ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ನಲ್ಲಿ ಊಟ ಆರ್ಡರ್ ಮಾಡುವುದು ದುಬಾರಿ ಎನಿಸುತ್ತಿದೆ. ಹೀಗಾಗಿ, ಗ್ರಾಹಕರು ಕಡಿಮೆ ಬೆಲೆ ಉತ್ತಮ ಗುಣಮಟ್ಟದ ಆಹಾರ ದತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಸ್ವಿಗ್ಗಿಯ 99 ಸ್ಟೋರ್ ಪಡೆದುಕೊಂಡಿರುವ ಭಾರಿ ಜನಪ್ರಿಯತೆ.
ಕೈಗೆಟುಕುವ ದರದಲ್ಲಿ ಗುಣಮಟ್ಟದ ಆಹಾರ ನೀಡುತ್ತಿರುವ ಈ ವಿಭಾಗಕ್ಕೆ ಭಾರಿ ಬೇಡಿಕೆ ಬಂದಿದ್ದು, ಪ್ರಸ್ತುತ ಸ್ವಿಗ್ಗಿಯಲ್ಲಿ ಬುಕ್ ಆಗುವ ಪ್ರತಿ 7 ಆರ್ಡರ್‌ಗಳಲ್ಲಿ ಒಂದು ಆರ್ಡರ್ ಈ 99 ಸ್ಟೋರ್‌ನಿಂದಲೇ ಬರುತ್ತಿದೆ.
ಏನಿದು 99 ಸ್ಟೋರ್?
ಕಳೆದ ವರ್ಷದ ಜುಲೈನಲ್ಲಿ ಆರಂಭವಾದ ಈ 99 ಸ್ಟೋರ್, ಅಕ್ಷರಶಃ ಆನ್‌ಲೈನ್ ಫುಡ್ ಡೆಲಿವರಿ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದೆ. ಈ ವಿಭಾಗದಲ್ಲಿ 49, 79 ಮತ್ತು 99 ರೂ. ಬೆಲೆಯ ಆಹಾರ ಪದಾರ್ಥಗಳು ಲಭ್ಯವಿವೆ.
ವಿಶೇಷವೆಂದರೆ, 49 ರೂ.ಗಿಂತ ಹೆಚ್ಚಿನ ಆರ್ಡರ್ ಮಾಡಿದರೆ ಗ್ರಾಹಕರಿಗೆ ಉಚಿತ ಡೆಲಿವರಿ ಕೂಡ ಸಿಗುತ್ತಿದೆ. ದೈನಂದಿನ ಊಟ, ತಿಂಡಿಗೆ ಹೆಚ್ಚು ಹಣ ಖರ್ಚು ಮಾಡಲು ಹಿಂದೇಟು ಹಾಕುತ್ತಿದ್ದ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳಿಗೆ ಇದು ವರದಾನವಾಗಿದೆ.
ಬೃಹತ್ ಜಾಲ ಮತ್ತು ಪ್ರಸಿದ್ಧ ಬ್ರಾಂಡ್‌ಗಳು
ಕೇವಲ ಒಂದು ವರ್ಷದಲ್ಲಿ ಈ '99 ಸ್ಟೋರ್' ದೇಶದ 500ಕ್ಕೂ ಹೆಚ್ಚು ನಗರಗಳಿಗೆ ವಿಸ್ತರಣೆ ಯಾಗಿದೆ. 1.8 ಲಕ್ಷಕ್ಕೂ ಹೆಚ್ಚು ರೆಸ್ಟೋರೆಂಟ್‌ಗಳು ಇದರಡಿ ಗ್ರಾಹಕರಿಗೆ ಊಟ ಬಡಿಸುತ್ತಿವೆ.
ಕೇವಲ ಸಾಮಾನ್ಯ ಹೋಟೆಲ್‌ಗಳು ಮಾತ್ರವಲ್ಲದೆ, ಬರ್ಗರ್ ಕಿಂಗ್, ಮೆಕ್‌ಡೊನಾಲ್ಡ್ಸ್, ಕೆಎಫ್‌ಸಿ, ಡೊಮಿನೋಸ್ ಪಿಜ್ಜಾ ಮತ್ತು ಟಾಕೋ ಬೆಲ್‌ನಂತಹ ಅಂತಾರಾಷ್ಟ್ರೀಯ ಬ್ರಾಂಡ್‌ಗಳು ಸಹ ಈ ಕಡಿಮೆ ಬೆಲೆಯ ವಿಭಾಗದಲ್ಲಿ ಲಭ್ಯವಿವೆ. ಜೊತೆಗೆ ಬೆಂಗಳೂರಿನ ಸ್ಥಳೀಯ ಫೇವರಿಟ್‌ಗಳಾದ ಎಂಪೈರ್ ಹೋಟೆಲ್, ಲಿಯಾನ್ಸ್ - ಬರ್ಗರ್ಸ್ & ವಿಂಗ್ಸ್ ಕೂಡ ಗ್ರಾಹಕರಿಗೆ ಅಗ್ಗದ ದರದಲ್ಲಿ ಆಹಾರ ಒದಗಿಸುತ್ತಿವೆ.
