ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Readers Colony: ಟ್ರಂಪ್ ಇದನ್ನು ನೋಡಬೇಕು!

ಸ್ವಚ್ಛತೆ ಮತ್ತು ನೈರ್ಮಲ್ಯ ಪಾಲನೆಯ ವಿಷಯಗಳಲ್ಲಿ ತಾನು ಮೆಕ್ ಡೊನಾಲ್ಡ್ ಕಂಪನಿಯನ್ನು ನಂಬುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿವರಣೆ ನೀಡಿರುವುದನ್ನು ‘ವಿಶ್ವವಾಣಿ’ಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರು ತಮ್ಮ ‘ನೂರೆಂಟು ವಿಶ್ವ’ ಅಂಕಣ‌ ಬರಹದಲ್ಲಿ (ಆ.27) ಪ್ರಸ್ತಾಪಿಸಿದ್ದಾರೆ.

ಓದುಗರ ಓಣಿ

ಸ್ವಚ್ಛತೆ ಮತ್ತು ನೈರ್ಮಲ್ಯ ಪಾಲನೆಯ ವಿಷಯಗಳಲ್ಲಿ ತಾನು ಮೆಕ್ ಡೊನಾಲ್ಡ್ ಕಂಪನಿಯನ್ನು ನಂಬುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿವರಣೆ ನೀಡಿರುವುದನ್ನು ‘ವಿಶ್ವವಾಣಿ’ಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರು ತಮ್ಮ ‘ನೂರೆಂಟು ವಿಶ್ವ’ ಅಂಕಣ‌ ಬರಹದಲ್ಲಿ (ಆ.27) ಪ್ರಸ್ತಾಪಿಸಿದ್ದಾರೆ. ಈ ಫೊಟೋವನ್ನು ನಾನು ಇದೇ ಜುಲೈ 2ರ ಬೆಳಗ್ಗೆ 6.55ಕ್ಕೆ ಬೆಂಗಳೂರಿನ ಒಂದು ಕಡೆ ನನ್ನ ಮೊಬೈಲಿನಲ್ಲಿ ಸೆರೆ ಹಿಡಿದೆ.

ಇದು ಮೆಕ್ ಡೊನಾಲ್ಡ್ ಮಳಿಗೆಯ ಎದುರಿನ ರಾಜರಸ್ತೆಯ ಪಕ್ಕದ ಪಾದಚಾರಿ ಮಾರ್ಗದಲ್ಲಿ ಇರಿಸಿರುವ ಆಹಾರ ಪದಾರ್ಥಗಳ ಚಿತ್ರ. ಮೆಕ್ ಡೊನಾಲ್ಡ್ ಮಳಿಗೆಗೆ ಡೆಲಿವರಿ ಮಾಡಬೇಕಾದ ಈ ಬುಟ್ಟಿಗಳನ್ನು ಡೆಲಿವರಿ ವಾಹನ ರಸ್ತೆಬದಿಯಲ್ಲಿ ಇರಿಸಿ ಹೊರಟು ಹೋಗಿದೆ! ‌

ಮಳಿಗೆ ಇನ್ನೂ ತೆರೆದಿಲ್ಲ. ರಸ್ತೆಯಲ್ಲಿ ವಾಹನ ಸಂಚಾರ ಸಾಕಷ್ಟಿದೆ. ಪೌರ ಕಾರ್ಮಿಕರು ರಸ್ತೆ ಮತ್ತು ಪಾದಚಾರಿ ಮಾರ್ಗ ಕಸ ಗುಡಿಸುವುದೂ ಇದೇ ವೇಳೆ! ಬೀದಿನಾಯಿಗಳು ಇಂಥ ವಸ್ತುಗಳನ್ನು ಮೂಸುವುದು-ಕಚ್ಚುವುದು, ಕಾಲೆತ್ತುವುದೂ ಸಾಮಾನ್ಯ. ಡೊನಾಲ್ಡ್ ಟ್ರಂಪ್ ಅವರು ಈ ಫೋಟೋ ನೋಡಬೇಕು!

