ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Hafiz Saeed: ನದಿಗಳಲ್ಲಿ ರಕ್ತ ಹರಿಯುತ್ತೆ; ಉಗ್ರ ಹಫೀಜ್ ಸಯೀದ್ ಹಳೆಯ ಭಾಷಣದ ವಿಡಿಯೊ ವೈರಲ್

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಮಂಗಳವಾರ ಭೀಕರ ಭಯೋತ್ಪಾದಕ ದಾಳಿ ನಡೆದಿದೆ. ಅದಾದ ನಂತರ ಭಾರತ ಪಾಕಿಸ್ತಾನದ ವಿರುದ್ಧ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿತು. ಭಾರತವು ಸಿಂಧೂ ನದಿ ಒಪ್ಪಂದವನ್ನು ರದ್ದುಗೊಳಿಸಿದೆ. ಅಂದಿನಿಂದ ಉಭಯ ದೇಶಗಳ ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ. ಆ ಹಿನ್ನೆಲೆಯಲ್ಲಿ, ಕುಖ್ಯಾತ ಭಯೋತ್ಪಾದಕ ಹಫೀಜ್ ಸಯೀದ್‌ನ ಹಳೆಯ ವಿಡಿಯೋವೊಂದು ವೈರಲ್ ಆಗಿದೆ.

ನದಿಗಳಲ್ಲಿ ರಕ್ತ ಹರಿಯುತ್ತೆ... ಉಗ್ರ ಹಫೀಜ್ ಸಯೀದ್ ವಿಡಿಯೊ ವೈರಲ್‌

ಹಫೀಜ್ ಸಯೀದ್

Profile Sushmitha Jain May 2, 2025 1:11 PM

ಲಾಹೋರ್: 26/11 ಮುಂಬೈ ಭಯೋತ್ಪಾದಕ ದಾಳಿಯ (Mumbai Terror Attack) ಮಾಸ್ಟರ್‌ಮೈಂಡ್ ಹಫೀಜ್ ಸಯೀದ್ (Hafiz Saeed) ಬೆಂಬಲಿತ ಪಾಕಿಸ್ತಾನ ಮರ್ಕಝಿ ಮುಸ್ಲಿಂ ಲೀಗ್ (Pakistan Markazi Muslim League) ಎಂಬ ರಾಜಕೀಯ ಪಕ್ಷವು ಈ ವಾರ ಪಾಕಿಸ್ತಾನದಾದ್ಯಂತ ಭಾರತ ವಿರೋಧಿ ರ‍್ಯಾಲಿಗಳನ್ನು ಆಯೋಜಿಸಿದೆ. ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಒಂದು ವಾರದ ನಂತರ ಈ ರ‍್ಯಾಲಿಗಳು ನಡೆದಿದ್ದು, ಇದರಲ್ಲಿ ವಿಶ್ವಸಂಸ್ಥೆಯಿಂದ ಜಾಗತಿಕ ಭಯೋತ್ಪಾದಕ ಎಂದು ಗುರುತಿಸಲ್ಪಟ್ಟಿರುವ ಲಷ್ಕರ್-ಎ-ತೊಯ್ಬಾ (Lashkar-e-Taiba) ಮುಖ್ಯಸ್ಥ ಹಫೀಜ್ ಸಯೀದ್‌ನ ಹಳೆಯ ಉದ್ವೇಗಕಾರಿ ಭಾಷಣಗಳನ್ನು ಪ್ರಸಾರ ಮಾಡಲಾಯಿತು.

ಲಾಹೋರ್, ಕರಾಚಿ, ಇಸ್ಲಾಮಾಬಾದ್, ರಾವಲ್ಪಿಂಡಿ, ಫೈಸಲಾಬಾದ್, ಗುಜರಾನ್‌ವಾಲಾ ಮತ್ತು ಹಫೀಝಾಬಾದ್ ಸೇರಿದಂತೆ ಪಾಕಿಸ್ತಾನದ ಪ್ರಮುಖ ನಗರಗಳಲ್ಲಿ ಈ ಪ್ರತಿಭಟನೆಗಳನ್ನು ಆಯೋಜಿಸಲಾಗಿತ್ತು. ಪ್ರತಿಭಟನಾಕಾರರು ಭಾರತ ವಿರೋಧಿ ಘೋಷಣೆಗಳನ್ನು ಕೂಗಿದ್ದು, ಭಾರತ "ನೀರಿನ ಆಕ್ರಮಣ" ನಡೆಸುತ್ತಿದೆ ಎಂದು ಆರೋಪಿಸಿ, ಪಾಕಿಸ್ತಾನದ ನದಿಗಳ ಪ್ರವೇಶವನ್ನು ಅಕ್ರಮವಾಗಿ ತಡೆಯಲು ಅಣೆಕಟ್ಟುಗಳನ್ನು ನಿರ್ಮಿಸುತ್ತಿದೆ ಎಂದು ದೂಷಿಸಿದ್ದಾರೆ.

