ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಶೂನ್ಯ ಚತುಷ್ಪಥದ ಕಲಬುರಗಿಗೆ ಸಿಗುವುದೇ ವೇಗ ?

ರಾಜ್ಯದ 2ನೇ ಅತಿದೊಡ್ಡ ಜಿಲ್ಲೆ, ಕಲ್ಯಾಣ ಕರ್ನಾಟಕದ ಆಡಳಿತ ಕೇಂದ್ರ ಮತ್ತು ವಿಭಾಗೀಯ ಕೇಂದ್ರ ಎಂಬ ಹತ್ತಾರು ಹಣೆಪಟ್ಟಿಗಳಿರುವ ಕಲಬುರಗಿ ಜಿಲ್ಲೆಗೆ ಇಂದು ಒಂದೇ ಒಂದು ಸಮರ್ಪಕ ‘ಚತುಷ್ಪಥ ರಸ್ತೆ’ ಇಲ್ಲದಿರುವುದು ವಿಪರ್ಯಾಸ. ರಾಜ್ಯದ ಇತರೆ ನಗರಗಳು ಎಕ್ಸ್‌ ಪ್ರೆಸ್ ಹೈವೇಗಳ ಮೂಲಕ ಸಮೃದ್ಧಿಯತ್ತ ಓಡುತ್ತಿದ್ದರೆ, ಕಲಬುರಗಿ ಮಾತ್ರ ದ್ವಿಪಥದ ಇಕ್ಕಟ್ಟಾದ ರಸ್ತೆಗಳಲ್ಲಿ ಸಿಲುಕಿ ಒದ್ದಾಡುತ್ತಿದೆ.

ಶೂನ್ಯ ಚತುಷ್ಪಥದ ಕಲಬುರಗಿಗೆ ಸಿಗುವುದೇ ವೇಗ ?

-

Ashok Nayak
Ashok Nayak Mar 5, 2026 12:13 AM

ದೇವಿಂದ್ರ ಜಾಡಿ ಕಲಬುರಗಿ

ಕಲಬುರಗಿ ಜಿಲ್ಲೆಗೆ ಚತುಷ್ಪಥ ರಸ್ತೆ ಭಾಗ್ಯವಿಲ್ಲದ ವಿಪರ್ಯಾಸ

ಜಿಲ್ಲೆಗೆ ಬೇಕಿದೆ ಅಭಿವೃದ್ಧಿಯ ಕಾಯಕಲ್ಪ

ರಾಜ್ಯ ಬಜೆಟ್ ಮೇಲೆ ನಿರೀಕ್ಷೆ ಶೂನ್ಯ

ಚತುಷ್ಪಥದ ಕಲಬುರಗಿಗೆ ಸಿಗುವುದೇ ವೇಗ

ರಾಜ್ಯದ 2ನೇ ಅತಿದೊಡ್ಡ ಜಿಲ್ಲೆ, ಕಲ್ಯಾಣ ಕರ್ನಾಟಕದ ಆಡಳಿತ ಕೇಂದ್ರ ಮತ್ತು ವಿಭಾಗೀ ಯ ಕೇಂದ್ರ ಎಂಬ ಹತ್ತಾರು ಹಣೆಪಟ್ಟಿಗಳಿರುವ ಕಲಬುರಗಿ ಜಿಲ್ಲೆಗೆ ಇಂದು ಒಂದೇ ಒಂದು ಸಮರ್ಪಕ ‘ಚತುಷ್ಪಥ ರಸ್ತೆ’ ಇಲ್ಲದಿರುವುದು ವಿಪರ್ಯಾಸ. ರಾಜ್ಯದ ಇತರೆ ನಗರಗಳು ಎಕ್ಸ್‌ಪ್ರೆಸ್ ಹೈವೇಗಳ ಮೂಲಕ ಸಮೃದ್ಧಿಯತ್ತ ಓಡುತ್ತಿದ್ದರೆ, ಕಲಬುರಗಿ ಮಾತ್ರ ದ್ವಿಪಥದ ಇಕ್ಕಟ್ಟಾದ ರಸ್ತೆಗಳಲ್ಲಿ ಸಿಲುಕಿ ಒದ್ದಾಡುತ್ತಿದೆ.

