ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Readers Colony: ಹಿಂದೂಗಳ ಮೇಲಿನ ದಬ್ಬಾಳಿಕೆ ಇನ್ನಾದರೂ ನಿಲ್ಲಲಿ

ಖುದ್ದು ಯುನೂಸ್ ಸರ್ಕಾರವೇ ಕಳೆದ ವರ್ಷದ ಅವಧಿಯಲ್ಲಿ ಹಿಂದೂಗಳಿಗೆ ಸಂಬಂಧಿ ಸಿದ 645 ಹಿಂಸಾಚಾರಗಳಾಗಿವೆ ಅಂತ ಮಾಹಿತಿ ಕೊಟ್ಟಿದೆ. ಎಲೆಕ್ಷನ್ ನಡೆಯೋವಾಗಲು ಇಬ್ಬರು ಹಿಂದೂಗಳ ಹತ್ಯೆಯಾಗಿದೆ. ಆದರೀಗ ಅಲ್ಲಿ ಜನರಿಂದ ಆಯ್ಕೆಯಾದ ಬಿಎನ್‌ಪಿ ಪಕ್ಷ ಅಿಕಾರಕ್ಕೆ ಬಂದಿದೆ. ಜನರ ಮೇಲೆ ಹತ್ಯಾಕಾಂಡ ಮಾಡಿಸಿದ್ದಾರೆ ಅಂತೇಳಿ ಹಸೀನಾ ಅವರ ಅವಾಮಿ ಲೀಗ್ ಪಕ್ಷಕ್ಕೆ ಈ ಸಲ ಚುನಾವಣೆಗೆ ಬ್ಯಾನ್ ಹೇರಲಾಗಿತ್ತು.

ನೆರೆಯ ಬಾಂಗ್ಲಾದೇಶದಲ್ಲಿ ಸಾರ್ವತ್ರಿಕ ಚುನಾವಣೆ ಆಗಿದೆ. ಅಲ್ಲಿನ ಮಾಜಿ ಪಿಎಂ ಖಾಲಿದಾ ಜಿಯಾ ಅವರ ಪುತ್ರ ತಾರಿಖ್ ರೆಹಮಾನ್ ನೇತೃತ್ವದ ಬಿಎನ್‌ಪಿ ಪಕ್ಷ ಅಧಿಕಾರಕ್ಕೇರಿದೆ. 2024ರ ಜುಲೈನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ಎಲ್ಲಾ ಆಗಿ ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಸರ್ಕಾರ ಪತನಗೊಂಡಿತ್ತು.

ಬಳಿಕ ಮೊಹಮದ್ ಯುನೂಸ್ ನಾಯಕತ್ವದ ಮಧ್ಯಂತರ ಸರ್ಕಾರ ಬಂದಾಗ ಬಾಂಗ್ಲಾದ ಚಿತ್ರಣವೇ ಬಯಲಾಯ್ತು. ಮೂಲಭೂತವಾದಿ ಗಳ ಅಟ್ಟಹಾಸ ತಾರಕಕ್ಕೇರಿತು. ಅಲ್ಪ ಸಂಖ್ಯಾತ ಹಿಂದೂಗಳ ಮೇಲೆ ದಬ್ಬಾಳಿಕೆ ದೌರ್ಜನ್ಯ ಮಾಡಿ ನೂರಾರು ಹಿಂದೂಗಳನ್ನು ಕಗ್ಗೊಲೆ ಮಾಡಲಾಗಿದೆ.

