ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Readers Colony: ವೇತನ ಎಲ್ಲಿ ಹೋಗುತ್ತಿದೆ?

ಇತ್ತೀಚೆಗೆ ಪಿಯುಸಿ ವಿದ್ಯಾರ್ಥಿಗಳ ಸಿಇಟಿ ಪರೀಕ್ಷೆ ಮುಗಿದರೂ ಕೊಠಡಿ ಮೇಲ್ವಿಚಾರಕರು ಸೇರಿದಂತೆ ಎಲ್ಲ ಸಿಬ್ಬಂದಿ ವರ್ಗದವರಿಗೆ ಹಣ ನೀಡಿಲ್ಲ. ಸಾಲ ಮಾಡಿದ ಆಸಾಮಿ ಇನ್ನೊಬ್ಬರ ಹತ್ತಿರ ಸಾಲ ಮಾಡಿ ಮೊದಲ ಸಾಲವನ್ನು ತೀರಿಸಿದಂತೆ ಸರಕಾರವೂ ಕೂಡ ಹಣವನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ರವಾನಿಸಿ ಹಣವನ್ನು ದುರುಪಯೋಗ ಪಡಿಸಿಕೊಂಡಿರುವ ಹಾಗೆ ಕಾಣುತ್ತಿದೆ.

ಓದುಗರ ಓಣಿ

ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯ ಕೊಠಡಿ ಮೇಲ್ವಿಚಾರಕರ ಸಂಭಾವನೆಯನ್ನು ಆ ದಿನದ ಪರೀಕ್ಷೆಯ ಕೊನೆಯ ದಿನದಲ್ಲಿ ನೀಡಲಾಗುತ್ತಿತ್ತು. ಆದರೆ, ಈ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಯಾವ ಸ್ಪರ್ಧಾತ್ಮಕ ಪರೀಕ್ಷೆಯ ಕೊಠಡಿ ಮೇಲ್ವಿಚಾರಕರ ವೇತನವನ್ನು ಹದಿನೈದು ದಿನವಾದರೂ ನೀಡಲಾಗುತ್ತಿಲ್ಲ ವಿದ್ಯಾರ್ಥಿಗಳು ಅಥವಾ ಅಭ್ಯರ್ಥಿಗಳು ಪರೀಕ್ಷೆಯ ಮೂರ್ನಾಲ್ಕು ತಿಂಗಳು ಮೊದಲೇ ಹಣವನ್ನು ಕಟ್ಟಿದ್ದರೂ ಆ ಹಣವನ್ನು ಸೂಕ್ತವಾಗಿ ಬಳಸಿಕೊಳ್ಳದೆ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎನ್ನುವ ಸಂಶಯ ಬರುತ್ತಿದೆ.

ಇತ್ತೀಚೆಗೆ ಪಿಯುಸಿ ವಿದ್ಯಾರ್ಥಿಗಳ ಸಿಇಟಿ ಪರೀಕ್ಷೆ ಮುಗಿದರೂ ಕೊಠಡಿ ಮೇಲ್ವಿಚಾರಕರು ಸೇರಿದಂತೆ ಎಲ್ಲ ಸಿಬ್ಬಂದಿ ವರ್ಗದವರಿಗೆ ಹಣ ನೀಡಿಲ್ಲ. ಸಾಲ ಮಾಡಿದ ಆಸಾಮಿ ಇನ್ನೊಬ್ಬರ ಹತ್ತಿರ ಸಾಲ ಮಾಡಿ ಮೊದಲ ಸಾಲವನ್ನು ತೀರಿಸಿದಂತೆ ಸರಕಾರವೂ ಕೂಡ ಹಣವನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ರವಾನಿಸಿ ಹಣವನ್ನು ದುರುಪಯೋಗ ಪಡಿಸಿಕೊಂಡಿರುವ ಹಾಗೆ ಕಾಣುತ್ತಿದೆ.

ಇನ್ನು ಮೌಲ್ಯಮಾಪನದ ವೇತನಕ್ಕೆ ಬಂದರೆ ಮೌಲ್ಯಮಾಪನ ಮುಗಿದ ತಿಂಗಳೊಳಗೆ ಮೌಲ್ಯ ಮಾಪಕರ ವೇತನ ತಲುಪುತ್ತಿತ್ತು. ಆದರೆ ಕಳೆದ ಮೂರು ವರ್ಷದಿಂದ ಅಂದರೆ ಕಾಂಗ್ರೆಸ್ ಸರಕಾರ ಬಂದಾಗಿನಿಂದ ಆ ಹಣಕೈ ಸೇರಲು ವರ್ಷ ವಾಗುತ್ತಿದೆ. ಕಳೆದ ವರ್ಷ ಅಂದರೆ 2025-26ರಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಕೊಠಡಿ ಮೇಲ್ವಿಚಾರಕರ ಒಂದು ದಿನದ ಪರೀಕ್ಷೆಯ ವೇತನ ರು.120 ಇರುತ್ತದೆ ಆ ಹಣವನ್ನು ಕೂಡ ವರ್ಷವೇ ಕಳೆದು ಹೋದರೂ ನೀಡಿಲ್ಲವೆಂದೆರೆ ಈ ಅತಿ ಚಿಕ್ಕ ಹಣವನ್ನು ನೀಡಲಾಗದ ದುಸ್ಥಿತಿಗೆ ಬಂದಿದೆ ಸರಕಾರಕ್ಕೆ ಎಂದು ಅರ್ಥ.

ಇದನ್ನೂ ಓದಿ : Readers Colony: ಸರಕಾರ ಎಚ್ಚೆತ್ತುಕೊಳ್ಳಲಿ!

ಹಣ ಡಿಡಿಪಿಯು ಕಚೇರಿಗೆ ನೀಡಲಾಗಿದೆ ಎಂದು ಎಲ್ಲ ಸಿಬ್ಬಂದಿ ವರ್ಗದವರಿಗೂ ಮೊಬೈಲ್ ಮುಖಾಂತರ ಸಂದೇಶ ಬಂದಿದ್ದರೂ ಕಾಲೇಜಿನ ಪ್ರಾಂಶುಪಾಲರು, ಡಿಡಿಪಿಯು ಕಚೇರಿಯವರು ನಮಗೆ ಹಣ ಬಂದಿಲ್ಲ, ಗೊತ್ತಿಲ್ಲ ಎಂಬ ಉತ್ತರ ನೀಡುತ್ತಿದ್ದಾರೆ. ಹಾಗಾದರೆ ಹಣ ಕದಿಯುತ್ತಿರುವವರು ಯಾರು? ಶಿಕ್ಷಣ ಸಚಿವರೇ? ದಯವಿಟ್ಟು ನಿಮ್ಮ ಇಲಾಖೆಯ ಈ ಅವ್ಯವಸ್ಥೆಯನ್ನು ಸರಿಪಡಿಸಿ ಆಯಾ ಸಿಬ್ಬಂದಿ ವರ್ಗಕ್ಕೆ ಹಣ ತಲುಪು ವಂತೆ ಮಾಡಿ.

- ಪಾಂಚಜನ್ಯ ಪ್ರದೀಪ್, ಮೈಸೂರು

ಸಕಾಲಿಕ ಸಲಹೆಗಳು ಅವಶ್ಯ

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇತ್ತೀಚೆಗೆ ದೇಶದ ಜನರಿಗೆ ಕೆಲವು ಮಿತವ್ಯಯ ಸಲಹೆಗಳನ್ನು ನೀಡಿರುವುದು ಸರಿಯಾಗಿದೆ. ಮಧ್ಯಪ್ರಾಚ್ಯದಲ್ಲಿ ಕಳೆದ ಎರಡು ತಿಂಗಳಿ ನಿಂದ ಅಮೆರಿಕದ-ಇಸ್ರೇಲ್, ಇರಾನ್ ವಿರುದ್ಧ ನಡೆಸುತ್ತಿರುವ ಯುದ್ಧ ವಿಶ್ವದ ಬಹುತೇಕ ದೇಶಗಳ ಮೇಲೆ ತನ್ನದೇ ಆದ ದುಷ್ಪರಿಣಾಮ ಬೀರುತ್ತಿದೆ. ನಮ್ಮ ದೇಶ ಕೂಡ ಇದಕ್ಕೆ ಹೊರತಾಗಿಲ್ಲ. ನಮ್ಮ ದೇಶದಲ್ಲಿ ವಾಣಿಜ್ಯ ಅಡುಗೆ ಅನಿಲದ ವಿತರಣೆಯ ಮೇಲೆ ಸಾಕಷ್ಟು ದುಷ್ಪರಿಣಾಮವಾಗಿದೆ. ಈ ಯುದ್ಧ ದಿನ ಬಳಕೆಯ ಅಗತ್ಯ ವಸ್ತುಗಳ ಬೆಲೆ ಏರಿಕೆ, ಪೆಟ್ರೋ ಲಿಯಂ ಉತ್ಪನ್ನಗಳ ಕೊರತೆ, ಮುಂತಾದ ಹತ್ತು ಹಲವು ಸಂಕಷ್ಟಗಳ ಸರಮಾಲೆಯನ್ನೇ ತಂದಿದೆ.

