ಕಟ್ಟಡಗಳ ಸೆಟ್‌ಬ್ಯಾಕ್ ಉಲ್ಲಂಘನೆ ಕುರಿತಂತೆ ಈ ಮೊದಲಿದ್ದ ಶೇ.5ರಷ್ಟು ದಂಡವನ್ನು ಈಗ ಶೇ.15ಕ್ಕೆ ಹೆಚ್ಚಿಸುವ ತೀರ್ಮಾನಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಬಂದಿದ್ದು, ಈಗ ನಿರ್ಮಾಣವಾಗುತ್ತಿರುವ ಮತ್ತು ಮುಂದಿನ ದಿನಗಳಲ್ಲಿ ನಿರ್ಮಾಣವಾಗುವ 5000 ಚದರಡಿಗಳ ನಿವೇಶ ನದ ಕಟ್ಟಡಕ್ಕೆ ಇದು ಅನ್ವಯ ಎಂದು ವರದಿಯಾಗಿದೆ. ‘ಅಕ್ರಮ’ ಎನಿಸಿಕೊಂಡಿದ್ದುದು, ದಂಡ ಕಟ್ಟಿದರೆ ‘ಸಕ್ರಮ’ ಆಗುವ ಹಾಗೆ ಮಾಡಿದರೆ ಪ್ರಯೋಜನ ವೇನು? ಹಣ ಇರುವವರು ಉಲ್ಲಂಘನೆ ಮಾಡೇ ಮಾಡುತ್ತಾರೆ, ಅಷ್ಟೇ. ಹಾಗಾದರೆ ನಿಯಮ ಇರುವುದೇಕೆ? ಆದ್ದರಿಂದ, ಕಟ್ಟಡಗಳ ಮಾಲೀಕರು ಇನ್ನು ಮುಂದೆ ನಿಯಮಗಳನ್ನು ಉಲ್ಲಂಸದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು.
- ಪತ್ತಂಗಿ ಎಸ್. ಮುರಳಿ, ಬೆಂಗಳೂರು
ಇದೆಂಥಾ ವಿಪರ್ಯಾಸ..!
ರಂಜಿತ್ ಎಚ್. ಅಶ್ವತ್ಥ ಅವರ ‘ಅಶ್ವತ್ಥಕಟ್ಟೆ’ ಅಂಕಣ ಬರಹವನ್ನು (ಮಾ.3) ಓದಿದ ನಂತರ ನನಗೆ ಅನಿಸಿದ್ದನ್ನು ಇಲ್ಲಿ ಹಂಚಿಕೊಂಡಿರುವೆ: ರಾಜ್ಯದಲ್ಲಿ ಖಾಲಿ ಇರುವ 2.84 ಲಕ್ಷ ಸರಕಾರಿ ಹುದ್ದೆಗಳ ಪೈಕಿ, ತಂತ್ರಜ್ಞಾನದ ನೆರವಿನ ಹಿನ್ನೆಲೆಯಲ್ಲಿ, ಅನಗತ್ಯವೆನಿಸುವ ಹುದ್ದೆಗಳು ಎಷ್ಟಿವೆ ಎಂಬ ಖಚಿತ ಮಾಹಿತಿಯನ್ನು ಸರಕಾರ ಕಂಡುಕೊಂಡಿದೆಯೇ? ಅಂಕಣಕಾರರ ಅಂದಾಜಿನ ಪ್ರಕಾರ ಇದು 30000 ಇರಬಹುದು. ಕೇವಲ ಸರಕಾರಿ ಹುದ್ದೆ ಗಳನ್ನೇ ನೆಚ್ಚಿಕೊಳ್ಳದೆ, ಖಾಸಗಿ ವಲಯ ಮತ್ತು ಸ್ವ-ಉದ್ಯೋಗಗಳತ್ತಲೂ ಯುವಜನರು ಗಮನಹರಿಸಬೇಕು ಎಂಬ ಅವರ ಅಭಿಪ್ರಾಯವೇನೋ ಸಮಂಜಸವಾಗೇ ಇದೆ. ಆದಾಗ್ಯೂ, ನಿಖರವಾಗಿ ಅಲ್ಲದಿದ್ದರೂ ಸಾಮಾನ್ಯ ಅಂದಾಜಿನ ಪ್ರಕಾರ ಖಾಸಗಿ ವಲಯದಲ್ಲಿ ಇಂತಿಷ್ಟು ಖಾಲಿ ಹುದ್ದೆಗಳು ಮತ್ತು ಅವುಗಳ ಭರ್ತಿಗೆ ಖಾಸಗಿ ವಲಯವು ನಿರೀಕ್ಷಿಸುವ ಕನಿಷ್ಠ ಅರ್ಹತೆ (ಕೌಶಲ) ಏನು ಎಂಬ ಬಗ್ಗೆ ಒಂದು ಸ್ಥೂಲವಾದ ಮಾಹಿತಿ ಮತ್ತು ಅಂಥ ಕೌಶಲವನ್ನು ನೀಡುವ ಶೈಕ್ಷಣಿಕ ತರಬೇತಿ ವ್ಯವಸ್ಥೆಯ ಜವಾಬ್ದಾರಿಯನ್ನು ಸರಕಾರಿ ಮತ್ತು ಖಾಸಗಿ ವಲಯ ಎರಡೂ ಹೊರಬೇಕು.
