ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Readers Colony: ಸಾಂಸ್ಕೃತಿಕ ಪ್ರತಿಷ್ಠಾನ

ಇತ್ತೀಚೆಗೆ ಪ್ರವಾಸೋದ್ಯಮ ಸಚಿವ ಕೆ.ಜೆ.ಜಾರ್ಜ್ ಅವರು ಕರ್ನಾಟಕ ಪರಂಪರೆ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಸ್ಥಾಪಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಅದಕ್ಕೂ ಮೊದಲು ಭವ್ಯ ಇತಿಹಾಸ ಹೊಂದಿರುವ ಈ ನಾಡಿನ ಐತಿಹಾಸಿಕ ಸ್ಮಾರಕಗಳು, ವಸ್ತು ಸಂಗ್ರಹಾ ಲಯಗಳು, ಪುರಾತತ್ವ ತಾಣಗಳ ಸೂಕ್ತ ಸಂರಕ್ಷಣೆ ಅಗತ್ಯವಿದೆ. ಈಗಾಗಲೇ ಪ್ರವಾಸೋದ್ಯಮ ಇಲಾಖೆ, ಪುರಾತತ್ವ ಇಲಾಖೆಗಳಿದ್ದರೂ ಉತ್ತರ ಕರ್ನಾಟಕದ ಎಷ್ಟೋ ಸ್ಮಾರಕಗಳು ದನದ ಕೊಟ್ಟಿಗೆಯಂತಾಗಿರುವುದು ಬೇಸರದ ಸಂಗತಿ.

ಇತ್ತೀಚೆಗೆ ಪ್ರವಾಸೋದ್ಯಮ ಸಚಿವ ಕೆ.ಜೆ.ಜಾರ್ಜ್ ಅವರು ಕರ್ನಾಟಕ ಪರಂಪರೆ ಮತ್ತು ಸಾಂಸ್ಕೃ ತಿಕ ಪ್ರತಿಷ್ಠಾನ ಸ್ಥಾಪಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಅದಕ್ಕೂ ಮೊದಲು ಭವ್ಯ ಇತಿಹಾಸ ಹೊಂದಿರುವ ಈ ನಾಡಿನ ಐತಿಹಾಸಿಕ ಸ್ಮಾರಕಗಳು, ವಸ್ತು ಸಂಗ್ರಹಾ ಲಯಗಳು, ಪುರಾತತ್ವ ತಾಣಗಳ ಸೂಕ್ತ ಸಂರಕ್ಷಣೆ ಅಗತ್ಯವಿದೆ. ಈಗಾಗಲೇ ಪ್ರವಾಸೋದ್ಯಮ ಇಲಾಖೆ, ಪುರಾತತ್ವ ಇಲಾಖೆಗಳಿದ್ದರೂ ಉತ್ತರ ಕರ್ನಾಟಕದ ಎಷ್ಟೋ ಸ್ಮಾರಕಗಳು ದನದ ಕೊಟ್ಟಿಗೆಯಂತಾಗಿರುವುದು ಬೇಸರದ ಸಂಗತಿ. ಈ ಎಲ್ಲ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಸಾಂಸ್ಕೃತಿಕ ಪ್ರತಿಷ್ಠಾನ ಕೇವಲ ಹಾಳೆಯಲ್ಲಿ ಮಾತ್ರ ಉಳಿಯದೇ, ಹಣಕಾಸಿನ ನಿರ್ವಹಣೆ ಸೂಕ್ತ ರೀತಿಯಲ್ಲಿ ನಡೆದು, ಇತಿಹಾಸದ ಕುರುಹುಗಳನ್ನು ಕಾಯ್ದುಕೊಳ್ಳಬೇಕಾಗಿದೆ.

- ಮಾನಸ ಎಸ್., ಕಳಸ

ಇದನ್ನೂ ಓದಿ: Readers Colony: ಟ್ರಂಪ್ ಇದನ್ನು ನೋಡಬೇಕು!