- ಎಚ್. ಆನಂದರಾಮ ಶಾಸ್ತ್ರೀ

ಇದನ್ನೂ ಓದಿ: Vishweshwar Bhat Column: ಅಮೆರಿಕ ಅಧ್ಯಕ್ಷರು ಯಾವ ಮೇಲ್ಪಂಕ್ತಿ ಹಾಕಿಕೊಡುತ್ತಾರೆ ?

ಬೆಂಗಳೂರು ವಿಲಕ್ಷಣ

ಅಧ್ಯಕ್ಷರು ‘ಅಮೆರಿಕ ಅಧ್ಯಕ್ಷರು ಯಾವ ಮೇಲ್ಪಂಕ್ತಿ ಹಾಕುತ್ತಿದ್ದಾರೆ’ ಎಂಬ ‘ನೂರೆಂಟು ವಿಶ್ವ’ ಬರಹ, ಟ್ರಂಪ್ ಮಹಾಶಯರ ವಿಚಿತ್ರ ವರ್ತನೆಗಳ ಅನಾವರಣ ಮಾಡಿದೆ. ನಿಜ ಹೇಳಬೇಕೆಂದರೆ, ಈ ಹಿಂದೆ ನಾವೆಲ್ಲ ಹೇಳಿಕೊಳ್ಳುತ್ತಿರುವ ಅಮೆರಿಕಾ, ಇಂದಿಲ್ಲ. ಅದಕ್ಕೆ ಕಾರಣ, ಅಧ್ಯಕ್ಷ ಟ್ರಂಪ್ ಎನ್ನುವುದೂ ತಿಳಿದಿರುವ ವಿಷಯವೇ. ತಮ್ಮ ಬಗ್ಗೆ ಅದೇನು ಅಂದುಕೊಂಡಿರಬಹುದು ಎಂಬುದೇ ಅರ್ಥವಾಗುತ್ತಿಲ್ಲ. ಭಾರತದ ಮಟ್ಟಿಗಂತೂ, ಅವರ ವರ್ತನೆ ವಿಚಿತ್ರ!

ಒಮ್ಮೆ ಪ್ರಧಾನಿಯನ್ನು ಅತ್ಯಂತ ಆತ್ಮೀಯ ಅನ್ನುವುದು, ಇನ್ನೊಮ್ಮೆ ಅವರನ್ನೇ ಉದ್ದೇಶಿಸಿ ವ್ಯಂಗ್ಯ! ತನಗೆ ಸಂಬಂಧವೇ ಇಲ್ಲದ ವಿಷಯಗಳ ಬಗ್ಗೂ ಮೂಗು ತೂರಿಸುವುದು. ವಿಲಕ್ಷಣ ಸ್ವಭಾವ ಪ್ರದರ್ಶನ. ಇಡೀ ಜಗತ್ತನ್ನೇ ಮುಷ್ಟಿಯಲ್ಲಿಟ್ಟಿಕೊಳ್ಳಬೇಕೆಂಬ ಮಹತ್ವಾಕಾಂಕ್ಷೆ. ಈ ಹಿಂದಿನ ಅಮೇರಿಕ ಅಧ್ಯಕ್ಷರು ಮತ್ತು ಇಂದಿನ ಅಧ್ಯಕ್ಷರಿಗೂ ಅಜಗಜಾಂತರ! ಅವರು ಅದು ಹೇಗೆ ಎರಡನೇ ಬಾರಿಯೂ ಅಧ್ಯಕ್ಷರಾಗಿ ಆಯ್ಕೆ ಆಗಿರಬಹುದು ಎಂಬುದೂ ಬಹಳ ಆಶ್ಚರ್ಯಕರ. ಗೌರವ ಉಳಿಸಿಕೊಳ್ಳುವಲ್ಲಿ ಒಂದು ಬಲಿಷ್ಠ ರಾಷ್ಟ್ರದ ಅಧ್ಯಕ್ಷರು ಸೋತಿದ್ದಾರೆ ಎಂದರೂ ತಪ್ಪಾಗ‌ ಲಾರದು.

- ಶಂಕರನಾರಾಯಣ ಭಟ್, ಹೊನ್ನಾವರ