ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕೇವಲ 10 ರೂ.ಗೆ 10 ಗ್ರಾಂ ಪ್ರೋಟೀನ್: ಮಾರುಕಟ್ಟೆಗೆ ಬಂತು ವಿಶಿಷ್ಟ 'ಚನ್ನಾ ಸತ್ತು'

ಅತ್ಯುತ್ತಮ ಗುಣಮಟ್ಟದ ಕಡಲೆಯನ್ನು ಬಳಸಿ, ಹಳೆಯ ಕಾಲದ ಸಾಂಪ್ರದಾಯಿಕ 'ಮರಳಿನಲ್ಲಿ ಹುರಿಯುವ' ವಿಧಾನದಲ್ಲಿ ಈ ಸತ್ತು ಹಿಟ್ಟನ್ನು ತಯಾರಿಸಲಾಗಿದೆ. ಈ ವಿಧಾನದಿಂದಾಗಿ ಕಡಲೆಯ ನೈಸರ್ಗಿಕ ಸುವಾಸನೆ, ರುಚಿ ಮತ್ತು ಆಕರ್ಷಕ ಚಿನ್ನದ ಬಣ್ಣ ಹಾಗೆಯೇ ಉಳಿದುಕೊಳ್ಳುತ್ತದೆ. ಇದು ಅತ್ಯಂತ ನುಣ್ಣಗಿದ್ದು, ದೈನಂದಿನ ವಿವಿಧ ಅಡುಗೆಗಳಿಗೆ ಬಳಸಲು ಸುಲಭವಾಗಿದೆ.

ಬೆಂಗಳೂರು: ಭಾರತೀಯರ ದೈನಂದಿನ ಆಹಾರದಲ್ಲಿ ಪೌಷ್ಟಿಕಾಂಶ ಹೆಚ್ಚಿಸುವ ಉದ್ದೇಶದಿಂದ, ಐಟಿಸಿ ಸಂಸ್ಥೆಯ ಆಶೀರ್ವಾದ್ ಇದೀಗ ಮಾರುಕಟ್ಟೆಗೆ 'ಚನ್ನಾ ಸತ್ತು' ಉತ್ಪನ್ನವನ್ನು ಪರಿಚಯಿಸಿದೆ. ಇದು ಭಾರತದ ಅಸಲಿ ಪ್ರೋಟೀನ್ ಮೂಲವಾಗಿದ್ದು, ಕೇವಲ 10 ರೂ.ಗೆ 10 ಗ್ರಾಂ ಪ್ರೋಟೀನ್ ಒದಗಿಸುವುದು ಇದರ ವಿಶೇಷತೆಯಾಗಿದೆ.

ಆರೋಗ್ಯಕರ ಮತ್ತು ಸಾಂಪ್ರದಾಯಿಕ ಆಹಾರಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗುತ್ತಿದ್ದು, ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಉತ್ತಮ ಗುಣಮಟ್ಟದ ಆಹಾರವನ್ನು ತಲುಪಿಸುವ ನಿಟ್ಟಿನಲ್ಲಿ ಆಶೀರ್ವಾದ್ ಈ ಹೊಸ ಉತ್ಪನ್ನವನ್ನು ಬಿಡುಗಡೆ ಮಾಡಿದೆ.

ಸಾಂಪ್ರದಾಯಿಕ ತಯಾರಿಕಾ ವಿಧಾನ

ಅತ್ಯುತ್ತಮ ಗುಣಮಟ್ಟದ ಕಡಲೆಯನ್ನು ಬಳಸಿ, ಹಳೆಯ ಕಾಲದ ಸಾಂಪ್ರದಾಯಿಕ 'ಮರಳಿನಲ್ಲಿ ಹುರಿಯುವ' ವಿಧಾನದಲ್ಲಿ ಈ ಸತ್ತು ಹಿಟ್ಟನ್ನು ತಯಾರಿಸಲಾಗಿದೆ. ಈ ವಿಧಾನದಿಂದಾಗಿ ಕಡಲೆಯ ನೈಸರ್ಗಿಕ ಸುವಾಸನೆ, ರುಚಿ ಮತ್ತು ಆಕರ್ಷಕ ಚಿನ್ನದ ಬಣ್ಣ ಹಾಗೆಯೇ ಉಳಿದುಕೊಳ್ಳುತ್ತದೆ. ಇದು ಅತ್ಯಂತ ನುಣ್ಣಗಿದ್ದು, ದೈನಂದಿನ ವಿವಿಧ ಅಡುಗೆಗಳಿಗೆ ಬಳಸಲು ಸುಲಭವಾಗಿದೆ.

ಆರೋಗ್ಯಕ್ಕೆ ಏನೆಲ್ಲಾ ಲಾಭ?

