ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಪುರುಷರು ಯಾವಾಗ, ಹೇಗೆ ತಿರುಗಿ ಬೀಳುತ್ತಾರೋ ಗೊತ್ತಿಲ್ಲ; ಎಲ್ಲರನ್ನೂ ಜೈಲಿಗೆ ಹಾಕ್ತಾರಾ? ಹೊಸ ವಿವಾದ ಎಬ್ಬಿಸಿದ ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ

ಬೀದಿನಾಯಿಗಳ ಪರ ಮಾತನಾಡುವ ಭರದಲ್ಲಿ ಸ್ಯಾಂಡಲ್‌ವುಡ್‌ ನಟಿ ರಮ್ಯಾ ಪುರುಷ ಸಮೂಹವನ್ನು ಅವಮಾನಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಬೀದಿ ನಾಯಿ ಬಗ್ಗೆ ಸುಪ್ರೀಂ ಕೋರ್ಟ್‌ ನೀಡಿದ ಆದೇಶವನ್ನು ಉಲ್ಲೇಖಿಸಿದ ಅವರು ಪುರುಷರು ಯಾವಾಗ ಅತ್ಯಾಚಾರ ಎಸಗುತ್ತಾರೆ/ಕೊಲೆ ಮಾಡುತ್ತಾರೆ ಎನ್ನುವುದನ್ನು ಅವರ ಮನಸ್ಥಿತಿ ಓದಿ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಹಾಗಂತ ಎಲ್ಲ ಪುರುಷರನ್ನು ಜೈಲಿಗೆ ಹಾಕಲು ಸಾಧ್ಯವೆ? ಎಂದು ಅವರು ಪ್ರಶ್ನಿಸಿದ್ದಾರೆ.

ಹೊಸ ವಿವಾದ ಎಬ್ಬಿಸಿದ ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ

ನಟಿ ರಮ್ಯಾ (ಸಂಗ್ರಹ ಚಿತ್ರ). -

Ramesh B
Ramesh B Jan 7, 2026 5:27 PM

ಬೆಂಗಳೂರು, ಜ. 7: ಒಂದು ಕಾಲದಲ್ಲಿ ಸ್ಯಾಂಡಲ್‌ವುಡ್‌ ಆಳಿದ್ದ, ಪರಭಾಷೆಯಲ್ಲೂ ಮಿಂಚು ಹರಿಸಿದ್ದ ರಮ್ಯಾಗೂ (Actress Ramya) ವಿವಾದಕ್ಕೂ ಬಿಟ್ಟಿರಲಾರದ ನಂಟು. ಈ ಹಿಂದೆಯೂ ನೇರ ಮಾತು, ಬೋಲ್ಡ್‌ ಹೇಳಿಕೆಯ ಮೂಲಕ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಅವರು ಬೀದಿನಾಯಿಗಳ ಪರ ಮಾತನಾಡುವ ಭರದಲ್ಲಿ ಪುರುಷ ಸಮೂಹವನ್ನು ಅವಮಾನಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಬೀದಿ ನಾಯಿ ಬಗ್ಗೆ ಸುಪ್ರೀಂ ಕೋರ್ಟ್‌ ನೀಡಿದ ಆದೇಶವನ್ನು ಉಲ್ಲೇಖಿಸಿದ ಅವರು ಪುರುಷರು ಯಾವಾಗ ಅತ್ಯಾಚಾರ ಎಸಗುತ್ತಾರೆ/ಕೊಲೆ ಮಾಡುತ್ತಾರೆ ಎನ್ನುವುದನ್ನು ಅವರ ಮನಸ್ಥಿತಿ ಓದಿ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಹಾಗಂತ ಎಲ್ಲ ಪುರುಷರನ್ನು ಜೈಲಿಗೆ ಹಾಕಲು ಸಾಧ್ಯವೆ? ಎಂದು ಅವರು ಪ್ರಶ್ನಿಸಿದ್ದು ವಿವಾದಕ್ಕೆ ಕಾರಣವಾಗಿದೆ.

ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಅವರು ತಮ್ಮ ಈ ಅಭಿಪ್ರಾಯ ಹಂಚಿಕೊಂಡಿದ್ದಾರೆ. ನಾಯಿಗಳ ಹಾವಳಿ ಬಗ್ಗೆ ಇತ್ತೀಚೆಗೆ ಅಭಿಪ್ರಾಯ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್‌ ಬೀದಿ ನಾಯಿಗಳ ಮನಸ್ಸನ್ನು ಯಾರೂ ಓದಲು ಸಾಧ್ಯವಿಲ್ಲ ಎಂದು ಹೇಳಿತ್ತು. ಇದನ್ನು ಉಲ್ಲೇಖಿಸಿ ರಮ್ಯಾ ಈ ಹೇಳಿಕೆ ನೀಡಿದ್ದಾರೆ.

