ಟಾಟಾ ಸಮೂಹದ ಅತಿ ಬೃಹತ್ ಚಿನ್ನಾಭರಣ ಸಂಸ್ಥೆಯು ದೇಶಾದ್ಯಂತ ಅತ್ಯಂತ ಸಂಭ್ರಮದಿಂದ ಆಚರಿಸಲಾಗುವ ಧನ್ತೇರಸ್ ಹಬ್ಬದ ಆಗಮಿಸುತ್ತಿರುವ ಸುಸಂದರ್ಭದಲ್ಲಿ ಬಾಲಿವುಡ್ ನಟಿ ತೃಪ್ತಿ ದಿಮ್ರಿ(Bollywood actress Tripti Dimri) ಅವರನ್ನು ಒಳಗೊಂಡಿರುವ ತನ್ನ ಅತ್ಯಂತ ನವೀನ ಮಾದರಿಯ ಅಧ್ಯಂತರ ಎಂಬ ವಿಶಿಷ್ಟ ಆಭರಣಗಳ ಸಂಗ್ರಹವನ್ನು ಬಿಡುಗಡೆ ಮಾಡಿದೆ.
ಅಂತ್ಯವಿಲ್ಲದ ವಿಶಾಲ ಬ್ರಹ್ಮಾಂಡದ ಅಪಾರ ಪ್ರಾಕೃತಿಕ ಸೌಂದರ್ಯ ಮತ್ತು ಅಗಾಧ ರಹಸ್ಯ ಗಳಿಂದ ಸ್ಫೂರ್ತಿ ಪಡೆದಿರುವ ಈ ನೂತನ ಸಂಗ್ರಹವು, ಈ ಕಲ್ಪನೆಗೆ ಮೂಲ ಪ್ರೇರಣೆಯಾಗಿರುವ ಈ ಕಾಲದ ಮಹಿಳೆಯ ಹತ್ತಿರ ವಿಶ್ವದ ಅದ್ಭುತ ಕೌತುಕಗಳನ್ನು ಕೊಂಡೊಯ್ಯುತ್ತದೆ. ಬಾನಂಗಳದ ನಕ್ಷತ್ರಗಳ ಕಣ್ಣುಕೋರೈಸುವ ಪ್ರಖರ ಹೊಳಪಿನಿಂದ ಹಿಡಿದು ವಿವಿಧ ಆಕಾಶಕಾಯಗಳ ರಮಣೀಯ ಕಾವ್ಯಾತ್ಮಕ ಆಕಾರಗಳವರೆಗೂ, ಅಧ್ಯಂತರ ಸಂಗ್ರಹವು ವಿಶ್ವದ ಅಸಾಧಾರಣ ವೈಭವವನ್ನು ಸುಂದರವಾಗಿ ಸೆರೆ ಹಿಡಿದಿದ್ದು, ಯಾವುದೇ ಮಿತಿಗಳಿಲ್ಲದ ಸ್ವಚ್ಛಂದ ಕಲ್ಪನಾ ಲೋಕವನ್ನು ಮುಕ್ತವಾಗಿ ಅನ್ವೇಷಣೆ ಮಾಡಲು ಮಹಿಳೆಯರಿಗೆ ಪ್ರೇರೇಪಣೆ ನೀಡುತ್ತದೆ.
