ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Readers Colony: ಸಾಹಿತಿಗಳ ಪರನಿಂದೆಯ ಸೊಗಸು

ಒಂದು ಉತ್ತಮ ನಗರವನ್ನು ನಿರ್ಮಿಸಲು ಕೆಲವೊಮ್ಮೆ ಕಠಿಣ ನಿರ್ಧಾರಗಳು ಅಗತ್ಯವಾಗುತ್ತವೆ. ಕೆಲವರಿಗೆ ತಾತ್ಕಾಲಿಕ ತೊಂದರೆ ಆಗಬಹುದು, ಆದರೆ ಅದು ಲಕ್ಷಾಂತರ ಜನರ ಸುರಕ್ಷತೆಗಾಗಿ. ಅಕ್ರಮ ಒತ್ತುವರಿಯಿಂದ ಫುಟ್‌ಪಾತ್‌ಗಳು ಮಾಯವಾಗಿ, ಮಕ್ಕಳು, ಹಿರಿಯರು ಮತ್ತು ಪಾದಚಾರಿ ಗಳು ರಸ್ತೆಯ ನಡೆಯಬೇಕಾದ ಪರಿಸ್ಥಿತಿ ಬಂದಿದೆ.

ಓದುಗರ ಓಣಿ

ಸಂಪಾದಕರ ಅಂಕಣ ಲೇಖನ ‘ಸಾಹಿತ್ಯ ಲೋಕದ ಪರನಿಂದಾ ಪುರಾಣವು’ ತುಂಬ ಆಸಕ್ತಿಪೂರ್ಣ ವಾಗಿತ್ತು. ಈ ಸಂಬಂಧ ನಾನೂ ಒಂದೆರಡು ಘಟನೆ ಹಂಚಿಕೊಳ್ಳಲು ಬಯಸುತ್ತೇನೆ. ಬಹಳ ಹಿಂದೆ ಧಾರವಾಡದ ಕರ್ನಾಟಕ ಕಾಲೇಜಿನ ಗ್ರಂಥಾಲಯದಲ್ಲಿ ಒಂದು ಪುಟ್ಟ ಕಾರ್ಯಕ್ರಮ. ನಾನೂ ಹೋಗಿದ್ದೆ. ಕಾರಣ, ಭಾಷಣಕಾರರು ಶ್ರೀರಂಗರು. ಮಾತನಾಡುತ್ತಾ ಅವರು ಹೇಳಿದ್ದು ‘ಎಲ್ಲರೂ ಕಾಳಿದಾಸ ಮಹಾನ್ ನಾಟಕಕಾರ ಎನ್ನುತ್ತಾರೆ. ಆದರೆ ಅವ ಏನ್ ಅಂಥ ದೊಡ್ಡ ನಾಟಕಕಾರ ಅಲ್ಲ.’

ಅವರು ಯಾಕೆ ಹಾಗೆ ಅಂದರು ಎನ್ನುವದು ಈಗ ಮರೆತಿದೆ. ಎ.ಕೆ.ರಾಮಾನುಜನ್ ಬೆಳಗಾವಿ ಯಲ್ಲಿದ್ದಾಗ, ಶಂಕರ ಮೊಕಾಶಿ ಪುಣೇಕರರ ಮುಂದೆ ‘ಮಿಲ್ಟನ್ ಕವಿಯೇ ಅಲ್ಲ’ ಎಂದರಂತೆ. ಆದರೆ ಮೇಲಿನ ಎರಡೂ ಅಭಿಪ್ರಾಯಗಳು ಪ್ರಾಮಾಣಿಕವಾದವು. ರಾಮಾನುಜನರಿಗೆ ಕಾವ್ಯದ ಬಗ್ಗೆ ಅವರದೇ ನಿರೀಕ್ಷೆಗಳಿದ್ದವು. ಕಾವ್ಯ ವಿವರಣೆ ಆಗಬಾರದು, ಹಾಗೂ ಅದು ಗಣಿತದ ಪ್ರಮೇಯದ ಹಾಗಿರಬೇಕು ಎನ್ನುವದು. ಮಹಾನ್ ಕಾದಂಬರಿಕಾರ ಟಾಲ್‌ಸ್ಟಾಯ್,