PMML ಅನ್ನು ಲಷ್ಕರ್-ಎ-ತೊಯ್ಬಾದ ರಾಜಕೀಯ ವಿಭಾಗದ ಹೊಸ ಮುಖ ಎಂದು ವ್ಯಾಪಕವಾಗಿ ಪರಿಗಣಿಸಲಾಗಿದೆ. ರ‍್ಯಾಲಿಗಳಲ್ಲಿ ಆಯೋಜಕರು ಹಫೀಜ್ ಸಯೀದ್‌ನ ಹಿಂದಿನ ಭಾಷಣಗಳನ್ನು ಪ್ರಸಾರ ಮಾಡಿದ್ದಾರೆ. ಒಂದು ಭಾಷಣದಲ್ಲಿ ಸಯೀದ್ ಭಯಾನಕ ಎಚ್ಚರಿಕೆ ನೀಡುವುದು ಕೇಳಿಬಂದಿದೆ. "ಪಾಕಿಸ್ತಾನದ ನೀರನ್ನು ತಡೆಯಲು ಪ್ರಯತ್ನಿಸಿದರೆ, ನಾವು ಸುಮ್ಮನಿರುತ್ತೇವೆ ಎಂದು ಭಾವಿಸುವಿರಾ? ಒಮ್ಮೆ ಗಮನಿಸಿ, ನೀವು ನಮ್ಮ ನೀರನ್ನು ತಡೆದರೆ, ನಾವು ನಿಮ್ಮ ಉಸಿರನ್ನು ತಡೆಯುತ್ತೇವೆ. ಈ ನದಿಗಳಲ್ಲಿ ಕೇವಲ ರಕ್ತವೇ ಹರಿಯುತ್ತದೆ" ಎಂದು ಹೇಳಿದ್ದಾನೆ.

ಈ ಸುದ್ದಿಯನ್ನು ಓದಿ: Pahalgam Attack: ಪಹಲ್ಗಾಮ್ ದಾಳಿ ಬಳಿಕ ಕೆಜಿಗೆ ₹5 ಲಕ್ಷ ತಲುಪಿದ ಕೇಸರಿ ಬೆಲೆ

PMMLನ ಪ್ರಸ್ತುತ ನಾಯಕರು ಈ ಧೋರಣೆಯನ್ನು ಪುನರ್‌ ಉಚ್ಛರಿಸಿದ್ದಾರೆ. ಭಾರತವು “ರಾಜತಾಂತ್ರಿಕ ಗೆರೆಗಳನ್ನು ದಾಟುತ್ತಿದೆ" ಎಂದು ಆರೋಪಿಸಿ, ಈ ತೆಗೆದುಕೊಂಡಿರುವ ಕ್ರಮಗಳು ಮುಂದುವರಿದರೆ ಗಂಭೀರ ಪರಿಣಾಮಗಳಿರುತ್ತವೆ ಎಂದು ಎಚ್ಚರಿಕೆ ನೀಡಿದ್ದಾರೆ. ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದು, ಹಲವು ಜನರು ಗಾಯಗೊಂಡಿದ್ದಾರೆ. ಲಷ್ಕರ್-ಎ-ತೊಯ್ಬಾದ ಪರೋಕ್ಷ ಸಂಘಟನೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಈ ದಾಳಿಯ ಜವಾಬ್ದಾರಿಯನ್ನು ಹೊತ್ತುಕೊಂಡಿದೆ.

ಪಹಲ್ಗಾಮ್ ದಾಳಿಯ ಮಾಸ್ಟರ್‌ಮೈಂಡ್ ಎಂದು ಶಂಕಿಸಲಾಗಿರುವ ಹಫೀಜ್ ಸಯೀದ್‌ಗೆ ಪಾಕಿಸ್ತಾನವು ಭದ್ರತೆಯನ್ನು ತೀವ್ರಗೊಳಿಸಿದೆ ಎಂದು ತಿಳಿದುಬಂದಿದೆ. ಲಾಹೋರ್‌ನಲ್ಲಿರುವ ಸಯೀದ್‌ನ ನಿವಾಸದ ಸುತ್ತ 24x7 ಶಸ್ತ್ರಸಜ್ಜಿತ ಸಿಬ್ಬಂದಿಯ ನಿಯೋಜನೆ ಮಾಡಲಾಗಿದೆ.