ಇದನ್ನೂ ಓದಿ: BBMP News: ಈ ಪ್ರಮಾಣ ಪತ್ರ ಇದ್ದರೆ ಮಾತ್ರ ಕಟ್ಟಡಗಳಿಗೆ ವಿದ್ಯುತ್, ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆ- BBMP ಆದೇಶ
ಸರಕಾರಿ ವಲಯದಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಬೇಕಿರುವ ‘ಅನೇಕ’ ಅರ್ಹತೆಗಳು ಖಾಸಗಿ ವಲಯದಲ್ಲಿ ಅಗತ್ಯವಿಲ್ಲ ಎಂಬ ಅಂಕಣಕಾರರ ಮಾತನ್ನೂ ಒಪ್ಪಬೇಕು. ಯಾವುದೇ ರಾಜ್ಯದಲ್ಲಿ, ‘ಉದ್ಯೋಗ ಸೃಷ್ಟಿ’ಯ ನೆಲೆಯಿಂದ ನೋಡಿದಾಗ, ಸರಕಾರಿ ಉದ್ಯೋಗಗಳು ಸೀಮಿತವಾಗಿರುತ್ತವೆ ಮತ್ತು ಎಲ್ಲರಿಗೂ ಸರಕಾರಿ ಉದ್ಯೋಗವನ್ನು ಕಲ್ಪಿಸುವುದು ಆಗದ ಮಾತು. ಆದಾಗ್ಯೂ ಖಾಸಗಿ ವಲಯದಲ್ಲಿನ ಅಗತ್ಯತೆಗಳನ್ನು ಲಕ್ಷಿಸಿ ಉದ್ಯೋಗಿಗಳನ್ನು ಸಜ್ಜುಗೊಳಿಸುವುದಕ್ಕೆ ಅಗತ್ಯವಾದ ವಾತಾವರಣವನ್ನು ನಿರ್ಮಾಣ ಮಾಡುವ ಹೊಣೆ ಗಾರಿಕೆ ತನ್ನದು ಎನ್ನುವುದನ್ನು ಸರಕಾರ ಮನಗಾಣವೇಕು.
ಆದರೆ ಈ ನಿಟ್ಟಿನಲ್ಲಿ ಸರಕಾರ ಏನನ್ನಾದರೂ ಮಾಡಿದೆಯೇ ಎಂಬುದು ಯಕ್ಷಪ್ರಶ್ನೆ. ಖಾಸಗಿ ಉದ್ಯಮ ವಲಯ ಎಂಬುದು ಒಂದು ವೈವಿಧ್ಯಮಯ ಪ್ರಪಂಚ; ಆದ್ದರಿಂದ ಅಗತ್ಯವಿರುವ ಸಿಬ್ಬಂದಿಯನ್ನು ಅದು ದೊರಕಿಸಿಕೊಳ್ಳಲು (ಅಂದರೆ ಸೂಕ್ತ ತರಬೇತಿ ನೀಡುವಲ್ಲಿ) ಉತ್ಸುಕತೆಯನ್ನು ತೋರಬೇಕು.
ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ಮೇಳಗಳನ್ನು ಏರ್ಪಡಿಸುವ ಸರಕಾರದ ಉಮೇದು, ರಿಯಾಯಿತಿ ಮತ್ತಿತರ ಆಶ್ವಾಸನೆಗಳ ಭರವಸೆ, ತಿಳಿವಳಿಕೆ ಪತ್ರ (MOU) ಇತ್ಯಾದಿಗಳ ಬಗ್ಗೆ ಕೇಳುತ್ತೇವೆ. ಇಂಥ ಒಡಂಬಡಿಕೆಗಳಲ್ಲಿ, ಸ್ಥಳೀಯರಿಗೆ ಉದ್ಯೋಗಾ ವಕಾಶ, ಉದ್ಯೋಗಾಕಾಂಕ್ಷಿಗಳಿಗೆ ಸೂಕ್ತ ತರಬೇತಿ ನೀಡುವ ಬಗ್ಗೆ ಉದ್ಯಮ ಸ್ಥಾಪಿಸು ವವರು ಪೂರ್ವಭಾವಿಯಾಗಿ ಆಶ್ವಾಸನೆ ನೀಡುವಿಕೆ ಮುಂತಾದವು ಕೂಡ ಇಂಥ ಮೇಳಗಳ ಪ್ರಮುಖ ವಿಷಯವಾಗಬೇಕು. ಒಟ್ಟಿನಲ್ಲಿ, ನಿಶ್ಚಿತ ಬಂಡವಾಳ (solid capital) ಎನಿಸಿ ಕೊಂಡ ಮಾನವ ಸಂಪನ್ಮೂಲವನ್ನು ದಂಡಿಯಾಗಿ ಹೊಂದಿರುವ ಭಾರತದಲ್ಲಿ, ನಿರು ದ್ಯೋಗದ ಸಮಸ್ಯೆಯೇ ಪ್ರಮುಖವಾಗಿ ಕಾಡುತ್ತಿರುವುದು ವಿಪರ್ಯಾಸ!
- ಸಾಮಗ ದತ್ತಾತ್ರಿ, ಬೆಂಗಳೂರು