ವಿಶಾಲ ಬ್ರಹ್ಮಾಂಡವು ಕಾಲಕಾಲದಿಂದಲೂ ಅಪಾರ ವಿಸ್ಮಯಗಳ ಭರವಸೆಯ ಗಣಿಯಾಗಿದೆ. ಇದು ಅತ್ಯಂತ ಬೃಹತ್, ನಿಗೂಢ ಹಾಗೂ ಇನ್ನೂ ಯಾರಿಗೂ ತಿಳಿಯದ, ಅನಾವರಣಗೊಳ್ಳಲು ತುದಿಗಾಲಿನಲ್ಲಿ ಕಾಯುತ್ತಿರುವ ಅಸಂಖ್ಯಾತ ಕಥೆಗಳಿಂದ ಕೂಡಿದೆ. ಇದೀಗ ಬಿಡುಗಡೆಯಾಗಿರುವ ಈ ಅಧ್ಯಂತರ ಸಂಗ್ರಹದ ಮೂಲಕ, ಸಂಸ್ಥೆಯು ಆಕಾಶಕಾಯಗಳ ಅಲೌಕಿಕ ಸೌಂದರ್ಯ ವನ್ನು ಭಾರತದ ಸಾಂಪ್ರದಾಯಿಕ ಆಭರಣ ಕರಕುಶಲ ಕಲಾ ಶ್ರೀಮಂತಿಕೆಯೊಂದಿಗೆ ಮರು ರೂಪಿಸಿದ್ದು, ಧರೆಗಿಳಿದ ಸೂರ್ಯ, ಚಂದ್ರ ಹಾಗೂ ಮುಗಿಲಿಂದ ಉದುರುವ ಉಲ್ಕೆಗಳನ್ನು ಸಮಕಾಲೀನ ಆಧುನಿಕ ವಿನ್ಯಾಸದ ಆಕಾರಗಳಲ್ಲಿ ಜೀವಂತವಾಗಿ ಕಣ್ಣೆದುರು ತಂದು ನಿಲ್ಲಿಸಿದೆ.
ಶಿಲ್ಪಕಲೆಯಂತಹ ನಯನ ಮನೋಹರ ಆಕೃತಿಗಳು, ಹರಿಯುವ ನೀರಿನಂತಹ ಸುಲಲಿತ ರೇಖೆಗಳು ಹಾಗೂ ಅತ್ಯಂತ ನವಿರಾದ ಸೂಕ್ಷ್ಮ ಕೆತ್ತನೆಗಳು ನಮಗೆ ಚಿರಪರಿಚಿತವಾಗಿರುವ ಬಾಹ್ಯಾಕಾಶದ ಅಂಶಗಳನ್ನು ಪ್ರತಿಯೊಬ್ಬ ವ್ಯಕ್ತಿಯ ಅನನ್ಯತೆ ಮತ್ತು ಸ್ವಂತ ಕಲ್ಪನೆಯ ಸೃಜನಶೀಲ ಅಭಿವ್ಯಕ್ತಿ ಗಳನ್ನಾಗಿ ಪರಿವರ್ತಿಸಲಾಗಿದೆ.
ತನ್ನ ಸಂಸ್ಕೃತಿ ಮತ್ತು ಪ್ರಾಚೀನ ಪರಂಪರೆಯ ಬೇರುಗಳನ್ನು ಅಪ್ಪಿಕೊಂಡಿದ್ದರೂ ತನ್ನನ್ನು ತಾನು ಸಮಾಜದಲ್ಲಿ ಬಿಂಬಿಸಿಕೊಳ್ಳುವ ರೀತಿಯಲ್ಲಿ, ಜೀವನಶೈಲಿಯಲ್ಲಿ ಸದಾ ಬೆಳೆಯುತ್ತಿರುವ ಈ ಆಧುನಿಕ ಭಾರತೀಯ ನಾರಿ ಈ ಸಂಗ್ರಹದ ಕೇಂದ್ರವಾಗಿದ್ದಾಳೆ. ಆಕೆಯೇ ಈ ಕೃತಿಗೆ ಸ್ಫೂರ್ತಿ ಮತ್ತು ಪ್ರೇರಕ ಶಕ್ತಿ. ಅಧ್ಯಂತರ ಶ್ರೇಣಿಯೊಂದಿಗೆ, ಇಲ್ಲಿ ಸೃಷ್ಟಿಯಾಗಿರುವ ಪ್ರತಿಯೊಂದು ಸುಂದರ ಆಭರಣವೂ ಆಕೆಯ ಪಾಲಿಗೆ ಈ ಅಸಾಧಾರಣ ಸೌಂದರ್ಯವನ್ನು ತನ್ನದೇ ಸ್ವಂತ ಶೈಲಿಯಲ್ಲಿ ಅಳವಡಿಸಿಕೊಳ್ಳಲು ನೀಡುವ ಮುಕ್ತ ಆಹ್ವಾನವಾಗಿದೆ.
