ಅನಾಗರಿಕ ನಡವಳಿಕೆ
ಇದೊಂದು ಅನಾಗರಿಕ ನಡವಳಿಕೆ, ರಾಜ್ಯಸರಕಾರಕ್ಕೂ ಕೆಟ್ಟ ಹೆಸರು. ಇದು ನಿಜಕ್ಕೂ ತಲೆ ತಗ್ಗಿಸುವ ಘಟನೆ. ಇವರು ಇನ್ನೂ ಯಾವ ಶತಮಾನದಲ್ಲಿ ಇದ್ದಾರೆ ? ಈ ಮಕ್ಕಳ ಪೋಷಕರಿಗೆ ಶಿಕ್ಷಣಾಧಿಕಾರಿಗಳು ತಿಳಿವಳಿಕೆ ಹೇಳಬಾರದೇ? ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಜಾತಿ ವ್ಯವಸ್ಥೆ ಆಚರಣೆಯಲ್ಲಿ ಇರುವುದಕ್ಕೆ ಇದೊಂದು ಜ್ವಲಂತ ಉದಾಹರಣೆ.