ಪೂರ್ವ ಭಾರತದಲ್ಲಿ ಸತ್ತು ಹಿಂದಿನಿಂದಲೂ ಬಹುಬೇಡಿಕೆಯ ಆಹಾರ. ಇದು ದೇಹಕ್ಕೆ ತಂಪು ಮತ್ತು ಶಕ್ತಿ ನೀಡುತ್ತದೆ. ಆಶೀರ್ವಾದ್ ಚನ್ನಾ ಸತ್ತುವಿನಲ್ಲಿ ನೈಸರ್ಗಿಕ ಪ್ರೋಟೀನ್ ಮತ್ತು ನಾರಿನಾಂಶ ಹೇರಳವಾಗಿದೆ. ಜೊತೆಗೆ ಕಬ್ಬಿಣಾಂಶ, ಸತು ಮತ್ತು ಮೆಗ್ನೀಸಿಯಮ್‌ನಂತಹ ಅಗತ್ಯ ಖನಿಜಾಂಶಗಳಿದ್ದು, ಇದು ಇಡೀ ಕುಟುಂಬಕ್ಕೆ ಹೇಳಿಮಾಡಿದ ಆರೋಗ್ಯಕರ ಆಹಾರವಾಗಿದೆ.

ಇದನ್ನೂ ಓದಿ: ITC ಸನ್‌ಫೀಸ್ಟ್ ಫ್ಯಾಂಟಾಸ್ಟಿಕ್ ವತಿಯಿಂದ “ಚೊಕೊ ಮೆಲ್ಟ್ಜ್” ಬಿಡುಗಡೆ

ವಿಭಿನ್ನ ರುಚಿ, ಕೈಗೆಟಕುವ ಬೆಲೆ

ಜನರ ರುಚಿಗೆ ತಕ್ಕಂತೆ ಎರಡು ವಿಧಗಳಲ್ಲಿ ಇದನ್ನು ಪರಿಚಯಿಸಲಾಗಿದೆ. ಬಿಹಾರದಲ್ಲಿ ಜೀರಿಗೆ ಮಿಶ್ರಿತ ಚನ್ನಾ ಸತ್ತು ಬಿಡುಗಡೆಯಾಗಿದ್ದರೆ, ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್‌ನಲ್ಲಿ ಪ್ಲೇನ್ ಚನ್ನಾ ಸತ್ತು ಲಭ್ಯವಿದೆ.

ವಿಶೇಷವೆಂದರೆ, ಇದರ 47 ಗ್ರಾಂ ಪ್ಯಾಕೆಟ್ ಬೆಲೆ ಕೇವಲ 10 ರೂ. ಆಗಿದ್ದು, ಇದರಲ್ಲಿ 10 ಗ್ರಾಂ ಪ್ರೋಟೀನ್ ಸಿಗಲಿದೆ. ಪ್ರತಿಯೊಬ್ಬರಿಗೂ ಪ್ರೋಟೀನ್ ಸುಲಭವಾಗಿ ಸಿಗಬೇಕು ಎಂಬ ಉದ್ದೇಶದಿಂದ ಈ ಬೆಲೆ ನಿಗದಿಪಡಿಸಲಾಗಿದೆ. ಇದಲ್ಲದೆ 200 ಗ್ರಾಂ, 250 ಗ್ರಾಂ ಹಾಗೂ 500 ಗ್ರಾಂ ಪ್ಯಾಕೆಟ್‌ಗಳಲ್ಲೂ ಚನ್ನಾ ಸತ್ತು ಲಭ್ಯವಿದೆ.

ಈ ಬಗ್ಗೆ ಇನ್ನಷ್ಟು ವಿವರಗಳನ್ನು ಹಂಚಿಕೊಂಡಿರುವ ಐಟಿಸಿ ಲಿಮಿಟೆಡ್‌ನ ಫುಡ್ಸ್ ವಿಭಾಗದ ಸಿಒಒ ಅನುಜ್ ರುಸ್ತಗಿ, "ಇತ್ತೀಚಿನ ದಿನಗಳಲ್ಲಿ ಗ್ರಾಹಕರು ತಮ್ಮ ದೈನಂದಿನ ಆಹಾರ ಪದ್ಧತಿಯನ್ನು ಬದಲಿಸದೆ, ಪೌಷ್ಟಿಕಾಂಶವಿರುವ ಆಹಾರವನ್ನು ಹುಡುಕುತ್ತಿದ್ದಾರೆ. 'ಸತ್ತು' ಅಂತಹ ಅತ್ಯುತ್ತಮ ಪೌಷ್ಟಿಕ ಆಹಾರ. ಆಶೀರ್ವಾದ್‌ನ ವಿಶ್ವಾಸಾರ್ಹತೆ ಹಾಗೂ ಗುಣಮಟ್ಟದೊಂದಿಗೆ ಸಾಂಪ್ರದಾಯಿಕ ಚನ್ನಾ ಸತ್ತುವನ್ನು ಜನರ ಕೈಗೆಟಕುವ ದರದಲ್ಲಿ ಒದಗಿಸುವುದೇ ನಮ್ಮ ಗುರಿ,” ಎಂದರು.