ಶೇಕ್ ಪಿಯರ್ ಬಗ್ಗೆ ಹೇಳುತ್ತ, ‘ಅವನು ಕಲೆಯ ಎಲ್ಲ ಬೇಡಿಕೆಗಳನ್ನು ಈಡೇರಿಸುವುದಿಲ್ಲ, ಅಲ್ಲದೆ ಅವನ ಕೃತಿಗಳು ಅತಿ ಕೀಳು ಮಟ್ಟದ ಅನೈತಿಕ ಒಲವು ಹೊಂದಿವೆ. ಜನರಿಗೆ ಅವನು ಅವರ ಒಪ್ಪಿಗೆ ಇಲ್ಲದೆ ಅಪಾಯಕಾರಿ ಸಾಂಸ್ಕೃತಿಕ ಲಸಿಕೆ ನೀಡುತ್ತಾನೆ’ ಎನ್ನುತ್ತಾನೆ.

- ಎಸ್‌ಎಲ್ಎಂ ಪಾಟೀಲ, ಬೆಳಗಾವಿ ‌

ಇದನ್ನೂ ಓದಿ: Readers Colony: ಸದ್ಯಶೋಧನೆಯಲ್ಲಿ ಮಜಾ

ಫುಟ್‌ಪಾತ್ ತೆರವು ಬೇಕು

ಒಂದು ಉತ್ತಮ ನಗರವನ್ನು ನಿರ್ಮಿಸಲು ಕೆಲವೊಮ್ಮೆ ಕಠಿಣ ನಿರ್ಧಾರಗಳು ಅಗತ್ಯವಾಗುತ್ತವೆ. ಕೆಲವರಿಗೆ ತಾತ್ಕಾಲಿಕ ತೊಂದರೆ ಆಗಬಹುದು, ಆದರೆ ಅದು ಲಕ್ಷಾಂತರ ಜನರ ಸುರಕ್ಷತೆಗಾಗಿ. ಅಕ್ರಮ ಒತ್ತುವರಿಯಿಂದ ಫುಟ್‌ಪಾತ್‌ಗಳು ಮಾಯವಾಗಿ, ಮಕ್ಕಳು, ಹಿರಿಯರು ಮತ್ತು ಪಾದಚಾರಿ ಗಳು ರಸ್ತೆಯ ನಡೆಯಬೇಕಾದ ಪರಿಸ್ಥಿತಿ ಬಂದಿದೆ. ಇದರಿಂದ ಅನೇಕ ಅಮೂಲ್ಯ ಜೀವಗಳು ಕಳೆದು ಹೋಗಿವೆ. ಫುಟ್‌ಪಾತ್ ಜನರ ಹಕ್ಕು, ಅಂಗಡಿಗಳ ಅಥವಾ ಒತ್ತುವರಿಯ ಜಾಗವಲ್ಲ. ಸುರಕ್ಷಿತ ಬೆಂಗಳೂರಿಗಾಗಿ ಫುಟ್‌ಪಾತ್ ತೆರವು ಮತ್ತು ಸಂರಕ್ಷಣೆ ಅತ್ಯಗತ್ಯ. ಈಗಾಗಲೇ ತೀರ ತಡವಾಗಿ ಸರಕಾರ ಉತ್ತಮ ನಿರ್ಧಾರ ಕೈಗೊಂಡಿದೆ,

ಪಾದಚಾರಿಗಳ ಮುಖದಲ್ಲಿ ಮಂದಹಾಸ ಬೀರಿದೆ. ಈ ನಿರ್ಧಾರ ಒಂದೆರಡು ದಿನದ ಬಾಳಾಗದೆ, ಯಾವುದೇ ಪಟ್ಟಭದ್ರ ಹಿತಾಸಕ್ತಿಗಳಿಗೆ ಮಣಿಯದೆ ಮಾನ್ಯ ನಗರಾಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡರು ಹೇಗೆ ನಿಭಾಯಿಸುವರು ಎಂಬುದೇ ಯಕ್ಷ ಪ್ರಶ್ನೆಯಾಗಿದೆ.

