ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Zohran Mamdani: ಯಾವೊಬ್ಬ ಮುಸ್ಲಿಂಮರನ್ನು ಗೆಲ್ಲಲು ಕೊಡುವುದಿಲ್ಲ; ವಿವಾದ ಹೊತ್ತಿಸಿದ ಬಿಜೆಪಿ ನಾಯಕ

ನ್ಯೂಯಾರ್ಕ್ ನಗರದ ಆಡಳಿತವನ್ನು ಮುನ್ನಡೆಸಿದ ಮೊದಲ ದಕ್ಷಿಣ ಏಷ್ಯಾದ, ಮುಸ್ಲಿಂ ಮತ್ತು ಶತಮಾನದಲ್ಲಿ ಅತ್ಯಂತ ಕಿರಿಯ ವಯಸ್ಸಿನ ಜೊಹ್ರಾನ್ ಮಮ್ದಾನಿ (34) ಅವರ ಮೇಯರ್ ಚುನಾವಣೆಯ ಗೆಲುವಿನ ಕುರಿತು ಇದೀಗ ಮುಂಬೈ ಬಿಜೆಪಿ ಮುಖ್ಯಸ್ಥ ಅಮಿತ್ ಸತಮ್ ಹೇಳಿಕೆಯೊಂದನ್ನು ನೀಡಿದ್ದು, ವಿವಾದಕ್ಕೆ ಕಾರಣವಾಗಿದೆ.

ಸಾಂಧರ್ಬಿಕ ಚಿತ್ರ

ಮುಂಬೈ: ನ್ಯೂಯಾರ್ಕ್ ನಗರದ ಆಡಳಿತವನ್ನು ಮುನ್ನಡೆಸಿದ ಮೊದಲ ದಕ್ಷಿಣ ಏಷ್ಯಾದ, ಮುಸ್ಲಿಂ ಮತ್ತು ಶತಮಾನದಲ್ಲಿ ಅತ್ಯಂತ ಕಿರಿಯ ವಯಸ್ಸಿನ ಜೊಹ್ರಾನ್ ಮಮ್ದಾನಿ (Zohran Mamdani) (34) ಅವರ ಮೇಯರ್ ಚುನಾವಣೆಯ ಗೆಲುವಿನ ಕುರಿತು ಇದೀಗ ಮುಂಬೈ ಬಿಜೆಪಿ ಮುಖ್ಯಸ್ಥ ಅಮಿತ್ ಸತಮ್ ಹೇಳಿಕೆಯೊಂದನ್ನು ನೀಡಿದ್ದು, ವಿವಾದಕ್ಕೆ ಕಾರಣವಾಗಿದೆ. ಯಾವುದೇ ಖಾನ್ ಮೇಯರ್ ಆಗಲು ನಾವು ಬಿಡುವುದಿಲ್ಲ" ಎಂದು ಅಂಧೇರಿ ಪಶ್ಚಿಮದ ಶಾಸಕರೂ ಆಗಿರುವ ಸತಮ್ ಹೇಳಿದ್ದಾರೆ. ಮುಂದಿನ ತಿಂಗಳು ಮುಂಬೈನಲ್ಲಿ ಮೇಯರ್‌ ಚುನಾವಣೆ ನಡೆಯಲಿದೆ.

ಇದನ್ನು 'ಮತ ಜಿಹಾದ್' ಎಂದು ಕರೆದ ಸತಮ್, ನ್ಯೂಯಾರ್ಕ್ ನಗರದಲ್ಲಿ ಕಂಡುಬರುವ ಅದೇ ರೀತಿಯ ರಾಜಕೀಯವನ್ನು ಮುಂಬೈಗೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು. "ರಾಜಕೀಯ ಅಧಿಕಾರವನ್ನು ಉಳಿಸಿಕೊಳ್ಳಲು ಕೆಲವರು ತುಷ್ಟೀಕರಣದ ಮಾರ್ಗವನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಹಿಂದೆ ಸಮಾಜವನ್ನು ವಿಭಜಿಸಲು ಪ್ರಯತ್ನಿಸಿದ ಇಂತಹ ಶಕ್ತಿಗಳಿಂದ ಮುಂಬೈಯನ್ನು ರಕ್ಷಿಸುವುದು ಅವಶ್ಯಕ" ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: General Asim Munir: ಅಮೆರಿಕ-ಪಾಕಿಸ್ತಾನ ಭಾಯ್‌ ಭಾಯ್‌! ಉಗ್ರ ಪೋಷಕ ಪಾಕ್‌ನ ಸೇನಾ ಮುಖ್ಯಸ್ಥನಿಗೆ ದೊಡ್ಡಣ್ಣನ ಆಹ್ವಾನ

