ಓದುಗರ ಓಣಿ
ಕರ್ನಾಟಕ ಸರಕಾರವು ಇತ್ತೀಚೆಗೆ ದ್ವಿಭಾಷಾ ನೀತಿ ಜಾರಿಗೆ ತಂದಿದ್ದು ಅದರ ಫಲವಾಗಿ ವಿದ್ಯಾರ್ಥಿಗಳಿಗೆ ಹಿಂದಿ ಪರೀಕ್ಷೆ ಬರೆದರೂ ಸಹ ಅದಕ್ಕೆ ಅಂಕಗಳನ್ನು ನೀಡುವುದಿಲ್ಲ ಎಂದು ಪ್ರಕಟಿಸಿದೆ. ವರ್ಷಗಟ್ಟಲೆ ಓದಿದ ನಂತರ ಈಗ ಬೇಡ ಅಥವಾ ಅಂಕ ಸಿಗದು ಎಂದರೆ ವಿದ್ಯಾರ್ಥಿಗಳು ವಿಚಲಿತವಾಗುತ್ತಾರೆ. ಈಗಾಗಲೇ ಹಿಂದಿ ಬಾರದ ಅನೇಕ ಕನ್ನಡಿ ಗರು ನಮ್ಮ ರಾಜ್ಯದ ಅನೇಕ ಹುದ್ದೆಗಳನ್ನು ಗಳಿಸಿಕೊಳ್ಳುವುದರಲ್ಲಿ ವಿಫಲರಾಗಿದ್ದ, ಅವು ಗಳನ್ನು ಉತ್ತರ ಭಾರತೀಯರು ಆಕ್ರಮಿಸಿಕೊಳ್ಳುತ್ತಿದ್ದಾರೆ.
ಅಗತ್ಯವೋ ಅನಗತ್ಯವೋ ಹಿಂದಿ ಕಲಿಯಲೇಬೇಕಾದ ಅನಿವಾರ್ಯ ವಿರುವುದರಿಂದ ಒಪ್ಪಲೇಬೇಕು. ಹಿಂದಿ ಕಲಿಯದೆ ನಮ್ಮ ಮಕ್ಕಳು ಕೂಪ ಮಂಡೂಕ ಆಗಬೇಕೇ? ಕನ್ನಡಕ್ಕೆ ಆದ್ಯತೆ ಬೇಕು. ಅಂತೆಯೇ ಆಂಗ್ಲ ಬದುಕಿನ ಅನಿವಾರ್ಯವಾಗಿದೆ.
ಹಾಡಿನಲ್ಲಿ ಅಣ್ಣಾವ್ರೇ ಹೇಳಿಲ್ಲವೇ ’ಕಲಿಯೋಕೆ ಕೋಟಿ ಭಾಷೆ, ಆಡೋಕೆ ಒಂದೇ ಭಾಷೆ, ಕನ್ನಡಾ...ಕನ್ನಡಾ...’ ಅಂತ. ಹಾಗಾಗಿ ಹಿಂದಿಗೆ ಅಂಕ ಇಲ್ಲ ಎಂಬ ಆದೇಶವನ್ನು ಹಿಂಪಡೆ ಯುವುದು ಸೂಕ್ತ. ಕರ್ನಾಟಕದಲ್ಲಿ ಆಡಳಿತ ಭಾಷೆಯಾಗಿ ಹಾಗೂ ಎಲ್ಲ ಕಡೆ ಕನ್ನಡವೇ ಇರಲಿ. ಪರಭಾಷಿಕರಿಗೂ ಕನ್ನಡವನ್ನೇ ಬಳಸಲು ಕಲಿಸೋಣ. ಆದರೆ, ಹಿಂದಿ ಬೇಡವೇ ಬೇಡ ಎಂದರೆ ಅದು ಯುವಕರ ಜೀವನಕ್ಕೆ ಮಾರಕವಾದೀತು. ಈ ಬಗ್ಗೆ ಸರಕಾರ ಯೋಚಿಸಿ ತೀರ್ಮಾನಕ್ಕೆ ಬರಲಿ.