ಜನಪ್ರಿಯ ನಟಿ ತೃಪ್ತಿ ದಿಮ್ರಿ ಪಾಲ್ಗೊಂಡಿರುವ ಈ ಹೊಸ ಪ್ರಚಾರ ಅಭಿಯಾನವು, ಆಭರಣಗಳು ಮತ್ತು ಅವುಗಳಿಗೆ ಪ್ರೇರಣೆಯಾದ ಆಕಾಶಕಾಯಗಳ ಮೂಲ ಸ್ಫೂರ್ತಿಯನ್ನು ಅನಾವರಣ ಗೊಳಿಸಲಿದೆ. ಈ ಆಭರಣ ಸಂಗ್ರಹದ ಕುರಿತಾದ ಅವರ ಸುಂದರ ನಿರೂಪಣೆಯು, ಯಾವ ಸ್ತ್ರೀಗಾಗಿ ಅಧ್ಯಂತರ ಸೃಷ್ಟಿಯಾಗಿದೆಯೋ ಆ ಮಹಿಳೆಯ ಅದಮ್ಯ ಆತ್ಮವಿಶ್ವಾಸ, ಸ್ವಂತಿಕೆ ಮತ್ತು ಸಮಕಾಲೀನ ಆಧುನಿಕ ಸೌಂದರ್ಯ ಪ್ರಜ್ಞೆಯನ್ನು ಅತ್ಯಂತ ಸಮರ್ಥವಾಗಿ ಜನರೆದುರು ಪ್ರತಿಬಿಂಬಿಸುತ್ತದೆ.
ಈ ನೂತನ ಶ್ರೇಣಿಯು ಒಟ್ಟು ನಾಲ್ಕು ಪ್ರಮುಖ ವಿಭಾಗಗಳಲ್ಲಿ ಬರೋಬ್ಬರಿ 100ಕ್ಕೂ ಹೆಚ್ಚು ಆಕರ್ಷಕ ವಿನ್ಯಾಸಗಳನ್ನು ಒಳಗೊಂಡಿದೆ. ಗ್ಲಾಸ್ ಕುಂದನ್, ಹರಳುಗಳನ್ನೊಳಗೊಂಡ ಪ್ಲೇನ್ ಚಿನ್ನಾಭರಣಗಳು, ಶುದ್ಧ ಪ್ಲೇನ್ ಚಿನ್ನ ಮತ್ತು ಅನ್ಕಟ್ ವಜ್ರಾಭರಣಗಳು, ಅತ್ಯಾಕರ್ಷಕ ನೆಕ್ಲೇಸ್ ಸೆಟ್ಗಳು, ಸುಂದರ ಬಳೆಗಳು, ಕೈಬೆರಳಿನ ಉಂಗುರಗಳು ಮತ್ತು ಪವಿತ್ರ ಮಂಗಳಸೂತ್ರಗಳ ವರೆಗೆ ವ್ಯಾಪಿಸಿರುವ ಈ ಸಂಗ್ರಹವು, 18 ಕ್ಯಾರಟ್ ಹಾಗೂ 22 ಕ್ಯಾರಟ್ ಅಪರಂಜಿ ಚಿನ್ನದಲ್ಲಿ ನಿರ್ಮಾಣ ಗೊಂಡಿದ್ದು, 30 ಗ್ರಾಂನಿಂದ ಆರಂಭಿಸಿ 120 ಗ್ರಾಂವರೆಗಿನ ವಿವಿಧ ತೂಕಗಳ ವಿನ್ಯಾಸಗಳಲ್ಲಿ ಗ್ರಾಹಕರಿಗೆ ಲಭ್ಯವಿದೆ.
ಇಲ್ಲಿನ ಪ್ರತಿಯೊಂದು ಆಭರಣವೂ ಮಾನವನ ಕಲ್ಪನೆ ಮತ್ತು ಅಪ್ರತಿಮ ನಿಖರತೆಯ ಅಪರೂಪದ ಸಂಗಮವನ್ನು ಸಾರಿ ಹೇಳುತ್ತದೆ.
