ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Readers Colony: ಹಾಜರಾತಿ ಸಾಲದು

ಸರ್ಕಾರ ಇಲಾಖೆಗಳ ಅಧಿಕಾರಿಗಳು ತಮ್ಮ ಕಾರ್ಯ ಕ್ಷೇತ್ರದ ವಾಸ್ತವ್ಯ ಹೂಡಿದ್ದಾರೆ ಎಂದು ಖಚಿತ ಪಡಿಸಿಕೊಳ್ಳಲು ರಾತ್ರಿ ಹಾಜರಾತಿಯನ್ನು ಕಡ್ಡಾಯಗೊಳಿಸಿದೆ. ಇದು ಜನರಿಗೆ ಸರ್ಕಾರಿ ಸೇವೆ ಸಿಗುವ ದಾರಿಯಲ್ಲಿ ಇರುವ ನೂರಾರು ಅಡೆತಡೆಗಳಲ್ಲಿ ಒಂದು ಸಣ್ಣ ಹೆಜ್ಜೆ ಮಾತ್ರ. ನಿಜವಾದ ಸಮಸ್ಯೆ ಹಾಜರಾತಿ ಅಲ್ಲ, ಮನಸ್ಥಿತಿ. ಬಹುತೇಕ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದಲ್ಲಿ ‘ನಮ್ಮ ಸಂಬಳವು ಸಾರ್ವಜನಿಕರ ತೆರಿಗೆ ಹಣ, ನಮ್ಮ ಕೆಲಸವೇ ಜನಸೇವೆ’ ಎಂಬ ಮೂಲಭೂತ ಪ್ರಜ್ಞೆಯೇ ಇಲ್ಲ. ಬದಲಾಗಿ ತಾವು ಜನರಿಗೆ ದಯೆ ತೋರಿ, ಯಾವುದೋ ಉಪಕಾರ ಮಾಡುತ್ತಿದ್ದೇವೆ ಎಂಬ ಧೋರಣೆ ಮನೆ ಮಾಡಿದೆ.

ಓದುಗರ ಓಣಿ‌

ಸರ್ಕಾರ ಇಲಾಖೆಗಳ ಅಧಿಕಾರಿಗಳು ತಮ್ಮ ಕಾರ್ಯ ಕ್ಷೇತ್ರದ ವಾಸ್ತವ್ಯ ಹೂಡಿದ್ದಾರೆ ಎಂದು ಖಚಿತ ಪಡಿಸಿಕೊಳ್ಳಲು ರಾತ್ರಿ ಹಾಜರಾತಿಯನ್ನು ಕಡ್ಡಾಯಗೊಳಿಸಿದೆ. ಇದು ಜನರಿಗೆ ಸರ್ಕಾರಿ ಸೇವೆ ಸಿಗುವ ದಾರಿಯಲ್ಲಿ ಇರುವ ನೂರಾರು ಅಡೆತಡೆಗಳಲ್ಲಿ ಒಂದು ಸಣ್ಣ ಹೆಜ್ಜೆ ಮಾತ್ರ. ನಿಜವಾದ ಸಮಸ್ಯೆ ಹಾಜರಾತಿ ಅಲ್ಲ, ಮನಸ್ಥಿತಿ. ಬಹುತೇಕ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದಲ್ಲಿ ‘ನಮ್ಮ ಸಂಬಳವು ಸಾರ್ವಜನಿಕರ ತೆರಿಗೆ ಹಣ, ನಮ್ಮ ಕೆಲಸವೇ ಜನಸೇವೆ’ ಎಂಬ ಮೂಲಭೂತ ಪ್ರಜ್ಞೆಯೇ ಇಲ್ಲ.

ಬದಲಾಗಿ ತಾವು ಜನರಿಗೆ ದಯೆ ತೋರಿ, ಯಾವುದೋ ಉಪಕಾರ ಮಾಡುತ್ತಿದ್ದೇವೆ ಎಂಬ ಧೋರಣೆ ಮನೆಮಾಡಿದೆ. ಈ ಧೋರಣೆಯಿಂದಲೇ ಕಚೇರಿಯಲ್ಲಿ ನಿರ್ಲಕ್ಷ್ಯ, ದರ್ಪ ಮತ್ತು ವಿಳಂಬ. ತಮ್ಮ ಹಕ್ಕಿನ ಸೇವೆಗಾಗಿ ಜನರು ಅಂಗಲಾಚುವಂತಾಗಿದೆ. ದುರಂತವೆಂದರೆ ಈಗ ಲಂಚ ಕೊಟ್ಟರೂ ಕೆಲಸ ಸರಿಯಾದ ಸಮಯಕ್ಕೆ ಆಗುವುದಿಲ್ಲ. ಹಣ ಪಡೆದು ಫೈಲ್ ಮುಂದೆ ಸರಿಸಿದರೂ, ಸಹಿ ಮಾಡಲು ಮತ್ತೊಂದು ಸಬೂಬು, ಮತ್ತೊಂದು ದಿನ. ರಾತ್ರಿ ಹಾಜರಾತಿಯಿಂದ ಅಧಿಕಾರಿ ಊರಿನಲ್ಲಿ ಇರಬಹುದು, ಆದರೆ ಸೇವಾ ಮನೋಭಾವ ಇಲ್ಲದಿದ್ದರೆ ಪ್ರಯೋಜನವೇನು? ಸರ್ಕಾರ ಹಾಜರಾತಿ ಬೆನ್ನಟ್ಟುವ ಬದಲು ಸಮಯಬದ್ಧ ಸೇವಾ ಖಾತರಿ ಮತ್ತು ಹೊಣೆಗಾರಿಕೆ ನಿಗದಿ ಮಾಡಬೇಕು. ಪ್ರತಿ ವಿಳಂಬಕ್ಕೂ ದಂಡ, ಲಂಚಕ್ಕೂ ಶಿಕ್ಷೆ ಜಾರಿಯಾದಾಗ ಮಾತ್ರ ಜನಸೇವೆ ಸಾಧ್ಯ.

