡೆಸಿ ಮೇ 24 ರಂದು ಮತ ಎಣಿಕೆ ನಡೆಸಲು ತೀರ್ಮಾನಿಸಲಾಗಿದೆ.
ಪಶ್ಚಿಮ ಬಂಗಾಳದ ಒಟ್ಟು 294 ಕ್ಷೇತ್ರಗಳ ಪೈಕಿ 293 ಕ್ಷೇತ್ರಗಳ ಫಲಿತಾಂಶ ನಾಳೆ ಘೋಷಣೆಯಾಗಲಿದೆ. ಇದು ರಾಜ್ಯದಲ್ಲಿ ತೃಣಮೂಲ ಕಾಂಗ್ರೆಸ್ ಗೆಲ್ಲುವುದೋ ಅಥವಾ ಬಿಜೆಪಿ ಅಧಿಕಾರ ಸ್ಥಾಪಿಸುವುದೋ ಎಂಬುದನ್ನು ನಿರ್ಧರಿಸಲಿದೆ. ಆದರೆ ಚುನಾವಣಾ ಅಪರಾಧಗಳ ಹಿನ್ನೆಲೆಯಲ್ಲಿ ಫಾಲ್ಟಾದ ಮತದಾನದ ಫಲಿತಾಂಶಗಳನ್ನು ಸೋಮವಾರ ಘೋಷಣೆ ಮಾಡಲಾಗುವುದಿಲ್ಲ.
ಶೃಂಗೇರಿ ವಿಧಾನಸಭಾ ಕ್ಷೇತ್ರ: ಮತಗಳಲ್ಲಿ ಡಬ್ಬಲ್ ಟಿಕ್ ನಿಂದಾಗಿ 255 ಮತಗಳು ತಿರಸ್ಕೃತ, ಕಾಂಗ್ರೆಸ್ ಗೆ ಶಾಕ್
ದಕ್ಷಿಣ 24 ಪರಗಣ ಜಿಲ್ಲೆಯ ಫಾಲ್ಟಾ ವಿಧಾನಸಭಾ ಕ್ಷೇತ್ರದ ಎಲ್ಲಾ 285 ಮತಗಟ್ಟೆಗಳಲ್ಲಿ ಮುಕ್ತ, ನ್ಯಾಯಯುತ ಮತ್ತು ಪಾರದರ್ಶಕ ಮತದಾನವನ್ನು ಖಚಿತ ಪಡಿಸಿಕೊಳ್ಳಲು ಕಠಿಣ ಭದ್ರತಾ ಕ್ರಮಗಳೊಂದಿಗೆ ಭಾರತೀಯ ಚುನಾವಣಾ ಆಯೋಗವು ಶನಿವಾರ ಮರು ಮತದಾನಕ್ಕೆ ಆದೇಶಿಸಿದೆ. ಇಲ್ಲಿ ಮೇ 21 ರಂದು ಮತದಾನ ನಡೆದು ಮೇ 24 ರಂದು ಮತ ಎಣಿಕೆ ನಡೆಸುವುದಾಗಿ ಚುನಾವಣಾ ಆಯೋಗ ಘೋಷಿಸಿದೆ.
ಪಶ್ಚಿಮ್ ಮಗ್ರಹತ್ ಮತ್ತು ಡೈಮಂಡ್ ಹಾರ್ಬರ್ ವಿಧಾನಸಭಾ ಕ್ಷೇತ್ರಗಳ 15 ಮತಗಟ್ಟೆಗಳಲ್ಲಿಶನಿವಾರ ಮರು ಮತದಾನ ನಡೆಯಿತು. ಫಾಲ್ಟಾದಲ್ಲಿ ಟಿಎಂಸಿಯ ಜಹಾಂಗೀರ್ ಖಾನ್, ಬಿಜೆಪಿಯ ದೇಬಾಂಗ್ಶು ಪಾಂಡಾ ಮತ್ತು ಕಾಂಗ್ರೆಸ್‌ನ ಅಬ್ದುರ್ ರಝಾಕ್ ಮೊಲ್ಲಾ ಕಣದಲ್ಲಿದ್ದು, ಇವರೊಂದಿಗೆ ಸಿಪಿಐ(ಎಂ)ನ ಸಂಭು ನಾಥ್ ಕುರ್ಮಿ ಸ್ಪರ್ಧಿಸಿದ್ದಾರೆ.
ಏಕೆ ಮರು ಮತದಾನ?
ಫಾಲ್ಟಾ ವಿಧಾನ ಸಭಾ ಕ್ಷೇತ್ರದಲ್ಲಿ ಮತದಾರರಿಗೆ ಬೆದರಿಗೆ, ಮತಗಟ್ಟೆಗಳ ಒಳಗೆ ಅನಧಿಕೃತ ಉಪಸ್ಥಿತಿ ಮತ್ತು ಮತ ತಿರುಚುವಿಕೆಯ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಇಲ್ಲಿ ಮರು ಮತದಾನಕ್ಕೆ ಆದೇಶಿಸಲಾಗಿದೆ.