3ಡಿ ಆಯಾಮದ ಶಿಲ್ಪಕಲಾ ರೂಪಗಳು, ಪದರಗಳ ಬ್ಯಾಡ್ ರೂಮ್ ಶೈಲಿ, ಪೇಟೆಂಟ್ ಹೊಂದಿರುವ ಅತ್ಯಾಧುನಿಕ 3ಡಿ ಗ್ಲಾಸ್ ಕುಂದನ್ ತಂತ್ರಜ್ಞಾನ, ಕೈಯಿಂದಲೇ ನುರಿತ ಕುಶಲಕರ್ಮಿಗಳು ಕೆತ್ತಿದ ಅಪರೂಪದ ಹರಳುಗಳು ಮತ್ತು ವಿಶಿಷ್ಟ ಎನಾಮಲ್ ಬಣ್ಣ ತಂತ್ರಜ್ಞಾನಗಳ ಮೂಲಕ ಈ ಆಭರಣಗಳು ಜೀವ ತಳೆದಿವೆ. ಸಂಕೀರ್ಣ ಪದರಗಳ ರಚನೆ, ಆಯಾಮಗಳ ಕಲಾತ್ಮಕ ಚಾತುರ್ಯ ಹಾಗೂ ಬಣ್ಣ, ಬೆಳಕು ಮತ್ತು ವಿನ್ಯಾಸಗಳ ಅಚ್ಚುಕಟ್ಟಾದ ಸಮ್ಮಿಲನದ ಮೂಲಕ ಭಾರತದ ಪರಂಪರಾಗತ ಕರಕುಶಲ ಕಲೆಯು ಸಮಕಾಲೀನ ರೂಪವನ್ನು ಪಡೆದುಕೊಂಡಿದ್ದು, ಬಾಹ್ಯಾಕಾಶ ಲೋಕದ ಅಗಾಧ ಆಳ ಮತ್ತು ಪ್ರಕಾಶಮಾನ ತೇಜಸ್ಸನ್ನು ಕಣ್ಣಿಗೆ ಕಟ್ಟುವಂತೆ ಬಿಂಬಿಸುತ್ತವೆ.
ಈ ಸಂಗ್ರಹಕ್ಕೆ ಮತ್ತೊಂದು ವಿಶಿಷ್ಟ ಆಯಾಮ ಕಲ್ಪಿಸುವಂತೆ, ಆಯ್ದ ಆಭರಣಗಳು 3-ಇನ್-1, 4-ಇನ್-1 ಹಾಗೂ 5-ಇನ್-1 ಮಾದರಿಯ ಬಹುಮುಖ ಮಾಡ್ಯುಲರ್ ವಿನ್ಯಾಸಗಳಲ್ಲಿ ಲಭ್ಯವಿವೆ. ಇವುಗಳಲ್ಲಿ ಕಳಚಬಹುದಾದ ಪೆಂಡೆಂಟ್ಗಳು ಮತ್ತು ಪ್ರತ್ಯೇಕಿಸಬಹುದಾದ ಪದರಗಳಿದ್ದು, ಇದರಿಂದಾಗಿ ಒಂದೇ ಒಡವೆಯನ್ನು ಹಲವು ವಿಭಿನ್ನ ಶೈಲಿಗಳಲ್ಲಿ ಧರಿಸಲು ಮಹಿಳೆಯರಿಗೆ ಅನುಕೂಲವಾಗುತ್ತದೆ.
ಆಸ್ಟೆರಿಸಂ ಅಥವಾ ನಕ್ಷತ್ರ ಪುಂಜಗಳ ಮಾದರಿಯ ಪ್ರಭಾವಗಳು, ಜೊತೆಗೆ ಅಪರೂಪದ ಫೈರ್ ಓಪಲ್ ಮತ್ತು ಸನ್ಸ್ಟೋನ್ ಹರಳುಗಳು ಸಂಗ್ರಹಕ್ಕೆ ವಿಶಿಷ್ಟ ಬಣ್ಣದ ಛಾಯೆಗಳು, ಮಿನುಗುವ ಕಾಂತಿ ಹಾಗೂ ಆಕರ್ಷಣೆಯನ್ನು ತಂದುಕೊಡುತ್ತವೆ. ಪ್ರತಿಯೊಂದು ಸಣ್ಣ ವಿವರವೂ ಅಧ್ಯಂತರ ದ ವಿಭಿನ್ನ ಮುಖವನ್ನು ಅನಾವರಣಗೊಳಿಸುತ್ತಾ, ಧರಿಸುವ ಮಹಿಳೆಯೊಂದಿಗೆ ಬದಲಾಗುವ ಮತ್ತು ಆಕೆ ತನ್ನ ಭಾವನೆಗಳನ್ನು ವ್ಯಕ್ತಪಡಿಸಲು ಬಯಸುವ ಹಲವು ಬಗೆಗಳಿಗೆ ತಕ್ಕಂತೆ ಹೊಂದಿಕೊಳ್ಳುವ ಆಭರಣಗಳನ್ನು ಒದಗಿಸುತ್ತದೆ.