- ಬೆಂ. ಮು. ಮಾರುತಿ, ಬೆಂಗಳೂರು

ಭ್ರಷ್ಟರಿಗೆ ತಕ್ಕ ಪಾಠ ಕಲಿಸಿ

30 ದಿನ ಜೈಲಿನಲ್ಲಿದ್ದರೆ ಸಿಎಂ ಅಥವಾ ಪ್ರಧಾನಿಯನ್ನು ವಜಾಗೊಳಿಸುವ ನೂತನ ಮಸೂದೆ ಅತ್ಯಂತ ಸ್ವಾಗತಾರ್ಹ ಹಾಗೂ ಪ್ರಸ್ತುತ ರಾಜಕೀಯ ವ್ಯವಸ್ಥೆಗೆ ಅನಿವಾರ್ಯವಾಗಿದೆ. ನಮ್ಮ ದೇಶದ ವ್ಯವಸ್ಥೆಯನ್ನು ಭ್ರಷ್ಟ ಮತ್ತು ಸ್ವಾರ್ಥಿ ರಾಜಕಾರಣಿಗಳು ಸಂಪೂರ್ಣವಾಗಿ ಹಳ್ಳ ಹಿಡಿಸಿದ್ದಾರೆ. ಜೈಲಿನಲ್ಲಿದ್ದೂ ಅಧಿಕಾರಕ್ಕಾಗಿ ಲಜ್ಜೆಯಿಲ್ಲದೆ ಕಚ್ಚಾಡುವ ಇಂತಹ ನಾಯಕರಿಗೆ ಸಂವಿಧಾನದ ಬಿಸಿ ಮುಟ್ಟಿಸಲೇಬೇಕು. ಕೇವಲ 30 ದಿನಗಳ ಕಸ್ಟಡಿಯಲ್ಲ, ಗಂಭೀರ ಕ್ರಿಮಿನಲ್ ಆರೋಪ ಎದುರಿಸುವ ಭ್ರಷ್ಟರನ್ನು ತಕ್ಷಣವೇ ಹುzಯಿಂದ ಕಿತ್ತೊಗೆಯುವ ಕಠಿಣ ಕಾನೂನು ಬರಬೇಕು. ಇಂತಹ ನೈತಿಕತೆ ಇಲ್ಲದ ಜನಪ್ರತಿನಿಧಿಗಳು ದೇಶ ಆಳಲು ಸಂಪೂರ್ಣ ಅಸಮರ್ಥರು. ಸಂಸತ್ತು ಯಾವುದೇ ರಾಜಕೀಯ ನಾಟಕವಾಡದೆ ಈ ಮಸೂದೆಯನ್ನು ಕೂಡಲೇ ಜಾರಿಗೆ ತರಬೇಕು. ಇಲ್ಲದಿದ್ದರೆ ಪ್ರಜಾಪ್ರಭುತ್ವಕ್ಕೆ ಯಾವುದೇ ಬೆಲೆ ಉಳಿಯುವುದಿಲ್ಲ. ಅಪರಾಧಿಗಳು ಕಾನೂನಿನಿಂದ ತಪ್ಪಿಸಿಕೊಳ್ಳಲು ಬಿಡಬಾರದು. ಜನಸಾಮಾನ್ಯರ ಹಿತದೃಷ್ಟಿಯಿಂದ ದೇಶದಲ್ಲಿ ಕಠಿಣ ಆಡಳಿತ ಅತ್ಯಗತ್ಯವಾಗಿದೆ.

- ಡಾ.ವಿಜಯಕುಮಾರ್ ಎಚ್.ಕೆ., ರಾಯಚೂರು