ಶನಿವಾರ ನಡೆದ ಮತದಾನದ ವೇಳೆ ಫಾಲ್ಟಾದ ಬೂತ್ ಸಂಖ್ಯೆ 177ರಲ್ಲಿ ಬಿಜೆಪಿ ಅಭ್ಯರ್ಥಿಯ ಇವಿಎಂ ಬಟನ್ ಅನ್ನು ಟೇಪ್‌ನಿಂದ ಮುಚ್ಚಲಾಗಿದ್ದು, ಕೇಂದ್ರ ಪಡೆಗಳು ಸ್ಥಳಕ್ಕೆ ತಲುಪಿ ಟೇಪ್ ಅನ್ನು ತೆಗೆದುಹಾಕಿದ ಬಳಿಕ ಮತದಾನ ಪುನರಾರಂಭವಾಯಿತು. ಇದಲ್ಲದೇ ಫಾಲ್ಟಾ ವಿಧಾನಸಭಾ ಕ್ಷೇತ್ರದ ಬೂತ್ ಸಂಖ್ಯೆ 144 ಮತ್ತು 189ರಲ್ಲಿ ಕೂಡ ಪಕ್ಷದ ಚಿಹ್ನೆಯ ಮೇಲೆ ಬಿಳಿ ಟೇಪ್ ಅಳವಡಿಸಲಾಗಿತ್ತು ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಸಾಮಾಜಿಕ ಮಾಧ್ಯಮ ಖಾತೆಯಾದ ಎಕ್ಸ್ ನಲ್ಲಿ ತಿಳಿಸಿ ಮರು ಮತದಾನಕ್ಕೆ ಒತ್ತಾಯಿಸಿದ್ದರು.
ಇದಲ್ಲದೇ ಮತದಾರರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿರುವ ಆರೋಪದಲ್ಲಿ ಫಾಲ್ಟಾದ ಬೆಲ್ಸಿಂಗ್ ಪ್ರದೇಶದ ಬೂತ್‌ನ ಹೊರಗೆ ಮಹಿಳೆಯರು ಸೇರಿದಂತೆ ಕೆಲವರ ಮೇಲೆ ಭದ್ರತಾ ಪಡೆಗಳು ಲಾಠಿ ಚಾರ್ಜ್ ಮಾಡಿದ್ದಾರೆ ಎಂದು ಹಿರಿಯ ಚುನಾವಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೀಗೆ ಹಲವಾರು ದೂರುಗಳು ಕೇಳಿ ಬಂದುದ್ದರಿಂದ 32 ಫಾಲ್ಟಾದಲ್ಲಿ ಮರು ಮತದಾನಕ್ಕೆ ಒತ್ತಾಯಗಳು ಕೇಳಿ ಬಂದಿತ್ತು. ಹೀಗಾಗಿ ಮುಂದಿನ ಮತದಾನದ ವೇಳೆ ಯಾವುದೇ ರೀತಿಯ ದುಷ್ಕೃತ್ಯ ನಡೆಯದಂತೆ ತಡೆಯಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ಚುನಾವಣಾ ಆಯೋಗ ಸೂಚಿಸಿದೆ.
Vande Bharat Express: ಮೊದಲ ವಂದೇ ಭಾರತ್ ರೈಲು ಉತ್ಪಾದಿಸಿದ ರಾಯ್ ಬರೇಲಿಯ ಎಂಸಿಎಫ್; ಟ್ರಯಲ್ ರನ್‌ಗೆ ರವಾನೆ
ಮರು ಮತದಾನಕ್ಕೆ ಚುನಾವಣಾ ಆಯೋಗ ನಿರ್ಧರಿಸುವುದನ್ನು ಬಿಜೆಪಿ ನಾಯಕಿ ಸುಕಾಂತ ಮಜುಂದಾರ್ ಸ್ವಾಗತಿಸಿದ್ದು, ಇದು ಟಿಎಂಸಿ ನಾಯಕ ಜಹಾಂಗೀರ್ ಖಾನ್ ಅವರ ದೌರ್ಜನ್ಯದ ವಿರುದ್ಧ ಫಾಲ್ಟಾದ ಮಹಿಳೆಯರ ಗೆಲುವು ಎಂದು ಹೇಳಿದರು.
ಈ ಕುರಿತು ಪ್ರತಿಕ್ರಿಯಿಸಿರುವ ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ, ನಾನು ಇಡೀ ಭಾರತಕ್ಕೆ ಸವಾಲು ಹಾಕುತ್ತೇನೆ. ಫಾಲ್ಟಾಗೆ ಅತ್ಯಂತ ಬಲಿಷ್ಠರನ್ನು ಕಳುಹಿಸಿ, ದೆಹಲಿಯಿಂದ ಒಬ್ಬ ಗಾಡ್‌ಫಾದರ್ ಕೂಡ ಬರಲಿ ಫಾಲ್ಟಾದಲ್ಲಿ ಗೆದ್ದು ತೋರಿಸಲಿ ಎಂದು ಸವಾಲು ಹಾಕಿದರು.