ಈ ವಿನೂತನ ಬಿಡುಗಡೆ ಕುರಿತು ಮಾತನಾಡಿದ ಸಂಸ್ಥೆಯ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ (ಸಿಎಂಒ) ಕುಮಾರಿ ಪೆಲ್ಕಿ ಶೆರಿಂಗ್ ಅವರು, “ಧನ್ತೇರಸ್ ಎನ್ನುವುದು ನಾವೆಲ್ಲರೂ ಒಟ್ಟಾಗಿ ಐಶ್ವರ್ಯ ಸಮೃದ್ಧಿ, ಸಕಾರಾತ್ಮಕ ಆಶಾಭಾವನೆ ಮತ್ತು ಶುಭಾರಂಭಗಳನ್ನು ಅತ್ಯಂತ ಭಕ್ತಿ-ಸಡಗರ ದಿಂದ ಆಚರಿಸುವ ಪವಿತ್ರ ಕ್ಷಣವಾಗಿದೆ. ಆದ್ದರಿಂದ ಅತ್ಯಂತ ಭಾವನಾತ್ಮಕ ಹಾಗೂ ಅರ್ಥಪೂರ್ಣ ಸಂದರ್ಭವಾಗಿದೆ. ಅಧ್ಯಂತರ ಸಂಗ್ರಹದ ಮೂಲಕ ನಾವು ವಿಶಾಲ ಬ್ರಹ್ಮಾಂಡದ ಅನಂತ ಕೌತುಕಗಳನ್ನು ಅನ್ವೇಷಿಸಿ, ನಮಗೆಲ್ಲರಿಗೂ ಪ್ರೇರಣೆಯಾಗಿರುವ ನಮ್ಮ ಹೆಣ್ಣುಮಕ್ಕಳಿಗೆ ಅದನ್ನು ಮತ್ತಷ್ಟು ಹತ್ತಿರವಾಗಿಸಲು ಬಯಸಿದೆವು. ನಮ್ಮ ದೃಷ್ಟಿಯಲ್ಲಿ, ಪ್ರತಿಯೊಬ್ಬ ಮಹಿಳೆಯೂ ಸ್ವತಃ ತಾನೇ ಒಂದು ಅದ್ಭುತ ಬ್ರಹ್ಮಾಂಡ - ಬಹುಮುಖ ಪ್ರತಿಭೆಯುಳ್ಳವಳು, ನಿರಂತರವಾಗಿ ವಿಕಸನಗೊಳ್ಳುತ್ತಿರುವವಳು ಮತ್ತು ಸುಂದರ ಆಕಾರ ಪಡೆಯಲು ಕಾಯುತ್ತಿರುವ ಅಸಂಖ್ಯಾತ ಕನಸುಗಳಿಂದ ಸದಾ ತುಂಬಿರುವವಳು. ನಮ್ಮ ನುರಿತ ವಿನ್ಯಾಸಕಾರರು ಆಕಾಶಕಾಯಗಳ ಸೌಂದರ್ಯ, ರಹಸ್ಯ ಮತ್ತು ಪ್ರಕಾಶಮಾನ ತೇಜಸ್ಸನ್ನು ಇಂದಿನ ಸಮಕಾಲೀನ ಆಭರಣಗಳಾಗಿ ಪರಿವರ್ತಿಸಿದ್ದು, ಭಾರತೀಯ ಸಾಂಪ್ರದಾಯಿಕ ಕುಶಲಕರ್ಮಿಗಳ ಕಲಾವಂತಿಕೆ ಹಾಗೂ ಆಧುನಿಕ ಜೀವನಶೈಲಿಯ ಸೌಂದರ್ಯ ಪ್ರಜ್ಞೆಯನ್ನು ಅದ್ಭುತವಾಗಿ ಒಗ್ಗೂಡಿಸಿದ್ದಾರೆ. ಈ ಸಂಭ್ರಮದ ದೀಪಾವಳಿ ಹಬ್ಬದ ಋತುವಿನಲ್ಲಿ, ಅಧ್ಯಂತರ ಸಂಗ್ರಹವು ಪರಿಚಿತ ಚೌಕಟ್ಟುಗಳನ್ನು ಮೀರಿ ವಿಶಾಲವಾಗಿ ಯೋಚಿಸಲು, ಅಸಾಧಾರಣ ಸೌಂದರ್ಯವನ್ನು ಮುಕ್ತವಾಗಿ ಅಪ್ಪಿಕೊಳ್ಳಲು ಮತ್ತು ವಿಸ್ಮಯದ ಆನಂದವನ್ನು ಸಂಭ್ರಮಿಸಲು ನೀಡುತ್ತಿರುವ ಆತ್ಮೀಯ ಕರೆಯಾಗಿದೆ” ಎಂದು ಹೇಳಿದರು.