- ಎನ್ ಸದಾಶಿವ ರೆಡ್ಡಿ, ಜ್ಞಾನಭಾರತಿ

ಗ್ರೇಟರ್ ಏಕೆ ಬೇಕು?

ಖಾಸಗಿ ಕಂಪೆನಿಗಳಲ್ಲಿ ಕನ್ನಡಿಗರಿಗೆ ಅನ್ಯಾಯವಾಗಲು ಬಿಡುವುದಿಲ್ಲವೆಂಬ ಮುಖ್ಯಮಂತ್ರಿಯವರ ಹೇಳಿಕೆ ವರದಿಯಾಗಿದೆ. ಆದರೆ ಹೊಸದಾಗಿ ರಚಿತವಾದ ಬೆಂಗಳೂರಿನ ವಿಕಸಿತ ಬೃಹತ್ ಬೆಂಗಳೂರು ಮಹಾನಗರಪಾಲಿಕೆಗೆ ನಾಮಕರಣ ಮಾಡುವಾಗ ‘ಗ್ರೇಟರ್ ಬೆಂಗಳೂರು ನಗರ ಪ್ರಾಧಿಕಾರ’ ಎಂದು ಇಂಗ್ಲಿಷ್ ಪದ ಬಳಸಿ ಕನ್ನಡಕ್ಕೆ ಅನ್ಯಾಯವನ್ನು ಸರಕಾರದಿಂದಲೇ ಎಸಗಲಾಗಿದೆ. ‘ಬೃಹತ್’ ಅಥವಾ ‘ವಿಕಸಿತ’ ಅಥವಾ ಇನ್ನಾವುದೇ ಸೂಕ್ತ ಕನ್ನಡ ಪದ ಬಳಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸರ್ಕಾರಕ್ಕೆ ಮನವಿ ಸಲ್ಲಿಸಿದಾಗ, ಸೂಕ್ತ ಕನ್ನಡ ಪದ ಹುಡುಕಿ ‘ಗ್ರೇಟರ್’ ಪದವನ್ನು ಬದಲಾಯಿಸುವುದಾಗಿ ಸಿಎಂ ಹೇಳಿ ಎರಡು ರಾಜ್ಯೋತ್ಸವಗಳು ದಾಟಿವೆ. ಈ ಬಗ್ಗೆ ಕನ್ನಡಪರ ಹೋರಾಟಗಾರರಿಂದಾಗಲಿ ವೇದಿಕೆ ಗಳಿಂದಾಗಲಿ ಒತ್ತಾಯ ಕಂಡುಬಾರದಿರು ವುದು ವಿಷಾದನೀಯ. ಈ ತಿಂಗಳಲ್ಲಾದರೂ ಪಾಲಿಕೆಗೆ ಕನ್ನಡದ ನಾಮಕರಣವಾದರೆ ಈ ಸಾರಿಯ ರಾಜ್ಯೋತ್ಸವಕ್ಕೂ ಹೆಚ್ಚಿನ ಕನ್ನಡದ ಕಳೆ ಬರುತ್ತದೆಯಲ್ಲವೇ?