Ramya story

ರಮ್ಯಾ ಅವರ ಇನ್‌ಸ್ಟಾಗ್ರಾಮ್‌ ಸ್ಟೋರಿ ಮತ್ತು ರಮ್ಯಾ

ಅಷ್ಟಕ್ಕೂ ಆಗಿದ್ದೇನು?

ಸುಪ್ರೀಂ ಕೋರ್ಟ್ ಮಂಗಳವಾರ (ಜನವರಿ 6) ಬೀದಿ ನಾಯಿಗಳ ಪ್ರಕರಣದಲ್ಲಿ ಹಲವು ಮಧ್ಯಂತರ ಅರ್ಜಿಗಳನ್ನು ಆಲಿಸಿ, ಹೆದ್ದಾರಿಗಳಲ್ಲಿ ಪ್ರಾಣಿಗಳ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುವಂತೆ ಸೂಚಿಸಿತು. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜಾರಿಯಾ ಅವರ ಪೀಠವು, ಬೀದಿ ನಾಯಿಗಳ ಮನಸ್ಸನ್ನು ಯಾರಿಗೂ ಓದಲು ಸಾಧ್ಯವಿಲ್ಲ. ಈ ನಾಯಿ ಕಚ್ಚಬಹುದು, ಈ ನಾಯಿ ಕಚ್ಚುವುದಿಲ್ಲ ಎಂದು ಕಂಡು ಹಿಡಿಯುವುದು ಅಸಾಧ್ಯ ಎಂದು ​ ಅಭಿಪ್ರಾಯಪಟ್ಟಿದ್ದರು.

ವಿನಯ್‌ ರಾಜ್‌ಕುಮಾರ್‌ ಜತೆಗಿನ ಫೋಟೊ ವೈರಲ್‌ ಆದ ಬೆನ್ನಲ್ಲೇ ರಮ್ಯಾ ಸ್ಪಷ್ಟನೆ

"ರಸ್ತೆಗಳು ನಾಯಿಗಳಿಲ್ಲದೆ ಸ್ವಚ್ಛವಾಗಿರಬೇಕು. ಅವು ಕಚ್ಚದೇ ಇರಬಹುದು, ಆದರೆ ಅವು ಅಪಘಾತಗಳಿಗೆ ಕಾರಣವಾಗುತ್ತವೆ. ಬೀದಿಗಳು, ಶಾಲೆಗಳು ಮತ್ತು ಸಾಂಸ್ಥಿಕ ಪ್ರದೇಶಗಳಲ್ಲಿ ನಮಗೆ ನಾಯಿಗಳು ಏಕೆ ಬೇಕು?" ಎಂದು ಪೀಠ ಪ್ರಶ್ನಿಸಿತು. ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ, ಮೂಲತಃ ಶ್ವಾನಪ್ರಿಯೆ ರಮ್ಯಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಪುರುಷರನ್ನು ಬೀದಿ ನಾಯಿಗೆ ಹೋಲಿಸಿದ್ರಾ?

ಸದ್ಯ ಈ ಹೇಳಿಕೆ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ. ರಮ್ಯಾ ಪುರುಷರನ್ನು ಬೀದಿ ನಾಯಿಗೆ ಹೊಲೀಸಿದ್ದಾರೆ ಎಂದು ಒಂದಷ್ಟು ಮಂದಿ ಆರೋಪಿಸಿದ್ದಾರೆ. ರಮ್ಯಾ ಪ್ರಕಾರ ಯಾವ ಪುರುಷನೂ ಉತ್ತಮ ಗುಣ ಹೊಂದಿಲ್ಲವೆ? ಎಂದೆಲ್ಲ ಪ್ರಶ್ನಿಸುತ್ತಿದ್ದಾರೆ. ಹಿಂದಿನಿಂದಲೂ ರಮ್ಯಾ ಬೀದಿ ನಾಯಿಗಳ ಬಗೆ ಧ್ವನಿ ಎತ್ತುತ್ತಲೇ ಬಂದಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೇ ತನ್ನ ಬಗ್ಗೆ ಅಶ್ಲೀಲ ಕಮೆಂಟ್‌ ಮಾಡಿದ ದರ್ಶನ್‌ ಅಭಿಮಾನಿಗಳ ವಿರುದ್ಧ ರಮ್ಯಾ ದೂರು ದಾಖಲಿಸುವ ಮೂಲಕ ಸದ್ದು ಮಾಡಿದ್ದರು. ತನ್ನಂತೆ ಬೇರೆ ಯಾವ ನಟಿಗೂ ಹೀಗೆ ಆಗಬಾರದೆಂದು ಈ ಕ್ರಮ ಕೈಗೊಂಡಿದ್ದಾಗಿ ಅವರು ತಿಳಿಸಿದ್ದರು. ಈ ನಡೆಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು.