ತಪ್ಪು ಉತ್ತರ ನೀಡಿದ ವಿದ್ಯಾರ್ಥಿಗಳಿಗೆ ಸಹಪಾಠಿಯಿಂದಲೇ ಕಪಾಳಮೋಕ್ಷ!
Viral News: ಸರ್ಕಾರಿ ಬಾಲಕಿಯರ ಶಾಲೆಯ ಶಿಕ್ಷಕಿಯೊಬ್ಬರು ಒಂದು ತರಗತಿಯ ವಿದ್ಯಾರ್ಥಿಗಳಿಗೆ ಪಾಠ ಮಾಡುವಾಗ ಪ್ರಶ್ನೆಗಳನ್ನು ಕೇಳಿದ್ದಾರೆ. ಯಾರೆಲ್ಲಾ ತಪ್ಪು ಉತ್ತರ ನೀಡಿದ್ದಾರೋ, ಅವರಿಗೆಲ್ಲಾ ಅದೇ ತರಗತಿಯ ಕ್ಲಾಸ್ ಲೀಡರ್ ಕೈಯಿಂದ ಕಪಾಳಮೋಕ್ಷ ಮಾಡಿಸಿದ್ದಾರೆ. ಪರಿಣಾಮ ಈಗ ಆ ಶಿಕ್ಷಕಿಯ ಮೇಲೆ ಪ್ರಕರಣ ದಾಖಲಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಈ ಸುದ್ದಿ ಚರ್ಚೆಯಾಗುತ್ತಿದೆ.