ಬ್ರೋಕರ್‌ಗಳ ಹಾವಳಿ

ಇತ್ತೀಚೆಗೆ ನಗರ ಪ್ರದೇಶಗಳಲ್ಲಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನಕಲಿ ಮ್ಯಾರೇಜ್ ಬ್ರೋಕರ್‌ಗಳ ಹಾವಳಿ ಹೆಚ್ಚಾಗಿದ್ದು, ಇದನ್ನು ತಡೆಗಟ್ಟಲು ಸರಕಾರ ಕಾನೂನು ಜಾರಿ ಮಾಡುವ ಅವಶ್ಯಕತೆ ಇದೆ. ವಾಸ್ತವ ಸ್ಥಿತಿ ಹೇಗಿದೆ ಎಂದರೆ, ಗ್ರಾಮೀಣ ಯುವ ರೈತರಿಗೆ ಹತ್ತು ಎಕರೆ ಫಲವತ್ತಾದ ಭೂಮಿ ಇದ್ದರೂ ಹೆಣ್ಣು ಸಿಗುತ್ತಿಲ್ಲ. ಇದನ್ನು ಬಂಡವಾಳ ಮಾಡಿಕೊಂಡಿರುವ ಕೆಲವು ಮಧ್ಯವರ್ತಿಗಳು ಗುಲ್ಬರ್ಗಾ ರಾಯಚೂರು ವಿಜಾಪುರ ಜಿಲ್ಲೆಯ ಲಂಬಾಣಿ ಜನಾಂಗದ ಬಡ ಹುಡುಗಿಯರನ್ನು ತೊರಿಸಿ, ಹುಡುಗಿಯ ಪೋಷಕರಿಗೆ ಸುಮಾರು ಎರಡು ಲಕ್ಷ, ಹುಡುಗಿಯ ಬಂಧು ಬಳಗ ಕರೆದು ಕೊಂಡು ಬಂದು ಮದುವೆ ಮಾಡಿಸುವ ಖರ್ಚು ಸುಮಾರು ಎರಡು ಲಕ್ಷ, ಬ್ರೋಕರ್‌ಗೆ ಎರಡು ಲಕ್ಷ, ಇದು ಮಂಡ್ಯ ಜಿಯಾದ್ಯಂತ ನಡೆಯುತ್ತಿರುವ ಹಗಲು ದರೋಡೆ. ನಗರ ಪ್ರದೇಶಗಳಲ್ಲಿ ಗಂಡು ಹೆಣ್ಣು ತೋರಿಸುವ ನೆಪ ಮಾಡಿಕೊಂಡು ಪೋಷಕರಿಂದ ಲಕ್ಷದ ಲೆಕ್ಕದಲ್ಲಿ ಹಣ ವಸೂಲಿ ಮಾಡು ತ್ತಿದ್ದಾರೆ. ಅಮಾಯಕರನ್ನು ವಂಚಿಸಲು ಕೆಲ ಮದುವೆ ಬ್ರೋಕರ್‌ಗಳು ಹಿಡಿದ ಸುಲಭದ ದಾರಿ ಇದು. ‌

- ಬೂಕನಕೆರೆ ವಿಜೇಂದ್ರ, ಮೈಸೂರು

ಗಣೇಶೋತ್ಸವಕ್ಕೆ ನೆರವು

ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳು ಕಲೆ, ನಾಟಕ, ದೇಶಭಕ್ತಿ ಪ್ರಧಾನ ಕಾರ್ಯಕ್ರಮಗಳು ಮತ್ತು ಸಾಮಾಜಿಕ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಗಣೇಶೋತ್ಸವ ಆಯೋಜನೆಗೆ ತಗಲುವ ವೆಚ್ಚ ಗಣನೀಯವಾಗಿ ಹೆಚ್ಚಾಗಿದೆ.

ಪೆಂಡಾಲ್ ನಿರ್ಮಾಣ, ಸೌಂಡ್ ಸಿಸ್ಟಮ್, ಮತ್ತು ಮೂರ್ತಿಗಳ ಬೆಲೆ ಏರಿಕೆಯಿಂದಾಗಿ ಸಣ್ಣ ಮತ್ತು ಮಧ್ಯಮ ಗಾತ್ರದ ಮಂಡಳಿಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಜೊತೆಗೆ ಹಬ್ಬದ ದಿನಗಳಲ್ಲಿ ಬಳಸುವ ವಿದ್ಯುತ್‌ಗೆ ಭಾರಿ ಪ್ರಮಾಣದ ಶುಲ್ಕವನ್ನು ಪಾವತಿಸಬೇಕಾಗಿರುವುದು ಮಂಡಳಿಗಳಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಆದ್ದರಿಂದ ರಾಜ್ಯ ಸರಕಾರ ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಸಾರ್ವಜನಿಕ ಗಣೇಶ ಮಂಡಳಿಗಳಿಗೆ ಉಚಿತವಾಗಿ ವಿದ್ಯುತ್ ಸಂಪರ್ಕ ಒದಗಿಸಬೇಕು. ನೋಂದಾಯಿತ ಮಂಡಳಿಗಳಿಗೆ ಸಹಾಯಧನ ನೀಡಬೇಕು. ಪೊಲೀಸ್, ನಗರಸಭೆ ಮತ್ತು ವಿದ್ಯುತ್ ಇಲಾಖೆಗಳಿಂದ ಪರವಾನಿಗೆ ಪಡೆಯುವ ಪ್ರಕ್ರಿಯೆ ಉಚಿತ ಮತ್ತು ಸರಳಗೊಳಿಸಬೇಕು.

- ಉದಯ ಮ. ಯಂಡಿಗೇರಿ, ಧಾರವಾಡ