- ಬೆಳ್ಳೆ ಚಂದ್ರಶೇಖರ ಶೆಟ್ಟಿ, ಬೆಂಗಳೂರು

ಇದನ್ನೂ ಓದಿ: Readers Colony: ಎಥೆನಾಲ್‌ ಇಂಧನ ಬೆಲೆ

ಕಠಿಣ ಕ್ರಮ ಕೈಗೊಳ್ಳಬೇಕು

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ನಿಯಮ ಪಾಲಿಸದ ಸಂಸ್ಥೆಗಳಿಗೆ ನೋಟಿಸ್ ನೀಡುವುದು ನಮ್ಮ ದೇಶದಲ್ಲಿ ತೀವ್ರವಾಗಿ ಬೆಳೆದಿರುವ ಆಹಾರ ಕಲಬೆರಕೆ ಸಮಸ್ಯೆಗೆ ಕೇವಲ ತಾತ್ಕಾಲಿಕ ಪರಿಹಾರ ವಷ್ಟೇ. ಅಧಿಕೃತ ವರದಿಗಳ ಪ್ರಕಾರ, ಪ್ರತಿವರ್ಷ ಪರೀಕ್ಷಿಸಲ್ಪಡುವ ಆಹಾರ ಮಾದರಿಗಳಲ್ಲಿ ಶೇಕಡಾ 40ಕ್ಕೂ ಹೆಚ್ಚು ಮಾದರಿಗಳು ಕನಿಷ್ಠ ಸುರಕ್ಷತಾ ಮಾನದಂಡಗಳನ್ನು ತಲುಪುವಲ್ಲಿ ವಿಫಲವಾಗುತ್ತಿವೆ. ಇಂತಹ ಸಂದರ್ಭದಲ್ಲಿ ಬರಿ ಎಚ್ಚರಿಕೆ ನೋಟಿಸ್‌ಗಳನ್ನು ನೀಡುವುದು, ಸಾರ್ವಜನಿಕರ ಆರೋಗ್ಯ ದೊಂದಿಗೆ ಚೆಟವಾಡುವ ಶಕ್ತಿಗಳಿಗೆ ಮತ್ತಷ್ಟು ಧೈರ್ಯ ತುಂಬಿದಂತಾಗುತ್ತದೆ. ನಮಗೆ ಈಗ ಬೇಕಿರುವುದು ಶೂನ್ಯ-ಸಹಿಷ್ಣುತೆಯ ಕಠಿಣ ಕ್ರಮಗಳು. ತಕ್ಷಣವೇ ಅಂತಹ ಸಂಸ್ಥೆಗಳ ಪರವಾನಗಿ ರದ್ದುಗೊಳಿಸುವುದು, ಅಪರಾಧ ಮೊಕದ್ದಮೆ ಹೂಡು ವುದು ಮತ್ತು ಭಾರಿ ದಂಡ ವಿಧಿಸುವುದು. ಎಫ್ಎಫ್ಎಸ್ ಎಐ ಕಠಿಣ ಶಿಕ್ಷಾರ್ಹ ಕ್ರಮಗಳನ್ನು ಕೈಗೊಳ್ಳದಿದ್ದರೆ ಭಾರತೀಯ ಗ್ರಾಹಕರು ಅಪಾಯಕಾರಿ ಆಹಾರವನ್ನು ಸೇವಿಸುವ ಅನಿವಾರ್ಯತೆ ಯ ಉಳಿಯಬೇಕಾಗುತ್ತದೆ.

- ಡಾ. ವಿಜಯಕುಮಾರ್ ಎಚ್. ಕೆ., ರಾಯಚೂರು

ಕೈ ಸೋಲಿಗೆ ಕಾರಣ

ಇತ್ತೀಚೆಗೆ ನಡೆದ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ನಾಲ್ಕು ಸ್ಥಾನಗಳನ್ನು ಕಳೆದುಕೊಂಡು ದುಃಸ್ಥಿತಿಯಲ್ಲಿದ್ದರೆ, ಎನ್‌ಡಿಎ ಮೈತ್ರಿಕೂಟ ನಾಲ್ಕು ಸ್ಥಾನ ಗೆದ್ದು ನಗೆ ಬೀರಿದೆ. ಕಾಂಗ್ರೆಸ್ಸಿನ ಸೋಲಿಗೆ ಪ್ರಮುಖವಾಗಿ ಕಾರ್ಯಕರ್ತರ ನಿರ್ಲಕ್ಷ್ಯವೇ ಕಾರಣ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿ ನಿಂದಲೂ ಶಾಸಕರ ಅಽಕಾರದ ಸ್ಥಾನಮಾನದ ಬಗ್ಗೆ ಚಿಂತೆ ಮಾಡಿತೇ ವಿನಃ ಕಾರ್ಯಕರ್ತರನ್ನು ಯಾವುದೇ ನಿಗಮ ಮಂಡಳಿಗೆ ನೇಮಿಸದೆ ಮೂಗಿಗೆ ತುಪ್ಪ ಹಚ್ಚುತ್ತ ಬಂದಿತು. ಈ ಕಾರಣಕ್ಕಾಗಿ ಯಾವ ಕಾರ್ಯಕರ್ತರೂ ಪರಿಷತ್ ಚುನಾವಣೆಯಲ್ಲಿ ಹುರುಪು ಹುಮ್ಮಸ್ಸಿನಿಂದ ಕೆಲಸ ಮಾಡಲಿಲ್ಲ. ಕಾರ್ಯಕರ್ತರನ್ನು ಕಡೆಗಣಿಸಿದರೆ ಮುಂದಿನ ಚುನಾವಣೆಯಲ್ಲಿಯೂ ಕಾಂಗ್ರೆಸ್‌ಗೆ ಇದೇ ಗತಿ ಆಗಲಿದೆ.

- ವಿ.ಜಿ ಇನಾಮದಾರ, ಸಾರವಾಡ