ಕೊಲ್ಲಿಯು ದ್ಧ ಪರೋಕ್ಷವಾಗಿ ಉದ್ಯೋಗ ಕಡಿತವನ್ನು ಸಹಾ ಉಂಟು ಮಾಡಿದೆ. ಬೆಂಗಳೂರು ಸೇರಿದಂತೆ ದೇಶಾದ್ಯಂತ ಹಲವಾರು ಹೋಟೆಲ್, ಪ್ರವಾಸಿತಾಣಗಳು ಮುಚ್ಚುತ್ತಿವೆ. ದೇಶದ ವಿದೇಶಿ ವಿನಿಮಯ ಕಳವಳಕಾರಿ ಹಂತ ತಲುಪಿದೆ. ಕೊಲ್ಲಿ ಯುದ್ಧದಿಂದಾಗಿ, 3 ಸರಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೆ 10 ವಾರಗಳಲ್ಲಿ ಲಕ್ಷ ಕೋಟಿ ರುಪಾಯಿಗಳ ನಷ್ಟಉಂಟಾಗಿದೆ.

ಈ ಹಿನ್ನೆಲೆಯಲ್ಲಿ ದೇಶದ ಪ್ರತಿಯೊಬ್ಬ ಪ್ರಜೆ ಕೂಡ, ತನ್ನ ಜವಾಬ್ದಾರಿ ಅರಿತು ನಡೆಯ ಬೇಕಾಗಿದೆ. 1991 ರಲ್ಲಿ ಪಿ.ವಿ. ನರಸಿಂಹ ರಾವ್, ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಹಳಿತಪ್ಪಿದ್ದ ಅಂದಿನ ಅರ್ಥವ್ಯವಸ್ಥೆಗೆ ಕಾಯಕಲ್ಪ ನೀಡಲು ಖ್ಯಾತ ಆರ್ಥಿಕ ತಜ್ಞರಾಗಿದ್ದ ಡಾ.ಮನಮೋಹನ್ ಸಿಂಗ್ ಅರ್ಥ ಸಚಿವರನ್ನಾಗಿ ನೇಮಿಸಿ, ದೇಶದಲ್ಲಿ ನೂತನ ಅರ್ಥ ನೀತಿಗಳನ್ನು ಜಾರಿಗೆ ತಂದದ್ದು ಈಗ ಗತ ಇತಿಹಾಸ.

ಆದ್ದರಿಂದ ಮೋದಿಯವರ ಸಲಹೆಗಳಿಗೆ ವಿಶೇಷ ಅರ್ಥ ಕಲ್ಪಿಸದೇ ವಿಶಾಲ ದೃಷ್ಟಿಯಿಂದ ನೋಡಬೇಕಿದೆ. ಇದರ ಜತೆಗೆ ಕೇಂದ್ರ ಸರಕಾರ ಕೂಡ ಸರಕಾರಿ ವೆಚ್ಚದ ಮೇಲೆ ಕಡಿವಾಣ ಹಾಕುವುದು, ಅನಗತ್ಯ ಸಭೆ ಸಮಾರಂಭಗಳನ್ನು ನಿಷೇದಿಸುವುದು, ಪ್ರವಾಸಗಳನ್ನು ನಿರ್ಬಂಧಿಸುವುದು, ಅನಗತ್ಯ ಹುzಗಳನ್ನು ತುಂಬದೇ ಇರುವುದು ಮುಂತಾದ ಹತ್ತು ಹಲವು ಮಿತವ್ಯಯ ಕ್ರಮಗಳನ್ನು ಅನುಸರಿಸಿ, ಇಡೀ ದೇಶದ ಜನರಿಗೆ ಮಾದರಿಯಾ ಗಬೇಕಾಗಿದೆ.

- ಕೆ.ವಿ.ವಾಸು, ವಿವೇಕಾನಂದ ನಗರ.