ಸಂಸ್ಥೆಯ ವಿನ್ಯಾಸ ವಿಭಾಗದ ಮುಖ್ಯಸ್ಥೆ ಕುಮಾರಿ ಗರಿಮಾ ಮಹೇಶ್ವರಿ, “ಅಧ್ಯಂತರ ಯೋಜನೆಯು ನಮಗೆ ಬ್ರಹ್ಮಾಂಡವನ್ನು ಹೊಚ್ಚಹೊಸ ವಿನ್ಯಾಸದ ದೃಷ್ಟಿಕೋನದ ಮೂಲಕ ನೋಡಲು ಮತ್ತು ಅನ್ವೇಷಿಸಲು ಅತ್ಯುತ್ತಮ ವೇದಿಕೆಯನ್ನು ಒದಗಿಸಿಕೊಟ್ಟಿತು. ಆಕಾಶಕಾಯಗಳ ಮೈನವಿರೇಳಿಸುವ ಚಲನೆ, ಬೆಳಕಿನ ಅಲೌಕಿಕ ಮೋಡಿ ಮತ್ತು ಬಾಹ್ಯಾಕಾಶದ ಅಸಾಧಾರಣ ಸಂಕೀರ್ಣ ರಚನೆಗಳಿಂದ ನಾವು ಅಪಾರ ಸ್ಫೂರ್ತಿ ಪಡೆದುಕೊಂಡೆವು. ಈ ಎಲ್ಲ ಆಕಾಶಕಾಯಗಳ ವಿಸ್ಮಯಗಳು ವಿಶಿಷ್ಟ ರೂಪರೇಖೆಗಳು ಹಾಗೂ ಸೂಕ್ಷ್ಮ ಕರಕುಶಲತೆಯ ಮೂಲಕ ಅತ್ಯದ್ಭುತವಾಗಿ ಮೈದಳೆದಿವೆ.
ಕಾಗದದ ಮೇಲಿನ ಈ ಕನಸನ್ನು ನೈಜವಾಗಿ ಸಾಕಾರಗೊಳಿಸಲು ಶಿಲ್ಪಕಲಾ ಮಾದರಿಗಳು, ಲೇಯರ್ಡ್ ಬ್ಯಾಡ್ರೂಮ್ ಕಲೆ, ಪೇಟೆಂಟ್ ಪಡೆದ 3ಡಿ ಗ್ಲಾಸ್ ಕುಂದನ್, ಕೈಯಿಂದಲೇ ಕೆತ್ತಲಾದ ಅಮೂಲ್ಯ ಹರಳುಗಳು ಹಾಗೂ ಅಪರೂಪದ ಎನಾಮಲ್ ತಂತ್ರಜ್ಞಾನಗಳನ್ನು ಒಳಗೊಂಡಂತೆ ಅತ್ಯುನ್ನತ ಮಟ್ಟದ ನಿಖರತೆ ಮತ್ತು ಸಾಟಿಯಿಲ್ಲದ ಕಲಾತ್ಮಕತೆಯ ಅಗತ್ಯವಿತ್ತು. ಪ್ರತಿಯೊಂದು ವಿನ್ಯಾಸದ ಅಂಶವೂ ವಿಶ್ವದ ವಿಭಿನ್ನ ಮುಖವನ್ನು ಸೆರೆಹಿಡಿಯಲಿದ್ದು, ಬೆಳಕು ಮತ್ತು ಆಯಾಮ ಗಳ ಒಂದು ಆಕರ್ಷಕ ಸಮ್ಮಿಲನವನ್ನು ಸೃಷ್ಟಿಸುತ್ತದೆ. ಇದರ ಪರಿಣಾಮವಾಗಿ, ಬ್ರಹ್ಮಾಂಡದ ಅನಂತ ವಿಸ್ಮಯವು ತನಿಷ್ಕ್ನ ಪರಿಣತ ಕುಶಲತೆಯ ಮೂಲಕ ಸಮಕಾಲೀನ ಹಾಗೂ ಎಂದಿಗೂ ಹಳೆಯದಾಗದ ಸಾರ್ವಕಾಲಿಕ ಶೈಲಿಯಲ್ಲಿ ಮರುಹುಟ್ಟು ಪಡೆದ ಅದ್ಭುತ ಆಭರಣ ಶ್ರೇಣಿ ಮೂಡಿಬಂದಿದೆ” ಎಂದು ವಿವರಿಸಿದರು.