-ಪತ್ತಂಗಿ ಎಸ್.ಮುರಳಿ , ಬೆಂಗಳೂರು
ಇದನ್ನೂ ಓದಿ: Readers Colony: ಕಥೆಗಾರರ ಪಡಿಪಾಟಲು
ಐಪಿಎಲ್‌ನಿಂದಾಗುವ ಮಾಲಿನ್ಯ ತಡೆಗಟ್ಟಿ
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಒಂದು ಐಪಿಎಲ್ ಪಂದ್ಯದ ಹಿಂದಿರುವ ಪರಿಸರ ಮಾಲಿನ್ಯ ಭಯಾನಕ ವಾಗಿದೆ. ಅಂಕಿಅಂಶಗಳ ಪ್ರಕಾರ, ಒಂದು ಪಂದ್ಯವು ಸರಾಸರಿ 16000 ಕೆಜಿಗಿಂತ ಹೆಚ್ಚು ತ್ಯಾಜ್ಯವನ್ನು ಉತ್ಪಾದಿಸುತ್ತದೆ ಮತ್ತು ಸುಮಾರು 18000 ಟನ್ ಕಾರ್ಬನ್ ಡೈಆಕ್ಸೈಡ್ ತತ್ಸಮಾನ - ಇಂಗಾಲವನ್ನು ಹೊರ ಸೂಸುತ್ತದೆ. ಇದು ಸಾವಿರಾರು ಮನೆಗಳ ದಿನ ನಿತ್ಯದ ಇಂಧನ ಬಳಕೆಗೆ ಸಮಾನವಾಗಿದೆ. ನಗರವನ್ನು ಬಿನ್-ಮುಕ್ತ ಎಂದು ಘೋಷಿಸಿರುವುದು ಕೇವಲ ಕಣ್ಣೊರೆಸುವ ತಂತ್ರ ಇದು ಕಸವನ್ನು ಇಲ್ಲವಾಗಿಸುವುದಿಲ್ಲ, ಬದಲಾಗಿ ಪ್ಲಾಸ್ಟಿಕ್ ಬಾಟಲಿಗಳು ಮತ್ತು ಕಸವನ್ನು ಕಬ್ಬನ್ ಪಾರ್ಕ್ನಂತಹ ಹಸಿರು ವಲಯಗಳಿಗೆ ತಳ್ಳುತ್ತಿದೆ.
ಸ್ವಯಂ ಸೇವಕರು ಕಸ ಆರಿಸುವುದನ್ನು ನೋಡಿ ಸರ್ಕಾರ ಬೆನ್ನು ತಟ್ಟಿಕೊಳ್ಳುವುದನ್ನು ಬಿಟ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಸರ್ಕಾರವು ತಕ್ಷಣವೇ ಶೂನ್ಯ ತ್ಯಾಜ್ಯ ಕ್ರೀಡಾಂ ಗಣ ನೀತಿಯನ್ನು ಜಾರಿಗೆ ತರಬೇಕು. ಕೋಟಿಗಟ್ಟಲೆ ಲಾಭ ಮಾಡುವ ಆಯೋಜಕರ ಮೇಲೆ ಭಾರಿ ಪ್ರಮಾಣದ ಪರಿಸರ ತೆರಿಗೆ ವಿಧಿಸಬೇಕು. ಕ್ರೀಡಾಂಗಣದ ಸುತ್ತಲಿನ 5 ಕಿ.ಮೀ ವ್ಯಾಪ್ತಿ ಯಲ್ಲಿ ಏಕಬಳಕೆಯ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ನಿಷೇಧಿಸದಿದ್ದರೆ ಮತ್ತು ಆಯೋ ಜಕರು ವೈಜ್ಞಾನಿಕ ತ್ಯಾಜ್ಯ ವಿಲೇವಾರಿಗೆ ಜವಾಬ್ದಾ ರರಾಗದಿದ್ದರೆ, ಕೇವಲ ಮನರಂಜನೆ ಗಾಗಿ ನಮ್ಮ ಹಸಿರು ಬೆಂಗಳೂರನ್ನು ಬಲಿ ನೀಡಿದಂತಾಗುತ್ತದೆ.
- ಡಾ.ವಿಜಯಕುಮಾರ ಎಚ್.ಕೆ., ರಾಯಚೂರು