ಖುದ್ದು ಯುನೂಸ್ ಸರ್ಕಾರವೇ ಕಳೆದ ವರ್ಷದ ಅವಧಿಯಲ್ಲಿ ಹಿಂದೂಗಳಿಗೆ ಸಂಬಂಧಿ ಸಿದ 645 ಹಿಂಸಾಚಾರಗಳಾಗಿವೆ ಅಂತ ಮಾಹಿತಿ ಕೊಟ್ಟಿದೆ. ಎಲೆಕ್ಷನ್ ನಡೆಯೋವಾಗಲು ಇಬ್ಬರು ಹಿಂದೂಗಳ ಹತ್ಯೆಯಾಗಿದೆ. ಆದರೀಗ ಅಲ್ಲಿ ಜನರಿಂದ ಆಯ್ಕೆಯಾದ ಬಿಎನ್‌ಪಿ ಪಕ್ಷ ಅಿಕಾರಕ್ಕೆ ಬಂದಿದೆ. ಜನರ ಮೇಲೆ ಹತ್ಯಾಕಾಂಡ ಮಾಡಿಸಿದ್ದಾರೆ ಅಂತೇಳಿ ಹಸೀನಾ ಅವರ ಅವಾಮಿ ಲೀಗ್ ಪಕ್ಷಕ್ಕೆ ಈ ಸಲ ಚುನಾವಣೆಗೆ ಬ್ಯಾನ್ ಹೇರಲಾಗಿತ್ತು.

ಹೀಗಾಗಿ ಅವಾಮಿ ಲೀಗ್ ಬಿಟ್ರೆ ಜಮಾತ್ ಪಕ್ಷಕ್ಕೆ ಹೋಲಿಸಿದ್ರೆ.. ಭಾರತಕ್ಕೆ ಸ್ವಲ್ಪ ಬೆಟರ್ ಅಂದ್ರೆ ಈ ಬಿಎನ್‌ಪಿ ಪಕ್ಷ. ಈಗ ಇದು ಒಟ್ಟು 300 ಕ್ಷೇತ್ರಗಳ ಪೈಕಿ 200ಕ್ಕೂ ಅಧಿಕ ಸ್ಥಾನ ಗೆದ್ದು ಬಾಂಗ್ಲಾ ಚುಕ್ಕಾಣಿ ಹಿಡಿದಿದೆ. ಹೀಗಾಗಿ ಮುಂಚೆಗಿಂತ ಅವರ ಜೊತೆ ಭಾರತ ಸಂಬಂಧ ಸುಧಾರಿಸಿಕೊಳ್ತಿದೆ.

ಇತ್ತಿಚಿಗಷ್ಟೇ ಖಾಲಿದಾ ಜಿಯಾ ಮೃತಪಟ್ಟಾಗ ಭಾರತದ ಪರ ವಿದೇಶಾಂಗ ಸಚಿವ ಎಸ್.ಜೈಶಂಕರ್ ಬಾಂಗ್ಲಾಗೆ ಹೋಗಿ ಖಾಲಿದಾ ಅವರ ಅಂತ್ಯಕ್ರಿಯೇಲಿ ಭಾಗಿಯಾಗಿದ್ರು. ಹೀಗಾಗಿ ಈಗಲಾದರೂ ಅಲ್ಲಿನ ಹಿಂದೂ ಅಲ್ಪ ಸಂಖ್ಯಾತರ ಮೇಲಿನ ದಬ್ಬಾಳಿಕೆ ನಿಲ್ಲಲಿ ಅಂತ ಭಾರತ ಆಗ್ರಹಿಸಲಿ.

-ಲೋಹಿತ ರಾಮಣ್ಣಾ ಹಸೂರೆ, ಬೆಳಗಾವಿ

ಹಟ್ಟಿ ಮಾರಮ್ಮ ದೇವಸ್ಥಾನಕ್ಕೆ ಆವರಣ ಗೋಡೆ ಬೇಕು

ಸರಿಸುಮಾರು 150-20 ವರ್ಷಗಳ ಇತಿಹಾಸ ಇರುವಂತಹ ನಂಜನಗೂಡಿನ ಪಟ್ಟಣ ದಲ್ಲಿರುವ ಪ್ರಸಿದ್ಧ ಹಟ್ಟಿ ಮಾರಮ್ಮ ದೇವಸ್ಥಾನಕ್ಕೆ ಅತ್ಯಗತ್ಯವಾಗಿ ಪ್ರಮುಖ ಕೆಲಸ ವೊಂದು ಆಗಬೇಕಾಗಿದೆ! ಈ ದೇವಸ್ಥಾನ ನಂಜನಗೂಡು ಪಟ್ಟಣದ ಶ್ರೀರಾಮಪುರ (ಚಕ್ರ ಹಟ್ಟಿ ) ಚಕ್ರ ಬಳಗ ಸಮಿತಿ ಸುಪರ್ದಿಯಲ್ಲಿದ್ದು, ಶತಮಾನಗಳಿಂದಲೂ ಈ ಮನೆತನ ದವರೇ ಧಾರ್ಮಿಕ ಪೂಜಾ ಕೈಕಂಕರ್ಯಗಳನ್ನು ನಡೆಸುತ ನೆರವೇರಿಸಿಕೊಂಡು ಬಂದಿರು ತ್ತಾರೆ.