ಈ ನೂತನ ಅಧ್ಯಂತರ ಆಭರಣ ಶ್ರೇಣಿಯ ಮೂಲಕ, ಸಂಸ್ಥೆಯು ಆಕಾಶಕಾಯಗಳ ದೈವಿಕ ಸ್ಫೂರ್ತಿ, ಸಮಕಾಲೀನ ಜಾಗತಿಕ ವಿನ್ಯಾಸ ಮತ್ತು ಭಾರತೀಯ ಕರಕುಶಲ ಕಲೆಯ ಅಳಿಯದ ಮಾಂತ್ರಿಕತೆಯನ್ನು ಏಕಕಾಲಕ್ಕೆ ಮೇಳೈಸುವ ಆಭರಣಗಳೊಂದಿಗೆ ಈ ಬಾರಿಯ ಹಬ್ಬದ ಋತುವನ್ನು ಅತ್ಯಂತ ವೈಭವದಿಂದ ಆಚರಿಸುತ್ತಿದೆ. ಗ್ರಾಹಕರಿಗೆ ಹಬ್ಬದ ದಿನಗಳಲ್ಲಿ ಚಿನ್ನಾಭರಣ ಗಳ ಖರೀದಿಯನ್ನು ಮತ್ತಷ್ಟು ಸುಲಭ ಹಾಗೂ ಲಾಭದಾಯಕವಾಗಿಸುವ ಸಲುವಾಗಿ, ಸಂಸ್ಥೆಯು ಚಿನ್ನದ ಆಭರಣಗಳ ಪ್ರತಿ ಗ್ರಾಂ ಖರೀದಿಯ ಮೇಲೆ ನೇರವಾಗಿ ₹301 ರಿಯಾಯಿತಿ*, ಚಿನ್ನಾಭರಣ ಗಳ ಮೇಕಿಂಗ್ ಚಾರ್ಜಸ್ ಮೇಲೆ ಮತ್ತು ವಜ್ರದ ಒಟ್ಟು ಮೌಲ್ಯದ ಮೇಲೆ ಗರಿಷ್ಠ ಶೇಕಡಾ 20ರವರೆಗೆ ರಿಯಾಯಿತಿ* ನೀಡುತ್ತಿದೆ. ಇದರ ಜೊತೆಗೆ, ಗ್ರಾಹಕರು ಯಾವುದೇ ಆಭರಣ ಮಳಿಗೆ ಯಿಂದ ಖರೀದಿಸಿದ ಹಳೆಯ ಚಿನ್ನವನ್ನು (18 ಕ್ಯಾರಟ್ ಮತ್ತು ಅದಕ್ಕಿಂತ ಹೆಚ್ಚಿನ ಶುದ್ಧತೆಯುಳ್ಳ ಚಿನ್ನ) ತಂದು ಹೊಸ ಆಭರಣಕ್ಕೆ ಬದಲಾಯಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ನೇರವಾಗಿ ಶೇಕಡಾ 0 ರಷ್ಟು ಕಡಿತದ ಅಪ್ರತಿಮ ವಿನಿಮಯ ಸೌಲಭ್ಯವನ್ನು ಕೂಡ ದೇಶಾದ್ಯಂತ ಗ್ರಾಹಕರಿಗೆ ಒದಗಿಸುತ್ತಿದೆ.