ಅವರು ಧಾರ್ಮಿಕ ಸಾಮರಸ್ಯದಲ್ಲಿ ನಂಬಿಕೆ ಇಡುತ್ತಾರೆ, ಆದರೆ "ಯಾರಾದರೂ ರಾಷ್ಟ್ರವಿರೋಧಿ ನಿಲುವನ್ನು ಅಳವಡಿಸಿಕೊಳ್ಳುವ ಮೂಲಕ ಸಮಾಜವನ್ನು ವಿಭಜಿಸಲು ಪ್ರಯತ್ನಿಸಿದರೆ, ನಾವು ಅವರನ್ನು ವಿರೋಧಿಸುತ್ತೇವೆ" ಎಂದು ಅವರು ಹೇಳಿದ್ದಾರೆ. ಭಾರತೀಯ ಚಲನಚಿತ್ರ ನಿರ್ಮಾಪಕಿ ಮೀರಾ ನಾಯರ್ ಮತ್ತು ಭಾರತೀಯ ಮೂಲದ ವಿದ್ವಾಂಸ ಮಹಮೂದ್ ಮಮ್ದಾನಿ ಅವರ ಪುತ್ರನಾದ ಮಮ್ದಾನಿ, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ನ್ಯೂಯಾರ್ಕ್‌ನ ಮಾಜಿ ಗವರ್ನರ್ ಆಂಡ್ರ್ಯೂ ಕ್ಯುಮೊ ಮತ್ತು ರಿಪಬ್ಲಿಕನ್ ಅಭ್ಯರ್ಥಿ ಕರ್ಟಿಸ್ ಸ್ಲಿವಾ ಅವರನ್ನು ಸೋಲಿಸಿ ಇಂದು ಗೆಲುವು ಸಾಧಿಸಿದ್ದಾರೆ. ಅಮೆರಿಕದ ರಾಜಕಾರಣದಲ್ಲಿ ಹೊಸದೊಂದು ಇತಿಹಾಸ ಸೃಷ್ಟಿಸಿದ್ದಾರೆ. ನ್ಯೂಯಾರ್ಕ್‌ ಮೇಯರ್‌ ಚುನಾವಣೆಯನ್ನು ಗೆಲ್ಲುವ ಮೂಲಕ, ಜೊಹ್ರಾನ್‌ ಮಮ್ದಾನಿ ಅವರು ಈ ಸಾಧನೆ ಮಾಡಿದ ಮೊದಲ ಭಾರತೀಯ ಮೂಲದ ಅಮೆರಿಕನ್‌ ಮುಸ್ಲಿಂ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ನ್ಯೂಯಾರ್ಕ್ ನಗರದ ಮೇಯರ್ ಆಗಿ ಆಯ್ಕೆಯಾದ ಜೊಹ್ರಾನ್ ಮಮ್ದಾನಿ ತಮ್ಮ ಚುನಾವಣಾ ವಿಜಯವನ್ನು ದೀರ್ಘಕಾಲದ ರಾಜಕೀಯ ರಾಜವಂಶವನ್ನು ಕೊನೆಗೊಳಿಸುವ ಐತಿಹಾಸಿಕ ಕ್ಷಣ ಎಂದು ಬಣ್ಣಿಸಿದ್ದಾರೆ. ಭಾರತದ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರನ್ನು ಉಲ್ಲೇಖಿಸಿ, ಮಮ್ದಾನಿ ತಮ್ಮ ಗೆಲುವು ನಗರದ "ಹಳೆಯದರಿಂದ ಹೊಸದಕ್ಕೆ" ಹೆಜ್ಜೆ ಇಟ್ಟಿದೆ ಎಂದು ಹೇಳಿದರು. ಅವರ ಗೆಲುವಿನ ನಂತರ, ನ್ಯೂಯಾರ್ಕ್ ನಗರದ ಜೋಹ್ರಾನ್ ಮಮ್ದಾನಿ ಅವರ ಪ್ರಚಾರ ಕೇಂದ್ರ ಕಚೇರಿಯ ಹೊರಗೆ ನೂರಾರು ಬೆಂಬಲಿಗರು ಜಮಾಯಿಸಿ ಫ್ರೀ ಪ್ಯಾಲೆಸ್ತೀನ್ ಎಂದು ಘೋಷಣೆ ಕೂಗಿದರು.