ಜನರ ಮೆಚ್ಚಿನ ಆರ್ಡರ್‌ಗಳೇನು?
ಅಂಕಿ - ಅಂಶಗಳ ಪ್ರಕಾರ, 99 ಸ್ಟೋರ್‌ನಲ್ಲಿ ಬೌಲ್ಸ್, ಥಾಲಿ ಊಟ, ದಕ್ಷಿಣ ಭಾರತದ ಬ್ರೇಕ್‌ಫಾಸ್ಟ್, ಬರ್ಗರ್, ಪಿಜ್ಜಾ ಹಾಗೂ ಚಾಟ್ಸ್ ಅತಿ ಹೆಚ್ಚು ಆರ್ಡರ್ ಆಗುತ್ತಿರುವ ತಿನಿಸು ಗಳಾಗಿವೆ. ಅಲ್ಲದೆ, ಆರೋಗ್ಯಕರ ಆಹಾರ ಹುಡುಕುವವರ ನೆಚ್ಚಿನ ತಾಣವಾಗಿಯೂ ಇದು ಹೊರಹೊಮ್ಮಿದೆ.
ವ್ಯಾಪಾರಕ್ಕೂ ಬೂಸ್ಟ್ ಕೊಟ್ಟ 'ಕಡಿಮೆ ಬೆಲೆ'ಯ ಮಂತ್ರ
ಈ ವಿಭಾಗ ಕೇವಲ ಗ್ರಾಹಕರಿಗೆ ಮಾತ್ರವಲ್ಲ, ಹೋಟೆಲ್ ಉದ್ಯಮಕ್ಕೂ ದೊಡ್ಡ ಲಾಭ ತಂದುಕೊಟ್ಟಿದೆ. ಸ್ವಿಗ್ಗಿ ಫುಡ್ ಮಾರ್ಕೆಟ್‌ಪ್ಲೇಸ್‌ನ ಚೀಫ್ ಬಿಸಿನೆಸ್ ಆಫೀಸರ್ ಸಿದ್ಧಾರ್ಥ್ ಭಾಕೂ ಅವರ ಪ್ರಕಾರ, "ವಿಶೇಷ ದಿನಗಳಲ್ಲಿ ಮಾತ್ರ ಆನ್‌ಲೈನ್‌ನಲ್ಲಿ ಆರ್ಡರ್ ಮಾಡು ತ್ತಿದ್ದವರು, ಕೈಗೆಟುಕುವ ಬೆಲೆಯಿಂದಾಗಿ ಈಗ ಪ್ರತಿದಿನ ಆರ್ಡರ್ ಮಾಡುವ ಖಾಯಂ ಗ್ರಾಹಕರಾಗಿ ಬದಲಾಗಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ತಿಂಗಳ ಆರ್ಡರ್‌ಗಳ ಸಂಖ್ಯೆ 2.4 ಪಟ್ಟು ಹೆಚ್ಚಾಗಿದೆ,” ಎಂದಿದ್ದಾರೆ.
ಕಡಿಮೆ ಬೆಲೆಗೆ ಉತ್ಪನ್ನಗಳನ್ನು ನೀಡಲು ಆರಂಭಿಸಿದ ಬಳಿಕ ತಮ್ಮ ಗ್ರಾಹಕರ ಸಂಖ್ಯೆ ಮತ್ತು ಮಾರಾಟ ಬಹುಪಾಲು ದುಪ್ಪಟ್ಟಾಗಿದೆ ಎಂದು ಡೊಮಿನೋಸ್, ಟಾಕೋ ಬೆಲ್ ಹಾಗೂ ಕೆಎಫ್‌ಸಿ ಸಂಸ್ಥೆಗಳು ಕೂಡ ತಿಳಿಸಿವೆ. ಒಟ್ಟಿನಲ್ಲಿ, ಬೆಲೆ ಏರಿಕೆಯ ಕಾಲದಲ್ಲಿ ಕಡಿಮೆ ದರ ಹಾಗೂ ಉಚಿತ ಡೆಲಿವರಿಯ ತಂತ್ರದಿಂದ ಆನ್‌ಲೈನ್ ಫುಡ್ ಮಾರುಕಟ್ಟೆ ಯಲ್ಲಿ ಹೊಸ ಟ್ರೆಂಡ್ ಸೃಷ್ಟಿಯಾಗಿದೆ.