ಪ್ರತಿವರ್ಷ ಫೆಬ್ರವರಿ/ಮಾರ್ಚ್ ತಿಂಗಳಲ್ಲಿ ಅದ್ಧೂರಿಯಾಗಿ ಕೆಂಡ ಉತ್ಸವ, ಜಾತ್ರೆ ಕೂಡ ನಡೆಯುತ್ತದೆ. ಈ ದೇಗುಲಕ್ಕೆ ಸುತ್ತಮುತ್ತಲಿನ ಗ್ರಾಮಸ್ಥರು, ಅಕ್ಕಪಕ್ಕದ ಜಿಲ್ಲೆ ನೆರೆಯ ತಮಿಳುನಾಡು ರಾಜ್ಯದಿಂದಲೂ ಭಕ್ತಾದಿಗಳು ಬರುವುದುಂಟು. ತಾಲೂಕು ಸಾರ್ವಜನಿಕ ಆಸ್ಪತ್ರೆ, ಕೇಂದ್ರ ಬಸ್ ನಿಲ್ದಾಣ, ಅಂಬೇಡ್ಕರ್ ಸರ್ಕಲ್, ಆಸುಪಾಸಿನ ಈ ದೇವಸ್ಥಾನ ಇದೆ. ಹೀಗೆ, ಕಾಂಪೌಂಡ್ ನಿರ್ಮಿಸದೆ ನಿರ್ಲಕ್ಷ್ಯ ಮುಂದುವರಿದರೆ ಈ ಸ್ಥಳ ಮುಂದಿನ ದಿನಗಳಲ್ಲಿ ಅಪಘಾತ ವಲಯವಾಗಿ ಪರಿಣಮಿಸಬಹುದು. ‌

ಕಳೆದ ಎರಡು ಮೂರು ದಶಕಗಳಿಂದ ಸ್ಥಳೀಯ ಆಡಳಿತವಾದ ನಗರಸಭೆ ಹಾಗೂ ಶಾಸಕ ರಿಗೆ ಈ ವಿಚಾರ ಸಂಬಂಧ ಮನವಿ ಸಲ್ಲಿಸಿದರೂ, ಆಶ್ವಾಸನೆ ಸಿಗುತ್ತದೆ ವಿನಃ ಯಾವುದೇ ಕಾರ್ಯ ಜಾರಿ ಆಗದಿರುವುದು ದೇವಸ್ಥಾನ ಆಡಳಿತ ಮಂಡಳಿಯ ಶ್ರೀರಾಮಪುರ ಜನರಿಗೆ ಯಕ್ಷಪ್ರಶ್ನೆಯಾಗಿ ಉಳಿದಿದೆ.

ಇನ್ನಾದರೂ ಸಂಬಂಧಪಟ್ಟ ನಗರಸಭೆಯ ಅಧಿಕಾರಿ ವರ್ಗ, ಜನಪ್ರತಿನಿಧಿಗಳು, ಸ್ಥಳೀಯ ಶಾಸಕರಾದ ದರ್ಶನ್ ಧ್ರುವನಾರಾಯಣ್ ತುರ್ತಾಗಿ ಗಮನ ವಹಿಸಿ ಆದ್ಯತೆ ಮೇರೆಗೆ ದೇಗುಲದ ಹೊರಾಂಗಣದ ಸುತ್ತ ಕಾಂಪೌಂಡ್ ನಿರ್ಮಾಣಕ್ಕೆ ಚಾಲನೆ ನೀಡಬೇಕಿದೆ.

-ಅನಿಲ್ ಕುಮಾರ್, ನಂಜನಗೂಡು