ಕಲಬುರಗಿಯಿಂದ ರಾಜಧಾನಿ ಬೆಂಗಳೂರಿಗೆ ತಲುಪಲು 12 ರಿಂದ 15 ಗಂಟೆ ಬೇಕು. ಇದು ಕೇವಲ ಪ್ರಯಾಣದ ಸಮಯವಲ್ಲ, ಜಿಲ್ಲೆಯ ಆರ್ಥಿಕ ಪ್ರಗತಿಯ ಹಿನ್ನಡೆ. ಇಕ್ಕಟ್ಟಾದ ರಸ್ತೆಗಳಿಂದಾಗಿ ಕೈಗಾರಿಕಾ ಹೂಡಿಕೆದಾರರು ಜಿಲ್ಲೆಯತ್ತ ಮುಖ ಮಾಡುತ್ತಿಲ್ಲ. ಕೃಷಿ ಉತ್ಪನ್ನಗಳ ಸಾಗಾಟ ವಿಳಂಬವಾಗುತ್ತಿದೆ. ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ನೆರೆಯ ಹೈದರಾಬಾದ್ ಅಥವಾ ಸೋಲಾಪುರಕ್ಕೆ ಹೋಗಬೇಕೆಂದರೂ ಸುಗಮ ರಸ್ತೆಗಳಿಲ್ಲದೆ ರೋಗಿಗಳು ಪ್ರಾಣ ಸಂಕಟ ಅನುಭವಿಸುವಂತಾಗಿದೆ.

ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ?: ರಾಜ್ಯದಲ್ಲಿ ಸುಮಾರು 2000 ಕಿ.ಮೀ. ನಾಲ್ಕು ಪಥದ ಹೆದ್ದಾರಿಗಳಿವೆ. ನೆರೆಯ ಬಳ್ಳಾರಿ, ರಾಯಚೂರು ಜಿಲ್ಲೆಗಳು ಈ ಸೌಲಭ್ಯ ಪಡೆದು ಕೊಂಡಿವೆ. ಆದರೆ, ಕಲಬುರಗಿ ಜಿಲ್ಲೆಯ ಸಚಿವರು ಮತ್ತು ಶಾಸಕರು ತಮ್ಮದೇ ಸರಕಾರದ ಮೇಲೆ ಒತ್ತಡ ಹೇರುವಲ್ಲಿ ವಿಫಲರಾಗಿದ್ದಾರೆಯೇ? ಎಂಬ ಪ್ರಶ್ನೆ ಸಾರ್ವಜನಿಕ ವಲಯ ದಲ್ಲಿ ಬಲವಾಗಿ ಕೇಳಿಬರುತ್ತಿದೆ. ಕೇಂದ್ರ ಮತ್ತು ರಾಜ್ಯದ ನಡುವಿನ ಸಮನ್ವಯದ ಕೊರತೆ ಯಿಂದಾಗಿ ರಾಷ್ಟ್ರೀಯ ಹೆದ್ದಾರಿ 50 ಮತ್ತು 150ರ ವಿಸ್ತರಣೆ ಯೋಜನೆಗಳು ಕಡತದಲ್ಲೇ ಧೂಳು ಹಿಡಿಯುತ್ತಿವೆ.

ಇದನ್ನೂ ಓದಿ: Kalaburagi News: ಕಲಬುರಗಿ ಜಿಲ್ಲಾ ನ್ಯಾಯಾಲಯಕ್ಕೆ ಅಪರಿಚಿತರಿಂದ ಬಾಂಬ್ ಬೆದರಿಕೆ ಸಂದೇಶ

ಬಜೆಟ್ ಮೇಲೆ ನೆಟ್ಟಿದೆ ಜನರ ಚಿತ್ತ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸ ಲಿರುವ ಮುಂಬರುವ ಬಜೆಟ್ ಜಿಲ್ಲೆಯ ಪಾಲಿಗೆ ನಿರ್ಣಾಯಕವಾಗಿದೆ. ಈ ಬಾರಿಯೂ ಚತುಷ್ಪಥ ಯೋಜನೆಗಳಿಗೆ ಸ್ಪಷ್ಟ ಅನುದಾನ ಸಿಗದಿದ್ದರೆ, ಕಲ್ಯಾಣ ಕರ್ನಾಟಕ ಎಂಬ ಘೋಷಣೆ ಕೇವಲ ಕಾಗದದ ಮೇಲೆ ಉಳಿಯಲಿದೆ. ಸರಕಾರ ಈ ಕೂಡಲೇ ಎಚ್ಚೆತ್ತು ಕೊಂಡು ಹುಮನಾಬಾದ್-ಬಳ್ಳಾರಿ ಮತ್ತು ಕಲಬುರಗಿ-ಹೈದರಾಬಾದ್ ಮಾರ್ಗಗಳನ್ನು ಆದ್ಯತೆಯ ಮೇರೆಗೆ ಅಭಿವೃದ್ಧಿಪಡಿಸಬೇಕಿದೆ.

ಎಲ್ಲೆಡೆ ವೇಗ, ಇಲ್ಲಿ ಮಾತ್ರ ನಿಧಾನ!

ಉತ್ತರ ಪ್ರದೇಶ 13 ಎಕ್ಸ್‌ಪ್ರೆಸ್‌ವೇ ಹಾಗೂ 12000 ಕಿ.ಮೀ ಚತುಷ್ಪಥ ರಸ್ತೆಯೊಂದಿಗೆ ಅಗ್ರಸ್ಥಾನದಲ್ಲಿದೆ. ಬಿಹಾರ, ಬಂಗಾಳ, ಮಧ್ಯ ಪ್ರದೇಶ ಹಾಗೂ ನೆರೆಯ ತೆಲಂಗಾಣ, ಆಂಧ್ರ ರಾಜ್ಯಗಳು ಹೆದ್ದಾರಿ ಜಾಲ ವಿಸ್ತರಣೆಯಲ್ಲಿ ಕ್ರಾಂತಿ ಮಾಡುತ್ತಿವೆ. ಆದರೆ, ಕಲ್ಯಾಣ ಕರ್ನಾಟಕದ ಕಲಬುರಗಿಯಲ್ಲಿ ಮಾತ್ರ ಶೂನ್ಯ ಚತುಸ್ಪತ ರಸ್ತೆ ಇಲ್ಲದೇ, ಅಭಿವೃದ್ಧಿಯಲ್ಲಿ ಹಿನ್ನಡೆ ಅನುಭವಿಸುತ್ತಿದೆ.

ಜಿಲ್ಲೆಗೆ ಬೇಡಿಕೆ ಇರುವ ರಸ್ತೆ ಯೋಜನೆಗಳು

ಜೇವರ್ಗಿ-ಬಳ್ಳಾರಿ (ಎಸ್‌ಎಚ್-150ಎ): ಈ ಮಾರ್ಗ ಚತುಷ್ಪಥಗೊಳ್ಳಬೇಕು. ಹುಮನಾಬಾದ್-ಜೇವರ್ಗಿ (ಎನ್ಎಚ್-50): 210 ಕಿ.ಮೀ ವಿಸ್ತರಣೆ ಅಗತ್ಯ.

ಕಲಬುರಗಿ-ಯಾದಗಿರಿ (ಎನ್ಎಚ್-150): ತುರ್ತು ಚತುಷ್ಪಥ ನಿರ್ಮಾಣ ಬೇಕಿದೆ.

ಅಂತರರಾಜ್ಯ ಸಂಪರ್ಕ: ಕಲಬುರಗಿ- ಸೇಡಂ-ಹೈದರಾಬಾದ್ ಮಾರ್ಗ ವಾಣಿಜ್ಯ ದೃಷ್ಟಿಯಿಂದ ನಾಲ್ಕು ಪಥವಾಗಲಿ. ಲಾತೂರು-ಕಲಬುರಗಿ-ಕೋಡಂಗಲ್ ವಿಸ್ತರಣೆ ಹಾಗೂ ನಗರಕ್ಕೆ ಎರಡನೇ ವಲಯ ರಸ್ತೆ.

ಎಷ್ಟು ಚತುಷ್ಪಥ ರಸ್ತೆಗಳಿವೆ?

ಬೆಂಗಳೂರು: ೧೧ (ರಾಜ್ಯದಲ್ಲೇ ಅತಿ ಹೆಚ್ಚು)

ಹುಬ್ಬಳ್ಳಿ: ೫, ರಾಯಚೂರು ೫

ಮಂಗಳೂರು, ಬೆಳಗಾವಿ, ವಿಜಯಪುರ, ಶಿವಮೊಗ್ಗ ತಲಾ ೪

ಬಳ್ಳಾರಿ, ಹೊಸಪೇಟೆ ತಲಾ ೩

ದಾವಣಗೆರೆ ೨, ಕೊಪ್ಪಳ ೨

ಕಲಬುರಗಿ ೦೦ (ಶೂನ್ಯ ಭಾಗ್ಯ!)

image

ಕಲ್ಯಾಣ ಕರ್ನಾಟಕದ ವಿಭಾಗೀಯ ಕೇಂದ್ರಕ್ಕೆ ಸಮರ್ಪಕ ರಸ್ತೆಯೇ ಇಲ್ಲದಿದ್ದರೆ ಹೊಸ ಕಾರ್ಖಾನೆಗಳು ಹೇಗೆ ಬರುತ್ತವೆ? ನಮ್ಮ ಜನಪ್ರತಿನಿಧಿಗಳು ಕೇವಲ ಭರವಸೆ ನೀಡುತ್ತಾ ಕಾಲಹರಣ ಮಾಡುತ್ತಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಅನುದಾನ ಘೋಷಣೆಯಾಗ ದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಹೋರಾಟ ಮಾಡುವುದು ಅನಿವಾರ್ಯತೆ ಸೃಷ್ಟಿಯಾಗಲಿದೆ.

-ಮುತ್ತಣ್ಣ ನಡಗೇರಿ, ಹೋರಾಟಗಾರ